ಬೆಂಗಳೂರು: ವಿಚ್ಛೇದಿತ ಪತಿಯನ್ನು ಹತ್ಯೆಗೈಯಲು ಮಾಜಿ ಪತ್ನಿ ಸುಪಾರಿ ನೀಡಿದ ಆರೋಪ
ವಿಚ್ಛೇದಿತ ಪತಿಯನ್ನು ಹತ್ಯೆಗೈಯಲು ಮಾಜಿ ಪತ್ನಿ 10 ಲಕ್ಷಕ್ಕೆ ಸುಪಾರಿ ನೀಡಿದ್ದಾಳೆ ಎಂದು ಆರೋಪಿಸಿ ಪತಿ ಪ್ರವೀಣ್ ಬೆಂಗಳೂರಿನ ಆರ್.ಟಿ.ನಗರ ಠಾಣೆಗೆ ದೂರು ನೀಡಿರುವ ಘಟನೆ ನಡೆದಿದೆ.
ಬೆಂಗಳೂರು: ವಿಚ್ಛೇದಿತ ಪತಿಯನ್ನ ಅಪಹರಿಸಿ ಹತ್ಯೆ ಮಾಡಲು ಸುಪಾರಿ ನೀಡಿದ್ದಾಳೆ ಎಂದು ಆರೋಪಿಸಿ ಮಾಜಿ ಪತ್ನಿಯ ಮೇಲೆ ಬೆಂಗಳೂರಿನ ಆರ್.ಟಿ.ನಗರ ಠಾಣೆಗೆ ವಿಚ್ಛೇದಿತ ಪತಿ ಪ್ರವೀಣ್ ದೂರು ನೀಡಿರುವ ಘಟನೆ ನಡೆದಿದೆ. ಪ್ರವೀಣ್ ಮಾಜಿ ಪತ್ನಿ ಸಂಧ್ಯಾ, ತಂದೆ ಸೇರಿದಂತೆ 8 ಜನರ ವಿರುದ್ಧ FIR ಹಾಕಲಾಗಿದ್ದು, ಮನ್ಸೂರ್ ಅಲಿಯಾಸ್ ದೂನ್ ಎಂಬಾತನಿಗೆ10 ಲಕ್ಷ ರೂಪಾಯಿಗೆ ಸುಪಾರಿ ನೀಡಿದ್ದಾರೆ. ಒಂದು ದಿನ ಕಾರಿನಲ್ಲಿ ಬೆಂಗಳೂರು, ಚನ್ನಪಟ್ಟಣದಲ್ಲಿ ಸುತ್ತಾಡಿಸಿ ಐದಾರು ಜನರು ಸೇರಿ ಪ್ರವೀಣ್ ಮೇಲೆ ಹಲ್ಲೆ ಮಾಡಿದ್ದು, ನಿಮ್ಮ ಮಾಜಿ ಪತ್ನಿ 10 ಲಕ್ಷಕ್ಕೆ ನಿನಗೆ ಸುಪಾರಿ ನೀಡಿದ್ದಾರೆ, ನೀನು 15 ಲಕ್ಷ ನೀಡಿದರೆ ನಿಮ್ಮನ್ನು ಬಿಡುತ್ತೇವೆಂದು ಹೇಳಿ 2.75 ಲಕ್ಷ ರೂ ಪಡೆದು ಬಿಡುಗಡೆ ಮಾಡಿದ್ದಾರೆ ಎಂದು ಪ್ರವೀಣ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಅಪ್ರಾಪ್ತೆಯನ್ನು ಪ್ರೀತಿಸುವ ನಾಟಕವಾಡಿ ಅತ್ಯಾಚಾರವೆಸಗಿದ್ದ ಪ್ರಕರಣ; 10 ವರ್ಷ ಶಿಕ್ಷೆ ನೀಡಿದ ಕೋರ್ಟ್
ಚಾಮರಾಜನಗರ: ಅಪ್ರಾಪ್ತ ಬಾಲಕಿಯನ್ನು ಪ್ರೀತಿಸುವ ನಾಟಕವಾಡಿ ಅತ್ಯಾಚಾರವೆಸಗಿದ ಇಬ್ಬರು ಹಾಗೂ ಸಹಕರಿಸಿದ ಐದು ಮಂದಿ ಸೇರಿ ಒಟ್ಟು 7 ಯುವಕರಿಗೆ ಪೋಕ್ಸೋ ಕಾಯ್ದೆಯಡಿ ಚಾಮರಾಜನಗರದಮಕ್ಕಳ ಸ್ನೇಹಿ ಹಾಗೂ 1ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆಯನ್ನ ನೀಡಿದೆ. ಜೊತೆಗೆ ಸಂತ್ರಸ್ತ ಬಾಲಕಿಗೆ ಕಾನೂನು ಸೇವಾ ಪ್ರಾಧಿಕಾರದಿಂದ 2 ಲಕ್ಷ ಪರಿಹಾರ ನೀಡುವಂತೆ ಆದೇಶ ಹೊರಡಿಸಿದೆ.
ಚಾಮರಾಜನಗರದ ಕ್ರಿಶ್ಚಿಯನ್ ಕಾಲೋನಿಯ ಮಿನಾಜ್ ಖಾನ್, ಕೆ.ಪಿ.ಮೊಹಲ್ಲಾದ ಸಲ್ಮಾನ್ ಖಾನ್, ಮಂಡ್ಯದ ಶಾರುಖ್ ಖಾನ್, ಮೊಹಮ್ಮದ್ ಅಮೀರ್, ಮೈಸೂರಿನ ಶಾಂತಿನಗರದ ಸೈಯದ್ ಉಮರ್ ಚಾಮರಾಜನಗರದ ಕ್ರಿಶ್ಚಿಯನ್ ಕಾಲೋನಿಯ ಮಸ್ತಾಖಿಮ್ ಖಾನ್, ಬೆಂಗಳೂರಿನ ಬೊಮ್ಮನಹಳ್ಳಿಯ ವಹೀದ್ ಅಹ್ಮದ್ ಸೇರಿ ಏಳು ಜನ ಅಪ್ರಾಪ್ತೆ ಜೊತೆ ಸರಸದ ಫೋಟೋ ತೆಗೆದು ಬ್ಲಾಕ್ಮೇಲ್ ಮಾಡಿದ್ದರು. ಬಳಿಕ ಬಾಲಕಿಯನ್ನ ಅಪಹರಿಸಿ ಕರೆದೊಯ್ದು ಅತ್ಯಾಚಾರವೆಸಗಿದ್ದ ದುಷ್ಕರ್ಮಿಗಳು ಇದೀಗ ಜೈಲು ಸೇರಿದ್ದಾರೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ