Ricky Kej: ಲೆನ್ಸ್‌ಕಾರ್ಟ್‌ ವಿರುದ್ಧ ಕಿಡಿಕಾರಿದ ಖ್ಯಾತ ಸಂಗೀತಗಾರ ಗ್ರ್ಯಾಮಿ ಪ್ರಶಸ್ತಿ ವಿಜೇತ ರಿಕಿ ಕೇಜ್: ಆಗಿದ್ದೇನು?

|

Updated on: Mar 08, 2023 | 11:43 AM

ಲೆನ್ಸ್‌ಕಾರ್ಟ್‌ ಸಂಸ್ಥೆಯಿಂದ ತನಗೆ ಪದೇ ಪದೇ ಅನಗತ್ಯ ಟೆಲಿಮಾರ್ಕೆಟಿಂಗ್ ಕರೆಗಳು ಬರುತ್ತಿದ್ದು ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ ಟ್ವೀಟ್ ಮೂಲಕ ಲೆನ್ಸ್‌ಕಾರ್ಟ್ ಮತ್ತು ಅದರ ಸಹ-ಸಂಸ್ಥಾಪಕ ಪಿಯೂಶ್ ಬನ್ಸಾಲ್ ಅವರನ್ನು ರಿಕಿ ಕೇಜ್ ತರಾಟೆಗೆ ತೆಗೆದುಕೊಂಡಿದ್ದಾರೆ.

Ricky Kej: ಲೆನ್ಸ್‌ಕಾರ್ಟ್‌ ವಿರುದ್ಧ ಕಿಡಿಕಾರಿದ ಖ್ಯಾತ ಸಂಗೀತಗಾರ ಗ್ರ್ಯಾಮಿ ಪ್ರಶಸ್ತಿ ವಿಜೇತ ರಿಕಿ ಕೇಜ್: ಆಗಿದ್ದೇನು?
ಲೆನ್ಸ್‌ಕಾರ್ಟ್‌, ರಿಕಿ ಕೇಜ್
Follow us on

ಬೆಂಗಳೂರು: ನಗರದ ಜನಪ್ರಿಯ ಸಂಗೀತಗಾರ ಮತ್ತು ಮೂರು ಬಾರಿ ಗ್ರ್ಯಾಮಿ ಪ್ರಶಸ್ತಿ ಪಡೆದ ವಿಜೇತ ರಿಕಿ ಕೇಜ್ ಅವರು ಲೆನ್ಸ್‌ಕಾರ್ಟ್‌ ವಿರುದ್ಧ ಕಿಡಿಕಾರಿದ್ದಾರೆ. ಲೆನ್ಸ್‌ಕಾರ್ಟ್‌ ಸಂಸ್ಥೆಯಿಂದ ತನಗೆ ಪದೇ ಪದೇ ಅನಗತ್ಯ ಟೆಲಿಮಾರ್ಕೆಟಿಂಗ್ ಕರೆಗಳು ಬರುತ್ತಿದ್ದು ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ ಆಕ್ರೋಶ ಹೊರ ಹಾಕಿದ್ದಾರೆ. ಹಾಗೂ ಟ್ವೀಟ್ ಮೂಲಕ ಲೆನ್ಸ್‌ಕಾರ್ಟ್ ಮತ್ತು ಅದರ ಸಹ-ಸಂಸ್ಥಾಪಕ ಪಿಯೂಶ್ ಬನ್ಸಾಲ್ ಅವರನ್ನು ರಿಕಿ ಕೇಜ್ ತರಾಟೆಗೆ ತೆಗೆದುಕೊಂಡಿದ್ದಾರೆ.

ಆತ್ಮೀಯ ಲೆನ್ಸ್‌ಕಾರ್ಟ್ ಮತ್ತು ಪಿಯೂಶ್ ಬನ್ಸಾಲ್ ಅವರೇ ನಿಮ್ಮ ಬ್ರ್ಯಾಂಡ್ ಬಗ್ಗೆ ನನಗೆ ಗೌರವವಿದೆ. ಆದರೆ ನಿರಂತರ ಕಿರುಕುಳ ನಿಲ್ಲಬೇಕು. ನನ್ನ ನಂಬರನ್ನು ನಿಮ್ಮ ಟೆಲಿಮಾರ್ಕೆಟಿಂಗ್ ಡೇಟಾಬೇಸ್‌ನಿಂದ ತೆಗೆದುಹಾಕಲು ನಾನು ಹಲವು ಬಾರಿ ಕೇಳಿದ್ದೇನೆ. ನೀವು ಭರವಸೆಯನ್ನೂ ನೀಡಿದ್ದಿರಿ. ಆದರೆ ನನಗೆ ಇನ್ನೂ ಕರೆಗಳು ಬರುತ್ತಿವೆ. ಇದಕ್ಕೆ ಕಾನೂನು ಕ್ರಮವು ಸಹಾಯ ಮಾಡುತ್ತದೆಯೇ? ಎಂದು ಸಂಗೀತಗಾರ ರಿಕಿ ಕೇಜ್ ಟ್ವೀಟ್ ಮಾಡುವ ಮೂಲಕ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದಾರೆ.

ಲೆನ್ಸ್‌ಕಾರ್ಟ್‌ನ ವೆಬ್‌ಸೈಟ್‌ನಿಂದ ಖರೀದಿಸಿದ್ದಕ್ಕಾಗಿ ನನಗೆ ಸಿಕ್ಕ ಶಾಪವಿದು. ಬಹುಶ: ನಾನು ನನ್ನ ಫೋನ್ ನಂಬರ್ ಬದಲಾಯಿಸುವುದೇ ತನ್ನ ಬಳಿ ಉಳಿದಿರುವ ಏಕೈಕ ಪರಿಹಾರವಿರಬೇಕು. ಅಥವಾ ಲೆನ್ಸ್‌ಕಾರ್ಟ್ ಸಂಸ್ಥೆ ಬಂದ್ ಆಗುವುದೇ ಪರಿಹಾರ ಮಾರ್ಗವಿರಬೇಕು ಎಂದು ರಿಕಿ ಕೇಜ್ ಅಸಮಾಧಾನ ಹೊರ ಹಾಕಿದ್ದಾರೆ.

ಇದನ್ನೂ ಓದಿ: Ricky Kej: ಮತ್ತೊಮ್ಮೆ ಗ್ರ್ಯಾಮಿ ಪ್ರಶಸ್ತಿಗೆ ನಾಮಾಂಕಿತಗೊಂಡ ‘ವೈಲ್ಡ್ ಕರ್ನಾಟಕ’ ಖ್ಯಾತಿಯ ಸಂಗೀತ ನಿರ್ದೇಶಕ ರಿಕಿ ಕೇಜ್

ಇನ್ನು ರಿಕಿ ಕೇಜ್​ ಅವರಿಗೆ ಪ್ರತಿಕ್ರಿಯಿಸಿರುವ ಲೆನ್ಸ್‌ಕಾರ್ಟ್ ಕ್ಷಮೆ ಕೇಳಿದೆ. ‘ಹಾಯ್ ರಿಕಿ ಕೇಜ್, ನಿಮಗೆ ಪದೇ ಪದೇ ಕರೆಗಳು ಬರುವುದರಿಂದ ಕಿರಿಕಿರಿ ಉಂಟಾಗುತ್ತಿದೆ ಎಂಬುವುದನ್ನು ನಾವು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದೇವೆ. ಮತ್ತೆ ಈ ರೀತಿ ಆಗದಂತೆ ನಾವು ಕ್ಷಮೆಯಾಚಿಸುತ್ತೇವೆ ಎಂದಿದೆ. ಲೆನ್ಸ್‌ಕಾರ್ಟ್ ಟ್ವೀಟ್‌ಗೆ ಮತ್ತೆ ಪ್ರತಿಕ್ರಿಯೆ ನೀಡಿ ರಿಕಿ ಕೇಜ್, ‘ನೀವು ಈ ಹಿಂದೆಯೂ ನನಗೆ ಹೀಗೆ ಮಾಡಿದ್ದಿರಿ. ಕೆರೆಗಳು ಬರುವುದಿಲ್ಲ ಎಂದು ಭರವಸೆ ನೀಡಿದ್ದಿರಿ ಆದರೆ ನನಗೆ ಇನ್ನು ಕರೆಗಳು ಬರುತ್ತಿವೆ. ದಯವಿಟ್ಟು ನಿಮ್ಮ ಸಂದೇಶಗಳನ್ನು ಪರಿಶೀಲಿಸಿ’ ಎಂದು ಹೇಳಿದರು.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:43 am, Wed, 8 March 23