Karnataka Assembly Election: ಉತ್ತರ ಕನ್ನಡದಲ್ಲಿ 93 ಲಕ್ಷ, ಬೆಂಗಳೂರಿನಲ್ಲಿ 10 ಲಕ್ಷ ರೂ. ಜಪ್ತಿ
ಜಿಲ್ಲೆಯ ಕುಮಟಾ ತಾಲೂಕಿನ ಚಂದಾವರ ಚೆಕ್ಪೋಸ್ಟ್ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 93 ಲಕ್ಷ ಹಣವನ್ನ ಜಪ್ತಿ ಮಾಡಲಾಗಿದ್ದು, ಆಟೋ ಸಹಿತ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ.
ಉತ್ತರ ಕನ್ನಡ: ಜಿಲ್ಲೆಯ ಕುಮಟಾ(Kumta) ತಾಲೂಕಿನ ಚಂದಾವರ ಚೆಕ್ಪೋಸ್ಟ್ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 93 ಲಕ್ಷ ಹಣವನ್ನ ಜಪ್ತಿ ಮಾಡಲಾಗಿದೆ. ಆಟೋದಲ್ಲಿ ಸಾಗಾಟ ಮಾಡುತಿದ್ದ ವೇಳೆ ಚುನಾವಣಾಧಿಕಾರಿಗಳು ತಪಾಸಣೆ ನಡೆಸಿದ್ದು, ಈ ವೇಳೆ ಅಕ್ರಮ ಹಣ ಇರುವುದು ಪತ್ತೆಯಾಗಿದೆ. ಈ ಹಣವನ್ನ ಶಿವಮೊಗ್ಗದಿಂದ ಕುಮಟಾಕ್ಕೆ ತರಲಾಗುತ್ತಿದ್ದು, KA14 C 4874 ನೊಂದಣಿ ಹೊಂದಿರುವ ಆಟೋವನ್ನ ಹಾಗೂ ಇಬ್ಬರು ಆರೋಪಿಗಳನ್ನ ವಶಕ್ಕೆ ಪಡೆಯಲಾಗಿದೆ. ಈ ಕುರಿತು ಕುಮಟಾ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಸಿಎಂ ನಿವಾಸದ ಕೊಂಚ ದೂರದಲ್ಲೇ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 10 ಲಕ್ಷ ಹಣ ಪತ್ತೆ
ಬೆಂಗಳೂರು: ಸಿಎಂ ನಿವಾಸದ ಕೊಂಚ ದೂರದಲ್ಲೇ ಇರುವ ಆರ್.ಟಿ ನಗರದ ವ್ಯಾಪ್ತಿಯ ಚೆಕ್ಪೋಸ್ಟ್ ಬಳಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 10 ಲಕ್ಷ ಹಣವನ್ನ ವಶಕ್ಕೆ ಪಡೆಯಲಾಗಿದೆ. ಕಾರು ತಪಾಸಣೆ ವೇಳೆ ಅಕ್ರಮ ಹಣ ಪತ್ತೆಯಾಗಿದ್ದು, ಮೊಹಮ್ಮದ್ ಷರೀಫ್, ಮಹಮ್ಮದ್ ಯುನೂಸ್ ಎಂಬುವವರನ್ನ ವಶಕ್ಕೆ ಪಡೆದು, ಆರ್.ಟಿ.ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ವೇಳೆ ತಾವು ಮೊಬೈಲ್ ಸೇಲ್ಸ್ ಅಂಡ್ ಸರ್ವಿಸ್ ಶೋ ನಡೆಸ್ತಿರೋದಾಗಿ ಕಾರಿನ ಮಾಲೀಕ ಹೇಳಿದ್ದಾರೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ