ಜೀನ್ಸ್ ಫೇಡ್​ ಆಯ್ತು ಅಂತಾ ಬೆಂಗಳೂರು ಗ್ರಾಹಕ ಆದಿತ್ಯ ಬಿರ್ಲಾ ಷೋರೂಮ್ ವಿರುದ್ಧ ಕೇಸ್​ ಹಾಕಿ, ಹಣ ವಾಪಸ್ ಪಡೆದ!

ಗ್ರಾಹಕರ ದೂರಿಗೆ ಆದಿತ್ಯ ಬಿರ್ಲಾ ಷೋರೂಮ್​ ಸೊಪ್ಪು ಹಾಕಿಲ್ಲ. ಎಂದಿನಂತೆ ಗ್ರಾಹಕನನ್ನು ದೂರ ಅಟ್ಟಿದ್ದಾರೆ. ಇದರಿಂದ ಬೇಸತ್ತ ಗ್ರಾಹಕ ಹರಿಹರನ್​​​ ಬೆಂಗಳೂರು ನಗರದ ಗ್ರಾಹಕ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಗಮನಾರ್ಹವೆಂದರೆ ಅಕ್ಟೋಬರ್ 2023 ರಲ್ಲಿ ಪ್ರಾರಂಭವಾದ ಕಾನೂನು ಪ್ರಕ್ರಿಯೆಗಳು ಮತ್ತು ಫೆಬ್ರವರಿ 2024 ರಲ್ಲಿ ಕೊನೆಗೊಂಡಿದೆ.

ಜೀನ್ಸ್ ಫೇಡ್​ ಆಯ್ತು ಅಂತಾ ಬೆಂಗಳೂರು ಗ್ರಾಹಕ ಆದಿತ್ಯ ಬಿರ್ಲಾ ಷೋರೂಮ್ ವಿರುದ್ಧ ಕೇಸ್​ ಹಾಕಿ, ಹಣ ವಾಪಸ್ ಪಡೆದ!
ಜೀನ್ಸ್ ಬಟ್ಟೆ ಫೇಡ್​ ಆಯ್ತು ಅಂತಾ ಬೆಂಗಳೂರು ಗ್ರಾಹಕ ಕೇಸ್​ ಹಾಕಿದ!
Follow us
ಸಾಧು ಶ್ರೀನಾಥ್​
|

Updated on: Feb 17, 2024 | 12:18 PM

ಸಾಮಾನ್ಯವಾಗಿ ಜೀನ್ಸ್ ಡ್ರೆಸ್​​ ಫೇಡ್​​ ಆದಷ್ಟೂ ಅದರ ಅಂದಚೆಂದ ಜಾಸ್ತಿ ಆಗುತ್ತಾ ಹೋಗುತ್ತದೆ. ಕಂಪನಿಗಳವರೇ ಜೀನ್ಸ್​​ ಬಟ್ಟೆಗಳನ್ನು ಅಲ್ಲಲ್ಲಿ ಫೇಡ್​ ಮಾಡಿ ಕೊಡ್ತಾರೆ ಅಲ್ಲವರಾ!? ಆದರೆ ಇಲ್ಲೊಬ್ಬ ಪುಣ್ಯಾತ್ಮ ಅದರಲ್ಲೂ ಬೆಂಗಳೂರಿನಲ್ಲಿ ನೆಲೆಸಿರುವ ವ್ಯಕ್ತಿಯೊಬ್ಬ ತಾನು ತೆಗೆದುಕೊಂಡ ಹೊಸ ಜೀನ್ಸ್​ ಬಟ್ಟೆ ಫೇಡ್​ ಆಯ್ತೂ ಅಂತಾ ಕೋರ್ಟ್​ ಮೆಟ್ಟಿಲೇರಿ, ಪ್ರಖ್ಯಾತ ಕಂಪನಿಯ ವಿರುದ್ಧ ವಿಜಯೀಭವ ಆಗಿದ್ದಾನೆ. ಹೌದು ಹರಿಹರನ್ ಬಾಬು ಎಂಬಾತ 4,499 ರೂ. ಬೆಲೆಯ ವ್ಯಾನ್ ಹ್ಯೂಸೆನ್ ಜೀನ್ಸ್‌ ಒಂದು ಜೊತೆ ಬಟ್ಟೆ ಖರೀದಿಸಿದ್ದಾನೆ. ದುರದೃಷ್ಟವಷಾತ್ ಅದು ನಾಲ್ಕಾರು ಒಗೆತಗಳಿಗೇ ಬಣ್ಣ ಕಳೆದುಕೊಂಡಿದೆ. ಕಂಪನಿಯನ್ನು ಸುಮ್ಮನೆ ಬಿಡದ ಹರಿಹರನ್ ಕಾನೂನು ಹೋರಾಟ ನಡೆಸಿ, ಜಯ ಸಾಧಿಸಿದ್ದಾನೆ (Bangalore consumer redressal commission).

ಏಪ್ರಿಲ್ 16, 2023 ರಂದು ಆದಿತ್ಯ ಬಿರ್ಲಾ ಫ್ಯಾಷನ್ ಮತ್ತು ರಿಟೇಲ್ ಲಿಮಿಟೆಡ್ ( Aditya Birla Fashion and Retail Limited -ABFRL) ಅಂಗಡಿಯಲ್ಲಿ ಆತ ಜೀನ್ಸ್ ಖರೀದಿಸಿದ್ದಾನೆ. ಆದರೆ ಮೂರೇ ತಿಂಗಳಿಗೆ ಕೇವಲ ಐದು ವಾಷ್​​ಗಳಿಗೆ ಅದು ಬಣ್ಣ ಬಿಟ್ಟುಕೊಂಡಿದೆ.

ಇದರಿಂದ ಬೇಸರಗೊಂಡ ಹರಿಹರನ್​​ ಸೀದಾ ಶೋರೂಮ್‌ಗೆ ವಾಪಸ್​ ತಗೊಂಡು ಹೋಗಿ ದೂರು ಕೊಟ್ಟಿದ್ದಾನೆ. ನನ್ನ ಹಣ ನನಗೆ ಮರುಪಾವತಿಸಿ ಎಂದು ವಿನಂತಿಸಿದ್ದಾನೆ. ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ವರದಿ ಪ್ರಕಾರ, ಜೀನ್ಸ್‌ ಬಟ್ಟೆಯಲ್ಲಿ ಬಳಸಿದ್ದ ಇಂಡಿಗೊ ಡೈ ಕಾಲಾನಂತರದಲ್ಲಿ ಬಣ್ಣ ಕಳೆದುಕೊಂಡಿದೆ. ಆದರೆ ಈ ದೂರಿಗೆ ಆದಿತ್ಯ ಬಿರ್ಲಾ ಷೋರೂಮ್​ನವರು (showroom) ಸೊಪ್ಪು ಹಾಕಿಲ್ಲ. ಎಂದಿನಂತೆ ಗ್ರಾಹಕನನ್ನು ದೂರ ಅಟ್ಟಿದ್ದಾರೆ. ಇದರಿಂದ ಬೇಸತ್ತ ಗ್ರಾಹಕ ಹರಿಹರನ್​​​ ಬೆಂಗಳೂರು ನಗರದ ಗ್ರಾಹಕ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಗಮನಾರ್ಹವೆಂದರೆ ಅಕ್ಟೋಬರ್ 2023 ರಲ್ಲಿ ಪ್ರಾರಂಭವಾದ ಕಾನೂನು ಪ್ರಕ್ರಿಯೆಗಳು ಮತ್ತು ಫೆಬ್ರವರಿ 2024 ರಲ್ಲಿ ಕೊನೆಗೊಂಡಿದೆ.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಆರಂಭವಾದ ಕಾನೂನು ಪ್ರಕ್ರಿಯೆಗಳು ಈ ವರ್ಷದ ಫೆಬ್ರವರಿಯಲ್ಲಿ ಮುಕ್ತಾಯಗೊಂಡವು. ಆದಿತ್ಯ ಬಿರ್ಲಾ ಫ್ಯಾಷನ್ ಮತ್ತು ರಿಟೇಲ್ ಲಿಮಿಟೆಡ್ ಗ್ರಾಹಕರಿಗೆ ವಾಷಿಂಗ್​​ ಬಗ್ಗೆ ಮಾಹಿತಿ, ಮಾರ್ಗಸೂಚಿಗಳನ್ನು ಪೂರೈಸಿಲ್ಲ ಎಂದು ಗ್ರಾಹಕರ ವೇದಿಕೆ ನ್ಯಾಯಾಧೀಶರು ತೀರ್ಪು ನೀಡಿದರು. ನೋಟಿಸ್ ಪಡೆದರೂ ಕಂಪನಿಯ ಪ್ರತಿನಿಧಿಗಳು ಹಾಜರಾಗಲಿಲ್ಲ ಮತ್ತು ಗ್ರಾಹಕ ಹರಿಹರನ್​​​ಗೆ ಸರಿಯಾದ ಇನ್ವಾಯ್ಸ್​​​ ನೀಡಲಾಗಿಲ್ಲ ಎಂದೂ ನ್ಯಾಯಾಲಯ ಗಮನಿಸಿದೆ.

ಪರಿಹಾರವನ್ನು ಪಾವತಿಸಲು ಆದಿತ್ಯ ಬಿರ್ಲಾ ಫ್ಯಾಶನ್‌ಗೆ ಆದೇಶಿಸಿದ ಗ್ರಾಹಕರ ವೇದಿಕೆ ಬೆಂಗಳೂರಿನ ಗ್ರಾಹಕ ನ್ಯಾಯಾಲಯವು ತೀರ್ಪು ನೀಡಿದ ಎರಡು ತಿಂಗಳೊಳಗೆ ದೂರುದಾರರಿಗೆ ಒಂದು ಜೊತೆ ಜೀನ್ಸ್ (ರೂ. 4,016) ಮತ್ತು ಹೆಚ್ಚುವರಿ 1,000 ರೂ.ಗಳ ಮರುಪಾವತಿಯನ್ನು ಪಾವತಿಸಲು ಕಂಪನಿಗೆ ಆದೇಶಿಸಿದೆ.

ಆದಿತ್ಯ ಬಿರ್ಲಾ ಫ್ಯಾಶನ್ ಬಗ್ಗೆ ಆದಿತ್ಯ ಬಿರ್ಲಾ ಫ್ಯಾಷನ್ ಮತ್ತು ರಿಟೇಲ್ ಲಿಮಿಟೆಡ್ (ABFRL) ಭಾರತೀಯ ಫ್ಯಾಷನ್ ಮತ್ತು ಚಿಲ್ಲರೆ ಉದ್ಯಮದಲ್ಲಿ ಪ್ರಮುಖ ಕಂಪನಿಯಾಗಿದೆ. ಇದು ಆದಿತ್ಯ ಬಿರ್ಲಾ ಗ್ರೂಪ್‌ನ ಒಂದು ಭಾಗವಾಗಿದೆ, ಇದು ಭಾರತದ ಅತಿದೊಡ್ಡ ಸಂಘಟಿತ ಸಂಸ್ಥೆಗಳಲ್ಲಿ ಒಂದಾಗಿದೆ. ABFRL ಔಪಚಾರಿಕ ಮತ್ತು ಸಾಂದರ್ಭಿಕ ಉಡುಗೆಗಳನ್ನು ಒಳಗೊಂಡಂತೆ ವಿವಿಧ ವಿಭಾಗಗಳನ್ನು ಪೂರೈಸುವ ಫ್ಯಾಷನ್ ಬ್ರಾಂಡ್‌ಗಳ ವೈವಿಧ್ಯಮಯ ಬಟ್ಟೆಗಳನ್ನು ನಿರ್ವಹಿಸುತ್ತದೆ. ಅದರ ಕೆಲವು ಪ್ರಸಿದ್ಧ ಬ್ರ್ಯಾಂಡ್‌ಗಳಲ್ಲಿ ವ್ಯಾನ್ ಹ್ಯೂಸೆನ್, ಅಲೆನ್ ಸೋಲಿ, ಪ್ಯಾಂಟಲೂನ್ಸ್, ಪೀಟರ್ ಇಂಗ್ಲೆಂಡ್, ಮತ್ತು ಇತರವು ಸೇರಿವೆ. ಕಂಪನಿಯು ಉಡುಪು ಮತ್ತು ಪರಿಕರಗಳ ಉತ್ಪಾದನೆ, ವಿತರಣೆ ಮತ್ತು ಚಿಲ್ಲರೆ ವ್ಯಾಪಾರದಲ್ಲಿ ತೊಡಗಿಸಿಕೊಂಡಿದೆ. ಇದು ಭಾರತದಲ್ಲಿನ ಫ್ಯಾಷನ್ ಲ್ಯಾಂಡ್‌ಸ್ಕೇಪ್‌ಗೆ ಗಮನಾರ್ಹವಾಗಿ ಕೊಡುಗೆ ನೀಡುತ್ತದೆ.

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ