ಮಸಾಜ್ ಪಾರ್ಲರ್ನಲ್ಲಿ ಎಂಜಾಯ್ ಮಾಡಲು ಐಷಾರಾಮಿ ಜೀವನ ನಡೆಸಲು ಕಳ್ಳತನ ಮಾಡುತ್ತಿದ್ದ ಖದೀಮರು ಅರೆಸ್ಟ್
ಐಷಾರಾಮಿ ಜೀವನ ಮಾಡಲು ಕಳ್ಳತನ ಮಾಡುತ್ತಿದ್ದ ಇಬ್ಬರು ಮನೆಗಳ್ಳರನ್ನ ವಿಜಯನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಇವರು ಕಳ್ಳತನ ಮಾಡಿ ಮಸಾಜ್ ಪಾರ್ಲರ್ನಲ್ಲಿ ಎಂಜಾಯ್ ಮಾಡ್ತಿದ್ದರು. ಮಸಾಜ್ ಪಾರ್ಲನಲ್ಲಿ ₹10-15 ಸಾವಿರ ಟಿಪ್ಸ್ ಕೊಡ್ತಿದ್ದರು.
ಬೆಂಗಳೂರು: ಕೈಯಲ್ಲಿ ಮೊಬೈಲ್ ಹಿಡಿದು ನಡೆದು ಹೋಗೋರನ್ನು ಟಾರ್ಗೆಟ್ ಮಾಡಿ ಕ್ಷಣ ಮಾತ್ರದಲ್ಲಿ ಕೈಯಿಂದ ಮೊಬೈಲ್ ಕಿತ್ತು ಎಸ್ಕೇಪ್ ಆಗ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮೊಬೈಲ್ ಕದ್ದು ಕಣ್ಣಾಮುಚ್ಚಾಲೆ ಆಟ ಆಡ್ತಿದ್ದ ಅಸಾಮಿಗಳು ಖಾಕಿ ಬಲೆಗೆ ಬಿದ್ದಿದ್ದಾರೆ. ಮೊಬೈಲ್ ಕಳ್ಳತನ ಮಾಡುತ್ತಿದ್ದ ಮೂವರನ್ನ ಜೆಜೆ ನಗರ ಪೊಲೀಸರು ಬಂಧಿಸಿದ್ದಾರೆ. ಮುಜಾಹಿದ್, ಮುಬಾರಕ್ ಪಾಷಾ, ಖಾಸಿಫ್ ಖಾನ್ ಬಂಧಿತ ಆರೋಪಿಗಳು. ಬಂಧಿತರಿಂದ 13 ಲಕ್ಷ 60 ಸಾವಿರ ಮೌಲ್ಯದ ವಿವಿಧ ಕಂಪನಿಯ 80 ಮೊಬೈಲ್ ಫೋನ್, ಒಂದು ದ್ವಿಚಕ್ರ ವಾಹನ ವಶಕ್ಕೆ ಪಡೆಯಲಾಗಿದೆ.
ಮಸಾಜ್ ಪಾರ್ಲರ್ನಲ್ಲಿ ₹10-15 ಸಾವಿರ ಟಿಪ್ಸ್ ಕೊಡ್ತಿದ್ದರು ಈ ಖದೀಮರು ಇನ್ನು ಬೆಂಗಳೂರಿನಲ್ಲಿ ಮತ್ತೊಂದು ಕಡೆ ಐಷಾರಾಮಿ ಜೀವನ ಮಾಡಲು ಕಳ್ಳತನ ಮಾಡುತ್ತಿದ್ದ ಇಬ್ಬರು ಮನೆಗಳ್ಳರನ್ನ ವಿಜಯನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಜಾನ್ ಮೆಲ್ವಿನ್, ಮಂಜುನಾಥ್ ಬಂಧಿತ ಆರೋಪಿಗಳು. ಇವರು ಕಳ್ಳತನ ಮಾಡಿ ಮಸಾಜ್ ಪಾರ್ಲರ್ನಲ್ಲಿ ಎಂಜಾಯ್ ಮಾಡ್ತಿದ್ದರು. ಮಸಾಜ್ ಪಾರ್ಲನಲ್ಲಿ ₹10-15 ಸಾವಿರ ಟಿಪ್ಸ್ ಕೊಡ್ತಿದ್ದರು. ಹೆಣ್ಣು ಮಕ್ಕಳ ಶೋಕಿಗೆ ಬಿದ್ದು ಮನೆಗಳ್ಳತನ ಮಾಡುತ್ತಿದ್ದರು.
ಆರೋಪಿಗಳು ಮಸಾಜ್ ಪಾರ್ಲರ್ನಲ್ಲಿ ಎಂಜಾಯ್ ಮಾಡಬೇಕು, ಐಷಾರಾಮಿ ಜೀವನ ನಡೆಸಬೇಕೆಂದೆ ಮನೆಗಳ್ಳತನ ಮಾಡುತ್ತಿದ್ದರು. ಸದ್ಯ ಆರೋಪಿಗಳು ಅರೆಸ್ಟ್ ಆಗಿದ್ದು ಬಂಧಿತರಿಂದ 16 ಲಕ್ಷ ಮೌಲ್ಯದ ಚಿನ್ನಾಭರಣ, ಒಂದು ಜೊತೆ ಬೆಳ್ಳಿಯ ಕಾಲು ಚೈನು, ಎರಡು ಬೈಕ್ ವಶಕ್ಕೆ ಪಡೆಯಲಾಗಿದೆ.
ಬೆಂಗಳೂರಿನಲ್ಲಿ ಬೈಕ್ ಕಳ್ಳನನ್ನ ಬಂಧಿಸಿದ ಪೊಲೀಸರು ಬೈಕ್ಗಳನ್ನು ಕದಿಯುತ್ತಿದ್ದ ಆಲಂದಾರ್ ಎಂಬ ಬೈಕ್ ಕಳ್ಳನನ್ನ ವಿದ್ಯಾರಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ 5 ಬೈಕ್ಗಳನ್ನು ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ: ‘ವಿಜಯ್ ದೇವರಕೊಂಡ ನೋಡಿ ಭಯ ಆಗಿತ್ತು’; ಮತ್ತೆ ಮುನ್ನೆಲೆಗೆ ಬಂತು ರಶ್ಮಿಕಾ ಹೇಳಿದ್ದ ಆ ಮಾತು