ಪತ್ನಿ ಗೀತಾ ಕಾಂಗ್ರೆಸ್​ ಸೇರ್ಪಡೆಗೆ ಬೆಂಬಲಿಸಿದ ಶಿವರಾಜ್ ಕುಮಾರ್, ತಾವೂ ಪ್ರಚಾರಕ್ಕಿಳಿಯುವುದಾಗಿ ಘೋಷಿಸಿದ ಶಿವಣ್ಣ

ಪತ್ನಿ ಗೀತಾ ಕಾಂಗ್ರೆಸ್​ ಸೇರ್ಪಡೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆಗಳು ನಡೆಯುತ್ತಿವೆ. ಇನ್ನು ಈ ಬಗ್ಗೆ ಶಿವರಾಜ್​ ಕುಮಾರ್ ಅವರು ತಮ್ಮ ನಿಲುವು ಪ್ರಕಟಿಸಿದ್ದಾರೆ.

Follow us
ರಮೇಶ್ ಬಿ. ಜವಳಗೇರಾ
|

Updated on:Apr 28, 2023 | 9:43 AM

ಬೆಂಗಳೂರು: ನಟ ಶಿವರಾಜ್ ಕುಮಾರ್ ಅವರ ಪತ್ನಿ ಗೀತಾ ಶಿವರಾಜ್ ಕುಮಾರ್(Geetha Shivarajkumar)  ಇಂದು(ಏಪ್ರಿಲ್ 29) ಕಾಂಗ್ರೆಸ್ (Congress) ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ. ದೊಡ್ಮನೆ ಸೊಸೆ ಕಾಂಗ್ರೆಸ್​ ಸೇರುತ್ತಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆಗಳು ನಡೆದಿವೆ. ಕೆಲವರು ಗೀತಾ ಶಿವರಾಜ್​ ಕುಮಾರ್​ ಅವರ ಈ ನಡೆಯನ್ನು ತೀವ್ರವಾಗಿ ಖಂಡಿಸುತ್ತಿದ್ದರೆ, ಇನ್ನೂ ಕೆಲವರು ಸ್ವಾಗತಿಸಿದ್ದಾರೆ. ಇನ್ನು ಪತ್ನಿ ಗೀತಾ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಇದೀಗ ಸ್ವತಃ ಶಿವರಾಜ್ ಕುಮಾರ್ (Shivarajkumar)  ಬೆಂಬಲಿಸಿದ್ದಾರೆ. ಅಲ್ಲದೇ ಪತ್ನಿ ಜೊತೆ ತಾವು ಪ್ರಚಾರಕ್ಕೆ ಹೋಗುವುದಾಗಿ ಘೋಷಣೆ ಮಾಡಿದ್ದಾರೆ. ಇದರೊಂದಿಗೆ ದೊಡ್ಮನೆ ಬಲ ಕಾಂಗ್ರೆಸ್​ಗೆ ಸಿಕ್ಕಂತಾಗಿದೆ.

ಇದನ್ನೂ ಓದಿ: ಸೋದರನ ಕೈ ಬಲಪಡಿಸಲು ಇಂದು ಕಾಂಗ್ರೆಸ್ ಸೇರಲಿರುವ ಗೀತಾ ಶಿವರಾಜ್‌ ಕುಮಾರ್‌

ಗೀತಾ ಅವರು ಕಾಂಗ್ರೆಸ್​ ಸೇರ್ಪಡೆ ಬಗ್ಗೆ ಟಿವಿ9ನೊಂದಿಗೆ ಮಾತನಾಡಿರುವ ಶಿವರಾಜ್​ ಕುಮಾರ್​, ಗೀತಾ ಕಾಂಗ್ರೆಸ್​ ಪಕ್ಷಕ್ಕೆ ಸೇರುತ್ತಿರುವುದಕ್ಕೆ ಖುಷಿ ಆಗುತ್ತಿದೆ. ಹೊಸ ಬದಲಾವಣೆ ಬಯಸಿ ಗೀತಾ ಈ ನಿರ್ಧಾರ ಕೈಗೊಂಡಿದ್ದಾರೆ. ಗೀತಾ ಕೈಗೊಳ್ಳುವ ನಿರ್ಧಾರಕ್ಕೆ ನನ್ನ ಬೆಂಬಲ ಸದಾ ಇರುತ್ತೆ. ನಾಳೆಯಿಂದಲೇ ಗೀತಾ, ನಾನು ಪ್ರಚಾರದಲ್ಲಿ ಭಾಗಿಯಾಗುತ್ತೇವೆ. ನಾಳೆ ಸೊರಬ ಕ್ಷೇತ್ರದಲ್ಲಿ ಮಧು ಬಂಗಾರಪ್ಪ ಪರ ಗೀತಾ, ನಾನು ಪ್ರಚಾರ ಮಾಡುತ್ತೇವೆ. ಹಾಗೇ ಶಿರಸಿಯಲ್ಲೂ ಭೀಮಣ್ಣ ನಾಯ್ಕ(ಕಾಂಗ್ರೆಸ್ ಅಭ್ಯರ್ಥ) ಪರ ಗೀತಾ ಪ್ರಚಾರ ನಡೆಸಲಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಬದಲಾವಣೆ ಕೇಳುವುದು ಕರ್ತವ್ಯ ಎಂದ ಶಿವಣ್ಣ

ಪ್ರಚಾರದ ಯಾವ ರೀತಿ ಮಾಡಬೇಕು ಎನ್ನುವುದು ಫಿಕ್ಸ್ ಆಗಿಲ್ಲ. ಮಾಡಲಿದ್ದಾರೆ. ಎಷ್ಟು ಪ್ರೋಗಾಮ್ ಎನ್ನುವ ಬಗ್ಗೆ ಮಧು ಬಂದು ಚರ್ಚೆ ಮಾಡಲಿದ್ದಾರೆ. ಈಗಾಲೇ ಸ್ಪರ್ಧೆ ಮಾಡುವ ಹಿನ್ನಲೆ ಅವರ ಸ್ಟಾರ್ಜಿಗಳು ಮಾಡುತ್ತಿದ್ದಾರೆ. ಒಂದು ಬದಲಾವಣೆ ಕೇಳುವುದು ಕರ್ತವ್ಯ. ಅವರ ತಂದೆ ಬಂಗರಾಪ್ಪ ರಾಜಕೀಯದಲ್ಲಿದ್ದವರು. ಅವರ ಮಕ್ಕಳಾದ ಮಧು ಹಾಗೂ ಗೀತಾರಿಗೆ ರಾಜಕೀಯ ಹೇಳಿಕೊಡುವುದು ಬೇಡ. ಗೀತಾ ಸೇರ್ಪಡೆ ನನಗೆ ಖುಷಿ ತಂದಿದೆ. ಪ್ರತಿಯೊಬ್ಬರಿಗೂ ಅವರದ್ದೇ ಆದ ಐಡಿಯಾಲಜಿ ಇರತ್ತೆ ಎಂದರು.

ಎರಡು ವರ್ಷದಿಂದ ಶಕ್ತಿ ಧಾಮದ ಪ್ರೆಸಿಡೆಂಟ್ ಆಗಿದ್ದಾರೆ‌. ಸೊಶಿಯಲ್ ವರ್ಕ್ ಸ್ಟ್ರಾಂಗ್ ಮಾಡುತ್ತಿದ್ದಾರೆ. ಜೊತೆಗೆ ಮಕ್ಕಳಿಗೆ ಸ್ಕಿಲ್ ಡೆವಲಪ್ಮೆಂಟ್ ಕಲಿಸುತ್ತಿದ್ದಾರೆ. ಸುತ್ತಮುತ್ತ ಫ್ರೀ ಬೇಕಿಂಗ್ ಕ್ಯಾಂಪ್ ಮಾಡಿ ಜಾಗೃತಿ ಕೂಡ ಮೂಡಿಸಿದ್ದಾರೆ. ಇದೆಲ್ಲ ನೋಡಿದ್ರೆ ಸೋಶಿಯಲ್ ಸರ್ವಿಸ್ ಕಡೆ ಅವರಿಗೆ ಹೆಚ್ಚು ಒಲವಿದೆ. ಅವರ ಜೊತೆ ಯಾವಾಗಲು ಇರುತ್ತೇನೆ. ಅವರ ನಿರ್ಧಾರದ ಜೊತೆ ಸದಾ ಇರುತ್ತೆನೆ ಎಂದು ಶಿವರಾಜ್ ಕುಮಾರ್​ ಅವರು ತಮ್ಮ ಪತ್ನಿ ಜೊತೆ ಕೈಜೋಡಿಸುವುದಾಗಿ ಹೇಳಿದರು.

ಇಂದು ಗೀತಾ ಶಿವರಾಜ್ ಕುಮಾರ್ ಕೈ ಸೇರ್ಪಡೆ

ಇಂದು 12 ಗಂಟೆಗೆ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಗೀತಾ ಶಿವರಾಜ್​ ಕುಮಾರ್ ಅವರು ಅಧಿಕೃತವಾಗಿ ಡಿಕೆ ಶಿವಕುಮಾರ್ ಹಾಗೂ ಇತರೆ ಹಿರಿಯ ನಾಯಕರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ. ಇದರೊಂದಿಗೆ ಅಧಿಕೃತವಾಗಿ ರಾಜಕೀಯ ಪ್ರವೇಶ ಮಾಡಲಿದ್ದಾರೆ. ಇನ್ನು ಇದಕ್ಕೆ ಪತಿ ಶಿವರಾಜ್ ಕುಮಾರ್ ಅವರ ನಡೆ ಏನು ಎನ್ನುವುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿತ್ತು. ಇದೀಗ ಸ್ವತಃ ಶಿವಣ್ಣ, ಪತ್ನಿ ಗೀತಾಗೆ ಬೆಂಬಲ ಘೋಷಣೆ ಮಾಡಿದ್ದಾರೆ. ಅಲ್ಲದೇ ಅವರೊಂದಿಗೆ ಪ್ರಚಾರ ಮಾಡುವುದಾಗಿಯೂ ಸಹ ಸ್ಪಷ್ಟಪಡಿಸಿದಾರೆ. ಇದರೊಂದಿಗೆ ಕಾಂಗ್ರೆಸ್​ಗೆ ಸ್ಟಾರ್​ ತಾರಾಬಲ ಸಿಕ್ಕಂತಾಗಿದೆ.​

ಕಾಂಗ್ರೆಸ್​ಗೆ ತಾರಾಬಲ

ಹೌದು…ಗೀತಾ ಅವರು ಕಾಂಗ್ರೆಸ್​ ಸೇರ್ಪಡೆಗೆ ನಟ ಶಿವರಾಜ್ ಕುಮಾರ್ ಸಹ ಬೆಂಬಲಿಸಿದ್ದಾರೆ. ಅಲ್ಲದೇ ಅವರೊಂದಿಗೆ ಪ್ರಚಾರಕ್ಕೆ ಹೋಗುವುದಾಗಿ ಹೇಳಿದ್ದಾರೆ. ಸೊರಬದಲ್ಲಿ ಮಧು ಬಂಗಾರಪ್ಪ ಹಾಗೂ ಶಿರಸಿಯಲ್ಲಿ ಭೀಮಣ್ಣ ನಾಯ್ಕ ಪರ ಮಾತ್ರ ಪ್ರಚಾರ ಮಾಡಲಿದ್ದಾರೆ. ಆದರೂ ಸಹ ಅಕ್ಕ-ಪಕ್ಕದ ಕ್ಷೇತ್ರಗಳಲ್ಲಿ ಶಿವರಾಜ್​ ಕುಮಾರ್ ಅವರ ಪ್ರಚಾರದ ಪ್ರಭಾವ ಬೀರಲಿದೆ. ಸಾಕಷ್ಟು ಫ್ಯಾನ್ಸ್​ ಬೇಸ್​ ಹೊಂದಿರುವ ಶಿವಣ್ಣ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಬರುತ್ತಿರುವುದರಿಂದ ಕಾಂಗ್ರೆಸ್​ ತಾರಾಬಲ ಬಂದಂತಾಗಿದೆ.

2014ರ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗದಲ್ಲಿ ಜೆಡಿಎಸ್​ ಪಕ್ಷದಿಂದ ಗೀತಾ ಶಿವರಾಜ್​ಕುಮಾರ್ ಸ್ಪರ್ಧೆ ಮಾಡಿದ್ದರು. ಆ ಬಳಿಕ ಅವರು ಜೆಡಿಎಸ್ ಪಕ್ಷದಿಂದ ಹೊರಬಂದು ತಟಸ್ಥವಾಗಿ ಉಳಿದಿದ್ದರು. ಅಂದು ಕೂಡ ಮಧು ಬಂಗಾರಪ್ಪ ಅವರು ಜೆಡಿಎಸ್​ ಪಕ್ಷದಲ್ಲಿದ್ದರೂ ಸಹಜವಾಗಿಯೇ ಗೀತಾ ಅವರು ಜೆಡಿಎಸ್​ನಿಂದ ಸ್ಪರ್ಧೆ ಮಾಡಿದ್ದರು. ಆ ಬಳಿಕ ನಡೆದ ಬೆಳವಣಿಗೆಗಳಲ್ಲಿ ಮಧು ಬಂಗಾರಪ್ಪ ಅವರು ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಅವರನ್ನು ಹಿಂಬಾಲಿಸಿಕೊಂಡು ಗೀತಾ ಅವರು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ.

ಕರ್ನಾಟಕ ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:40 am, Fri, 28 April 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ