AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫ್ಲವರ್ ಶೋ ಹಿನ್ನೆಲೆ ಕಬ್ಬನ್ ಪಾರ್ಕ್‌ ಸುತ್ತ ಮುತ್ತ ಸಂಚಾರ ಬದಲಾವಣೆ

ಕಬ್ಬನ್ ಪಾರ್ಕ್‌ನಲ್ಲಿ ನವೆಂಬರ್ 27ರಿಂದ 11 ದಿನಗಳ ಕಾಲ ಫ್ಲವರ್ ಶೋ ನಡೆಯಲಿರುವ ಹಿನ್ನೆಲೆಯಲ್ಲಿ ಕೆಲವು ಪ್ರಮುಖ ರಸ್ತೆಗಳಲ್ಲಿ ಸಂಚಾರ ನಿರ್ಬಂಧ ವಿಧಿಸಲಾಗಿದ್ದು, ವಾಹನ ಸವಾರರು ಪರ್ಯಾಯ ಮಾರ್ಗ ಬಳಸಬೇಕಾಗುತ್ತದೆ ಎಂದು ಪಾರ್ಕ್​ನ ನಿರ್ದೇಶಕಿ ಹೇಳೀದ್ದಾರೆ. ಫ್ಲವರ್ ಶೋ ಅವಧಿಯಲ್ಲಿ ಬೆಂಗಳೂರಿನ ಕಬ್ಬನ್ ಪಾರ್ಕ್ ಸುತ್ತಮುತ್ತ ಟ್ರಾಫಿಕ್ ಜಾಮ್ ಹೆಚ್ಚಾಗುವ ಸಾಧ್ಯತೆ ಇದೆ.

ಫ್ಲವರ್ ಶೋ ಹಿನ್ನೆಲೆ ಕಬ್ಬನ್ ಪಾರ್ಕ್‌ ಸುತ್ತ ಮುತ್ತ ಸಂಚಾರ ಬದಲಾವಣೆ
ಫ್ಲವರ್ ಶೋ ಹಿನ್ನೆಲೆ ಕಬ್ಬನ್ ಪಾರ್ಕ್‌ ಸುತ್ತ ಮುತ್ತ ಸಂಚಾರ ಬದಲಾವಣೆ
Vinay Kashappanavar
| Edited By: |

Updated on: Nov 25, 2025 | 8:37 AM

Share

ಬೆಂಗಳೂರು, ನವೆಂಬರ್ 25: ಕಬ್ಬನ್ ಪಾರ್ಕ್‌ನಲ್ಲಿ (Cubbon Park) ದಿನನಿತ್ಯ ಸಾವಿರಾರು ವಾಹನಗಳು ಸಂಚಾರ ಮಾಡುತ್ತವೆ. ನಗರದಲ್ಲಿರುವ ಪ್ರಮುಖ ರಸ್ತೆಗಳಂತೆಯೇ ವಾಹನ ಸವಾರರು ಕಬ್ಬನ್ ಪಾರ್ಕ್​ನ ರಸ್ತೆಗಳನ್ನೂ ಬಳಕೆ ಮಾಡುತ್ತಾರೆ. ಆದರೆ ನವೆಂಬರ್ 27 ರಿಂದ ಕಬ್ಬನ್ ಪಾರ್ಕ್ನಲ್ಲಿ 11 ದಿನಗಳ ಕಾಲದ ಫ್ಲವರ್ ಶೋ ಆಯೋಜನೆ ಹಿನ್ನಲೆ ಒಂದು ಗೇಟ್​ನ ಸಂಚಾರ ನಿಯಂತ್ರಣ ಮಾಡಲು ತೋಟಗಾರಿಕೆ ಇಲಾಖೆ ಮುಂದಾಗಿದೆ.

11 ದಿನಗಳ ಕಾಲ ಸಂಚಾರ ಮಾರ್ಗ ನಿರ್ಬಂಧ

ನಗರದ ಟ್ರಾಫಿಕ್ ಜಾಮ್‌ನಿಂದ ತಪ್ಪಿಸಿಕೊಳ್ಳುವುದಕ್ಕೆ ಕಬ್ಬನ್ ಪಾರ್ಕ್ ಮಾರ್ಗವಾಗಿ ದಿನನಿತ್ಯ ಅನೇಕ ವಾಹನ ಸವಾರರು ಸಂಚಾರ ಮಾಡುತ್ತಾರೆ. ಈ ಮಾರ್ಗದ ಮೂಲಕ ರಿಚ್‌ಮಂಡ್ ಸರ್ಕಲ್ , ಶಿವಾಜಿನಗರ, ಕೆ ಆರ್ ಸರ್ಕಲ್, ಕಾರ್ಪೊರೇಷನ್ ಕಡೆಗೆ ಸಂಚಾರ ಬೆಳೆಸುತ್ತಾರೆ.   ನವೆಂಬರ್ 27 ರಿಂದ ಹನ್ನೊಂದು ದಿನಗಳ ಕಾಲ ಜನರು ತಾವು ಸಂಚರಿಸುವ ಮಾರ್ಗ ಬದಲಿಸಬೇಕಿದೆ. ಫ್ಲವರ್ ಶೋ ಹಿನ್ನಲೆ ಬರುವ 11 ದಿನಗಳ ಕಾಲ ಕೋರ್ಟ್ ವಿಠಲ್ ಮಲ್ಯ ರಸ್ತೆ ಸಂಪರ್ಕಿಸುವ ರಸ್ತೆ, ಬ್ಯಾಂಡ್ ಸ್ಟ್ಯಾಂಡ್ ಬಾಲಭವನದ ಮುಂಭಾಗದ ರಸ್ತೆಯಲ್ಲಿ ಸಂಚಾರ ನಿರ್ಬಂಧಿಸಲಿದ್ದು, ಇದರಿಂದ ಕಬ್ಬನ್ ಪಾರ್ಕ್ ಸುತ್ತಮುತ್ತ ಟ್ರಾಫಿಕ್ ಜಾಮ್ ಎದುರಾಗುವ ಸಾಧ್ಯತೆ ಇದೆ.

ಇದನ್ನೂ ಓದಿ ಬೆಂಗಳೂರು: ಕಬ್ಬನ್ ಪಾರ್ಕ್‌ನಲ್ಲಿ ‘ಡಾಗ್ ಪಾರ್ಕ್’ ದುರುಪಯೋಗ ವಿರೋಧಿಸಿ ಜನರ ಆಕ್ರೋಶ; ಶೀಘ್ರದಲ್ಲೇ ಪ್ರತಿಭಟನೆಗೆ ಸಿಪಿಡಬ್ಲೂಎ ಘೋಷಣೆ

ನ.27 ರಿಂದ ಕಬ್ಬನ್ ಪಾರ್ಕ್​ನಲ್ಲಿ ಫ್ಲವರ್ ಶೋ

ಹತ್ತು ವರ್ಷಗಳ ಬಳಿಕ ಕಬ್ಬನ್ ನಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ‌ ಮಕ್ಕಳ ದಿನಾಚರಣೆ ಅಂಗವಾಗಿ ಫ್ಲವರ್ ಶೋ ಆಯೋಜನೆ ಮಾಡಲಾಗಿದೆ. ನ. 27 ರಿಂದ ಡಿ.7ರ ವರೆಗೆ ಪುಷ್ಪ ಪ್ರದರ್ಶನ ಜೋತೆಗೆ ಕಲಾ, ಸಂಸ್ಕೃತಿ ಹಬ್ಬ ಹಮ್ಮಿಕೊಳ್ಳಲಾಗುತ್ತದೆ. ಆಲಂಕಾರಿಕ, ದೇಸಿ-ವಿದೇಶಿ ಹಾಗೂ ಕುಂಡಗಳನ್ನೂ ಸಿದ್ಧ ಮಾಡಿಕೊಳ್ಳಲಾಗುತ್ತದೆ. ಪುಷ್ಪಗಳಲ್ಲಿ ಪ್ರಾಣಿಗಳ ಆಕೃತಿ ರಚಿಸಿ ಮಕ್ಕಳನ್ನು ಆಕರ್ಷಿಸುವ ಯೋಜನೆ ರೂಪಿಸಲಾಗುತ್ತದೆ. 20 ಸಾವಿರದಿಂದ 25 ಸಾವಿರ ಕುಂಡಗಳನ್ನು ಉದ್ಯಾನವನದಲ್ಲಿ ಬ್ಯಾಂಡ್ ಸ್ಟ್ಯಾಂಡ್ ಹತ್ತಿರ ಇಡಲು ಪ್ಲಾನ್ ಮಾಡಲಾಗಿದ್ದು, ಬೆಳಗ್ಗೆ 6 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಪ್ರದರ್ಶನ ಇರಲಿದೆ ಎಂದು ಕಬ್ಬನ್ ಪಾರ್ಕ್ ನಿರ್ದೇಶಕಿ ಕುಸುಮಾ ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.