ನಿನ್ನೆ ರಾತ್ರಿ ಬೆಂಗಳೂರಲ್ಲಿ ಮತ್ತೇ ಧಾರಾಕಾರ ಮಳೆ, ಜಕ್ಕೂರಿನ ಸುರಭಿ ಲೇಔಟ್ ಜಲಾವೃತ
ಕಳೆದ 23 ವರ್ಷಗಳಿಂದ ಸುರಭಿ ಲೇಔಟ್ನಲ್ಲಿ ವಾಸವಾಗಿರುವ ರೇಣುಕಾ ಹೆಸರಿನ ಗೃಹಿಣಿ ಹೇಳುವಂತೆ ಮೊದಲು ಯಾವತ್ತೂ ಇಂಥ ತೊಂದರೆ ಎದುರಾಗಿರಲಿಲ್ಲವಂತೆ. ಜಕ್ಕೂರು ಮತ್ತು ಯಲಹಂಕದಿಂದ ಮಳನೀರು ಹರಿದು ಬಂದು ಈ ಸ್ಥಿತಿ ಎದುರಾಗಿದೆ ಎಂದು ಅವರು ಹೇಳುತ್ತಾರೆ. ಅವರ ಇಡೀ ಮನೆ ಜಲಾವೃತ!
ಬೆಂಗಳೂರು: ನಿನ್ನೆ ರಾತ್ರಿ ನಗರದಲ್ಲಿ ಮತ್ತೊಮ್ಮೆ ಸುರಿದ ಭಾರೀ ಮಳೆಯಿಂದ ಹಲವಾರು ಏರಿಯಾಗಳಲ್ಲಿ ಮಳೆನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಇಲ್ಲಿ ಕಾಣುತ್ತಿರೋದು ಜಕ್ಕೂರು ರಸ್ತೆಯಲ್ಲಿರುವ ಸುರಭಿ ಲೇಔಟ್. ರಸ್ತೆಯ ಮೇಲೆ ಮೊಣಕಾಲು ಮಟ್ಟದವರೆಗೆ ನೀರು ನಿಂತಿದೆ. ಜನ ಓಡಾಡೋದು ಸಾಧ್ಯವೇ ಇಲ್ಲದಂಥ ಸ್ಥಿತಿ. ಕಾರು ಮತ್ತು ದ್ವಿಚಕ್ರವಾಹನಗಳ ಟೈರುಗಳು ನೀರಲ್ಲಿ ಮುಳುಗಿವೆ. ಸ್ಥಳಕ್ಕೆ ಬಿಬಿಎಂಪಿ ಸಿಬ್ಬಂದಿ ಅಗಮಿಸಿರುವುದು ನಿಜವಾದರೂ ಸಮಸ್ಯೆಗೆ ಅವರಲ್ಲಿ ಪರಿಹಾರ ಇಲ್ಲ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಬೆಂಗಳೂರು ಮಳೆ ಅವಾಂತರ: ತುಂತುರು ಅಲ್ಲಿ ನೀರ ಹಾಡು, ಹಗಲಿನಲಿ, ಇರುಳಿನಲಿ, ಬಿಬಿಎಂಪಿ ಮಲಗಿರಲಿ!