ಬೆಂಗಳೂರು, ಅಕ್ಟೋಬರ್ 22: ಸೋಮವಾರ ಸಂಜೆ ಆಟವಾಡಲು ಹೋಗಿದ್ದ ಅಣ್ಣ-ತಂಗಿ ಕೆಂಗೇರಿ ಕೆರೆ (Kengeri Lake) ಬಳಿ ನಾಪತ್ತೆಯಾಗಿದ್ದಾರೆ. ಜಾನ್ ಸೀನಾ (13), ಮಹಾಲಕ್ಷ್ಮೀ(11) ನಾಪತ್ತೆಯಾದವರು. ಕೆಂಗೇರಿ ಕೆರೆ ಪಕ್ಕದ ಬಡಾವಣೆಯಲ್ಲಿ ವಾಸವಾಗಿರುವ ನಾಗಮ್ಮ ಎಂಬುವರ ಮಕ್ಕಳು ಸೋಮವಾರ ಸಂಜೆ 6 ಗಂಟೆ ಸುಮಾರಿಗೆ ಕೆಂಗೇರಿ ಕೆರೆ ನೀರು ತರಲು ಹೋಗಿದ್ದರು.
ನೀರು ತರಲು ಹೋದವರು ಕೆರೆ ಬಳಿ ಆಟವಾಡುತ್ತಿದ್ದರು. ಆಟವಾಡುತ್ತಾ ಆಯತಪ್ಪಿ ಕೆಂಗೇರಿ ಕೆರೆಯಲ್ಲಿ ಬಿದ್ದಿರುವ ಶಂಕೆ ವ್ಯಕ್ತವಾಗಿದೆ. ಕೆರೆಯ ದಂಡೆ ಮೇಲೆ ಮಕ್ಕಳ ಬಟ್ಟೆ ಮತ್ತು ಬಿಂದಿಗೆ ಪತ್ತೆಯಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ, ಪೋಲಿಸರು ದೌಡಾಯಿಸಿದ್ದು, ಶೋಧಕಾರ್ಯ ನಡೆದಿದೆ. ಕೆಂಗೇರಿ ಕೆರೆ ಬಳಿ ನಾಗಮ್ಮರ ಆಕ್ರಂದನ ಮುಗಿಲು ಮುಟ್ಟಿದೆ.
ಇದನ್ನೂ ಓದಿ: ಮಳೆಗೆ ಬೆಂಗಳೂರಿನ ಕೆರೆಗಳಿಗೆ ಜೀವಕಳೆ: ಮೈದುಂಬಿ ಹರಿಯುತ್ತಿರುವ 40 ಕೆರೆಗಳು
ನಾಗಮ್ಮ ಬಿಬಿಎಂಪಿಯಲ್ಲಿ ಕಸ ವಿಂಗಡಣೆ ಕೆಲಸ ಮಾಡುತ್ತಿದ್ದಾರೆ. ನಾಗಮ್ಮ ತನ್ನ ಇಬ್ಬರು ಮಕ್ಕಳು ಮತ್ತು ಸಹೋದರಿ ಧನಲಕ್ಷ್ಮೀ ಜೊತೆಗೆ ವಾಸವಾಗಿದ್ದಾರೆ.
ದೇವನಹಳ್ಳಿ: ಒಡೆದು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ವೆಂಕಟಗಿರಿಕೋಟೆ ಗ್ರಾಮದ ಕೆರೆ ಕೋಡಿ ಬಡಾವಣೆ ರಸ್ತೆಗಳು ಸಂಪೂರ್ಣ ಜಲಾವೃತವಾಗಿವೆ. ಇನ್ನು, ಮಳೆಗೆ ವೆಂಕಟಗಿರಿಕೋಟೆ ಗ್ರಾಮದಲ್ಲಿನ ರಾಗಿ, ಹೂವಿನ ಬೆಳೆ ನಾಶವಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ, ಚಿಕ್ಕಬಳ್ಳಾಪುರ ಸುತ್ತಮುತ್ತ ಭಾರಿ ಮಳೆಯಾಗಿದೆ. ಮಳೆಯಿಂದ ಕಳೆದ ರಾತ್ರಿ ಕಾಲುವೆ ತುಂಬಿ ಹರಿದಿದೆ. ರಭಸವಾಗಿ ಹರಿಯುತ್ತಿದ್ದ ಕಾಲುವೆ ನೀರಿನಲ್ಲಿ ಎರಡು ಕಾರುಗಳು ಕೊಚ್ಚಿಕೊಂಡು ದೇವನಹಳ್ಳಿ ತಾಲೂಕಿನ ನಾಗರ್ಜುನಾ ಕಾಲೇಜು ಬಳಿ ಬಂದಿವೆ. ಕಾಲುವೆಯಲ್ಲಿ ಒಂದು ಕಾರು ಸಂಪೂರ್ಣ ಮುಳುಗಡೆಯಾಗಿದೆ. ಮತ್ತೊಂದು ಕಾರು ದಡದಲ್ಲಿ ನಿಂತಿದೆ.
ಹುರಳಗುರ್ಕಿ ಗ್ರಾಮದ ಆರೂ ಜನರು ಕಾರಿನಲ್ಲಿ ಆಸ್ಪತ್ರೆಗೆ ತೆರಳುತ್ತಿದ್ದರು. ಮಳೆ ನೀರಿನ ರಭಸಕ್ಕೆ ಚಾಲಕನ ನಿಯಂತ್ರಣ ತಪ್ಪಿ ಕಾರು ಏಕಾಏಕಿ ಕೊಚ್ಚಿಕೊಂಡು ಹೋಗಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಆರೂ ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಧಾರಾಕಾರ ಮಳೆಯಿಂದ ಇನ್ನೂವರೆಗು ರಸ್ತೆ ತುಂಬಾ ಮಳೆ ನೀರು ಹರಿಯುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:26 am, Tue, 22 October 24