AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆಯಾದ 8 ತಿಂಗಳಿಗೆ ಸಾವಿನ ಮನೆ ಸೇರಿದ ಪತಿ: ಪತ್ನಿ ಮೇಲೆ ಗಂಭೀರ ಆರೋಪ

ಓರ್ವ ಬ್ಯಾಂಕ್ ಉದ್ಯೋಗಿ ಪತ್ನಿ ಕಿರುಕುಳಕ್ಕೆ ಮನನೊಂದು ಮನೆಯಲ್ಲಿ ನೇಣಿಗೆ ಶರಣಾಗಿರುವಂತಹ ಘಟನೆ ಬೆಂಗಳೂರಿನ ಗಿರಿನಗರದಲ್ಲಿ ನಡೆದಿದೆ. 8 ತಿಂಗಳ ಹಿಂದಷ್ಟೇ ಮದುವೆ ಆಗಿತ್ತು. ಮೃತ ವ್ಯಕ್ತಿ ತಂಗಿ ನೀಡಿದ ದೂರಿನ ಅನ್ವಯ ಪತ್ನಿ ವಿರುದ್ಧ ಗಿರಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮದುವೆಯಾದ 8 ತಿಂಗಳಿಗೆ ಸಾವಿನ ಮನೆ ಸೇರಿದ ಪತಿ: ಪತ್ನಿ ಮೇಲೆ ಗಂಭೀರ ಆರೋಪ
ಪತ್ನಿ, ಮೃತ ಪತಿ
ಗಂಗಾಧರ​ ಬ. ಸಾಬೋಜಿ
|

Updated on:Nov 10, 2025 | 6:30 PM

Share

ಬೆಂಗಳೂರು, ನವೆಂಬರ್​ 10: ಪತ್ನಿ ಕಿರುಕುಳಕ್ಕೆ ಬೇಸತ್ತು ಪತಿ (Husband) ಆತ್ಮಹತ್ಯೆಗೆ (death) ಶರಣಾಗಿರುವಂತಹ ಘಟನೆ ಗಿರಿನಗರದಲ್ಲಿ ನಡೆದಿದೆ. ಗಗನ್ ರಾವ್ ನೇಣಿಗೆ ಶರಣಾದ ಪತಿ. ದಂಪತಿ ನಡುವೆ ನಿತ್ಯವೂ ಜಗಳ ನಡೆಯುತ್ತಿತ್ತು. ಪತ್ನಿ ಕಿರುಕುಳದಿಂದ ನೊಂದ ಗಗನ್ ರಾವ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಡೆದದ್ದೇನು?

ಬ್ಯಾಂಕ್​ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಗಗನ್ ರಾವ್, ಎಂಟು ತಿಂಗಳ ಹಿಂದೆ ಮೇಘನಾ ಜತೆ ಮದುವೆಯಾಗಿದ್ದರು. ಮನೆಯಲ್ಲಿ ನಿತ್ಯ ದಂಪತಿ ನಡುವೆ ಜಗಳ ನಡೆಯುತ್ತಿತ್ತು. ಪತ್ನಿ ಕಿರುಕುಳದಿಂದಲೇ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಗಗನ್ ರಾವ್ ಸಹೋದರಿ ಮೇಘನಾ ವಿರುದ್ಧ ದೂರು ನೀಡಿದ್ದಾರೆ.

ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಜಗಲಾಸಾರ್ ಹೇಳಿದ್ದಿಷ್ಟು 

ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಜಗಲಾಸಾರ್ ಹೇಳಿಕೆ ನೀಡಿದ್ದು, ನಿನ್ನೆ ಘಟನೆ ನಡೆದಿದೆ. ಪ್ರಾಥಮಿಕ ತನಿಖೆಯಲ್ಲಿ ಸಂಜೆ 7.30 ಸುಮಾರಿಗೆ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. ಹೆಂಡತಿ ಹಾಗೂ ಅಕ್ಕ ಪಕ್ಕದವರು ನೋಡಿ ಇನ್ನು ಬದುಕಿರುವುದಾಗಿ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದರು ಎಂದರು.

ಇದನ್ನೂ ಓದಿ: ಮೂವರು ಮಕ್ಕಳ ತಾಯಿಯ ಕಾಮದಾಹಕ್ಕೆ 5 ತಿಂಗಳ ಶಿಶು ಬಲಿ: ಸಲಿಂಗ ಕಾಮಕೇಳಿಗೆ ಅಡ್ಡಿಯೆಂದು ತಾನೇ ಹೆತ್ತ ಮಗುವನ್ನೇ ಕೊಂದ ಮಹಿಳೆ

ವ್ಯಕ್ತಿ ತಂದೆ ಲಕ್ಷ್ಮಣ ರಾವ್ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಹೆಂಡತಿ ಮೇಘನಾಳ ಅನೈತಿಕ ಸಂಬಂಧಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಗಗನ್ ಹಾಗೂ ಮೇಘನಾ ಇಬ್ಬರಿಗೂ ವೈಮನಸ್ಸಿತ್ತು. ಆಗಾಗ ಜಗಳವಾಡುತ್ತಿದ್ದರು ಅನ್ನೋದು ತಿಳಿದು ಬಂದಿದೆ ಎಂದು ಹೇಳಿದರು.

ಆರೋಪ ನಿರಾಕರಿಸಿದ ಪತ್ನಿ

ಇನ್ನು ಈ ಕುರಿತಾಗಿ ಪತ್ನಿ ಮೇಘನಾ ಜಾದವ್ ಮಾತನಾಡಿದ್ದು, ಆರೋಪ ನಿರಾಕರಿಸಿದ್ದಾರೆ. ಮದುವೆಯಾದ ಎರಡೇ ದಿನಕ್ಕೆ ಪತಿಗೆ ಅನೈತಿಕ ಸಂಬಂಧದ ವಿಚಾರ ಗೊತ್ತಾಗಿತ್ತು. ಬಲವಂತ ಮಾಡಿ ಅವರ ಕುಟುಂಬದವರು ನನ್ನ ಜೊತೆ ಮದುವೆ ಮಾಡಿದ್ದಾರೆ ಎಂದರು.

ಇದನ್ನೂ ಓದಿ: ಶೀಲದ ಮೇಲೆ ಶಂಕೆ: ಚಾಕುವಿನಿಂದ ಇರಿದು ಪತ್ನಿಯನ್ನೇ ಕೊಂದ ಪಾಪಿ ಪತಿ

ಬೇರೆಯವರ ಸಹವಾಸ ಬಿಟ್ಟುಬಿಡಿ, ನಾವಿಬ್ಬರೂ ಚೆನ್ನಾಗಿರೋಣ ಅಂತಾ ಹೇಳಿದ್ದೆ. ನಿನ್ನೆ ಮನೆಗೆ ಬಂದವರೆ ನೀನು ಚೆನ್ನಾಗಿರು ಅಂತ ಹೇಳಿ ರೂಮ್ ಬಾಗಿಲು ಹಾಕಿಕೊಂಡರು. ಸ್ವಲ್ಪ ಹೊತ್ತಿಗೆ ನೇಣು ಹಾಕೊಂಡಿದ್ದಾರೆ. ಪತಿ ಬೇರೊಬ್ಬರ ಜೊತೆಗೆ ಸಲುಗೆಯಿಂದಿರುವ ಫೋಟೋಸ್​ ತೋರಿಸಿದ ಪತ್ನಿ, ವಿಚಾರವಾಗಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:15 pm, Mon, 10 November 25

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್