ಬೆಂಗಳೂರಲ್ಲಿ ಮನೆ ಬಾಡಿಗೆ ಬೇಕಾದರೇ ದ್ವಿತೀಯ ಪಿಯುಸಿಯಲ್ಲಿ ಶೇ.90ರಷ್ಟು ಅಂಕ ಕಡ್ಡಾಯ, ಪೋಸ್ಟ್​​ ವೈರಲ್​​

|

Updated on: Apr 28, 2023 | 3:28 PM

ಬೆಂಗಳೂರಲ್ಲಿ ಓರ್ವ ಮನೆ ಮಾಲಿಕ, ಮನೆ ಬಾಡಿಗೆಗೆ ಬೇಕಾದರೇ ದ್ವಿತೀಯ ಪಿಯುಸಿಯಲ್ಲಿ ಕಡ್ಡಾಯವಾಗಿ ಶೇ90 ರಷ್ಟು ಅಂಕ ಪಡೆದಿರಬೇಕು ಎಂಬ ನಿಯಮ ಹಾಕಿದ್ದಾರೆ.

ಬೆಂಗಳೂರಲ್ಲಿ ಮನೆ ಬಾಡಿಗೆ ಬೇಕಾದರೇ ದ್ವಿತೀಯ ಪಿಯುಸಿಯಲ್ಲಿ ಶೇ.90ರಷ್ಟು ಅಂಕ ಕಡ್ಡಾಯ, ಪೋಸ್ಟ್​​ ವೈರಲ್​​
ಸಾಂದರ್ಭಿಕ ಚಿತ್ರ (ಎಡಚಿತ್ರ) ವೈರಲ್​ ಆದ ಪೋಸ್ಟ್​ (ಬಲಚಿತ್ರ)
Follow us on

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಲ್ಲಿ (Bengaluru) ಮನೆ ಬಾಡಿಗೆಗೆ (House Rent) ಸಿಗುವುದು ಬಹಳ ಕಷ್ಟಕರ ಸಂಗತಿ. ಬೇರೆ ಬೇರೆ ಊರುಗಳಿಂದ ಬಂದು ನಗರದಲ್ಲಿ ವಾಸಿಸಲು ಬಯಸುವ ಜನರಿಗೆ ಬಾಡಿಗೆ ಮನೆ ಸಿಗುವುದು ದುರ್ಲಭವಾಗಿದೆ. To-Let ಅಂತ ಬೋರ್ಡ್​​​ ಕಂಡಮೇಲೆ ವಿಚಾರಿಸಲೆಂದು ಹೋದರೇ ಮನೆಯ ಮಾಲೀಕರು ಹಾಕುವ ಕಂಡಿಷನ್ಸ್ ಕೇಳಿದ್ರೆನೇ ಮೂರ್ಛೆ ಹೋಗುತ್ತದೆ. ಇತ್ತೀಚಿಗೆ ಮನೆ ಮಾಲೀಕರು ಕೇಳುವ ಡಾಕ್ಯುಮೆಂಟ್ಸ್​​ ಮತ್ತು ಪ್ರಶ್ನೆಗಳನ್ನು ಕೇಳಿಸಿಕೊಂಡರೇ ಜಾಬ್​ ಇಂಟರ್​​ವೀವ್​​ಗೆ​ ಬಂದಿದ್ದೀನಾ ಎಂದು ಅನಿಸದೆ ಇರದು. ಅದೇ ರೀತಿಯಾಗಿ ನಗರದಲ್ಲಿ ಓರ್ವ ಮನೆ ಮಾಲಿಕ, ಮನೆ ಬಾಡಿಗೆಗೆ ಬೇಕಾದರೇ ದ್ವಿತೀಯ ಪಿಯುಸಿಯಲ್ಲಿ ಕಡ್ಡಾಯವಾಗಿ ಶೇ90 ರಷ್ಟು ಅಂಕ ಪಡೆದಿರಬೇಕು ಎಂಬ ನಿಯಮ ಹಾಕಿದ್ದಾರೆ. ​​

ಹೌದು ವಿಚಿತ್ರವೆನಿಸಿದರು ಇದು ಸತ್ಯ. ಈ ಕುರಿತಾದ ಪೋಸ್ಟ್​​​​ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗುತ್ತಿದೆ. ಈ ಕುರಿತಾಗಿ ಶುಭ್ ಎಂಬುವರು ಟ್ವೀಟ್​ ಮಾಡಿ ಮನೆ ಕೊಡಿಸುವ ಬ್ರೋಕರ್​​ನೊಂದಿಗೆ ನಡೆಸಿದ ವಾಟ್ಸಾಪ್​ ಚಾಟ್​ನ್ನು ಸ್ಕ್ರೀನ್​​​​ ಶಾಟ್​ ತೆಗೆದು ಟ್ವಿಟರ್​​ನಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಬ್ಯಾಚುಲರ್ಸ್​ಗಳಿಗೆ ಬಾಡಿಗೆ ಮನೆ ಏಕೆ ಕೊಡಲ್ಲ ಗೊತ್ತಾ? ಟ್ವಿಟರ್​ನಲ್ಲಿ ಹರಿದಾಡುತ್ತಿರುವ ಫೋಟೋಗಳೇ ಹೇಳುತ್ತಿವೆ ಕಾರಣ

ವಾಟ್ಸಪ್​​ ಚಾಟ್​​ನಲ್ಲಿ ಮನೆ ಕೊಡಿಸುವ ಬ್ರೋಕರ್​​ ಹೇಳಿದ್ದಾರೆ, “ಲಿಂಕ್​ಡಿನ್​​ ಮತ್ತು ಟ್ವಿಟರ್​​ ಪ್ರೋಫೈಲ್​​ ಕಳಸಿ,    ಜೊತೆಗೆ ನಿಮ್ಮ ಕಂಪನಿ ಜಾಯನಿಂಗ್​ ಲೆಟರ್​​, ಅಂಕಪಟ್ಟಿ, ಮತ್ತು ಆಧಾರ್​ ಕಾರ್ಡ್​ ಅಥವಾ ಪ್ಯಾನ್​ ಕಾರ್ಡ್​​​​ ಕೇಳಿದ್ದಾರೆ. ಇಷ್ಟಕ್ಕೆ ಸುಮ್ಮನಾಗದೆ 150 ರಿಂದ 300 ಪದಗಳಲ್ಲಿ ನಿಮ್ಮ ಬಗ್ಗೆ ಬರೆದು ಪತ್ರವನ್ನು ಕಳುಹಿಸಿ” ಎಂದು ಮನೆ ಮಾಲಿಕರು ಕಂಡೀಷನ್ಸ್​ ಹಾಕಿದ್ದಾರೆ ಎಂದು ಮನೆ ಪಡೆಯುವವರಿಗೆ ಬ್ರೋಕರ್​​ ಮೆಸೆಜ್​ ಮಾಡಿದ್ದಾರೆ.

ನಂತರ ಮನೆ ಬಾಡಿಗೆ ಪಡೆಯುವವರು ಸರಿ ಎಂದು ಎಲ್ಲ ಡಾಕ್ಯುಮೆಂಟ್ಸ್​​ ​ ಮತ್ತು ಪತ್ರವನ್ನು ಬ್ರೋಕರ್​​ಗೆ ಕಳಸಿದ್ದಾರೆ. ಆ ಕಡೆಯಿಂದ ಬ್ರೋಕರ್​​ನ ರಿಪ್ಲೈ ಬಂದಿದ್ದು, “ನೀವು ದ್ವಿತೀಯ ಪಿಯುಸಿಯಲ್ಲಿ ಶೇ75 ರಷ್ಟು ಮಾತ್ರ ಅಂಕ ಪಡೆದಿದ್ದೀರಿ, ನಾವು ಮನೆ ನೀಡಲು ಕನಿಷ್ಠ ಶೇ90 ರಷ್ಟು ಅಂಕ ಪಡೆಯಬೇಕು. ಹೀಗಾಗಿ ನಿಮಗೆ ಮನೆ ಬಾಡಿಗೆ ಕೊಡಲು ಆಗುವುದಿಲ್ಲ ಎಂದು ಮನೆ ಮಾಲಿಕ ರಿಜೆಕ್ಟ್​​ ಮಾಡಿದ್ದಾರೆ” ಎಂದು ಬ್ರೋಕರ್​ ಹೇಳಿದ್ದಾರೆ. ಇದರಿಂದ ಆಶ್ಚರ್ಯಗೊಂಡ ಮನೆ ಬಾಡಿಗೆ ಪಡೆಯವ ವ್ಯಕ್ತಿ ಟೂ ಫನ್ನಿ ಎಂದು ಮರು ಉತ್ತರಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:18 pm, Fri, 28 April 23