ಬೆಂಗಳೂರು: ಇಂದಿನಿಂದ ಡಿಸೆಂಬರ್ 7ರವರೆಗೆ ಕಬ್ಬನ್ ಪಾರ್ಕ್​ನಲ್ಲಿ ಫ್ಲವರ್ ಶೋ!

ಕಬ್ಬನ್ ಪಾರ್ಕ್‌ನಲ್ಲಿ ನವೆಂಬರ್ 27ರಿಂದ ಡಿಸೆಂಬರ್ 7ರವರೆಗೆ ಹೂವಿನ ಪ್ರದರ್ಶನ ಆಯೋಜಿಸಲಾಗಿದೆ. ಕನ್ನಡ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆ ಅಂಗವಾಗಿ 10 ವರ್ಷಗಳ ನಂತರ ನಡೆಯುತ್ತಿರುವ ಈ ಪುಷ್ಪ ಮೇಳದಲ್ಲಿ ಆಕರ್ಷಕ ಕಲಾಕೃತಿಗಳು ಹಾಗೂ ವಿವಿಧ ಜಾತಿಯ ಹೂವುಗಳನ್ನು ಪ್ರದರ್ಶಿಸಲು ಇಲಾಖೆ ಮುಂದಾಗಿದ್ದು, ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಪ್ರವೇಶವಿರಲಿದೆ.

ಬೆಂಗಳೂರು: ಇಂದಿನಿಂದ ಡಿಸೆಂಬರ್ 7ರವರೆಗೆ ಕಬ್ಬನ್ ಪಾರ್ಕ್​ನಲ್ಲಿ ಫ್ಲವರ್ ಶೋ!
ಇಂದಿನಿಂದ ಕಬ್ಬನ್ ಪಾರ್ಕ್ನಲ್ಲಿ ಫ್ಲವರ್ ಶೋ!
Updated By: ಭಾವನಾ ಹೆಗಡೆ

Updated on: Nov 27, 2025 | 12:43 PM

ಬೆಂಗಳೂರು, ನವೆಂಬರ್ 27: ಪ್ರತಿ ವರ್ಷ ಲಾಲ್ಬಾಗ್ ಫಲ ಪುಷ್ಪ ಪ್ರದರ್ಶನಕ್ಕೆ ಜನರು ಬಂದು ಕಣ್ತುತುಂಬಿಕೊಳ್ಳುತ್ತಾರೆ. ಇದೇ ಮಾದರಿಯಲ್ಲಿ ಇಂದಿನಿಂದ (ನ.27) ಕಬ್ಬನ್ ಪಾರ್ಕ್ನಲ್ಲಿಯೂ (Cubbon Park) ಪುಷ್ಪ ಮೇಳಕ್ಕೆ ತೋಟಗಾರಿಕೆ ಇಲಾಖೆ ಚಾಲನೆ ನೀಡಲಿದೆ. ಕನ್ನಡ ರಾಜ್ಯೋತ್ಸವ ಹಾಗೂ‌ ಮಕ್ಕಳ ದಿನಾಚರಣೆ ಅಂಗವಾಗಿ ಹತ್ತು ವರ್ಷಗಳ ಬಳಿಕ ಫ್ಲವರ್ ಶೋ ನಡೆಯುತ್ತಿದ್ದು, ಡಿಸೆಂಬರ್ 7ರ ವರೆಗೂ ಪುಷ್ಪ ಪ್ರದರ್ಶನ ಮುಂದುವರೆಯಲಿದೆ.

ಸರ್ಕಾರಿ‌ ಶಾಲೆ ಮಕ್ಕಳಿಗೆ ಉಚಿತ ಪ್ರವೇಶ

ಗಣರಾಜ್ಯೋತ್ಸವ ಹಾಗೂ ಸ್ವಾತಂತ್ರ್ಯೋತ್ಸವ ಅಂಗವಾಗಿ ತೋಟಗಾರಿಕೆ ಇಲಾಖೆ ಲಾಲ್ಬಾಗ್​ನಲ್ಲಿ ಮಾತ್ರ ಫಲಪುಷ್ಪ ಪ್ರದರ್ಶನ ಆಯೋಜಿಸುತ್ತಿತ್ತು ಈಗ ಕಬ್ಬನ್ ಉದ್ದಾನದಲ್ಲಿ ರಾಜೋತ್ಸವ, ಮಕ್ಕಳ ದಿನಾಚರಣೆ ಅಂಗವಾಗಿ ಶೋ ಆಯೋಜನೆ ಮಾಡಿದೆ. ಸರ್ಕಾರಿ‌ ಶಾಲೆ ಮಕ್ಕಳಿಗೆ ಉಚಿತ ಪ್ರವೇಶ ಇದ್ದು, ದೊಡ್ಡವರಿಗೆ 30 ರೂ. ಹಾಗೂ ಮಕ್ಕಳಿಗೆ 10 ರೂ. ಶುಲ್ಕದ ಟಿಕೆಟ್ ನಿಗದಿಸಲಾಗಿದೆ.

ಇಲಾಖೆ ಪುಷ್ಪ ಪ್ರದರ್ಶನದ ಜೊತೆಗೆ ಕಲಾ, ಸಂಸ್ಕೃತಿ ಹಬ್ಬವನ್ನೂ ಸಹ ಹಮ್ಮಿಕೊಳ್ಳಲಿದ್ದು, ಆಲಂಕಾರಿಕ ಕುಂಡಗಳನ್ನೂ ಸಿದ್ಧ ಮಾಡಿಕೊಂಡಿದೆ. ಪುಷ್ಪಗಳಲ್ಲಿ ಪ್ರಾಣಿಗಳ ಕರಕುಶಲಗಳನ್ನು ರಚಿಸಿ ಮಕ್ಕಳನ್ನು ಆಕರ್ಷಿಸುವ ಯೋಜನೆ ರೂಪಿಸಲಾಗಿದೆ. ಕಬ್ಬನ್ ಪಾರ್ಕ್​ನ ಬ್ಯಾಂಡ್ ಸ್ಟ್ಯಾಂಡ್ ಹತ್ತಿರ 20 ರಿಂದ 25 ಸಾವಿರ ಕುಂಡಗಳನ್ನು ಇಡಲು ಪ್ಲಾನ್ ಮಾಡಿದ್ದು, ಬೆಳಗ್ಗೆ 6 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಪ್ರದರ್ಶನ ಇರಲಿದೆ ಎಂದು ತೋಟಗಾರಿಕೆ ಇಲಾಖೆ ನಿರ್ದೇಶಕಿ ಕುಸುಮಾ ಹೇಳಿದ್ದಾರೆ.

ಇದನ್ನೂ ಓದಿ ಫ್ಲವರ್ ಶೋ ಹಿನ್ನೆಲೆ ಕಬ್ಬನ್ ಪಾರ್ಕ್‌ ಸುತ್ತ ಮುತ್ತ ಸಂಚಾರ ಬದಲಾವಣೆ

 11 ದಿನಗಳ ಕಾಲ ಸಂಚಾರ ನಿರ್ಬಂಧ

ಕಬ್ಬನ್ ಪಾರ್ಕ್ನಲ್ಲಿ ಈಗಾಗಲೇ ಹೂವಿನಲ್ಲಿ ಅರಳಿದ ಆನೆ, ಚಿಟ್ಟೆ, ಡಾಲ್ಫಿನ್ ಕಲಾಕೃತಿಗಳು ಜನರನ್ನು ಆಕರ್ಷಿಸುತ್ತಿದ್ದು, ಕಬ್ಬನ್ ಪಾರ್ಕ್ ಪುಷ್ಪ ಮೇಳ ನೋಡಲು ಸಿಟಿ ಜನರು ಉತ್ಸಾಹಕರಾಗಿದ್ದಾರೆ. ಪಾರ್ಕ್ನ ಒಂದು ಗೇಟ್ ಸಂಚಾರ ನಿಯಂತ್ರಣ ಮಾಡಲು ಇಲಾಖೆ ಮುಂದಾಗಿದ್ದು, ಹೈ ಕೋರ್ಟ್ ನಿಂದ ವಿಠಲ್ ಮಲ್ಯ ರಸ್ತೆ ಸಂಪರ್ಕಿಸುವ ರಸ್ತೆ, ಬ್ಯಾಂಡ್ ಸ್ಟ್ಯಾಂಡ್ ಬಾಲಭವನದ ಮುಂಭಾಗದ ರಸ್ತೆ ಸಂಚಾರಕ್ಕೆ ನಿರ್ಬಂಧ ತೋಟಗಾರಿಕೆ ಇಲಾಖೆ ಮುಂದಾಗಿದೆ. ಮುಂದಿನ 11 ದಿನಗಳ ಕಾಲ ಈ ನಿರ್ಬಂಧ ಇರಲಿದ್ದು, ಇದರಿಂದ ಕಬ್ಬನ್ ಪಾರ್ಕ್ ಸುತ್ತಮುತ್ತ ಟ್ರಾಫಿಕ್ ಜಾಮ್ ಎದುರಾಗುವ ಸಾಧ್ಯತೆ
ಹೆಚ್ಚಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

Published On - 11:49 am, Thu, 27 November 25