AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Duplicate gold: ನಕಲಿ ಚಿನ್ನದಿಂದ ಜನರನ್ನು ವಂಚಿಸಲೆಂದೇ ಆ ಗ್ಯಾಂಗ್​​ ಯುವಕರನ್ನು ಕೆಲಸಕ್ಕೆ ನೇಮಿಸಿಕೊಳ್ಳುತ್ತದಂತೆ!

ಇದೊಂದು ದೊಡ್ಡ ಕಥೆ. ಎಲ್ಲಿ ಮೋಸ ಹೋಗುವರು ಇರುತ್ತಾರೆ ಅಲ್ಲಿಯ ತನಕ ಮೋಸ ಮಾಡುವರು ಇದ್ದೇ ಇರುತ್ತಾರೆ. ಇದಕ್ಕೆ ಇನ್ನೊಂದು ಹೆಸರೇ ನಕಲಿ ಗೋಲ್ಡ್ ದಂಧೆ. ಸುಮ್ನೆ ಒಂದು ಸ್ಯಾಂಪಲ್ ನೋಡಿ. ತಮಿಳುನಾಡಿನಲ್ಲಿ 34, ಕೇರಳದಲ್ಲಿ 18, ಆಂಧ್ರ ಪ್ರದೇಶದಲ್ಲಿ 63 ಹಾಗೂ ಕರ್ನಾಟಕದಲ್ಲಿ 108 ಪ್ರಕರಣಗಳು. ಈ ಅಂಕಿ ಸಂಖ್ಯೆ ಕೇಳುತ್ತಿದ್ದಂತೆ ಮೈ ಜುಮ್ ಎನ್ನುತ್ತದೆ.

Duplicate gold: ನಕಲಿ ಚಿನ್ನದಿಂದ ಜನರನ್ನು ವಂಚಿಸಲೆಂದೇ ಆ ಗ್ಯಾಂಗ್​​ ಯುವಕರನ್ನು ಕೆಲಸಕ್ಕೆ ನೇಮಿಸಿಕೊಳ್ಳುತ್ತದಂತೆ!
ನಕಲಿ ಚಿನ್ನ ಕೊಟ್ಟು ಜನರನ್ನು ವಂಚಿಸಲು ಆ ಗ್ಯಾಂಗ್​​ ಯುವಕರನ್ನು ಕೆಲಸಕ್ಕೆ ತೆಗೆದುಕೊಳ್ಳುತ್ತಾರಂತೆ!
TV9 Web
| Updated By: ಸಾಧು ಶ್ರೀನಾಥ್​|

Updated on: Nov 26, 2022 | 5:17 PM

Share

ಇವರು ಮಾಡುವುದೇ ವಂಚನೆ. ಇಂತಹ ವಂಚನೆಗೆ ಸಹಕಾರ ನೀಡಲು ಅಕ್ಕಪಕ್ಕದ ರಾಜ್ಯದಲ್ಲಿ ಒಂದಿಷ್ಟು ಜನ ಆಕ್ಟಿವ್ ಆಗಿದ್ದಾರೆ. ವಿಶೇಷ ಅಂದ್ರೆ ಇವರಿಗೆಲ್ಲರಿಗೂ ಮಾಸಿಕ 30 ಸಾವಿರ ಸಂಬಳ. ಆಯಾ ಮಾತೃ ಭಾಷೆಯಲ್ಲಿ ಮಾತಾಡಿ ಅವರನ್ನ ವಂಚನೆ ಜಾಲಕ್ಕೆ (cheating) ಬಿಳಿಸುವುದೇ ಇವರ ಕೆಲ್ಸಾ. ಅರೇ ಇದೇನಿದು ಅಂತೀರಾ? ಇಲ್ಲಿದೆ ನೋಡಿ ನಕಲಿ ಗೋಲ್ಡ್ ಗ್ಯಾಂಗ್ ಶುರು ಮಾಡಿದ ವಿಶಿಷ್ಟವಾದ ಹೊಸ ಮಾಸ್ಟರ್ ಪ್ಲಾನ್ ಇದು.

ಇದೊಂದು ದೊಡ್ಡ ಕಥೆ. ಎಲ್ಲಿ ಮೋಸ ಹೋಗುವರು ಇರುತ್ತಾರೆ ಅಲ್ಲಿಯ ತನಕ ಮೋಸ ಮಾಡುವರು ಇದ್ದೇ ಇರುತ್ತಾರೆ. ಇದಕ್ಕೆ ಇನ್ನೊಂದು ಹೆಸರೇ ನಕಲಿ ಗೋಲ್ಡ್ ದಂಧೆ (Duplicate gold). ಸುಮ್ನೆ ಒಂದು ಸ್ಯಾಂಪಲ್ ನೋಡಿ. ತಮಿಳುನಾಡಿನಲ್ಲಿ 34, ಕೇರಳದಲ್ಲಿ 18, ಆಂಧ್ರ ಪ್ರದೇಶದಲ್ಲಿ 63 ಹಾಗೂ ಕರ್ನಾಟಕದಲ್ಲಿ 108 ಪ್ರಕರಣಗಳು. ಈ ಅಂಕಿ ಸಂಖ್ಯೆ ಕೇಳುತ್ತಿದ್ದಂತೆ ಮೈ ಜುಮ್ ಎನ್ನುತ್ತದೆ.

ಇದು ದಾವಣಗೆರೆ ಜಿಲ್ಲಾ (Davanagere) ಪೊಲೀಸ್ ರೆಕಾರ್ಡ್ ನಲ್ಲಿ ಕಂಡು ಬಂದ ಪ್ರಕರಣಗಳ ಸಂಖ್ಯೆ ಬರೋಬರಿ 213. ನಕಲಿ ಚಿನ್ನ ನೀಡಿ ವಂಚನೆ ಮಾಡುವ ವ್ಯಕ್ತಿಗಳು ಈಗ ಕರ್ನಾಟಕವನ್ನ ಬಿಟ್ಟುಬಿಟ್ಟಿದ್ದಾರೆ. ಕೇವಲ ಹೊರ ರಾಜ್ಯಗಳ ಮೇಲೆ ಕಣ್ಣು ಹಾಕಿದ್ದಾರೆ. ಕಾರಣ ಇವರ ವಂಚನೆ ಜಾಲಕ್ಕೆ ಹೆಚ್ಚಾಗಿ ತಮಿಳುನಾಡು, ಆಂಧ್ರ ಪ್ರದೇಶ, ಕೇರಳ, ಮಹಾರಾಷ್ಟ್ರ ಸೇರಿದಂತೆ ಹೊರ ರಾಜ್ಯದ ನೂರಾರು ಜನ ಚಿನ್ನದ ಆಸೆಗೆ ಬಿದ್ದು ಲಕ್ಷಾಂತರ ಹಣ ವಂಚಕರ ಕೈಗೆ ಕೊಟ್ಟು ಕೈ ಸುಟ್ಟುಕೊಳ್ಳುತ್ತಿದ್ದಾರೆ. ನಮ್ಮ ಮನೆ ಪಾಯಾ ತೆಗೆಯುವಾಗ ನಿಧಿ ಸಿಕ್ಕಿದೆ ಎಂದು ಮೊದಲು ಅಸಲಿ ಚಿನ್ನ ಕೊಟ್ಟು, ನಂತರ ಕುಂಕುಮದಲ್ಲಿ ನಕಲಿ ಚಿನ್ನ ಹಾಕಿ ವಂಚಿಸುತ್ತಾರೆ. ಮನೆಗೆ ಹೋಗಿ ನೋಡಿದ್ರೆ ಎಲ್ಲ ನಕಲಿ ಚಿನ್ನದ ನಾಣ್ಯಗಳು. ಕನಿಷ್ಟ 5-10 ಲಕ್ಷ ರೂಪಾಯಿ ವಂಚನೆ ಮಾಡುವುದು ಇವರ ಕೆಲ್ಸ.

ಜೈಲು ಅಂದ್ರೆ ಇವರಿಗೆ ತವರು ಮನೆ. ಹೀಗೆ ಹೋಗಿ ಹಾಗೆ ಬಂದು ಬಿಡುವುದು ಇವರ ಚಾಳಿ. ಪೊಲೀಸರು ಎಷ್ಟೇ ಪರಿಶ್ರಮ ಪಟ್ಟರೂ ಸಹ ಒಂದು ತಿಂಗಳು ಮಾತ್ರ ಅವರು ಜೈಲಿನಲ್ಲಿ ಇರುವುದು. ಈ ತಂಡ ನಿರಂತರ ಆಕ್ಟಿವ್ ಆಗಿ ಇರುತ್ತದೆ. ದಾವಣಗೆರೆ ಹಾಗೂ ಪಕ್ಕದ ವಿಜಯನಗರ ಜಿಲ್ಲೆಗೆ ಸೇರಿದ ಹರಪನಹಳ್ಳಿ (harapanahalli) ಇಂತಹ ಪ್ರಕರಣದಲ್ಲಿ ರಾಷ್ಟ್ರದಲ್ಲಿಯೇ ಹೆಸರು ವಾಸಿ. ಅಲ್ಲಿ ಇಲ್ಲಿ ಹೋಗಿ ಮೊದಲು ಅಮಾಯಕ ಜನರಿಂದ ಮೊಬೈಲ್ ನಂಬರ್ ಸಂಗ್ರಹಿಸುತ್ತಾರೆ.

ಬಳಿಕ ನಮ್ಮ ಹಳೇ ಮನೆ ಪಾಯ ತೆಗೆಯುವಾಗ 10 ಕೆಜಿ ಹಳೇ ಬಂಗಾರ ಸಿಕ್ಕಿದೆ. ಕಡಿಮೆ ದರದಲ್ಲಿ ಕೊಡುತ್ತೇವೆ, ಬೇಕಿದ್ದರೆ ಸಾಂಪಲ್ ಅಂತಾ ಅಸಲಿ ಚಿನ್ನದ ತುಂಡು ಕೊಡುತ್ತಾರೆ. ಇತ್ತೀಚೆಗೆ ಆಯಾ ರಾಜ್ಯದಲ್ಲಿ ಅಲ್ಲಿನ ಭಾಷೆ ಬರುವಂತವರನ್ನ ನಕಲಿ ಚಿನ್ನದ ವಂಚಕರು ನೇಮಕ ಮಾಡುತ್ತಾರೆ. ಅವರಿಗೆ 30 ಸಾವಿರ ರೂಪಾಯಿ ತಿಂಗಳಿಗೆ ಸಂಬಳ. ನಕಲಿ ಚಿನ್ನದ ವಂಚನೆ ಜಾಲಕ್ಕೆ ಜನರನ್ನ ಬೀಳಿಸುವುದೇ ಇವರ ಕೆಲಸ ಎಂದು ಮಾಹಿತಿ ನೀಡುತ್ತಾರೆ ಸಿಬಿ ರಿಷ್ಯಂತ್, ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ.

ಇಂತಹ ಪರಿಸ್ಥಿತಿಯಲ್ಲಿ ಪ್ರಶ್ನೆ ಮಾಡಿದರೆ ಮಾರಣಾಂತಿಕ ಹಲ್ಲೆ ಮಾಡಿ ಓಡಿ ಹೋಗುವುದು ಇವರ ದಂಧೆ. ಹೀಗೆ ಮೊನ್ನೆ ತಾನೇ ಬೆಂಗಳೂರಿನ ಯಲಹಂಕದ ಶೇಖರ್ ಮುನಿಸ್ವಾಮಿ ಕೂದಳತೆಯಲ್ಲಿ ಬಚಾವ್ ಆಗಿದ್ದಾರೆ. ಇಂತಹ ಪ್ರಕರಣಗಳು ನಡೆಯುವುದು ದಾವಣಗೆರೆ ಜಿಲ್ಲೆಯ ಸಂತೆಬೆನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮತ್ತು ಪಕ್ಕದ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನಲ್ಲಿ ಮಾತ್ರ. ನಕಲಿ ಚಿನ್ನದ ವಂಚನೆಗೆ ಇಡಿ ದೇಶದಲ್ಲಿ ಈ ಸ್ಥಳಗಳು ಕುಖ್ಯಾತಿಯಾಗಿವೆ. (ವರದಿ: ಬಸವರಾಜ್ ದೊಡ್ಮನಿ, ಟಿ ವಿ9, ದಾವಣಗೆರೆ)

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!