Highway Heroes: ಬೆಂಗಳೂರಿನ ಟ್ರಕ್ ಚಾಲಕರ ಮನಗೆದ್ದ ಹೈವೇ ಹೀರೋಸ್ 2.0 ಅಭಿಯಾನ; ಡಿಸಿಪಿ ಸಿರಿಗೌರಿ ಶ್ಲಾಘನೆ
TV9 Network Shriram Finance Ltd organized Highway Heroes campaign season 2: ಎರಡನೇ ಸೀಸನ್ನ ಹೈವೇ ಹೀರೋಸ್ ಅಭಿಯಾನ ಬೆಂಗಳೂರಿನಲ್ಲಿ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಟ್ರಕ್ ಚಾಲಕರಿಗೆ ವಿವಿಧ ರೀತಿಯಲ್ಲಿ ಬೆಂಬಲ ನೀಡುವ ಉದ್ದೇಶದಿಂದ ಈ ಕೆಂಪೇನ್ ನಡೆಸಲಾಗುತ್ತಿದೆ. ಶ್ರೀರಾಮ್ ಫೈನಾನ್ಸ್ ಲಿ ಮತ್ತು ಟಿವಿ9 ನೆಟ್ವರ್ಕ್ ಸಂಸ್ಥೆಗಳು ಜಂಟಿಯಾಗಿ ಹೈವೇಸ್ ಹೀರೋಸ್ ಅಭಿಯಾನ ನಡೆಸುತ್ತಿವೆ.

ಶ್ರೀರಾಮ್ ಫೈನಾನ್ಸ್ ಮತ್ತು ಟಿವಿ9 ನೆಟ್‌ವರ್ಕ್ ಜಂಟಿಯಾಗಿ ಆಯೋಜಿಸಿದ್ದ ‘ಹೈವೇ ಹೀರೋಸ್’ ಅಭಿಯಾನದ 2ನೇ ಸೀಸನ್ (Highway Heroes season 2 campaign) ಬೆಂಗಳೂರಿನಲ್ಲಿ ಯಶಸ್ವಿಯಾಗಿ ಮುಕ್ತಾಯಗೊಂಡಿತು. ಎರಡು ದಿನಗಳ ಈ ಕಾರ್ಯಕ್ರಮವು ಮೇ 2 ಮತ್ತು 3 ರಂದು ಬೆಂಗಳೂರಿನ ಯಶವಂತಪುರದ ಎರಡನೇ ಹಂತದ ಕೈಗಾರಿಕಾ ಉಪನಗರದ ದೇವರಾಜ್ ಅರಸ್ ಟ್ರಕ್ ಟರ್ಮಿನಲ್ನಲ್ಲಿ ನಡೆಯಿತು.
ಈ ಅಭಿಯಾನದ ಉದ್ದೇಶ ಟ್ರಕ್ ಚಾಲಕರನ್ನು ಮಾನಸಿಕವಾಗಿ, ದೈಹಿಕವಾಗಿ ಮತ್ತು ಆರ್ಥಿಕವಾಗಿ ಸಬಲೀಕರಣಗೊಳಿಸುವುದು. ನೂರಾರು ಟ್ರಕ್ ಚಾಲಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿವಿಧ ಸೆಷನ್ಗಳ ಮೂಲಕ ಪ್ರಮುಖ ಮಾಹಿತಿಯನ್ನು ಪಡೆದರು.
ಹೈವೇ ಹೀರೋಸ್ ಕಾರ್ಯಕ್ರಮದ ಮುಖ್ಯ ಫೀಚರ್ಗಳು:
ಮಾನಸಿಕ ಸ್ವಾಸ್ಥ್ಯದ ಸೆಷನ್ಸ್: ‘ದಿ ಯೋಗ ಇನ್ಸ್ಟಿಟ್ಯೂಟ್’ ನ ತಜ್ಞರು ಕಲಿಸುವ ಒತ್ತಡ ನಿರ್ವಹಣೆ ಮತ್ತು ಮಾನಸಿಕ ಯೋಗಕ್ಷೇಮಕ್ಕಾಗಿ ಯೋಗ ಮತ್ತು ಧ್ಯಾನ ಅಭ್ಯಾಸಗಳು.
ದೈಹಿಕ ಆರೋಗ್ಯದ ಸೆಷನ್: ‘ಪಿರಮಲ್ ಹೆಲ್ತ್’ ನ ತಜ್ಞರು ಕ್ಷಯರೋಗ ಜಾಗೃತಿ ಮತ್ತು ತಡೆಗಟ್ಟುವ ಕ್ರಮಗಳನ್ನು ವಿವರಿಸಿದರು.
ಹಣಕಾಸು ಸಾಕ್ಷರತಾ ಸೆಷನ್: ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ (NSE) ತಜ್ಞರು ಬಜೆಟ್, ಉಳಿತಾಯ ಮತ್ತು ಸೈಬರ್ ವಂಚನೆಯಿಂದ ರಕ್ಷಣೆ ಪಡೆಯುವ ವಿಧಾನಗಳನ್ನು ಕಲಿಸಿದರು.
ಸ್ಕಿಲ್ ಇಂಡಿಯಾ ತರಬೇತಿ: ಸರ್ಕಾರದಿಂದ ಮಾನ್ಯತೆ ಪಡೆದ ತರಬೇತಿ ಪಡೆದ ಬಳಿಕ ಚಾಲಕರಿಗೆ ‘12ನೇ ಪ್ಲಸ್ ವ್ಯಾಲ್ಯೂ’ ಸರ್ಟಿಫಿಕೇಟ್ ನೀಡಲಾಗುತ್ತದೆ. ಚಾಲನಾ ಪರವಾನಿಗೆ ನವೀಕರಣಕ್ಕೆ ಇದು ಸಹಾಯವಾಗುತ್ತದೆ. ಇದು 90ಕ್ಕೂ ಹೆಚ್ಚು ದೇಶಗಳಲ್ಲಿ ಮಾನ್ಯವೂ ಆಗಿದೆ.
ಹೈವೇ ಹೀರೋಸ್ ಅಭಿಯಾನ ಶ್ಲಾಘಿಸಿದ ಡಿಸಿಪಿ ಸಿರಿಗೌರಿ
ಶ್ರೀರಾಮ್ ಫೈನಾನ್ಸ್ ಮತ್ತು ಟಿವಿ9 ನೆಟ್ವರ್ಕ್ ಆಯೋಜಿಸಿರುವ ಹೈವೇ ಹೀರೋಸ್ ಅಭಿಯಾನದ ಕಾರ್ಯಗಳನ್ನು ಬೆಂಗಳೂರು ಉತ್ತರ ಟ್ರಾಫಿಕ್ ವಿಭಾಗದ ಡಿಸಿಪಿ ಸಿರಿಗೌರಿ ಡಿಆರ್ ಅವರು ಶ್ಲಾಘಿಸಿದರು. ಟ್ರಕ್ ಚಾಲಕರಿಗೆ ಈ ಅಭಿಯಾನ ಬಹಳ ಅಗತ್ಯವಾಗಿದೆ ಎಂದು ಹೇಳಿದ ಅವರು, ಇದನ್ನು ಆಯೋಜಿಸಿದ ಸಂಸ್ಥೆಗಳಿಗೆ ಧನ್ಯವಾದ ಹೇಳಿದರು.
ಶ್ರೀರಾಮ್ ಫೈನಾನ್ಸ್ ಲಿಮಿಟೆಡ್ನ ಜಂಟಿ ಎಂಡಿಯಾದ ಸುದರ್ಶನ್ ಹೊಳ್ಳ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಟ್ರಕ್ ಚಾಲಕ ಬಂಧುಗಳಿಗೆ ಈ ಅಭಿಯಾನ ಎಷ್ಟು ಮಹತ್ವದ್ದು ಎಂದು ವಿವರಿಸಿದ ಅವರು, ತಮ್ಮ ಸಂಸ್ಥೆಯಿಂದ ಟ್ರಕ್ ಚಾಲಕರಿಗೆ ಬೆಂಬಲವಾಗಿ ತೆಗೆದುಕೊಳ್ಳುತ್ತಿರುವ ಕ್ರಮಗಳ ಬಗ್ಗೆಯೂ ಮಾಹಿತಿ ಹಂಚಿಕೊಂಡರು.
ಇದಲ್ಲದೆ, ಹೈವೇ ಹೀರೋಸ್ ಕೆಂಪೇನ್ ಅನ್ನು ಹುರಿದುಂಬಿಸಲು ಶ್ರೀರಾಮ್ ಫೈನಾನ್ಸ್ ಸಂಸ್ಥೆಯ ಸಿಎಸ್ಆರ್ ವಿಭಾಗದ ಮುಖ್ಯಸ್ಥ ಎಸ್ ಬಾಲಮುರುಗನ್, ಟಿವಿ9 ಸೇಲ್ಸ್ ವಿಭಾಗದ ಸೀನಿಯರ್ ವೈಸ್ ಪ್ರೆಸಿಡೆಂಡ್ ಪ್ರಸನ್ನ ರಾಘವ್ ಅವರು ಕಾರ್ಯಕ್ರಮದ ವೇದಿಕೆ ಹಂಚಿಕೊಂಡರು. ಈ ವೇಳೆ, ದೇವರಾಜ್ ಟ್ರಕ್ ಟರ್ಮಿನಲ್ನ ಎಂಡಿ ಸಿ.ಎನ್. ಶಿವಪ್ರಕಾಶ್ ಕೂಡ ಇದ್ದರು.
ಹೈವೇ ಹೀರೋಸ್ ಅಭಿಯಾನದ ಮುಂಬರುವ ಕಾರ್ಯಕ್ರಮಗಳು:
- ಮೇ 6-7: ಚೆನ್ನೈ, ತಮಿಳುನಾಡು
- ಮೇ 10-11: ವಿಜಯವಾಡ, ಆಂಧ್ರಪ್ರದೇಶ
ಟ್ರಕ್ ಚಾಲಕರು ಈ ಅಭಿಯಾನದಲ್ಲಿ ಭಾಗವಹಿಸಿ ತಮ್ಮ ಆರೋಗ್ಯ, ಮಾನಸಿಕ ಸ್ಥಿತಿ ಮತ್ತು ಆರ್ಥಿಕ ಸ್ಥಿತಿಯನ್ನು ಬಲಪಡಿಸಿಕೊಳ್ಳುವಂತೆ ವಿನಂತಿಸಲಾಗಿದೆ.
ಇನ್ನಷ್ಟು ರಾಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




