ಬೆಂಗಳೂರು: ಪ್ರತಿಷ್ಠಿತ ದೇಶದ 29 ವಿಶ್ವವಿದ್ಯಾಲಯಗಳ ಅಂಕಪಟ್ಟಿ ನಕಲಿ ಮಾಡಿ ಮಾರಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. 1500ಕ್ಕೂ ಹೆಚ್ಚು ನಕಲಿ ಮಾರ್ಕ್ಸ್ ಕಾರ್ಡ್, 80 ನಕಲಿ ಸೀಲ್, 30 ಹಾಲೋಗ್ರಾಂ ಸ್ಟಿಕ್ಕರ್, 8 ಮೊಬೈಲ್ನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ನಲ್ಲಿ ಮಾರ್ಕ್ಸ್ ಕಾರ್ಡ್ ದಂಧೆ ನಡೆಸುತ್ತಿದ್ದು, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಹಾಗೂ ಪಿಯು ಬೋರ್ಡ್, ಯುಪಿಯ ಸಿ.ವಿ.ರಾಮನ್ ವಿವಿ, ದೆಹಲಿಯ ಸೆಕೆಂಡರಿ ಬೋರ್ಡ್, ಮೇಘಾಲಯದ ವಿಲಿಯಂ ಕ್ಯಾರಿ ಯೂನಿವರ್ಸಿಟಿ ಸೇರಿದಂತೆ 25ಕ್ಕೂ ಹೆಚ್ಚು ವಿವಿಗಳ ಅಂಕಪಟ್ಟಿ ನಕಲು ಮಾಡಿ ಮಾರಾಟ ಮಾಡುತ್ತಿದ್ದು, ಸಿಸಿಬಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಕುರಿತು ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಮಾತನಾಡಿ ಸಿಸಿಬಿ ಪೊಲೀಸರು ನಕಲಿ ಮಾರ್ಕ್ಸ್ ಕಾರ್ಡ್ನ ವ್ಯವಸ್ಥಿತ ಜಾಲವನ್ನ ಬಂಧಿಸಿದ್ದಾರೆ. ಬೆಂಗಳೂರಿನ ವಿ.ಎಸ್.ಎಸ್ ಇನ್ಸಿಟ್ಯೂಟ್ ಮೇಲೆ ಸಿಸಿಬಿ ದಾಳಿ ನಡೆಸಿತ್ತು, ವ್ಯವಸ್ಥಿತ ರೀತಿಯಲ್ಲಿ ಸ್ಕೂಲ್, ಡಿಗ್ರಿ , ಪಿಎಚ್ಡಿ ಪದವಿಯನ್ನ ನೀಡುವ ಜಾಲವನ್ನ ಪತ್ತೆ ಹಚ್ಚಿದ್ದಾರೆ. ಈ ಪ್ರಕರಣದಲ್ಲಿ ಸುಮಾರು 1 ಸಾವಿರಕ್ಕೂ ಹೆಚ್ಚು ದಾಖಲಾತಿಯನ್ನ ವಶಪಡಿಸಿಕೊಂಡಿದ್ದಾರೆ. ಒಟ್ಟು 4 ಮಂದಿಯನ್ನು ಈ ಪ್ರಕರಣದಲ್ಲಿ ಬಂಧಿಸಲಾಗಿದೆ.
ಒಂದು ಸರ್ಟಿರ್ಫೀಕೇಟ್ಗೆ ಒಂದೊಂದು ರೀತಿಯಲ್ಲಿ ಹಣ ಫಿಕ್ಸ್ ಮಾಡಲಾಗಿದೆ. ದೇಶದ ವಿವಿಧ ವಿಶ್ವವಿದ್ಯಾಲಯಗಳ ನಕಲಿ ಸೀಲ್ ಬಳಸಿರುವುದು ಪತ್ತೆಯಾಗಿದ್ದು, ನಕಲಿ ಮಾರ್ಕ್ಸ್ ಕಾರ್ಡ್ ಪಡೆದವರನ್ನ ಕೂಡ ವಿಚಾರಣೆ ನಡೆಸುತ್ತೇವೆ. ಸುಮಾರು 5 ವರ್ಷಗಳಿಂದ ಈ ರೀತಿಯ ಕೃತ್ಯದಲ್ಲಿ ಆರೋಪಿಗಳು ತೊಡಗಿದ್ದಾರೆ. 1 ಲಕ್ಷದಿಂದ 15 ಲಕ್ಷದವರೆಗೂ ಮಾರ್ಕ್ಸ್ ಕಾರ್ಡ್ ಮಾರಾಟ ಮಾಡಿದ್ದಾರೆ. ಎಷ್ಟು ಮಾರ್ಕ್ಸ್ ಕಾರ್ಡ್, ಯಾರು ಯಾರಿಗೆ ನೀಡಿದ್ದಾರೆ ಎನ್ನುವ ಮಾಹಿತಿಯನ್ನ ಕಲೆಹಾಕುತ್ತಿದ್ದೇವೆ. ವಿ.ಎಸ್.ಎಸ್ ವೆಬ್ ಸೈಟ್ ಮೂಲಕ ದೂರ ಶಿಕ್ಷಣ ನೀಡುವುದಾಗಿ ತಿಳಿಸಿ ಅದರ ಮೂಲಕ ಸಾಕಷ್ಟು ಜನರಿಗೆ ನಕಲಿ ಮಾರ್ಕ್ಸ್ ಕಾರ್ಡ್ ನೀಡಿದ್ದಾರೆ.
ಮೆಡಿಕಲ್ ಹೊರತುಪಡಿಸಿ ಪಿಯುಸಿ ಇಂದ ಪಿಎಚ್ಡಿ ವರೆಗೆ ನಕಲಿ ಮಾರ್ಕ್ಸ್ ಕಾರ್ಡ್ ನೀಡಲಾಗುತ್ತಿತ್ತು. ಈಗಾಗಲೇ ನಾಲ್ಕು ಜನ ಆರೋಪಿಗಳನ್ನು ಬಂಧಿಸಲಾಗಿದ್ದು, ಸೀಲ್ಸ್ ಹಾಗೂ 1500 ಮಾರ್ಕ್ಸ್ ಕಾರ್ಡ್ನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನು ಕೆಲವು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಅವರನ್ನು ಪತ್ತೆ ಹಚ್ಚುವ ಕೆಲಸ ಆಗುತ್ತಾ ಇದೆ. ಬೇರೆ ರಾಜ್ಯದ ಕೆಲವು ಯುರ್ನಿಸಿಟಿಗಳ ಓರಿಜನಲ್ ಮಾರ್ಕ್ಸ್ ಕಾರ್ಡ್ ಸಿಕ್ಕಿದೆ. ಅವುಗಳನ್ನು ವೇರಿಪೇಕೇಶನ್ ಮಾಡಲು ವಿಶ್ವವಿದ್ಯಾಲಯಗಳನ್ನು ಸಂರ್ಪಕಿಸಲಾಗತ್ತಿದೆ ಎಂದಿದ್ದಾರೆ.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:36 pm, Tue, 6 December 22