
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಮಹಿಳೆಯರಿಗೆ ಸೇಫ್ ಅಲ್ಲ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ. ಫೆ. 07ರ ಮಟ ಮಟ ಮಧ್ಯಾಹ್ನವೇ ಲೈಂಗಿಕ ದೌರ್ಜನ್ಯದ(Sexual Harassment) ಆರೋಪ ಕೇಳಿ ಬಂದಿದ್ದು, ಕಾಮುಕರ ಕೃತ್ಯಕ್ಕೆ ಯುವತಿ ನಡುಗಿಹೋಗಿದ್ದಾಳೆ. ಆರೋಪಿಗಳು ಯುವತಿಯ ಕೈಹಿಡಿದು ಎಳೆದಾಡಿ ಕುತ್ತಿಗೆ ಬಿಗಿದು ಅಟ್ಟಹಾಸ ಮೆರೆದಿದ್ದಾರಂತೆ.
ಫೆಬ್ರವರಿ 07 ರ ಮಧ್ಯಾಹ್ನ ಸರಿ ಸುಮಾರು ಒಂದು ಗಂಟೆಯ ಸಮಯ. ಕುಮಾರಸ್ವಾಮಿ ಲೇಔಟ್ನ 4 ನೇ ಅಡ್ಡರಸ್ತೆಯಲ್ಲಿ ತನ್ನ ಪಾಡಿಗೆ ತಾನು ನಡೆದುಕೊಂಡ ಹೋಗ್ತಿದ್ದ ಯುವತಿಯ ಮೇಲೆ ಕಾಮುಕರು ಎರಗಿದ್ದಾರೆ. ನಡುರಸ್ತೆಯಲ್ಲೇ ಎಳೆದಾಡಿದ್ದಾರೆ. ಕೈ ಕಚ್ಚಿ ವಿಕೃತಿ ಮೆರೆದಿದ್ದಾರೆ. ನಿರ್ಮಾಣ ಹಂತದ ಕಟ್ಟಡಕ್ಕೆ ಎಳೆದೊಯ್ದು ಅತ್ಯಾಚಾರಕ್ಕೆ ಯತ್ನ ಮಾಡಲು ಮುಂದಾಗಿದ್ರಂತೆ. ಆದ್ರೆ ಬೈಕ್ ಸವಾರ ಓರ್ವ ಬಂದಿದ್ದರಿಂದ ಬಚಾವಾದೇ ಅಂತಾ ಯುವತಿ ನೋವು ತೋಡಿಕೊಂಡಿದ್ದಾಳೆ.
ಇದನ್ನೂ ಓದಿ: ವಿವೇಕನಗರ: ಪಾರ್ಟಿ ನೆಪದಲ್ಲಿ ಕಾಶ್ಮೀರದ ಇಬ್ಬರು ಯುವತಿಯರ ಮೇಲೆ ಸ್ನೇಹಿತರಿಂದಲೇ ಅತ್ಯಾಚಾರ ಯತ್ನ, ಇಬ್ಬರು ಅರೆಸ್ಟ್
ಬೆಂಗಳೂರಲ್ಲಿ ಇಂತಹ ಲೈಂಗಿಕ ದೌರ್ಜನ್ಯ ಕೃತ್ಯಗಳು ಹೆಚ್ಚಾಗಿದ್ದು, ಕಾನೂನು ಸುವ್ಯವಸ್ಥೆಯನ್ನೇ ಪ್ರಶ್ನೆ ಮಾಡುವಂತಾಗಿದೆ. ಕೆ.ಎಸ್ ಲೇಔಟ್ ಸುತ್ತಾಮುತ್ತಾ ಪೊಲೀಸರ ಗಸ್ತು ಕಡಿಮೆಯಾಗಿರೋದೇ ಘಟನೆಗೆ ಕಾರಣ ಅಂತಾ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸದ್ಯ ಘಟನೆ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ. ದೂರು ದಾಖಲಿಸಲು ಯುವತಿ ಹೆದರ್ತಿದ್ದು, ಪೊಲೀಸರು ಗಸ್ತು ತಿರುಗಿ ಇಂತಹ ಕೃತ್ಯಕ್ಕೆ ಬ್ರೇಕ್ ಹಾಕಿದ್ರೆ ಸಾಕು ಅಂತಾ ಮನವಿ ಮಾಡಿಕೊಂಡಿದ್ದಾರೆ.
ವರದಿ: ರಾಚಪ್ಲಾಜಿ ನಾಯಕ್, ಟಿವಿ9 ಬೆಂಗಳೂರು
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 6:56 am, Wed, 8 February 23