Bengaluru: ಬೀದಿನಾಯಿಗಳ ಸಂತತಿ ತಡೆಯಲು 3 ವರ್ಷಗಳಲ್ಲಿ 15 ಕೋಟಿ ಖರ್ಚು; ಆದರೂ ಅವುಗಳ ಸಂಖ್ಯೆ ದುಪ್ಪಟ್ಟು!

ಬೀದಿ ನಾಯಿಗಳ ಸಂತತಿ ತಡೆಯಲು, ಬೀದಿ ನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆ ಮಾಡಲಾಗಿತ್ತು. ಆದರೂ ಅವುಗಳ ಸಂತತಿ ದುಪ್ಪಟ್ಟಾಗಿದೆ. ಅವುಗಳಿಗೆ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಿಸುವ ಹೆಸರಲ್ಲಿ ದುಂದುವೆಚ್ಚ ಆಗಿದೆ ಎಂದು ಬೆಂಗಳೂರಿನ ಬಿಜೆಪಿ ಶಾಸಕರೇ ಆರೋಪ ಮಾಡಿದ್ದಾರೆ.

Bengaluru: ಬೀದಿನಾಯಿಗಳ ಸಂತತಿ ತಡೆಯಲು 3 ವರ್ಷಗಳಲ್ಲಿ 15 ಕೋಟಿ ಖರ್ಚು; ಆದರೂ ಅವುಗಳ ಸಂಖ್ಯೆ ದುಪ್ಪಟ್ಟು!
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ganapathi bhat

Updated on:Mar 18, 2022 | 8:59 AM

ಬೆಂಗಳೂರು: ನಗರದಲ್ಲಿ ಬೀದಿ ನಾಯಿಗಳ ಸಂತಾನ ಹರಣ ಶಸ್ತ್ರಚಿಕಿತ್ಸೆ ಹೆಸರಲ್ಲಿ ದುಂದುವೆಚ್ಚ ಮಾಡಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ. 3 ವರ್ಷದ ಹಿಂದೆ 3 ಲಕ್ಷ ಇದ್ದ ಬೀದಿ ನಾಯಿಗಳು, ಇದೀಗ ಸುಮಾರು 6 ಲಕ್ಷಕ್ಕೆ ಏರಿಕೆ ಆಗಿವೆ. ಬೀದಿ ನಾಯಿಗಳ ಸಂತತಿ ತಡೆಯಲು, ಬೀದಿ ನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆ ಮಾಡಲಾಗಿತ್ತು. ಆದರೂ ಅವುಗಳ ಸಂತತಿ ದುಪ್ಪಟ್ಟಾಗಿದೆ. ಅವುಗಳಿಗೆ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಿಸುವ ಹೆಸರಲ್ಲಿ ದುಂದುವೆಚ್ಚ ಆಗಿದೆ ಎಂದು ಬೆಂಗಳೂರಿನ ಬಿಜೆಪಿ ಶಾಸಕರೇ ಆರೋಪ ಮಾಡಿದ್ದಾರೆ.

ಬೀದಿ ನಾಯಿಗಳ ಸಂತತಿ ತಡೆಯಲು ಬಿಬಿಎಂಪಿಯಿಂದ ಮೂರು ವರ್ಷಗಳಲ್ಲಿ ಬರೋಬ್ಬರಿ 15 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಕಳೆದ 3 ವರ್ಷದಲ್ಲಿ 15,79,04,250 ಕೋಟಿ ರೂಪಾಯಿ ವೆಚ್ಚ ಬೀದಿ ನಾಯಿಗಳ ಸಂತಾನ ಹರಣ ಶಸ್ತ್ರಚಿಕಿತ್ಸೆಗೆ ಮಾಡಲಾಗಿದೆ. ಆದರೂ ಬೆಂಗಳೂರಿನಲ್ಲಿ ಹೆಚ್ಚಾಗಿದೆ ಬೀದಿ ನಾಯಿಗಳ ಕಾಟ ಎಂದು ಹೇಳಲಾಗಿದೆ. 3 ವರ್ಷದಿಂದ ಬೀದಿನಾಯಿಗಳ ಸಂತತಿ ತಡೆಯಲು ಕೋಟಿ ಕೋಟಿ ಖರ್ಚು ಮಾಡಿದ್ದರೂ ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗಿದೆ.

2019 ರಿಂದ 2020 ರ ವರೆಗೂ ಬೀದಿ ನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆಗೆ 3,79,82,550 ರೂಪಾಯಿ ಖರ್ಚು ಮಾಡಲಾಗಿತ್ತು. 2020-21 ರಲ್ಲಿ 5,64,46,500 ರೂಪಾಯಿ ಖರ್ಚು ಆಗಿತ್ತು. ಮತ್ತು 2021- 2022 ರಲ್ಲಿ 6,34,75,200 ಕೋಟಿ ಖರ್ಚು ಮಾಡಲಾಗಿದೆ. ಸಂತಾನ ಹರಣ ಚಿಕಿತ್ಸೆ ಹೆಸರಲ್ಲಿ ಹಗರಣ ನಡೆಯುತ್ತಿದೆ ಎಂದು ಬೆಂಗಳೂರಿನ ಬಿಜೆಪಿ ಶಾಸಕರು ಆರೋಪ ಮಾಡಿದ್ದಾರೆ.

ಇದನ್ನೂ ಓದಿ: BMRCL Recruitment 2022: ಬೆಂಗಳೂರು ಮೆಟ್ರೋದಲ್ಲಿನ ಹುದ್ದೆಗಳಿಗೆ ಅರ್ಜಿ ಆಹ್ವಾನ

ಇದನ್ನೂ ಓದಿ: ಬಜೆಟ್ ಮೇಲಿನ ಚರ್ಚೆಗೆ ಬೊಮ್ಮಾಯಿ ಉತ್ತರ: ಕಿರು ಉದ್ಯಮಿಗಳಿಗೆ ಸಹಾಯಧನ, ಬೆಂಗಳೂರು ಅಭಿವೃದ್ಧಿಗೆ 6000 ಕೋಟಿ

Published On - 8:56 am, Fri, 18 March 22