Bengaluru: 20 ವರ್ಷ ಬಾಳಿಕೆ ಬರಬೇಕಿದ್ದ ರಸ್ತೆಯನ್ನ 2 ವರ್ಷಕ್ಕೆ ಕಿತ್ತ ಬಿಬಿಎಂಪಿ!
Bengaluru news: ಒಂದು ಕಡೆ ರಸ್ತೆ ಗುಂಡಿ, ಮತ್ತೊಂದೆಡೆ ಎಲೆಕ್ಷನ್ ಹತ್ತಿರ ಬರುತ್ತಿದೆ. ಕೆಲವು ಕಡೆ ವರ್ಷಗಳಿಂದ ಬಾಕಿ ಉಳಿದಿದ್ದ ಕಾಮಗಾರಿವೆ ವೇಗ ನೀಡಲಾಗುತ್ತಿದೆ. ಮತ್ತೆ ಕೆಲವೆಡೆ ಚೆನ್ನಾಗಿರುವ ರಸ್ತೆಗಳನ್ನ ಅಗೆದು ಬಿಲ್ಗಾಗಿ ಬಿಬಿಎಂಪಿ ಅದ್ವಾನ ಮಾಡಿಬಿಟ್ಟಿದೆ.
ಬೆಂಗಳೂರು: ಒಂದು ಕಡೆ ರಸ್ತೆ ಗುಂಡಿ, ಮತ್ತೊಂದೆಡೆ ಎಲೆಕ್ಷನ್ ಹತ್ತಿರ ಬರುತ್ತಿದೆ. ಕೆಲವು ಕಡೆ ವರ್ಷಗಳಿಂದ ಬಾಕಿ ಉಳಿದಿದ್ದ ಕಾಮಗಾರಿವೆ ವೇಗ ನೀಡಲಾಗುತ್ತಿದೆ. ಮತ್ತೆ ಕೆಲವೆಡೆ ಚೆನ್ನಾಗಿರುವ ರಸ್ತೆಗಳನ್ನ ಅಗೆದು ಬಿಲ್ಗಾಗಿ ಬಿಬಿಎಂಪಿ (BBMP) ಅದ್ವಾನ ಮಾಡಿಬಿಟ್ಟಿದೆ. ಗುಂಡಿಗಳ ರಸ್ತೆ, ಅದ್ವಾನ ಆಗಿರುವ ರಸ್ತೆಗಳಿಗೆ ಡಾಂಬರು (Asphalting of roads) ಹಾಕುವುದನ್ನು ನೋಡಿದ್ದೇವೆ. ಆದರೆ ಇಲ್ಲಿ ಬಿಬಿಎಂಪಿ ಎಂಥಾ ಗನಾಂಧಾರಿ ಕೆಲಸ ಮಾಡಿದೆ ಅಂದರೆ ಚಿಕ್ಕಪೇಟೆ (Chckpet) ವಿಧಾನಸಭಾ ಕ್ಷೇತ್ರದ ಮಾವಳ್ಳಿ ವಾರ್ಡ್ನಲ್ಲಿ 2 ವರ್ಷಗಳ ಹಿಂದೆ ಹಾಕಿದ್ದ ರಸ್ತೆ ಡಾಂಬರು ಕಿತ್ತು ಹೊಸ ಡಾಂಬರು ಹಾಕಲು ಮುಂದಾಗಿದೆ.
ಕೋವಿಡ್ ಮೊದಲ ಲಾಕ್ ಡೌನ್ನಲ್ಲಿ ಮಾವಳ್ಳಿಯ ವೆಂಕಟಸ್ವಾಮಪ್ಪ ರಸ್ತೆ, ನಂಜೇಗೌಡ ಸ್ಟ್ರೀಟ್, ರಂಗಪ್ಪ ರಸ್ತೆ, ಮಸೀದಿ ರೋಡ್ಗೆ ಸಿಮೆಂಟ್ ಕಾಂಕ್ರೀಟ್ನ ರಸ್ತೆಯನ್ನ ಹಾಕಲಾಗುತ್ತದೆ. ಚಿಕ್ಕಪೇಟೆ ಕ್ಷೇತ್ರದ ಹಲವು ರಸ್ತೆಗಳು ಇನ್ನು 20 ವರ್ಷ ಬಾಳಿಕೆ ಬರುತ್ತಿದ್ದವು. ಆದರೆ ಚುನಾವಣೆ ಸಮೀಪಿಸುತ್ತಿರುವ ಹಿನ್ನಲೆ ರಸ್ತೆಗಳನ್ನ ವಿನಾಃ ಕಾರಣ ಅಗೆದು ಜನರಿಗೆ ತೊಂದರೆ ಕೊಡುತ್ತಿದೆ. ಇದು ಅವೈಜ್ಞಾನಿಕವಾದ ಕಾಮಗಾರಿ ಅಂತ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: ಮಾರ್ಚ್ 11ರಂದು ಬೆಂಗಳೂರು ಟ್ರಾಫಿಕ್ ಪೊಲೀಸರ ಸಭೆ; ಸಮಸ್ಯೆಗೆ ಪರಿಹಾರ ಪಡೆದುಕೊಳ್ಳಲು ಸಾರ್ವಜನಿಕರಿಗೆ ಸೂಕ್ತ ಅವಕಾಶ
ಇನ್ನೂ ಏರಿಯಾದಲ್ಲಿ ರಸ್ತೆಯನ್ನ ಹೊರತುಪಡಿಸಿ ಹಲವು ಸಮಸ್ಯೆಗಳಿವೆ. ಆದರೆ ಚೆನ್ನಾಗಿ ಇದ್ದ ರಸ್ತೆಗಳನ್ನ ಕಿತ್ತು ಹಾಕುತ್ತಿದ್ದಾರೆ. ಆ ಮೂಲಕ ಸಾರ್ವಜನಿಕರ ತೆರಿಗೆ ಹಣವನ್ನು ವ್ಯರ್ಥ ಮಾಡುತ್ತಿದ್ದಾರೆ ಎಂಬ ಆರೋಪವನ್ನ ಜನರು ಮಾಡುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿಬಿಎಂಪಿ ವಿಶೇಷ ಆಯುಕ್ತ ರವೀಂದ್ರ, ಡಿಎಲ್ಪಿ ಅವಧಿ ಮುಗಿದಿದೆಯಾ ಇಲ್ಲವಾ ಎಂಬುದನ್ನು ತಿಳಿಯಲು ವರದಿಯನ್ನ ನೀಡುವಂತೆ ಸಂಬಂಧಪಟ್ಟ ಇಂಜಿನಿಯರ್ಗೆ ಕೂಡಲೇ ಸೂಚನೆ ನೀಡಲಾಗಿದೆ. ರಸ್ತೆ ಸ್ಥಿತಿಗತಿ ಪರಿಗಣಿಸಲಾಗುತ್ತದೆ. ಒಂದೊಮ್ಮೆ ಗುತ್ತಿಗೆದಾರರು ಹಾಗೂ ನಮ್ಮ ಅಧಿಕಾರಿಗಳು ತಪ್ಪು ಎಸಗಿದ್ದರೆ KCSR ಕಾಯ್ದೆ ಪ್ರಕಾರ ಕ್ರಮ ಜರುಗಿಸಲಾಗಿತ್ತದೆ ಎಂದು ತಿಳಿಸಿದ್ದಾರೆ.
ಒಟ್ಟಾರೆ, ರಸ್ತೆಯನ್ನ ಪರಿಶೀಲನೆ ನಡೆಸದೆಯೇ ಲಾಕ್ ಡೌನ್ ವೇಳೆ ನಿರ್ಮಾಣವಾದ ರಸ್ತೆಯನ್ನೇ ಕಿತ್ತ ಬಿಬಿಎಂಪಿ ಇಂಜಿನಿಯರ್ಗಳಿಗೆ ಅದೇನು ಹೇಳಬೇಕೋ ಏನೂ? ಇನ್ನು ಮುಂದೆಯಾದರೂ ಇಂತಹ ಎಡವಟ್ಟಿನ ನಿರ್ಧಾರ ಕೈಗೊಳ್ಳುವ ಮುನ್ನ ಮತ್ತೊಮ್ಮೆ ಪರಾಮರ್ಶೆ ನಡೆಸಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕಿದೆ.
ವರದಿ: ಅನಿಲ್ ಕಲ್ಕೆರೆ, ಟಿವಿ9 ಬೆಂಗಳೂರು
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:25 pm, Fri, 10 March 23