ಬೆಂಗಳೂರು: ಹೆಚ್ಚಾಯ್ತು ಡೆಂಗ್ಯೂ, ಮನೆ ಬಳಿ ಸ್ವಚ್ಛತೆ ಕಾಪಾಡದಿದ್ದರೆ ಬೀಳಲಿದೆ ಭಾರೀ ಮೊತ್ತದ ದಂಡ

ಬೆಂಗಳೂರಿನಲ್ಲಿ ಡೆಂಗ್ಯೂ ಪ್ರಕರಣಗಳು ಏರಿಕೆಯಾಗುತ್ತಿವೆ. ಕಳೆದ ವಾರ 210 ಪ್ರಕರಣಗಳು ವರದಿಯಾಗಿವೆ. ಹೀಗಾಗಿ ಸ್ವಚ್ಛತೆ ಕಾಪಾಡದೆ ಡೆಂಗ್ಯೂ ಹರಡುವ ಸೊಳ್ಳೆಗಳ ಉತ್ಪತ್ತಿಗೆ ಕಾರಣರಾಗುವವರಿಗೆ ಭಾರಿ ಮೊತ್ತದ ದಂಡ ವಿಧಿಸಲು ಬಿಬಿಎಂಪಿ ಹಾಗೂ ಆರೋಗ್ಯ ಇಲಾಖೆ ಮುಂದಾಗಿವೆ. ದಂಡದ ಮೊತ್ತದ ವಿವರ ಇಲ್ಲಿದೆ.

ಬೆಂಗಳೂರು: ಹೆಚ್ಚಾಯ್ತು ಡೆಂಗ್ಯೂ, ಮನೆ ಬಳಿ ಸ್ವಚ್ಛತೆ ಕಾಪಾಡದಿದ್ದರೆ ಬೀಳಲಿದೆ ಭಾರೀ ಮೊತ್ತದ ದಂಡ
ಸಾಂದರ್ಭಿಕ ಚಿತ್ರ
Updated By: Ganapathi Sharma

Updated on: Jul 22, 2025 | 9:36 AM

ಬೆಂಗಳೂರು, ಜುಲೈ 22: ಬೆಂಗಳೂರು (Bengaluru) ನಗರದಲ್ಲಿ ಕಳೆದ ಕೆಲವು ದಿನಗಳಿಂದ ಮಳೆ ಹೆಚ್ಚಾಗರುವ ಕಾರಣ ಡೆಂಗ್ಯೂ (Dengue) ಪ್ರಕರಣಗಳ ಸಂಖ್ಯೆಯಲ್ಲಿಯೂ ಗಣನೀಯ ಏರಿಕೆ ಕಂಡುಬಂದಿದೆ. ಕಳೆದ ಒಂದು ವಾರದ ಅವಧಿಯಲ್ಲಿ 210 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು 1582 ಸಕ್ರಿಯ ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿವೆ. ಜನವರಿಯಿಂದ ಜುಲೈ ವರೆಗಿನ ಡೆಂಗ್ಯೂ ಪ್ರಕರಣಗಳ ಸಂಖ್ಯೆ 2800 ದಾಟಿದೆ. ಇದು ನಗರವಾಸಿಗಳಲ್ಲಿ ಕಳವಳಕ್ಕೆ ಕಾರಣವಾಗಿದೆ. ಮತ್ತೊಂದೆಡೆ, ಬಿಬಿಎಂಪಿ ಹಾಗೂ ಆರೋಗ್ಯ ಇಲಾಖೆಗಳು ರೋಗ ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಕಠಿಣ ಕ್ರಮಕ್ಕೆ ಮುಂದಾಗಿದೆ.

ಸ್ವಚ್ಛತೆ ಕಾಪಾಡದವರಿಗೆ ದಂಡ

ಡೆಂಗ್ಯೂ ಪ್ರಕರಣಗಳ ಹೆಚ್ಚಳದ ಬೆನ್ನಲ್ಲೇ ಇದೀಗ ಬಿಬಿಎಂಪಿ ವ್ಯಾಪ್ತಿಯಲ್ಲಿ ಆರೋಗ್ಯ ಇಲಾಖೆ ಮತ್ತೆ ದಂಡ ಪ್ರಯೋಗ ಮುಂದುವರಿಸಲು ಆರಂಭಿಸಿದೆ. ನೀರು ನಿಂತ ಕಡೆಗಳಲ್ಲಿ ಹಾಗೂ ಸ್ವಚ್ಛತೆ ಇಲ್ಲದ ಕಡೆಯಲ್ಲಿ ಡೆಂಗ್ಯೂ ಹರಡುವ ಸೊಳ್ಳೆಗಳು ಉತ್ಪತ್ತಿಯಾಗುತ್ತಿವೆ. ಮನೆಗಳು, ಕಚೇರಿ, ಖಾಲಿ ನಿವೇಶನಗಳು ಹಾಗೂ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡದವರ ವಿರುದ್ಧ ದಂಡ ವಿಧಿಸಲಾಗುತ್ತಿದೆ.

ಡೆಂಗ್ಯೂ ತಡೆಗೆ ದಂಡ: ಯಾರಿಗೆ ಎಷ್ಟು?

ಸ್ವಚ್ಛತೆ ಕಾಪಾಡದವರಿಗೆ ದಂಡ ವಿಧಿಸಲು ಕಳೆದ ವರ್ಷ ಇಲಾಖೆ ಮುಂದಾಗಿತ್ತು. ಇದೀಗ ಮತ್ತೆ ಆ ನಿಟ್ಟಿನಲ್ಲಿ ಕ್ರಮಕ್ಕೆ ಮುಂದಾಗಿದೆ.

ಇದನ್ನೂ ಓದಿ
ರಸ್ತೆಯಲ್ಲಿ ಬರುತ್ತಿದ್ದ ಕಾರಿಗೆ ಏಕಾಏಕಿ ಅಡ್ಡಬಂದ ಕಾಡಾನೆ: ವಿಡಿಯೋ ವೈರಲ್
ಯುವಕನ ಜೊತೆ ಓಡಿ ಹೋದ ಮಗಳು, ಪೊಲೀಸ್ ಠಾಣೆ ಎದುರೇ ತಂದೆ ಆತ್ಮಹತ್ಯೆ
ಬಿಕ್ಲು ಶಿವ ಕೊಲೆ ಕೇಸ್: ಬಗೆದಷ್ಟು ಸ್ಫೋಟಕ ಮಾಹಿತಿ, ನಟ-ನಟಿಯರ ಜತೆಗೂ ನಂಟು
ಹೆಚ್ಚಿದ ಡೆಂಗ್ಯೂ: ಮನೆ ಸುತ್ತ ಸ್ವಚ್ಛತೆ ಕಾಪಾಡದಿದ್ದರೆ ಬೀಳಲಿದೆ ದಂಡ
  • ಮನೆಗಳು, ನಗರ ಪ್ರದೇಶ: 800 ರೂಪಾಯಿ
  • ಗ್ರಾಮೀಣ ಪ್ರದೇಶ: 400 ರೂಪಾಯಿ
  • ⁠ವಾಣಿಜ್ಯ ಸಂಸ್ಥೆ, ಶಾಲಾ ಕಾಲೇಜು, ರೆಸ್ಟೋರೆಂಟ್ , ಹೋಟೆಲ್, ಸೂಪರ್ ಮಾರ್ಕೆಟ್ , ಅಂಗಡಿ , ಪಾರ್ಕ್ , ಥಿಯೇಟರ್ (ನಗರ ಪ್ರದೇಶ): 2000 ರೂಪಾಯಿ
  • ⁠ಗ್ರಾಮೀಣ ಪ್ರದೇಶ: 1000 ರೂಪಾಯಿ
  • ಖಾಲಿ ನಿವೇಶನ , ನಿರ್ಮಾಣ ಕಾರ್ಯ , ಜಮೀನು (ನಗರ ಪ್ರದೇಶ): 4000 ರೂಪಾಯಿ
  • ⁠ಗ್ರಾಮೀಣ ಪ್ರದೇಶ – 2000 ರೂಪಾಯಿ

ಇದನ್ನೂ ಓದಿ: ಬೆಂಗಳೂರಿನಲ್ಲಿ ಹೆಚ್ಚಿದ ಡೆಂಗ್ಯೂ: ಎಚ್ಚರ, ಮನೆ ಸುತ್ತ ಸ್ವಚ್ಛತೆ ಕಾಪಾಡದಿದ್ದರೆ ಬೀಳಲಿದೆ ದಂಡ

ಖಾಸಗಿ ನಿವೇಶನ, ಜಾಗ ಅಥವಾ ಸ್ವತ್ತುಗಳಲ್ಲಿ‌ ಸೊಳ್ಳೆ ಉತ್ಪತ್ತಿ ಕಂಡು ಬಂದಲ್ಲಿ ಮೊದಲಿಗೆ ಎಚ್ಚರಿಕೆ ನೀಡಿ, ನಂತರ ಅದಕ್ಕೆ ಸ್ಪಂದಿಸದಿದ್ದರೆ ಮೊದಲ ಹಂತದಲ್ಲಿ 50 ರೂ. ದಂಡ ವಿಧಿಸುವ ಬಗ್ಗೆ ಕಳೆದ ವರ್ಷ ಕ್ರಮ ಕೈಗೊಳ್ಳಲಾಗಿತ್ತು. ನಂತರ ಆ ಸ್ಥಳ ಸ್ವಚ್ಛವಾಗುವ ತನಕ ಪ್ರತಿ ನಿತ್ಯ 15 ರೂ. ದಂಡ ವಿಧಿಸಲು ತೀರ್ಮಾನಿಸಲಾಗಿತ್ತು. ಆದರೆ, ಈ ವರ್ಷ ಬರೋಬ್ಬರಿ ದಂಡ ವಿಧಿಸಲು ಇಲಾಖೆ ಮುಂದಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ