Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಳೆಗೆ ಬೆಂಗಳೂರಿನ ಕೆರೆಗಳಿಗೆ ಜೀವಕಳೆ: ಮೈದುಂಬಿ ಹರಿಯುತ್ತಿರುವ 40 ಕೆರೆಗಳು

ಸಿಲಿಕಾನ್ ಸಿಟಿಯಲ್ಲಿ ಕಳೆದೊಂದು ವಾರದಿಂದ ಮಳೆರಾಯನ ಅಬ್ಬರ ಜೋರಾಗ್ತಿದೆ. ವರುಣನ ಆರ್ಭಟಕ್ಕೆ ಬೆಂಗಳೂರಿನ ಬೀದಿಬೀದಿಗಳಲ್ಲಿ ವರುಣನ ಎಂಟ್ರಿಯಿಂದ ನೀರು ಉಕ್ಕಿ ಹರಿಯುತ್ತಿವೆ. ಇತ್ತ ಬಿರು ಬೇಸಿಗೆಯಿಂದ ಬತ್ತಿಹೋಗಿದ್ದ ರಾಜಧಾನಿಯ ಕೆರೆಗಳಿಗೆ ಮರುಜೀವ ಬಂದಿದೆ. ಕಳೆದ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಿಂದ ಸುಸ್ತಾಗಿದ್ದ ಸಿಟಿಮಂದಿಗೆ ಈ ಬಾರೀ ಕೆರೆಗಳು ಮೈದುಂಬಿರೋದು ಅಂತರ್ಜಲ ಹೆಚ್ಚಿಸಿ ವರವಾಗೋ ಲಕ್ಷಣ ಕಾಣುತ್ತಿದ್ರೆ. ಮತ್ತೊಂದೆಡೆ ತುಂಬಿದ ಕೆರೆಗಳಿಂದ ಅಪಾಯ ಆಗದಂತೆ ತಡೆಯೋಕೆ ಪಾಲಿಕೆ ಕಸರತ್ತು ನಡೆಸಿದೆ.

ಮಳೆಗೆ ಬೆಂಗಳೂರಿನ ಕೆರೆಗಳಿಗೆ ಜೀವಕಳೆ: ಮೈದುಂಬಿ ಹರಿಯುತ್ತಿರುವ 40 ಕೆರೆಗಳು
ಕೆರೆ
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on:Oct 21, 2024 | 11:20 PM

ಬೆಂಗಳೂರು, (ಅಕ್ಟೋಬರ್ 21): ಬಿಸಿಲಿನ ಬೇಗೆಯಲ್ಲಿ ಬೆಂದಿದ್ದ ಬೆಂದಕಾಳೂರಿನ ಕೆರೆಗಳಿಗೆ ವರುಣನ ಕೃಪೆಯಿಂದ ಇದೀಗ ಮರುಜೀವ ಬಂದಂತಾಗಿದೆ. ಕಳೆದೊಂದು ವಾರದಿಂದ ಮಳೆಯಾಗುತ್ತಿರುವುದರಿಂದ ರಾಜಧಾನಿಯಲ್ಲಿ ಅವಾಂತರಗಳನ್ನ ಸೃಷ್ಟಿಸಿದ್ರೆ..ಈ ಅವಾಂತರಗಳ ಮಧ್ಯೆ ಸಿಟಿಜನರಿಗೆ ಗುಡ್ ನ್ಯೂಸ್ ಕೂಡ ಸಿಕ್ಕಿದೆ. ಎಡೆಬಿಡದೇ ಸುರಿದ ಮಳೆಗೆ ಬೆಂಗಳೂರಿನ ಬಹುತೇಕ ಕೆರೆಗಳು ಭರ್ತಿಯಾಗಿದ್ದು, ಇದರಿಂದ ಬೆಂಗಳೂರಿನ ಅಂತರ್ಜಲಮಟ್ಟ ಸುಧಾರಿಸೋ ಸೂಚನೆ ಸಿಗುತ್ತಿದೆ. ಇನ್ನು ನಿರಂತರ ಮಳೆಗೆ ಬೆಂಗಳೂರಿನ ಪ್ರಮುಖ ಕೆರೆಗಳು ಮೈದುಂಬಿ ನಿಂತಿದ್ದು ಹಲವು ಕೆರೆಗಳು ಕೋಡಿ ಬೀಳುವ ಹಂತಕ್ಕೆ ತಲುಪಿರೋದಾಗಿ ಬಿಬಿಎಂಪಿಯ ಕೆರೆಗಳ ವಿಭಾಗದ ಅಂಕಿ ಅಂಶಗಳು ತಿಳಿಸಿವೆ.

ಯಾವ್ಯಾವ ವಲಯದಲ್ಲಿ ಯಾವ ಕೆರೆ ಭರ್ತಿ?

ದಕ್ಷಿಣ ವಲಯ

  • ಕೆಂಪಾಂಬುಧಿ ಕೆರೆ
  • ಮಡಿವಾಳ ಕೆರೆ
  • ಅಗರ ಕೆರೆ
  • ಇಬ್ಬಲೂರು ಕೆರೆ
  • ಸಾರಕ್ಕಿ ಕೆರೆ

ಆರ್.ಆರ್.ನಗರ ವಲಯ

  • ಹೇರೋಹಳ್ಳಿ ಕೆರೆ
  • ಗಾಂಧಿನಗರ ಹೊಸಕೆರೆ
  • ಕೆಂಚಾಪುರ ಕೆರೆ
  • ಹಲಗೆವಡೇರಹಳ್ಳಿ ಕೆರೆ
  • ಕೊಡಿಗೆಹಳ್ಳಿ ಕೆರೆ
  • ಲಿಂಗಧೀರನಹಳ್ಳಿ ಕೆರೆ

ಯಲಹಂಕ ವಲಯ

  • ಜಕ್ಕೂರು ಕೆರೆ
  • ರಾಚೇನಹಳ್ಳಿ ಕೆರೆ
  • ಅಮೃತಹಳ್ಳಿ ಕೆರೆ
  • ಸಿಂಗಾಪುರ ಕೆರೆ
  • ಯಲಹಂಕ ಕೆರೆ
  • ಪುಟ್ಟೇನಹಳ್ಳಿ ಕೆರೆ

ದಾಸರಹಳ್ಳಿವಲಯ

  • ದಾಸರಹಳ್ಳಿ ಕೆರೆ
  • ಶಿವಪುರ ಕೆರೆ
  • ನೆಲಮಂಗಲ ಕೆರೆ

ಸದ್ಯ ಇದೆಷ್ಟೇ ಅಲ್ಲದೇ ಬೆಂಗಳೂರಿನ ಕಾಂಕ್ರೀಟ್ ಕಾಡಿನ ಮಧ್ಯೆ ಅಳಿದುಳಿದ ಕೆಲ ಕೆರೆಗಳು ಕೂಡ ಜಲದರ್ಶನ ಪಡೆದು ಭರ್ತಿಯಾಗಿವೆ. ಇತ್ತ ಕೆರೆಗಳು ಭರ್ತಿಯಾಗುತ್ತಿದ್ದಂತೆ ಅಲರ್ಟ್ ಆಗಿರುವ ಪಾಲಿಕೆ, ಆಯಾ ವಲಯಗಳಲ್ಲಿ ಕೆರೆದಂಡೆಗಳನ್ನ ಭದ್ರಪಡಿಸುವುದಕ್ಕೆ ಜೊತೆಗೆ ಕೆರೆಗಳ ಬಳಿ ಫೆನ್ಸ್ ಅಳವಡಿಸಿ ಸುರಕ್ಷತಾ ಕ್ರಮಗಳನ್ನ ಕೈಗೊಳ್ಳುವಂತೆ ವಲಯಾಧಿಕಾರಿಗಳಿಗೆ ಸೂಚನೆ ನೀಡಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಮತ್ತೆ ವರುಣನ ಆರ್ಭಟ: ಕೊಡಿಗೆಹಳ್ಳಿ ಅಂಡರ್​ಪಾಸ್​ನಲ್ಲಿ ಸಿಲುಕಿದ ವಾಹನಗಳು

ಒಟ್ಟಿನಲ್ಲಿ ಮಳೆರಾಯನ ಆಗಮನ ಒಂದೆಡೆ ಬೆಂಗಳೂರಿನ ಚಿತ್ರಣವನ್ನ ಅಸ್ತವ್ಯಸ್ತ ಮಾಡಿದ್ರೆ, ಮತ್ತೊಂದೆಡೆ ರಾಜಧಾನಿಯ ಅಳಿದುಳಿದ ಕೆರೆಗಳಿಗೆ ನೀರು ತುಂಬಿಸೋ ಮೂಲಕ ಬೆಂಗಳೂರಿನ ಅಂತರ್ಜಲಮಟ್ಟ ಹೆಚ್ಚಿಸೋಕೆ ಸಹಾಯ ನೀಡ್ತಿದೆ. ಸದ್ಯ ಕೆರೆಗಳ ಮೇಲೆ ನಿಗಾ ಇಡೋದಾಗಿ ಪಾಲಿಕೆ ಹೇಳಿಕೊಂಡಿದ್ದು ಮಳೆ ಮತ್ತಷ್ಟು ಹೆಚ್ಚಾದ್ರೆ ರಾಜಧಾನಿಯ ಕೆರೆಗಳನ್ನ ಸರಿಯಾಗಿ ನಿರ್ವಹಣೆ ಮಾಡುತ್ತಾ ಎನ್ನುವುದನ್ನು ಕಾದುನೋಡಬೇಕಿದೆ.

ಶಾಂತಮೂರ್ತಿ,ಟಿವಿ9,ಬೆಂಗಳೂರು

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 10:23 pm, Mon, 21 October 24