AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ಕ್ರಿಸ್‌ಮಸ್ ಸಂಚಾರ ಸಲಹೆ: ವಾಹನ ದಟ್ಟಣೆ ತಪ್ಪಿಸಲು ಪರ್ಯಾಯ ಮಾರ್ಗಗಳು ಇಲ್ಲಿದೆ

ಬೆಂಗಳೂರಿನಲ್ಲಿ ಡಿ.24-25 ರಂದು ಕ್ರಿಸ್‌ಮಸ್ ಆಚರಣೆಯಿಂದ ಭಾರಿ ಸಂಚಾರ ದಟ್ಟಣೆ ನಿರೀಕ್ಷಿಸಲಾಗಿದೆ. ಹೋಲಿ ಗೋಸ್ಟ್ ಚರ್ಚ್, ಫೀನಿಕ್ಸ್ ಮಾಲ್ ಸುತ್ತಮುತ್ತ ವಿಶೇಷವಾಗಿ ನಿರ್ಬಂಧಗಳು ಇರುತ್ತವೆ. ಸಂಚಾರಿ ಪೊಲೀಸರು ರಸ್ತೆ ಮುಚ್ಚುವಿಕೆ, ಪಾರ್ಕಿಂಗ್ ನಿಷೇಧ, ಪರ್ಯಾಯ ಮಾರ್ಗಗಳ ಬಗ್ಗೆ ಸಲಹೆ ನೀಡಿದ್ದಾರೆ. ಜನದಟ್ಟಣೆ ತಪ್ಪಿಸಲು ಸಾರ್ವಜನಿಕ ಸಾರಿಗೆ ಬಳಸಿ ಸುರಕ್ಷಿತ ಪ್ರಯಾಣಕ್ಕೆ ಸಹಕರಿಸಲು ಮನವಿ ಮಾಡಲಾಗಿದೆ.

ಬೆಂಗಳೂರು ಕ್ರಿಸ್‌ಮಸ್ ಸಂಚಾರ ಸಲಹೆ: ವಾಹನ ದಟ್ಟಣೆ ತಪ್ಪಿಸಲು ಪರ್ಯಾಯ ಮಾರ್ಗಗಳು ಇಲ್ಲಿದೆ
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on:Dec 24, 2025 | 5:17 PM

Share

ಬೆಂಗಳೂರು, ಡಿ.24: ಇಂದು (ಡಿ.24) ಮತ್ತು ನಾಳೆ (ಡಿ.25) ಬೆಂಗಳೂರಿನಲ್ಲಿ ಕ್ರಿಸ್‌ಮಸ್ (Bengaluru Christmas traffic) ಹಬ್ಬದ ಸಂಭ್ರಮ ಜೋರಾಗಿ ಇರುತ್ತದೆ. ಬೆಂಗಳೂರಿನ ಕೆಲವೊಂದು ಭಾಗದಲ್ಲಿ ಅದ್ದೂರಿಯಾಗಿ ಕ್ರಿಸ್‌ಮಸ್ ಆಚರಣೆ ಮಾಡಿಕೊಳ್ಳುತ್ತಾರೆ. ಇಂದಿನಿಂದಲೇ ಬೆಂಗಳೂರಿನಲ್ಲಿ ಆಚರಣೆ ಶುರುವಾಗುತ್ತದೆ. ಜತೆಗೆ ನಾಳೆ ಅಂದರೆ ಡಿ.25ರಂದು ರಜೆ ಇರುವ ಕಾರಣ, ಬೆಂಗಳೂರಿನ ಬೀದಿಗಳು ಜನರಿಂದ ತುಂಬಿರುತ್ತದೆ. ಹೀಗಾಗಿ ವಾಹನ, ಜನ ದಟ್ಟಣೆ ಕೂಡ ಹೆಚ್ಚಾಗಿರುತ್ತದೆ. ಅದಕ್ಕಾಗಿ ಸಂಚಾರಿ ಪೊಲೀಸ್​​​ ಇಲಾಖೆ ಸಂಚಾರ ಸಲಹೆಯನ್ನು ನೀಡಿದೆ.

ಪುಲಕೇಶಿನಗರದ ಹೋಲಿ ಗೋಸ್ಟ್ ಚರ್ಚ್ ಮತ್ತು ಮಹಾದೇವಪುರದ ಫೀನಿಕ್ಸ್ ಮಾಲ್, ವಿಆರ್ ಮಾಲ್ ಮತ್ತು ನೆಕ್ಸಸ್ ಶಾಂತಿನಿಕೇತನ ಬಳಿ ಭಾರಿ ಜನದಟ್ಟಣೆ ಆಗುವ ಸಾಧ್ಯತೆಗಳು ಇದೆ. ಅದಕ್ಕಾಗಿ ವಾಹನ ಚಾಲಕರು ತಮ್ಮ ಪ್ರಯಾಣವನ್ನು ಈ ರಸ್ತೆಗಳಲ್ಲಿ ತಪ್ಪಿಸುವುದು ಸೂಕ್ತ ಎಂದು ಹೇಳಲಾಗಿದೆ. ಪೊಲೀಸರ ಪ್ರಕಾರ, ಹಬ್ಬ ಇರುವ ಕಾರಣ ಜನದಟ್ಟಣೆ ಆಗುವ ಸಾಧ್ಯತೆ ಇದೆ. ಈ ಸಮಯದಲ್ಲಿ ವಾಹನ ದಟ್ಟಣೆಯನ್ನು ಕಡಿಮೆ ಮಾಡಲು ಹಾಗೂ ಪಾದಚಾರಿಗಳ ಸುರಕ್ಷತೆಗಾಗಿ, ಸುಗಮ ವಾಹನ ಸಂಚಾರಕ್ಕಾಗಿ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಡಿಸೆಂಬರ್ 24ರ ಸಂಜೆಯಿಂದ ಡಿಸೆಂಬರ್ 25 ರ ಮಧ್ಯಾಹ್ನದವರೆಗೆ ಹೋಲಿ ಗೋಸ್ಟ್ ಚರ್ಚ್‌ನಲ್ಲಿ ದೊಡ್ಡ ಜನ ದಟ್ಟಣೆ ಆಗುವ ನಿರೀಕ್ಷೆಯಿದೆ, ಹಾಗಾಗಿ ಕೆಲವೊಂದು ಸಂಚಾರ ಸಲಹೆಗಳನ್ನು ಇಲ್ಲಿ ನೀಡಲಾಗಿದೆ.

ಡಿಸೆಂಬರ್ 24 ರಂದು ಸಂಜೆ 7 ಗಂಟೆಯಿಂದ ಡಿಸೆಂಬರ್ 25 ರಂದು ಮಧ್ಯಾಹ್ನ 12 ರವರೆಗೆ ಜಾನ್ ಆರ್ಮ್‌ಸ್ಟ್ರಾಂಗ್ ರಸ್ತೆ ಜಂಕ್ಷನ್ ಮತ್ತು ಕುಕ್ಸನ್ ರಸ್ತೆ ಜಂಕ್ಷನ್ ನಡುವಿನ ಸಂಚಾರಕ್ಕೆ ಡೇವಿಸ್ ರಸ್ತೆಯನ್ನು ಮುಚ್ಚಲಾಗುವುದು.

ಪರ್ಯಾಯ ಮಾರ್ಗಗಳು

ಡೇವಿಸ್ ರಸ್ತೆಯಿಂದ HM ರಸ್ತೆಯ ಕಡೆಗೆ ಚಲಿಸುವ ವಾಹನಗಳು:

– ಜಾನ್ ಆರ್ಮ್‌ಸ್ಟ್ರಾಂಗ್ ರಸ್ತೆ ಜಂಕ್ಷನ್‌ನಲ್ಲಿ ಬಲಕ್ಕೆ ತಿರುಗಿ.

– ಅಲ್ಲಿಂದ ನೇರ ಹೋಗಿ ವಿವಿಯಾನಿ ರಸ್ತೆಯಲ್ಲಿ ಎಡಕ್ಕೆ ತಿರುಗಿ.

– ಅಲ್ಲಿಂದ ಕುಕ್ಸನ್ ರಸ್ತೆಗೆ ಎಡಕ್ಕೆ ತಿರುಗಿ.

– ಇಲ್ಲಿಂದ ಡೇವಿಸ್ ರಸ್ತೆಗೆ ಮತ್ತೆ ಸೇರಿ HM ರಸ್ತೆಯ ಕಡೆಗೆ ಹೋಗಿ.

ಇಲ್ಲಿದೆ ನೋಡಿ ಎಕ್ಸ್​​​ ಪೋಸ್ಟ್​:

ಪಾರ್ಕಿಂಗ್ ನಿರ್ಬಂಧಗಳು

ಎಲ್ಲಾ ವಾಹನಗಳ ಪಾರ್ಕಿಂಗ್ ಅನ್ನು ಈ ಕೆಳಗಿನ ಸ್ಥಳಗಳಲ್ಲಿ ನಿಷೇಧಿಸಲಾಗುವುದು:

ಡೇವಿಸ್ ರಸ್ತೆ

ಬಾಣಸವಾಡಿ ಮುಖ್ಯ ರಸ್ತೆ

ವೀಲರ್ ರಸ್ತೆ

ಸೇಂಟ್ ಜಾನ್ಸ್ ಚರ್ಚ್ ರಸ್ತೆ

ಹೈನ್ಸ್ ರಸ್ತೆ

ಪ್ರೊಮೆನೇಡ್ ರಸ್ತೆ

ಇದನ್ನೂ ಓದಿ: ನ್ಯೂ ಇಯರ್ ಹೆಸರಲ್ಲಿ ರೇವ್ ಪಾರ್ಟಿ ಮಾಡಿದ್ರೆ ಹುಷಾರ್! ಬೆಂಗಳೂರಿನಾದ್ಯಂತ ಖಾಕಿ ಸರ್ಪಗಾವಲು

ಮಹದೇವಪುರ ಸಂಚಾರ ಪೊಲೀಸ್ ಮಿತಿಗಳು:

ಡಿಸೆಂಬರ್ 24 ಅಂದರೆ ಇಂದು ಮಧ್ಯಾಹ್ನ 12 ರಿಂದ ರಾತ್ರಿ 11 ರವರೆಗೆ ಫೀನಿಕ್ಸ್ ಮಾಲ್, ವಿಆರ್ ಮಾಲ್ ಮತ್ತು ನೆಕ್ಸಸ್ ಶಾಂತಿನಿಕೇತನ ಬಳಿ ಭಾರಿ ಜನಸಂದಣಿ ಉಂಟಾಗುವ ನಿರೀಕ್ಷೆಯಿದೆ. ಹಾಗಾಗಿ ಈ ಪ್ರದೇಶದಲ್ಲಿ ಸಂಚಾರ ಮತ್ತು ಪಾರ್ಕಿಂಗ್ ನಿರ್ಬಂಧ ಮಾಡಲಾಗಿದೆ.

ಈ ಕೆಳಗಿನ ರಸ್ತೆಗಳಲ್ಲಿ ವಾಹನ ನಿಲುಗಡೆ ನಿರ್ಬಂಧಿಸಲಾಗಿದೆ:

– ಐಟಿಪಿಎಲ್ ಮುಖ್ಯ ರಸ್ತೆ (ಎರಡೂ ಬದಿಗಳು)

– ಶೆಲ್ ಪೆಟ್ರೋಲ್ ಬಂಕ್, ಬಿ ನಾರಾಯಣಪುರದಿಂದ ಗರುಡಾಚಾರ್ಪಾಳ್ಯ (ಡೆಕಾಥ್ಲಾನ್ ಹತ್ತಿರ)

– ಮೆಡಿಕೇರ್ ಆಸ್ಪತ್ರೆಯಿಂದ ಬಿಗ್ ಬಜಾರ್ ಜಂಕ್ಷನ್ ವರೆಗೆ

ಕ್ಯಾಬ್ ಪಿಕಪ್ ಮತ್ತು ಡ್ರಾಪ್-ಆಫ್ ಪಾಯಿಂಟ್‌ಗಳು

ಫೀನಿಕ್ಸ್ ಮಾಲ್:

ಡ್ರಾಪ್: ಐಟಿಪಿಎಲ್ ಮುಖ್ಯ ರಸ್ತೆಯಲ್ಲಿರುವ ಬೆಸ್ಕಾಂ ಕಚೇರಿಯ ಹತ್ತಿರ.

ಪಿಕಪ್ ಸ್ಥಳ: ಲೌರಿ ಜಂಕ್ಷನ್ ಹತ್ತಿರ

ನೆಕ್ಸಸ್ ಶಾಂತಿನಿಕೇತನ:

ಡ್ರಾಪ್: ರಾಜಪಾಳ್ಯ ಹತ್ತಿರ

ಪಿಕಪ್: ಆಸ್ಟರ್ ಆಸ್ಪತ್ರೆ ಹತ್ತಿರ

ಇಲ್ಲಿದೆ ನೋಡಿ ಎಕ್ಸ್​​ ಪೋಸ್ಟ್​:

ಪರ್ಯಾಯ ಸಲಹೆಗಳು:

ಹೂಡಿಯಿಂದ ಫೀನಿಕ್ಸ್ ಮಾಲ್ ಕಡೆಗೆ ಹೋಗುವ ವಾಹನಗಳು ಕಾಮಧೇನು ನಗರದಲ್ಲಿ ಯು-ಟರ್ನ್ ತೆಗೆದುಕೊಂಡು, ಶೆಲ್ ಪೆಟ್ರೋಲ್ ಬಂಕ್‌ನಲ್ಲಿ ಎಡಕ್ಕೆ ತಿರುಗಿ, ರೈಲ್ವೆ ರಸ್ತೆಯಲ್ಲಿ ಸಾಗಿ ಹಿಂಭಾಗದ ಗೇಟ್ ಮೂಲಕ ಪ್ರವೇಶಿಸಬೇಕು. ಕೆ.ಆರ್. ಪುರಂ ರೈಲು ನಿಲ್ದಾಣದಿಂದ ಬರುವ ವಾಹನಗಳು ಶೆಲ್ ಪೆಟ್ರೋಲ್ ಬಂಕ್‌ನಲ್ಲಿ ಎಡಕ್ಕೆ ತಿರುಗಿ, ರೈಲ್ವೆ ರಸ್ತೆಯನ್ನು ಬಳಸಿ, ಹಿಂಭಾಗದ ಪ್ರವೇಶ ದ್ವಾರದ ಮೂಲಕ ಫೀನಿಕ್ಸ್ ಮಾಲ್ ಪ್ರವೇಶಿಸಲು ಸೂಚಿಸಲಾಗಿದೆ. ಇದರ ಜತೆಗೆ ಖಾಸಗಿ ವಾಹನಕ್ಕಿಂತ ಸಾರ್ವಜನಿಕ ಸಾರಿಗೆಯನ್ನು ಬಳಸಬೇಕು ಮತ್ತು ಸಲಹೆಗಳನ್ನು ಪಾಲಿಸಬೇಕು ಎಂದು ಸಂಚಾರ ಪೊಲೀಸರು ಕೋರಿದ್ದಾರೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:53 pm, Wed, 24 December 25

ವಿಜಯಲಕ್ಷ್ಮಿ ಮಾತನಾಡಿರೋದು ಸುದೀಪ್ ಬಗ್ಗೆ ಅಲ್ಲ: ರಕ್ಷಿತಾ
ವಿಜಯಲಕ್ಷ್ಮಿ ಮಾತನಾಡಿರೋದು ಸುದೀಪ್ ಬಗ್ಗೆ ಅಲ್ಲ: ರಕ್ಷಿತಾ
ಬಳ್ಳಾರಿಯಲ್ಲಿ ಶೋಧ ನಡೆಸುತ್ತಿರುವ ಕೇರಳ ಎಸ್ಐಟಿ
ಬಳ್ಳಾರಿಯಲ್ಲಿ ಶೋಧ ನಡೆಸುತ್ತಿರುವ ಕೇರಳ ಎಸ್ಐಟಿ
ಬಿಗ್ ಬಾಸ್ ಧನುಷ್​​ಗೆ ಬಾಲ್ಯದಲ್ಲೇ ಆಗಿತ್ತು ಎಂಗೇಜ್​​ಮೆಂಟ್
ಬಿಗ್ ಬಾಸ್ ಧನುಷ್​​ಗೆ ಬಾಲ್ಯದಲ್ಲೇ ಆಗಿತ್ತು ಎಂಗೇಜ್​​ಮೆಂಟ್
2026 ತುಲಾ ರಾಶಿಗೆ ವೃತ್ತಿ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಶುಭ ಫಲದ ವರ್ಷ
2026 ತುಲಾ ರಾಶಿಗೆ ವೃತ್ತಿ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಶುಭ ಫಲದ ವರ್ಷ
ಬೆಂಗಳೂರು ಮೆಟ್ರೋ ವಿಸ್ತರಣೆ ಬಗ್ಗೆ ದೆಹಲಿಯಲ್ಲಿ ಡಿಕೆಶಿ ಬಿಗ್ ಅಪ್ಡೇಟ್!
ಬೆಂಗಳೂರು ಮೆಟ್ರೋ ವಿಸ್ತರಣೆ ಬಗ್ಗೆ ದೆಹಲಿಯಲ್ಲಿ ಡಿಕೆಶಿ ಬಿಗ್ ಅಪ್ಡೇಟ್!
ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್‌ ಗಡಿಯಲ್ಲಿ ದೈತ್ಯ ಹುಲಿ ಪ್ರತ್ಯಕ್ಷ
ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್‌ ಗಡಿಯಲ್ಲಿ ದೈತ್ಯ ಹುಲಿ ಪ್ರತ್ಯಕ್ಷ
ಜಮೀರ್ ಅಹ್ಮದ್ ಆಪ್ತಗೆ ಲೋಕಾ ಶಾಕ್! ಎಲ್ಲೆಲ್ಲಿ ಆಸ್ತಿ, ಸಂಪತ್ತಿದೆ ಗೊತ್ತೇ?
ಜಮೀರ್ ಅಹ್ಮದ್ ಆಪ್ತಗೆ ಲೋಕಾ ಶಾಕ್! ಎಲ್ಲೆಲ್ಲಿ ಆಸ್ತಿ, ಸಂಪತ್ತಿದೆ ಗೊತ್ತೇ?
ಅಂಜನಾದ್ರಿ: ಆಂಜನೇಯನ ಗರ್ಭಗುಡಿಯಲ್ಲೇ ಸ್ವಾಮೀಜಿಗಳ ಫೈಟ್, ವಿಡಿಯೋ ವೈರಲ್
ಅಂಜನಾದ್ರಿ: ಆಂಜನೇಯನ ಗರ್ಭಗುಡಿಯಲ್ಲೇ ಸ್ವಾಮೀಜಿಗಳ ಫೈಟ್, ವಿಡಿಯೋ ವೈರಲ್
ಮಗಳನ್ನು ಮದುವೆ ಮಾಡಿಕೊಡಲಿಲ್ಲವೆಂದು ತಾಯಿಗೆ ಬೆಂಕಿ ಹಚ್ಚಿದ ಕಿರಾತಕ!
ಮಗಳನ್ನು ಮದುವೆ ಮಾಡಿಕೊಡಲಿಲ್ಲವೆಂದು ತಾಯಿಗೆ ಬೆಂಕಿ ಹಚ್ಚಿದ ಕಿರಾತಕ!
ಗಿಲ್ಲಿ ಸೂಪರ್; ಬಿಗ್ ಬಾಸ್​​ಗೆ ಬಂದು ಗಿಲ್ಲಿ ಬೆಂಬಲಿಸಿದ ಧನು ತಾಯಿ
ಗಿಲ್ಲಿ ಸೂಪರ್; ಬಿಗ್ ಬಾಸ್​​ಗೆ ಬಂದು ಗಿಲ್ಲಿ ಬೆಂಬಲಿಸಿದ ಧನು ತಾಯಿ