ನೀವು ಮಠಕ್ಕೆ ಕಾಲಿಡಬೇಡಿ: ಡಿಕೆ ಶಿವಕುಮಾರ್​​ಗೆ ಪ್ರಣವಾನಂದ ಸ್ವಾಮೀಜಿ ಹೀಗೆ ಹೇಳಿದ್ಯಾಕೆ?

ಕರ್ನಾಟಕದಲ್ಲಿ ಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಚರ್ಚೆ ಜೋರಾಗಿದೆ. ಒಂದು ವೇಳೆ ಸಿಎಂ ಬದಲಾವಣೆಯಾದರೆ ತಮ್ಮ ಸಮುದಾಯಕ್ಕೆ ನೀಡುವಂತೆ ಲಿಂಗಾಯತ, ಒಕ್ಕಲಿಗ ಸ್ವಾಮೀಜಿಗಳು ಹೇಳಿಕೆ ನೀಡಿದ್ದಾರೆ. ಇದಕ್ಕೆ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿ ಸ್ವಾಮೀಜಿಗಳು ರಾಜಕೀಯಕ್ಕೆ ಬರಬೇಡಿ ಎಂದು ಹೇಳಿದ್ದಾರೆ. ಇದೀಗ ಈ ಹೇಳಿಕೆಗೆ ಪ್ರಣವಾನಂದ ಸ್ವಾಮೀಜಿ ತಿರುಗೇಟು ನೀಡಿದ್ದಾರೆ.

ನೀವು ಮಠಕ್ಕೆ ಕಾಲಿಡಬೇಡಿ: ಡಿಕೆ ಶಿವಕುಮಾರ್​​ಗೆ ಪ್ರಣವಾನಂದ ಸ್ವಾಮೀಜಿ ಹೀಗೆ ಹೇಳಿದ್ಯಾಕೆ?
ಪ್ರಣವಾನಂದ ಸ್ವಾಮೀಜಿ, ಡಿಕೆ ಶಿವಕುಮಾರ್
Follow us
| Updated By: ರಮೇಶ್ ಬಿ. ಜವಳಗೇರಾ

Updated on: Jun 30, 2024 | 4:50 PM

ಯಾದಗಿರಿ (ಜೂ.30): ಸ್ವಾಮೀಜಿಗಳು ರಾಜಕೀಯ ತಂಟೆಗೆ ಬರಬೇಡಿ ಎನ್ನುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಹೇಳಿಕೆಗೆ ಪ್ರಣವಾನಂದ ಸ್ವಾಮೀಜಿ ಕೆಂಡಾಮಂಡಲರಾಗಿದ್ದಾರೆ. ಸ್ವಾಮೀಜಿಗಳು ಅವರ ಅಭಿಪ್ರಾಯ ವ್ಯಕ್ತಪಡಿಸುವಾಗ ಮಂತ್ರಿಗಳು, ರಾಜಕೀಯ ನಾಯಕರು ಅಪಮಾನಿಸಬೇಡಿ. ಅಪಮಾನಿಸಿದ್ರೆ ಮುಂದಿನ ದಿನಗಳಲ್ಲಿ ಮಠಕ್ಕೆ ಕಾಲಿಡಬೇಡಿ. ನೀವು ಮಾಡಿದ್ದೆಲ್ಲವನ್ನೂ ಸರಿ ಅಂತ ಒಪ್ಪಿಕೊಳ್ಳೋಕೆ ಸಿದ್ಧರಿಲ್ಲ ಎಂದುಕಿಡಿಕಾರಿದ್ದಾರೆ.

ಯಾದಗಿರಿಯಲ್ಲಿ ಇಂದು (ಜೂನ್ 30) ಮಾತನಾಡಿದ ಪ್ರಣವಾನಂದ ಸ್ವಾಮೀಜಿ ,ಚಂದ್ರಶೇಖರ ಶ್ರೀಗಳು ಹೇಳಿದಾಗ ಎಲ್ಲರೂ ಸ್ವಾಗತಿಸಿದರು. ಡಿ.ಕೆ.ಸುರೇಶ್​, ಬಾಲಕೃಷ್ಣ, ಚಲುವರಾಯಸ್ವಾಮಿ ಸ್ವಾಗತಿಸಿದ್ರು. ಒಂದು ಕಡೆ ಶ್ರೀಗಳ ಹೇಳಿಕೆಯನ್ನ ಸ್ವಾಗತ ಮಾಡೋದು. ಮತ್ತೊಂದು ಕಡೆ ರಾಜಕೀಯಕ್ಕೆ ಬರಬೇಡ ಎಂದು ಹೇಳುವುದು. ಇದು ಡಿ.ಕೆ.ಶಿವಕುಮಾರ ಅವರ ರಾಜಕೀಯ ಗಿಮಿಕ್. ನಮಗೆ ನೋವಾಗಿದಕ್ಕೆ ನಾವು ಹೇಳ್ತಿದ್ದೇವೆ. ನಮಗೆ ಯಾರು ಡಿಸಿಎಂ ಸ್ಥಾನ ಕೊಟ್ಟಿಲ್ಲ.ಈಗಾಗಲೇ ಡಿ.ಕೆ.ಶಿವಕುಮಾರ್​​ ಉಪಮುಖ್ಯಮಂತ್ರಿ ಇದ್ದಾರೆ. ಜೊತೆಗೆ ಒಕ್ಕಲಿಗ ಸಮುದಾಯದ ಸಚಿವರು ಇದ್ದಾರೆ. ಚಂದ್ರಶೇಖರಶ್ರೀ ಅವರ ಸಮುದಾಯದ ಬಗ್ಗೆ ಮಾತಾಡಿದ್ದಾರೆ. ಆದ್ರೆ ಡಿ.ಕೆ.ಶಿವಕುಮಾರ್​ರದ್ದು ರಾಜಕೀಯ ಗಿಮಿಕ್​ನ ಭಾಗ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಸಿದ್ದರಾಮಯ್ಯ-ಡಿಕೆಶಿ ವಿರಾಟ್ ಕೊಹ್ಲಿ-ರೋಹಿತ್ ಇದ್ದಂತೆ: ವಚನಾನಂದ ಶ್ರೀ ಹೀಗೆ ಹೇಳಿದ್ಯಾಕೆ?

ನಮಗೆ ನೋವಾಗಿದ್ದಕ್ಕೆ ನಾವು ಹೇಳ್ತಿದ್ದೇವೆ. ನಮ್ಮ ಸಮುದಾಯಕ್ಕೆ ಯಾರೂ ಡಿಸಿಎಂ ಸ್ಥಾನ ಕೊಟ್ಟಿಲ್ಲ, ಅದೇ ಒಕ್ಕಲಿಗ ಸಮುದಾಯದಲ್ಲಿ ಈಗಾಗಲೇ ಡಿಸಿಎಂ ಆಗಿ ಡಿಕೆ ಶಿವಕುಮಾರ ಇದ್ದಾರೆ, ಸಚಿವರೂ ಇದ್ದಾರೆ. ಇಷ್ಟಾಗಿಯೂ ಚಂದ್ರಶೇಖರ್ ಸ್ವಾಮೀಜಿಯವರು ಅವರ ಸಮುದಾಯದ ಬಗ್ಗೆ ಮಾತನಾಡಿದ್ದಾರೆ. ಡಿಕೆ ಶಿವಕುಮಾರ್‌ಗೆ ಮುಖ್ಯಮಂತ್ರಿ ಆಗಲೆಂದು ಆಗ್ರಹಿಸಿದ್ದಾರೆ. ಆದರೆ ನಾವು ನಮ್ಮ ಸಮುದಾಯದವರು ಡಿಸಿಎಂ ಆಗಬೇಕೆಂದು ಆಗ್ರಹಿಸಿದರೆ ತಪ್ಪೇನು? ಎಂದು ಖಾರವಾಗಿ ಮಾತನಾಡಿದರು.

ಒಂದು ವೇಳೆ ಮುಖ್ಯಮಂತ್ರಿ ಸ್ಥಾನ ಬದಲಾದರೆ ಈಡಿಗ ಸಮುದಾಯದ ಬಿಕೆ ಹರಿಪ್ರಸಾದ್ ಅವರಿಗೆ ಸಿಎಂ ಸ್ಥಾನ ನೀಡಬೇಕು. ಇಲ್ಲ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಸಹ ಬಿಕೆ ಹರಿಪ್ರಸಾದ್‌ಗೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ