ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್​ಪಂತ್​ಗೆ ಕೊರೊನಾ ಪಾಸಿಟಿವ್, ಚೇತರಿಸಿಕೊಂಡ ಸಿಎಂ ಬೊಮ್ಮಾಯಿಗೆ ನೆಗೆಟಿವ್

ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್​ಪಂತ್​ಗೆ ಕೊರೊನಾ ಪಾಸಿಟಿವ್, ಚೇತರಿಸಿಕೊಂಡ ಸಿಎಂ ಬೊಮ್ಮಾಯಿಗೆ ನೆಗೆಟಿವ್
ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್

ಕಳೆದ ಒಂದು ವಾರದಿಂದ ಪೊಲೀಸ್ ಆಯುಕ್ತರು ಹೋಮ್ ಐಸೊಲೇಶನ್​ನಲ್ಲಿದ್ದರು. ತಮ್ಮೊಡನೆ ಸಂಪರ್ಕಕ್ಕೆ ಬಂದವರು ಕೊವಿಡ್ ಟೆಸ್ಟ್ ಮಾಡಿಸಿಕೊಳ್ಳಬೇಕೆಂದು ಅವರು ಸಲಹೆ ಮಾಡಿದ್ದಾರೆ.

TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Jan 17, 2022 | 5:04 PM


ಬೆಂಗಳೂರು: ನಗರ ಪೊಲೀಸ್ ಆಯುಕ್ತ ಕಮಲ್​ಪಂತ್​ಗೆ (Bengaluru City Police Commissioner) ಕೊರೊನಾ ಸೋಂಕು ದೃಢಪಟ್ಟಿದೆ. ಕೊರೊನಾ ಸೋಂಕು (Coronavirus) ದೃಢಪಟ್ಟಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai) ಸೋಂಕಿನಿಂದ ಚೇತರಿಸಿಕೊಂಡು, ಗುಣಮುಖರಾಗಿದ್ದಾರೆ. ಕಳೆದ ಒಂದು ವಾರದಿಂದ ಪೊಲೀಸ್ ಆಯುಕ್ತರು ಹೋಮ್ ಐಸೊಲೇಶನ್​ನಲ್ಲಿದ್ದರು. ತಮ್ಮೊಡನೆ ಸಂಪರ್ಕಕ್ಕೆ ಬಂದವರು ಕೊವಿಡ್ ಟೆಸ್ಟ್ ಮಾಡಿಸಿಕೊಳ್ಳಬೇಕೆಂದು ಅವರು ಸಲಹೆ ಮಾಡಿದ್ದಾರೆ.

ಸಿಎಂಗೆ ಆರೋಗ್ಯ ತಪಾಸಣೆ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮಣಿಪಾಲ ಆಸ್ಪತ್ರೆಯಲ್ಲಿ ರಕ್ತದೊತ್ತಡ, ಶುಗರ್, ರಕ್ತ ಹೆಪ್ಪುಕಟ್ಟುವುದಕ್ಕೆ ಸಂಬಂಧಿಸಿದಂತೆ ಹಲವು ತಪಾಸಣೆಗಳನ್ನು ನಡೆಸಲಾಯಿತು. ಡಿ-ಡೈಮರ್ ಟೆಸ್ಟ್​ ಹಾಗೂ ಶ್ವಾಸಕೋಶ ಎಕ್ಸ್​ರೇ ತೆಗೆಸಲಾಯಿತು. ಇಸಿಜಿ ಹಾಗೂ ಇಕೋ ಟೆಸ್ಟ್​ ಮಾಡಿ ಹೃದಯದ ಆರೋಗ್ಯ ತಪಾಸಣೆ ಮಾಡಲಾಯಿತು. ಕೊವಿಡ್-19 ಟೆಸ್ಟ್​ಗೆ ಗಂಟಲುದ್ರವ ಸಂಗ್ರಹಿಸಸಲಾಯಿತು. ಈ ಹಿಂದೆ ನಡೆಸಿದ್ದ ಟೆಸ್ಟ್​ನಲ್ಲಿ ಮುಖ್ಯಮಂತ್ರಿಗೆ ಕೊವಿಡ್ ಪಾಸಿಟಿವ್ ಬಂದಿದ್ದ ಹಿನ್ನೆಲೆಯಲ್ಲಿ ಹಲವು ಪರೀಕ್ಷೆಗಳಿಗೆ ಒಳಪಡಿಸಲಾಯಿತು.

ಎರಡನೇ ಬಾರಿ ತಪಾಸಣೆ ಮಾಡಿದಾಗ ಮುಖ್ಯಮಂತ್ರಿಗೆ ಕೊರೊನಾ ವರದಿ ನೆಗೆಟಿವ್ ಬಂದಿದೆ. ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಮುಖ್ಯಮಂತ್ರಿಯ ಗಂಟಲುದ್ರವ ಮಾದರಿಯನ್ನು ತಪಾಸಣೆಗೆ ಒಳಪಡಿಸಲಾಗಿತ್ತು.

ಇದನ್ನೂ ಓದಿ: Covid 19 Karnataka Update: ಕರ್ನಾಟಕದಲ್ಲಿ 34 ಸಾವಿರ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ, ಕೊವಿಡ್​ನಿಂದ 13 ಸಾವು
ಇದನ್ನೂ ಓದಿ: Corona Review Meeting: ಕೊರೊನಾ ಪರಿಸ್ಥಿತಿ ಪರಾಮರ್ಶೆ: ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮಹತ್ವದ ಸಭೆ

Follow us on

Related Stories

Most Read Stories

Click on your DTH Provider to Add TV9 Kannada