ತಿಂಗಳಿಗೆ 82,000 ರೂ., ವರ್ಷಕ್ಕೆ 9.84 ಲಕ್ಷ ರೂ.: ಇದು ಬೆಂಗಳೂರು ಸಿಎ ಖರ್ಚು, ಜಾಸ್ತಿ ಆಯ್ತು ಎಂದ ನೆಟ್ಟಿಗರು

ಬೆಂಗಳೂರಿನಲ್ಲಿ ಜೀವನ ವೆಚ್ಚ ಗಗನಕ್ಕೇರುತ್ತಿದೆ. ಚಾರ್ಟರ್ಡ್ ಅಕೌಂಟೆಂಟ್ ಮೀನಲ್ ಗೋಯಲ್ ಹಂಚಿಕೊಂಡಿರುವ, ಇಬ್ಬರು ಇರುವ ಕುಟುಂಬದ 82,000 ರೂ. ಮಾಸಿಕ ಖರ್ಚಿನ ಪಟ್ಟಿ ವೈರಲ್ ಆಗಿದೆ. ಮನೆ ಬಾಡಿಗೆ, ಆಹಾರ, ಮನರಂಜನೆ ಸೇರಿ ಈ ವೆಚ್ಚ ವಿವರಿಸಲಾಗಿದೆ. ನೆಟ್ಟಿಗರು ಇದನ್ನು 'ಸಿಲಿಕಾನ್ ಟ್ಯಾಕ್ಸ್' ಎಂದು ಕರೆದಿದ್ದು, ಬೆಂಗಳೂರಿನಲ್ಲಿ ಬದುಕುವುದು ಎಷ್ಟು ದುಬಾರಿ ಎಂಬುದನ್ನು ಇದು ಬಿಂಬಿಸುತ್ತದೆ.

ತಿಂಗಳಿಗೆ 82,000 ರೂ., ವರ್ಷಕ್ಕೆ 9.84 ಲಕ್ಷ ರೂ.: ಇದು ಬೆಂಗಳೂರು ಸಿಎ ಖರ್ಚು, ಜಾಸ್ತಿ ಆಯ್ತು ಎಂದ ನೆಟ್ಟಿಗರು
ಸಾಂದರ್ಭಿಕ ಚಿತ್ರ

Updated on: Feb 27, 2026 | 4:28 PM

ಬೆಂಗಳೂರು: ಬೆಂಗಳೂರಿನಲ್ಲಿ ಒಳ್ಳೆಯ ಉದ್ಯೋಗ, ಜತೆಗೆ ಸಂಪಾದನೆ ಕೂಡ ಚೆನ್ನಾಗಿದ್ರೆ ಖರ್ಚು ಕೂಡ ಅಷ್ಟೇ ಇರುತ್ತದೆ. ಸಂಪಾದನೆ ಅಥವಾ ಸಂಬಳ ಹೆಚ್ಚಾದಂತೆ, ಖರ್ಚು ಹಾಗೂ ನಿರೀಕ್ಷೆಗಳು ಕೂಡ ಇರುತ್ತದೆ. ಭಾರತದ ಸಿಲಿಕಾನ್ ವ್ಯಾಲಿ ಎಂದೇ ಕರೆಯಲ್ಪಡುವ ಬೆಂಗಳೂರಿನಲ್ಲಿ ಜೀವನ ವೆಚ್ಚ (Cost of Living) ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ. ಇದೀಗ ಬೆಂಗಳೂರು ಮೂಲದ ಚಾರ್ಟರ್ಡ್ ಅಕೌಂಟೆಂಟ್ ಮೀನಲ್ ಗೋಯಲ್ ಅವರು ಹಂಚಿಕೊಂಡಿರುವ ತಮ್ಮ ಕುಟುಂಬದ ಮಾಸಿಕ ಖರ್ಚಿನ ಪಟ್ಟಿ ಇಂಟರ್ನೆಟ್‌ನಲ್ಲಿ ಸಂಚಲನ ಮೂಡಿಸಿದೆ. ಕೇವಲ ಇಬ್ಬರು ಇರುವ ಕುಟುಂಬಕ್ಕೆ ತಿಂಗಳಿಗೆ 82,000 ರೂಪಾಯಿ ಖರ್ಚಾಗುತ್ತದೆ ಎಂದು ಅವರು ವಿವರ ನೀಡಿದ್ದಾರೆ.

ಮೀನಲ್ ಅವರು ಲಿಂಕ್ಡ್‌ಇನ್‌ನಲ್ಲಿ ಹಂಚಿಕೊಂಡಿರುವ ಖರ್ಚಿನ ಪಟ್ಟಿ ನೋಡಿದ್ರೆ ಶಾಕ್​​ ಆಗುವುದು ಖಂಡಿತ. 2 ಬಿಹೆಚ್​​ಕೆ ಮನೆಯ ಬಾಡಿಗೆ 37,000 ರೂ, ಆಹಾರ ಮತ್ತು ದಿನಸಿ 15,000 ರೂ., ವಾಹನದ ಖರ್ಚು 5,000 ರೂ., ವಿದ್ಯುತ್, ನೀರು ಮತ್ತು ಇತರ ಬಿಲ್‌ಗಳು 4 ಸಾವಿರ ರೂ. ಮನೆಗೆಲಸದ ಸಹಾಯಕಿಗೆ 4,000 ರೂ. ಮನೋರಂಜನೆ, ಜಿಮ್ ಮತ್ತು ಹೊರಗಿನ ಊಟ 17,000 ರೂ. ಒಟ್ಟು ಖರ್ಚು ತಿಂಗಳಿಗೆ 82,000 ರೂ., ಇದು ವರ್ಷಕ್ಕೆ ಸುಮಾರು 9.84 ಲಕ್ಷ ರೂ. ಆಗುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ‘ಅವುಗಳಿಗೆ ಅನ್ನಕ್ಕಿಂತ ಹೆಚ್ಚಾಗಿ ನಿಮ್ಮ ಪ್ರೀತಿ ಬೇಕು’: ಬೆಂಗಳೂರಿನ ಜನರೇ ಬೀದಿ ನಾಯಿಗಳಿಗೆ ಕಲ್ಲು ಹೊಡೆಯಬೇಡಿ, ಸುಧಾ ಮೂರ್ತಿ ಮನವಿ

ವೈರಲ್​​ ಪೋಸ್ಟ್​​ ಇಲ್ಲಿದೆ ನೋಡಿ:

ಈ ಪೋಸ್ಟ್ ನೋಡಿದ ನೆಟ್ಟಿಗರು “ಸಿಲಿಕಾನ್ ಟ್ಯಾಕ್ಸ್” ಅನ್ವಯವಾಗುತ್ತಿದೆ ಎಂದು ತಮಾಷೆ ಮಾಡಿದ್ದಾರೆ. ತಿಂಗಳಿಗೆ 25,000 ರೂ. ಸಂಪಾದಿಸುವವರೂ ಬೆಂಗಳೂರಿನಲ್ಲಿ ಬದುಕುತ್ತಿದ್ದಾರೆ. ಖರ್ಚು ಮಾಡುವುದು ನಮ್ಮ ಜೀವನಶೈಲಿಗೆ ಬಿಟ್ಟಿದ್ದು ಎಂದು ಕೆಲವರು ಹೇಳಿದ್ದಾರೆ. 90 ಸಾವಿರ ಖರ್ಚು ಮಾಡುವ ಬದಲು 45 ಸಾವಿರಕ್ಕೆ ಮಿತಿಗೊಳಿಸಿ, ಉಳಿದ ಹಣವನ್ನು ಎಸ್‌ಐಪಿ (SIP) ಮಾಡಿದರೆ 5 ವರ್ಷದಲ್ಲಿ ದೊಡ್ಡ ಮೊತ್ತ ಸೇರಿಸಬಹುದು ಎಂದು ಹಣಕಾಸು ಸಲಹೆ ನೀಡಿದ್ದಾರೆ. ಬೆಂಗಳೂರಿನ ವೈಟ್‌ಫೀಲ್ಡ್ ಅಥವಾ ಇತರೆ ಐಟಿ ಹಬ್‌ಗಳಲ್ಲಿ 2BHK ಮನೆಗೆ 37,000 ರೂ. ಬಾಡಿಗೆ ಸಾಮಾನ್ಯವಾಗಿದೆ ಎಂದು ಅನೇಕರು ಒಪ್ಪಿಕೊಂಡಿದ್ದಾರೆ. ಹೊರಗೆ ಹೆಚ್ಚು ತಿನ್ನುವುದು ಮತ್ತು ಜಿಮ್‌ನಲ್ಲಿ ಖರ್ಚು ಮಾಡುವುದು. ನೀವು ವೆಚ್ಚದಲ್ಲಿ ಯಾವುದನ್ನಾದರೂ ಕಡಿತಗೊಳಿಸಬಹುದು ಎಂದು ಒಬ್ಬರು ಹೇಳಿದ್ದಾರೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:25 pm, Fri, 27 February 26

Akshay Pallamajalu

ನನ್ನ ಹೆಸರು ಅಕ್ಷಯ್ ಕುಮಾರ್ ಪಲ್ಲಮಜಲು, ನನ್ನ ಊರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕು, ಡಿಜಿಟಲ್​ ವಿಭಾಗದಲ್ಲಿ 3 ವರ್ಷಗಳ ಅನುಭವ, ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದು, ಟಿವಿ9ನಲ್ಲೂ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದೇನೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಲೇಖನಗಳನ್ನು ಬರೆಯುತ್ತೇನೆ.

Read More
Follow Us