ಇದು ಸೋಂಕಿತರ ತುರ್ತು ಚಿಕಿತ್ಸೆಗಾಗಿ.. ಬೆಂಗಳೂರಿನ ಎಲ್ಲಾ ಶಾಸಕ ಕ್ಷೇತ್ರಗಳಲ್ಲಿ ಟ್ರಯೇಜ್ ಕೇಂದ್ರಗಳ ಸ್ಥಾಪನೆ
ಬೆಂಗಳೂರಿನ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ ಒಂದೊಂದು ಟ್ರಯೇಜ್ ಕೇಂದ್ರಗಳ ಲೆಕ್ಕದಲ್ಲಿ ಒಟ್ಟು 28 ತುರ್ತು ವೈದ್ಯಕೀಯ ತಪಾಸಣಾ ಕೇಂದ್ರಗಳನ್ನು ಸ್ಥಾಪನೆಯಾಗಿದ್ದು, ದಿನದ 24 ಗಂಟೆಯೂ ಇವು ಕೊರೊನಾ ಸೋಂಕಿತರಿಗಾಗಿ ಕಾರ್ಯನಿರ್ವಹಿಸಲಿವೆ. ಈ ಟ್ರಯೇಜ್ ಕೇಂದ್ರಗಳಲ್ಲಿ ಕೊರೊನಾ ಸೋಂಕಿತರನ್ನು ತಕ್ಷಣಕ್ಕೆ ಪರೀಕ್ಷೆಗೆ ಒಳಪಡಿಸಿ, ಸೋಂಕಿತರ ಆರೋಗ್ಯ ಅಳೆದು, ಅದಕ್ಕೆ ಅನುಗುಣವಾಗಿ ಕೋವಿಡ್ ಆರೋಗ್ಯ ಕೇಂದ್ರ ಅಥವಾ ಆಸ್ಪತ್ರೆಗಳಿಗೆ ಹೆಚ್ಚಿನ ಚಿಕಿತ್ಸೆಗಾಗಿ ಕಳುಹಿಸಿಕೊಡುವುದು ಈ ವ್ಯವಸ್ಥೆ ಪ್ರಧಾನ ಉದ್ದೇಶವಾಗಿದೆ. ಈ ಕೇಂದ್ರಗಳನ್ನು ರೆಫರಲ್ ಆಸ್ಪತ್ರೆ, ವೈದ್ಯಕೀಯ ಕಾಲೇಜು ಆಸ್ಪತ್ರೆ, […]
ಬೆಂಗಳೂರಿನ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ ಒಂದೊಂದು ಟ್ರಯೇಜ್ ಕೇಂದ್ರಗಳ ಲೆಕ್ಕದಲ್ಲಿ ಒಟ್ಟು 28 ತುರ್ತು ವೈದ್ಯಕೀಯ ತಪಾಸಣಾ ಕೇಂದ್ರಗಳನ್ನು ಸ್ಥಾಪನೆಯಾಗಿದ್ದು, ದಿನದ 24 ಗಂಟೆಯೂ ಇವು ಕೊರೊನಾ ಸೋಂಕಿತರಿಗಾಗಿ ಕಾರ್ಯನಿರ್ವಹಿಸಲಿವೆ. ಈ ಟ್ರಯೇಜ್ ಕೇಂದ್ರಗಳಲ್ಲಿ ಕೊರೊನಾ ಸೋಂಕಿತರನ್ನು ತಕ್ಷಣಕ್ಕೆ ಪರೀಕ್ಷೆಗೆ ಒಳಪಡಿಸಿ, ಸೋಂಕಿತರ ಆರೋಗ್ಯ ಅಳೆದು, ಅದಕ್ಕೆ ಅನುಗುಣವಾಗಿ ಕೋವಿಡ್ ಆರೋಗ್ಯ ಕೇಂದ್ರ ಅಥವಾ ಆಸ್ಪತ್ರೆಗಳಿಗೆ ಹೆಚ್ಚಿನ ಚಿಕಿತ್ಸೆಗಾಗಿ ಕಳುಹಿಸಿಕೊಡುವುದು ಈ ವ್ಯವಸ್ಥೆ ಪ್ರಧಾನ ಉದ್ದೇಶವಾಗಿದೆ.
ಈ ಕೇಂದ್ರಗಳನ್ನು ರೆಫರಲ್ ಆಸ್ಪತ್ರೆ, ವೈದ್ಯಕೀಯ ಕಾಲೇಜು ಆಸ್ಪತ್ರೆ, ಸರ್ಕಾರಿ ಆಸ್ಪತ್ರೆ ಅಥವಾ ಖಾಸಗಿ ಆಸ್ಪತ್ರೆಗಳ ಜೊತೆ ನೇರ ಸಂಪರ್ಕ ಮಾಡಲಾಗಿದೆ ಎಂದು ಬಿಬಿ ಎಂಪಿ ಆಯುಕ್ತ ಗೌರವ್ ಗುಪ್ತಾ ತಿಳಿಸಿದ್ದಾರೆ. ಈ ವ್ಯವಸ್ಥೆಯಲ್ಲಿ ಕೊರೊನಾ ಸೋಂಕಿತರು 1912 ಅಥವಾ 108 ಕಾಲ್ ಸೆಂಟರ್ಗೆ ಕರೆ ಮಾಡಿ. ಬುಕ್ ಮಾಡದೆಯೇ ಟ್ರಯೇಜ್ ಕೇಂದ್ರಕ್ಕೆ ಸೀದಾ ನಡೆದುಹೋಗಬಹುದು.
ಕಾಯ್ದಿರಿಸಬೇಕಂತಿಲ್ಲ ಕೊವಿಡ್ ಕೇರ್ ಸೆಂಟರ್ಗಳಿಗೆ ಇನ್ನುಮುಂದೆ ಕಾಯ್ದಿರಿಸುವ ಪ್ರಕ್ರಿಯೆ ಇಲ್ಲ. ನೇರವಾಗಿ ಕೊವಿಡ್ ಕೇರ್ ಸೆಂಟರ್ಗಳಿಗೆ ದಾಖಲಾಗಬಹುದು ಎಂದು ಟ್ವೀಟ್ ಮೂಲಕ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಮಾಹಿತಿ ನೀಡಿದ್ದಾರೆ. ಹೆಚ್ಚಿನ ಮಾಹಿತಿಗೆ ಸಹಾಯವಾಣಿ 080 22493200 ಹಾಗೂ 080 22493201ಗೆ ಕರೆ ಮಾಡುವಂತೆ ಆಯುಕ್ತರು ಮನವಿ ಮಾಡಿದ್ದಾರೆ.
https://www.facebook.com/628402897294978/posts/2165119993623253/
(Bengaluru decentralises COVID 19 management sets up 28 triage centres says BBMP Commissioner Gaurav Gupta) ಬೆಂಗಳೂರು ಸಂಕಷ್ಟದಲ್ಲಿದೆ, ಹೆಚ್ಚುವರಿ ಬೆಡ್, ಆಕ್ಸಿಜನ್ ಅಗತ್ಯ: ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ
Published On - 11:00 am, Wed, 12 May 21