ಬೆಂಗಳೂರು ಮೆಟ್ರೋ ನಿಲ್ದಾಣದ ಆವರಣದಲ್ಲಿ ಉಗುಳಿದ ಪ್ರಯಾಣಿಕ: ದಂಡ ವಿಧಿಸಿದ ಬಿಎಂಆರ್​ಸಿಎಲ್​​

ಬೆಂಗಳೂರು ಮೆಟ್ರೋದಲ್ಲಿ ಉಗುಳುವುದು ಮತ್ತು ಕಸ ಎಸೆಯುವುದನ್ನು ತಡೆಯಲು ದಂಡ ವಿಧಿಸುವ ಮೂಲಕ BMRCL ಕಠಿಣಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಆದರೂ ಇಂತಹ ಘಟನೆಗಳು ಮತ್ತೆ ಮತ್ತೆ ನಡೆಯುತ್ತಿವೆ. ಇದೀಗ ಕನಕಪುರ ರಸ್ತೆಯ ದೊಡ್ಡಕಲಸಂದ್ರ ಮೆಟ್ರೋ ನಿಲ್ದಾಣದಲ್ಲಿ ಉಗುಳಿದ ಪ್ರಯಾಣಿಕನಿಗೆ ಬಿಎಂಆರ್​​ಸಿಎಲ್​ ದಂಡ ವಿಧಿಸಿದೆ.

ಬೆಂಗಳೂರು ಮೆಟ್ರೋ ನಿಲ್ದಾಣದ ಆವರಣದಲ್ಲಿ ಉಗುಳಿದ ಪ್ರಯಾಣಿಕ: ದಂಡ ವಿಧಿಸಿದ ಬಿಎಂಆರ್​ಸಿಎಲ್​​
ನಮ್ಮ ಮೆಟ್ರೋ

Updated on: May 05, 2025 | 9:58 AM

ಬೆಂಗಳೂರು, ಮೇ 05: ಇತ್ತೀಚೆಗೆ ಓರ್ವ ಯುವತಿ ಮೆಟ್ರೋದಲ್ಲೇ (Metro) ಕುಳಿತು ಆಹಾರ ಸೇವಿಸಿದ್ದ ಘಟನೆ ನಡೆದಿತ್ತು. ಬಳಿಕ ಬೆಂಗಳೂರು ಮೆಟ್ರೋ ರೈಲು ನಿಗಮ ಆ ಯುವತಿಗೆ 500 ರೂ ದಂಡ ವಿಧಿಸಿತ್ತು. ಅದೇ ರೀತಿಯಾಗಿ ಓರ್ವ ಪ್ರಯಾಣಿಕ ಮೆಟ್ರೋದಲ್ಲಿ ಕುಳಿತು ವಿಮಲ್‌ ಪಾನ್‌ ಮಸಾಲ ತಿನ್ನುತ್ತಿದ್ದ ವಿಡಿಯೋವೊಂದು ವೈರಲ್​​ ಆಗಿತ್ತು. ಸಹ ಪ್ರಯಾಣಿಕರು ಆತನನ್ನು ತರಾಟೆಗೆ ತೆಗೆದುಕೊಂಡಿದ್ದರು. ಮೆಟ್ರೋದಲ್ಲಿ ಈ ರೀತಿ ಮಾಡುವುದು ತಪ್ಪು ಎಂದೂ ಗೊತ್ತಿದ್ದರು ಕೆಲವರು ಹುಚ್ಚಾಟ ಮೆರೆಯುತ್ತಿದ್ದಾರೆ. ಇದೀಗ ಮತ್ತೊಂದು ಘಟನೆ ನಡೆದಿದೆ. ಮೆಟ್ರೊ ನಿಲ್ದಾಣದ ಆವರಣದಲ್ಲಿ ಉಗುಳಿದ ಪ್ರಯಾಣಿಕನಿಗೆ BMRCL ದಂಡ ವಿಧಿಸಿದೆ.

ಮೆಟ್ರೋ ಪ್ರಕಟಣೆಯಲ್ಲಿ ಏನಿದೆ?

ಮೇ 2 2025ರ ಸಂಜೆ ಸುಮಾರು 6:30ಕ್ಕೆ ಗ್ರೀನ್ ಲೈನ್‌ ಕನಕಪುರ ರಸ್ತೆಯಲ್ಲಿರುವ ದೊಡ್ಡಕಲಸಂದ್ರ ಮೆಟ್ರೋ ನಿಲ್ದಾಣದ ಪ್ಲಾಟ್ ಫಾರ್ಮ್ 01ರ ಲಿಫ್ಟ್ ಬಳಿಯಲ್ಲಿ ಪಾನ್ ಮಸಾಲಾ ಉಗುಳುತ್ತಿದ್ದ ಪ್ರಯಾಣಿಕನನ್ನು ಪತ್ತೆ ಹಚ್ಚಿ ಮೆಟ್ರೋ ಅಧಿಕಾರಿಗಳು ದಂಡ ವಿಧಿಸಿರುವುದಾಗಿ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ತಿಳಿಸಿದೆ.

ಇದನ್ನೂ ಓದಿ
ಮನೆ ಬಾಗಿಲಿಗೆ ಡ್ರೋನ್ ಡೆಲಿವರಿ! ಬೆಂಗಳೂರು ಅಪಾರ್ಟ್​ಮೆಂಟ್ ಹೊಸ ಪ್ರಯೋಗ
ಡೆಡ್ಲಿ ಮರಗಳಿಗೆ ಸಿಗದ ಮುಕ್ತಿ: ಮರ ಬಿದ್ದು ಅವಾಂತರ, ಪಾಲಿಕೆ ಡೋಂಟ್ ಕೇರ್
ಬೆಂಗಳೂರಿನ ಚಿನ್ಮಯ್ ಹೆಗ್ಡೆಯ ಸಹಾಯ ಬಾಲಕಿಯ ಜೀವನ ಬದಲಿಸಿದ್ದು ನಿಜವೇ?
ಥೂ...ಛೀ..ಬೆಂಗಳೂರಿನಲ್ಲಿ ಬೆತ್ತಲೆಯಾಗಿ ಓಡಾಡಿದ ಯುವತಿ, ವಿಡಿಯೋ ವೈರಲ್

ನಮ್ಮ ಮೆಟ್ರೋ ಟ್ವೀಟ್​

ಮೆಟ್ರೋ ಆವರಣದಲ್ಲಿ ಉಗುಳುವುದು ಮತ್ತು ಕಸದಂಚುಗಳನ್ನು ಎಸೆಯುವುದು ಪರಿಸರ ಹಾಳಾಗುವುದಲ್ಲದೆ, ಇತರೆ ಪ್ರಯಾಣಿಕರ ಆರೋಗ್ಯಕ್ಕೂ ಅಪಾಯವನ್ನು ಉಂಟುಮಾಡುತ್ತದೆ. ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಸ್ವಚ್ಛ, ಆರೋಗ್ಯಕರ ಮತ್ತು ಸುರಕ್ಷಿತ ಸಾರ್ವಜನಿಕ ಸಾರಿಗೆಯ ವ್ಯವಸ್ಥೆಗಾಗಿ ಕಟಿಬದ್ಧವಾಗಿದೆ.

ಇದನ್ನೂ ಓದಿ: Viral: ನಮ್ಮ ಮೆಟ್ರೋದಲ್ಲಿ ಕುಳಿತು ವಿಮಲ್‌ ಪಾನ್‌ ಮಸಾಲಾ ಜಗಿದ ಪ್ರಯಾಣಿಕ; ಭದ್ರತೆ ಬಿಗಿಗೊಳಿಸಿದ ಬಿಎಂಆರ್‌ಸಿಎಲ್

ಸ್ವಚ್ಛತೆ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಎಲ್ಲ ಪ್ರಯಾಣಿಕರು ಸಹಕರಿಸಿ, ಇಂತಹ ಘಟನೆಗಳು ಸಂಭವಿಸಿದರೆ ತಕ್ಷಣವೇ ಮೆಟ್ರೋ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಬಿಎಂಆರ್​​ಸಿಎಲ್​ ಮನವಿ ಮಾಡಿದೆ.

ಮೆಟ್ರೋದಲ್ಲಿ ಊಟ ಮಾಡಿ ದಂಡ ತೆತ್ತ ಯುವತಿ

ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಮಾದಾವರ ಮೆಟ್ರೋ ನಿಲ್ದಾಣದಿಂದ ಮಾಗಡಿ ರಸ್ತೆ ಮೆಟ್ರೋ ನಿಲ್ದಾಣಕ್ಕೆ ಪ್ರಯಾಣಿಸುವಾಗ ಓರ್ವ ಯುವತಿ ಊಟ ಮಾಡಿದ್ದಕ್ಕಾಗಿ 500 ರೂ ದಂಡ ತೆತ್ತಿದ್ದಳು. ಯುವತಿ ಮೆಟ್ರೋದಲ್ಲೇ ಕುಳಿತು ಊಟ ಮಾಡುತ್ತಿದ್ದ ವಿಡಿಯೋ ಕೂಡ ವೈರಲ್​ ಆಗಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:02 am, Mon, 5 May 25