ಅಂತೂ ಶಿವಾನಂದ ಸರ್ಕಲ್ ಸ್ಟೀಲ್ ಬ್ರಿಡ್ಜ್ ಓಪನ್! ಆದ್ರೆ ಒಂದು ಬದಿ ಓಡಾಟಕ್ಕೆ ಮಾತ್ರ ಅವಕಾಶ
ಈ ಸ್ಟೀಲ್ ಬ್ರಿಡ್ಜ್ 39 ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗಿರುವ 492 ಮೀಟರ್ ಉದ್ದದ ಬ್ರಿಡ್ಜ್. ಸದ್ಯ ಒಂದು ಭಾಗದಲ್ಲಿ ವಾಹನಗಳ ಓಡಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ. ಶೇಷಾದ್ರಿಪುರಂ ನಿಂದ ರೇಸ್ ಕೋರ್ಸ್ ಕಡೆಗೆ ಹೋಗಲು ಅವಕಾಶವಿದೆ.

ಬೆಂಗಳೂರು: ನಗರದ ಶಿವಾನಂದ ಸರ್ಕಲ್ ಬಳಿಯ ಸ್ಟೀಲ್ ಬ್ರಿಡ್ಜ್(Shivananda Circle Steel Bridge) ಸಂಚಾರಕ್ಕೆ ಮುಕ್ತವಾಗಿದೆ. 5 ವರ್ಷದ ಬಳಿಕ ಶಿವಾನಂದ ಸರ್ಕಲ್ ಸ್ಟೀಲ್ ಬ್ರಿಡ್ಜ್ ಓಪನ್ ಆಗಿದೆ. ಇದು ಬೆಂಗಳೂರಿನ ಮೊದಲ ಸ್ಟೀಲ್ ಬ್ರಿಡ್ಜ್ ಎಂಬ ಹೆಗ್ಗಳಿಕೆ ಪಾತ್ರವಾಗಿದೆ.
ಈ ಸ್ಟೀಲ್ ಬ್ರಿಡ್ಜ್ 39 ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗಿರುವ 492 ಮೀಟರ್ ಉದ್ದದ ಬ್ರಿಡ್ಜ್. ಸದ್ಯ ಒಂದು ಭಾಗದಲ್ಲಿ ವಾಹನಗಳ ಓಡಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ. ಶೇಷಾದ್ರಿಪುರಂ ನಿಂದ ರೇಸ್ ಕೋರ್ಸ್ ಕಡೆಗೆ ಹೋಗಲು ಅವಕಾಶವಿದೆ. 2017ರಲ್ಲಿ ಈ ಬ್ರಿಡ್ಜ್ನ ಕಾಮಗಾರಿ ಆರಂಭವಾಗಿತ್ತು. ಆದ್ರೆ ನಾನಾ ಕಾರಣಗಳಿಂದ ಕಾಮಗಾರಿ ವಿಳಂಬವಾಗಿ ಇದೀಗ ಒಂದು ಬದಿಯ ಬ್ರಿಡ್ಜ್ ಕಾಮಗಾರಿ ಮುಕ್ತಾಯಗೊಂಡಿದೆ. ಈ ಹಿನ್ನಲೆ ವಾಹನಗಳ ಓಡಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ರೇಸ್ ಕೋರ್ಸ್ ನಿಂದ ಶೇಷಾದ್ರಿಪುರಂ ಕಡೆಗಿನ ಡೌನ್ ರ್ಯಾಂಪ್ ಕಾಮಗಾರಿ ನಡೆಯುತ್ತಿರುವ ಹಿನ್ನಲೆ ಒಂದು ಬದಿಯಲ್ಲಿ ಮಾತ್ರ ಓಡಾಟಕ್ಕೆ ಅವಕಾಶವಿರಲಿದೆ.
ಈ ಬ್ರಿಡ್ಜ್ನ ಕಾಮಗಾರಿ ಶಿವಾನಂದ ಸರ್ಕಲ್ ಬಳಿ 2017ರ ಜೂನ್‌ನಲ್ಲಿ ಆರಂಭವಾಗಿತ್ತು. ಆದರೆ ಇದಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ಷೇಪ ಕೇಳಿ ಬಂದ ಹಿನ್ನೆಲೆ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ಮರಗಳ ತೆರವು, ಭೂಸ್ವಾಧೀನದಿಂದಾಗಿ ಸ್ಥಳೀಯರ ಕೆಂಗಣ್ಣಿಗೆ ಬ್ರಿಡ್ಜ್ ಗುರಿಯಾಗಿತ್ತು. ಸುಮಾರು ನಾಲ್ಕು ವರ್ಷಗಳ ಕಾಲ ಕೋರ್ಟ್ನಲ್ಲಿ ಪ್ರಕರಣ ನಡೆದಿತ್ತು. ಇದೀಗ IISC ವರದಿ ಪಡೆದುಕೊಂಡು ಸ್ಟೀಲ್ ಬ್ರಿಡ್ಜ್ ತೆರೆಯಲು ನ್ಯಾಯಾಲಯ ಅನುಮತಿ ನೀಡಿದೆ.
ಆರಂಭದಲ್ಲಿ ಬಿಬಿಎಂಪಿ 9 ತಿಂಗಳ ಅವಧಿಯಲ್ಲಿ ಸುಮಾರು 19 ಕೋಟಿ ರೂ. ಬಜೆಟ್ ಹಾಕಿತ್ತು. ಈಗ ಕಾರಣಾಂತರಗಳಿಂದ 39 ಕೋಟಿ ರೂ. ವೆಚ್ಚದಲ್ಲಿ 492 ಮೀಟರ್ ಉದ್ದದ ಸ್ಟೀಲ್ ಬ್ರಿಡ್ಜ್ ನಿರ್ಮಾಣ ಮಾಡಲಾಗುತ್ತಿದೆ. ಈ ಬ್ರಿಡ್ಜ್ನಿಂದ ಮೆಜೆಸ್ಟಿಕ್, ಚಾಲುಕ್ಯ ಸರ್ಕಲ್, ವಿಧಾನಸೌಧ, ಮಲ್ಲೇಶ್ವರ ಸೇರಿದಂತೆ ಹಲವು ಏರಿಯಾಗಳಿಗೆ ಟ್ರಾಫಿಕ್ ಇಲ್ಲದೆ ಸಂಚಾರ ಮಾಡಬಹುದು. ರೇಸ್ ಕೋರ್ಸ್ನಿಂದ ಸಿಗ್ನಲ್ ಇಲ್ಲದೆ ಶೇಷಾದ್ರಿಪುರಕ್ಕೆ ತೆರಳಲು ಬ್ರಿಡ್ಜ್ ಸಹಕಾರಿಯಾಗುತ್ತದೆ. ಮುಂದಿನ ದಿನಗಳಲ್ಲಿ ಟ್ರಾಫಿಕ್ ಸಮಸ್ಯೆ ಎದುರಾದರೆ ಲೂಪಿಂಗ್ ವ್ಯವಸ್ಥೆ ಮಾಡುವಂತೆ ನಿರ್ಮಾಣ ಮಾಡಲಾಗುತ್ತಿದೆ.
Published On - 2:45 pm, Tue, 16 August 22