ಜೈ ಗಣೇಶ! ಚಾಮರಾಜಪೇಟೆ ಮೈದಾನ ವಿಚಾರ -ಹಬ್ಬಕ್ಕೆ ಸುಪ್ರೀಂ ಕೋರ್ಟ್ ಮಧ್ಯಂತರ ಗಿಫ್ಟ್! ವಕ್ಫ್ ಬೋರ್ಡ್ಗೆ ನಿರಾಸೆ
ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ವಿಚಾರವಾಗಿ ವಕ್ಫ್ ಬೋರ್ಡ್ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಿತ್ತು. ಹೀಗಾಗಿ ಚಾಮರಾಜಪೇಟೆ ಈದ್ಗಾ ಮೈದಾನದ ಗಣೇಶೋತ್ಸವ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಬೆಂಗಳೂರು: ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ವಿಚಾರವಾಗಿ ಹೈಕೋರ್ಟ್ ಆದೇಶಕ್ಕೆ ತಡೆ ನೀಡಲು ಸುಪ್ರೀಂಕೋರ್ಟ್ ನಕಾರ. ಸುಪ್ರೀಂಕೋರ್ಟ್ನಲ್ಲೂ ವಕ್ಫ್ ಬೋರ್ಡ್ಗೆ ಹಿನ್ನಡೆಯಾಗಿದೆ. ಧಾರ್ಮಿಕ, ಸಾಂಸ್ಕೃತಿಕ ಆಚರಣೆಗೆ ಹೈಕೋರ್ಟ್ ಅನುಮತಿ ನೀಡಿತ್ತು. ಹೀಗಾಗಿ ಮೈದಾನದಲ್ಲಿ ಗಣೇಶೋತ್ಸವ ನಡೆಯೋದು ಪಕ್ಕಾ ಆಗಿದೆ. ನಾ. ಇಂದಿರಾ ಬ್ಯಾನರ್ಜಿ, ನ್ಯಾ ಎ ಎಸ್ ಓಕಾ, ನ್ಯಾ . ಎಂ .ಎಂ ಸುಂದರೇಶ್ ಒಳಗೊಂಡ ಮೂವರು ನ್ಯಾಯಾಧೀಶರ ಪೀಠ ರಚನೆ ಮಾಡಿದ್ದು, 4.45 ಕ್ಕೆ ನ್ಯಾಯಪೀಠ ವಿಚಾರಣೆ ಆರಂಭಿಸಲಿದೆ. ಜಸ್ಟೀಸ್ ಹೇಮಂತ್ ಗುಪ್ತಾ, ಜಸ್ಟೀಸ್ ಸುಧಾಂಶು ಧುಲಿಯಾ ಪೀಠದಲ್ಲಿ ನ್ಯಾಯಮೂರ್ತಿಗಳ ನಡುವೆ ಭಿನ್ನಾಭಿಪ್ರಾಯ ಉಂಟಾಗಿದ್ದು, ಈ ಕಾರಣದಿಂದ ಪ್ರಕರಣ ಮುಖ್ಯ ನ್ಯಾಯಮೂರ್ತಿಗಳಿಗೆ ವರ್ಗಾವಣೆ ಮಾಡಲಾಗಿದೆ. ಹೀಗಾಗಿ ಮೂವರು ನ್ಯಾಯಮೂರ್ತಿಗಳ ಪೀಠ ರಚನೆ ಮಾಡಲಾಗಿದೆ.
Karnataka | Flag march being conducted by security personnel at Eidgah Maidan in Chamarajpet, Bengaluru pic.twitter.com/lL6bxseNMg
— ANI (@ANI) August 30, 2022
ಹೈಕೋರ್ಟ್ ಆದೇಶಕ್ಕೆ ತಡೆ ನೀಡುವಂತೆ ವಕೀಲ ಸಿಬಲ್ ಮನವಿ
ಸುಪ್ರೀಂಕೋರ್ಟ್ ಹಾಲ್ ನಂ. 5ರಲ್ಲಿ ಅರ್ಜಿ ವಿಚಾರಣೆ ಆರಂಭವಾಗಿದ್ದು, ಕರ್ನಾಟಕ ಹೈಕೋರ್ಟ್ ಆದೇಶಕ್ಕೆ ತಡೆ ಕೋರಿದ್ದ ವಕ್ಫ್ ಬೋರ್ಡ್, ಚಾಮರಾಜಪೇಟೆ ಮೈದಾನ 200 ವರ್ಷಗಳಿಂದ ವಕ್ಫ್ ಆಸ್ತಿಯಾಗಿದೆ. 1954ರಲ್ಲಿ ವಕ್ಫ್ ಬೋರ್ಡ್ ಆಸ್ತಿ ಎಂದು ಘೊಷಣೆ ಮಾಡಲಾಗಿದೆ. ಆದರೆ 2022ರಲ್ಲಿ ಈದ್ಗಾ ಮೈದಾನದ ಬಗ್ಗೆ ಪ್ರಶ್ನೆ ಮಾಡಲಾಗುತ್ತಿದೆ. ವಕ್ಫ್ ಬೋರ್ಡ್ ಆಸ್ತಿ ಎಂದು ನೋಟಿಫೀಕೇಷನ್ ಕೂಡ ಆಗಿದೆ. ಈದ್ಗಾ ಮೈದಾನದಲ್ಲಿ ಸಾಂಸ್ಕೃತಿಕ, ಧಾರ್ಮಿಕ ಚಟುವಟಿಕೆಗೆ ಅವಕಾಶ ನೀಡಿದ್ದು, ಹೈಕೋರ್ಟ್ ಆದೇಶಕ್ಕೆ ತಡೆ ನೀಡುವಂತೆ ವಕೀಲ ಸಿಬಲ್ ಮನವಿ ಮಾಡಿದರು. ಮೈದಾನದಲ್ಲಿ ರಾಜ್ಯ ಸರ್ಕಾರ ರಾಷ್ಟ್ರೀಯ ಹಬ್ಬಗಳನ್ನು ಆಚರಿಸಿದೆ. ಮೈದಾನದಲ್ಲಿ ರಂಜಾನ್, ಬಕ್ರೀದ್ ವೇಳೆ ಪ್ರಾರ್ಥನೆ ನಡೆಯುತ್ತಿದೆ. ಉಳಿದ ಸಮಯದಲ್ಲಿ ಮಕ್ಕಳಿಗೆ ಆಟದ ಮೈದಾನವಾಗಿ ಇರಲಿದೆ. ಒಮ್ಮೆ ವಕ್ಫ್ ಬೋರ್ಡ್ ಆಸ್ತಿ ಎಂದು ಘೋಷಿಸಿದರೆ ಪ್ರಶ್ನಿಸಲಾಗಲ್ಲ. ಒಮ್ಮೆ ಘೋಷಣೆ ಮಾಡಿದ ಮೇಲೆ ಅದನ್ನು ಪ್ರಶ್ನಿಸಲು ಸಾಧ್ಯವಿಲ್ಲ. ಈದ್ಗಾ ಮೈದಾನದ ಮಾಲೀಕತ್ವದ ಪ್ರಶ್ನೆ ಎದುರಾಗಿದೆ. ರಾಜ್ಯ ಸರ್ಕಾರ ಮಾಲೀಕತ್ವದ ಬಗ್ಗೆ ಪ್ರಶ್ನೆ ಮಾಡಿದೆ ಎಂದು ಕಪಿಲ್ ಸಿಬಲ್ ಹೇಳಿದರು.
ವಕ್ಫ್ ಬೋರ್ಡ್ ಪರ ಕಪಿಲ್ ಸಿಬಲ್ ವಾದ ಮಂಡಿಸಿದ್ದು, ಈದ್ಗಾ ಮೈದಾನದ ಸಂಬಂಧ ಹೈಕೋರ್ಟ್ ಏಕಸದಸ್ಯ ಪೀಠ ಆದೇಶ ನೀಡಿದೆ. ಆದೇಶ ಬೆನ್ನಲ್ಲೇ ದ್ವಿಸದಸ್ಯ ಪೀಠ ಅದರ ವಿರುದ್ಧವಾಗಿ ಆದೇಶ ನೀಡಿದೆ. ಚಾಮರಾಜಪೇಟೆ ಈದ್ಗಾ ಮೈದಾನ ವಕ್ಫ್ ಬೋರ್ಡ್ಗೆ ಸೇರಿದ ಆಸ್ತಿ ಎಂದು ಸಿಬಲ್ ವಾದ ಮಂಡಿಸಿದರು. ಮುಸ್ಲಿಂ ಸಮುದಾಯ ಈ ಮೈದಾನವನ್ನು ಪ್ರಾರ್ಥನೆಗೆ ಬಳಸುತ್ತಿದೆ. ವರ್ಷದಲ್ಲಿ ಎರಡು ಹಬ್ಬಗಳನ್ನು ಮೈದಾನದಲ್ಲಿ ಆಚರಿಸಲಾಗುತ್ತದೆ. ಓಪನ್ ಲ್ಯಾಂಡ್ ಅಂತ ಇದನ್ನು ಬಳಸಲು ಸಾಧ್ಯವಿಲ್ಲ. ವಕ್ಫ್ ಬೋರ್ಡ್ಗೆ ಸೇರಿದ ಆಸ್ತಿ ಎಂಬುದಕ್ಕೆ ಎಲ್ಲಾ ದಾಖಲೆಗಳು ಇವೆ. ಮೈದಾನದಲ್ಲಿ ಎಲ್ಲಾ ಸಮುದಾಯದ ಮಕ್ಕಳು ಆಟವಾಡ್ತಾರೆ. ಹಿಂದೂ ಪರ ಸಂಘಟನೆಗಳು ಈದ್ಗಾ ಗೋಡೆ ಕೆಡವಿ ಹಾಕ್ತಿವಿ ಎಂದು ಬೆದರಿಸುತ್ತಾರೆ. ಬಾಬರಿ ಮಸೀದಿ ರೀತಿಯಲ್ಲಿ ಒಡೆಯುವ ಬೆದರಿಕೆ ಹಾಕಿದ್ದಾರೆ ಎಂದು ಕಪಿಲ್ ಸಿಬಲ್ ಅವರು ವಾದಮಂಡಿಸಿದರು.
ಸರಕಾರದ ಪರ ಮುಕುಲ್ ರೋಹಟಗಿ ವಾದ
ಸರಕಾರದ ಪರ ಮುಕುಲ್ ರೋಹಟಗಿ ವಾದ ಆರಂಭಿಸಿದ್ದು, ಈ ಹಿಂದೆ ಯಾವಾಗಲಾದರೂ ಗಣೇಶ ಉತ್ಸವ ಆಚರಣೆಗೆ ಸರಕಾರ ಆದೇಶ ನೀಡಿತ್ತಾ? ಕೋರ್ಟ್ ಪ್ರಶ್ನಿಸಿದ್ದು, ಈ ಹಿಂದೆ ಸರಕಾರವಾಗಲಿ, ಬಿಬಿಎಂಪಿ ಇಂತಹ ಆದೇಶ ನೀಡಿರಲಿಲ್ಲ ಎಂದು ಮುಕುಲ್ ಹೇಳಿದರು. ಕಾನೂನಿನ ಪ್ರಕಾರ ಈ ಆಸ್ತಿಯನ್ನು ಯಾರೂ ಮುಟ್ಟಲು ಸಾಧ್ಯವಿಲ್ಲ. ರಾಜ್ಯ ಸರ್ಕಾರದ ಪರ ವಕೀಲ ಮೆಹ್ತಾವಾದ ಮಂಡಿಸಿದ್ದು, ಆಸ್ತಿ ಬಗ್ಗೆ ಸಿವಿಲ್ ಕೋರ್ಟ್ ನಿರ್ಧರಿಸಬೇಕು. ವಕ್ಫ್ ಬೋರ್ಡ್ ಈವರೆಗೂ ಸಿವಿಲ್ ನ್ಯಾಯಾಲಯಕ್ಕೆ ಹೋಗಿಲ್ಲ. ಇದಕ್ಕೆ ನ್ಯಾಯಾಧೀಶರ ಮರು ಪ್ರಶ್ನೆ ಮಾಡಿದ್ದು, ಸರ್ಕಾರ, ಬಿಬಿಎಂಪಿ ಯಾಕೆ ಸಿವಿಲ್ ನ್ಯಾಯಾಲಯಕ್ಕೆ ಹೋಗಿಲ್ಲ ಎಂದು ಕೇಳಿದರು. ಗಣೇಶ ಉತ್ಸವಕ್ಕೆ ಎರಡು ದಿನ ಸರಕಾರ ಅವಕಾಶ ನೀಡಿದೆ. ಬಳಿಕ ಇದು ಆಟದ ಮೈದಾನವಾಗಿಯೇ ಮುಂದುವರೆಯದಿದೆ. ಸಿಜೆಐ ಪೀಠದಲ್ಲಿ ಪ್ರಸ್ತಾಪಕ್ಕೆ ಕೋರ್ಟ್ ಅವಕಾಶ ನೀಡಿದೆ.
1987 ನಿಂದಲೂ ಪಹಣಿಯಲ್ಲಿ ಸರ್ಕಾರಿ ಆಸ್ತಿ ಎಂದು ದಾಖಲೆಗಳಿದೆ. ಕಂದಾಯ ಮತ್ತು ಬಿಬಿಎಂಪಿ ದಾಖಲೆಗಳಲ್ಲಿ ಜಮೀನು ಆಟದ ಮೈದಾನ ಎಂದು ನಮೂದಿಸಲಾಗಿದೆ. ಇದು ಸರ್ಕಾರಿ ಭೂಮಿ ಎಂದು ಗುರುತಿಸಲಾಗಿದೆ ಎಂದು ರೋಹಟಗಿ ವಾದಿಸಿದರು.
ಚಾಮರಾಜಪೇಟೆ ಮೈದಾನದ ಸುತ್ತಮುತ್ತ ಖಾಕಿ ಹೈಅಲರ್ಟ್:
ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ವಿಚಾರ ಹಿನ್ನೆಲೆ ಮೈದಾನದ ಸುತ್ತಮುತ್ತ ಖಾಕಿ ಹೈಅಲರ್ಟ್ ಘೋಷಿಸಿದ್ದು, 3 ಡಿಸಿಪಿ, 21 ಎಸಿಪಿ, 47 ಇನ್ಸ್ಪೆಕ್ಟರ್ಗಳು, 130 ಪಿಎಸ್ಐ, 126 ASI, 900 ಕಾನ್ಸ್ಟೇಬಲ್ಗಳು, 120 RAF ಸಿಬ್ಬಂದಿ ಮೈದಾನದ ಭದ್ರತೆಗೆ 1600ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ. ಡಿಸಿಪಿ ಲಕ್ಷ್ಮಣ್ ನಿಂಬರಗಿ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಒದಗಿಸಲಾಗಿದೆ.
ಈ ಕುರಿತು ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಮಾತನಾಡಿ ಗಣೇಶ ಹಬ್ಬದ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಬಂದೋಬಸ್ತ್ ಮಾಡಲಾಗಿದ್ದು, ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ರೌಡಿಶೀಟರ್ಗಳ ಮನೆ ಮೇಲೆ ದಾಳಿ ಮಾಡಿದ್ದೇವೆ. ಕಿಡಿಗೇಡಿಗಳಿಗೆ ಎಚ್ಚರಿಕೆ ನೀಡಲು ರೂಟ್ ಮಾರ್ಚ್ ಮಾಡಿದ್ದೇವೆ ಎಂದರು. ಚಾಮರಾಜಪೇಟೆಯಲ್ಲಿ ಮೂರು ದಿನಗಳ ಕಾಲ ಬಿಗಿ ಭದ್ರತೆ ಇರಲಿದೆ. ಹೆಚ್ಚಿನ ನಿಗಾ ಇಡಲು ಡ್ರೋನ್ ಕೂಡ ಬಳಕೆ ಮಾಡಲಾಗುತ್ತೆ. ಸಾರ್ವಜನಿಕರು ಪೊಲೀಸರಿಗೆ ಸಹಕಾರ ನೀಡಬೇಕು. ಗಣೇಶೋತ್ಸವ ಶಾಂತಿಯುತವಾಗಿ ಆಗುತ್ತೆ ಎನ್ನುವ ನಂಬಿಕೆ ಇದೆ ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:01 pm, Tue, 30 August 22