ಬೆಂಗಳೂರು: ಯೇಸು ಕ್ರಿಸ್ತ ಕನಸಿನಲ್ಲಿ ಬಂದಿದ್ದರಿಂದ ಶಿವಕುಮಾರ್​ ಸ್ವಾಮೀಜಿ ಪುತ್ಥಳಿ ವಿರೋಪಗೊಳಿಸಿದೆ; ಆರೋಪಿ

ಬೆಂಗಳೂರಿನ ಗಿರಿನಗರದಲ್ಲಿ ಶಿವಕುಮಾರ್ ಸ್ವಾಮೀಜಿ ಅವರ ಪುತ್ಥಳಿಯನ್ನು ವಿರೂಪಗೊಳಿಸಿದ ಆರೋಪದ ಮೇಲೆ ಒಬ್ಬ ಫುಡ್ ಡೆಲಿವರಿ ಬಾಯ್ ಅನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಶ್ರೀಕೃಷ್ಣ ಎಂಬಾತ ಕ್ರೈಸ್ತ ಧರ್ಮದ ಪ್ರಭಾವಕ್ಕೆ ಒಳಗಾಗಿದ್ದನು ಮತ್ತು ಯೇಸು ಕ್ರಿಸ್ತನ ಕನಸಿನ ಪ್ರಭಾವದಿಂದಾಗಿ ಈ ಕೃತ್ಯ ಎಸಗಿದ್ದಾನೆ ಎಂದು ಹೇಳಿಕೆ ನೀಡಿದ್ದಾನೆ.

ಬೆಂಗಳೂರು: ಯೇಸು ಕ್ರಿಸ್ತ ಕನಸಿನಲ್ಲಿ ಬಂದಿದ್ದರಿಂದ ಶಿವಕುಮಾರ್​ ಸ್ವಾಮೀಜಿ ಪುತ್ಥಳಿ ವಿರೋಪಗೊಳಿಸಿದೆ; ಆರೋಪಿ
ಶಿವಕುಮಾರ ಸ್ವಾಮೀಜಿ

Updated on: Dec 06, 2024 | 1:51 PM

ಬೆಂಗಳೂರು, ಡಿಸೆಂಬರ್​ 06: ಗಿರಿನಗರ ಸಮೀಪದ ವೀರಭದ್ರನಗರ ಬಸ್​ ನಿಲ್ದಾಣ ಬಳಿಯ ಶಿವಕುಮಾರ್​ ಸ್ವಾಮೀಜಿಯರ (Shivakumar Swamiji) ಪುತ್ಥಳಿಯನ್ನು ವಿರೂಪಗೊಳಿಸಿದ್ದ ಆರೋಪಿಯನ್ನು ಪೊಲೀಸರು (Police) ಬಂಧಿಸಿದ್ದಾರೆ. ಫುಡ್​ ಡೆಲೆವರಿ ಬಾಯ್​ ಶ್ರೀಕೃಷ್ಣ (37) ವಿರೂಪಗೊಳಿಸಿದ ಆರೋಪಿ. ಐದು ವರ್ಷಗಳ ಹಿಂದೆ ಜಯ ಕರ್ನಾಟಕ ಜನಪರ ವೇದಿಕೆ ಸಂಘಟನೆಯು ಪ್ರತಿಷ್ಠಾಪಿಸಿತ್ತು.

ನವೆಂಬರ್​ 30ರ ತಡರಾತ್ರಿ 1:30ರ ಸುಮಾರಿಗೆ ಆರೋಪಿ ಶಿವಕೃಷ್ಣ ಶಿವಕುಮಾರ್​ ಸ್ವಾಮೀಜಿ ಅವರ ಪುತ್ಥಳಿ ವಿರೂಪಗೊಳಿಸಿ ಪರಾರಿಯಾಗಿದ್ದನು. ಶಿವಕುಮಾರ ಸ್ವಾಮೀಜಿಯವರ ಪುತ್ಥಳಿ ವಿರೂಪಗೊಳಿಸಿರುವುದನ್ನು ಖಂಡಿಸಿ ಸ್ಥಳೀಯರು ಮತ್ತು ಅಖಿಲ ಭಾರತ ವೀರಶೈವ ಮಹಾಸಭಾ ಸದಸ್ಯರು ಪ್ರತಿಭಟನೆ ನಡೆಸಿದ್ದರು.

ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಗಿರಿನಗರ ಠಾಣೆ ಪೊಲೀಸರು, ದೂರು ಸ್ವೀಕರಿಸಿದರು. ಬಳಿಕ ಸ್ಥಳ ಪರಿಶೀಲನೆ ನಡೆಸಿದರು. ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಆರೋಪಿ ಶ್ರೀಕೃಷ್ಣನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕ್ರೈಸ್ತ ಧರ್ಮದ ಪ್ರಭಾವಕ್ಕೆ ಒಳಗಾಗಿದ್ದ ಆರೋಪಿ

ಶ್ರೀಕೃಷ್ಣನನ್ನು ವಿಚಾರಣೆಗೆ ಒಳಪಡಿಸಿದಾಗ ಹಲವು ವಿಚಾರಗಳನ್ನು ಶ್ರೀಕೃಷ್ಣ ಬಾಯಿಬಿಟ್ಟಿದ್ದಾನೆ. ಯೇಸು ಕ್ರಿಸ್ತ ತನ್ನ ಕನಸಿನಲ್ಲಿ ಬಂದಿದ್ದು, ಪುತ್ಥಳಿ ನಾಶಪಡಿಸಲು ಅದೇ ಪ್ರೇರಣೆ ನೀಡಿತ್ತು ಎಂದು ಹೇಳಿದ್ದಾನೆ.

ಅವಿವಾಹಿತನಾದ ಶ್ರೀಕೃಷ್ಣ ಮಾನಸಿಕ ಖಿನ್ನತೆಗೆ ಒಳಗಾಗಿದ್ದನು ಎನ್ನಲಾಗಿದೆ. ಆತನ ಆರೋಗ್ಯ ತಪಾಸಣೆ ನಡೆಸಲಾಗಿದೆ ಕ್ರೈಸ್ತ ಧರ್ಮದ ಪ್ರಭಾವಕ್ಕೆ ಒಳಗಾಗಿ ಮೂರು ವರ್ಷಗಳಿಂದ ಆ ಧರ್ಮವನ್ನು ಪಾಲಿಸುತ್ತಿದ್ದನು. ಆರೋಪಿ ವಿರುದ್ಧ ಬಿಎನ್​ಎಸ್​ 324 (4) ಸೆಕ್ಷನ್​ ಅಡಿಯಲ್ಲಿ ದೂರು ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯ ಹೇಳಿಕೆ ಆಧಾರರಹಿತವಾಗಿದೆ. ಆರೋಪಿ ಹೇಳಿಕೆ ವೈಷಮ್ಯ ಹುಟ್ಟುಹಾಕುವ ಮತ್ತು ಕೋಮು ಉದ್ವಿಗ್ನತೆಯನ್ನು ಸೃಷ್ಟಿಸುವ ಪ್ರಯತ್ನದಂತೆ ತೋರುತ್ತದೆ ಎಂದು ಆರ್ಚ್‌ಬಿಷಪ್ ಪ್ರಕಟಣೆ ಹೊರಡಿಸಿದೆ.

ಬೆಂಗಳೂರಿನ ಆರ್ಚ್‌ಬಿಷಪ್ ಮತ್ತು ಕ್ಯಾಥೋಲಿಕ್ ಸಮುದಾಯವು “ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆಯನ್ನು ನಡೆಸುವಂತೆ ಪೊಲೀಸರನ್ನು ಒತ್ತಾಯಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ