Bengaluru: ಇಂದಿನಿಂದ ಕೆಂಪೇಗೌಡ ಅಂತರಾಷ್ಟ್ರಿಯ ವಿಮಾನ ನಿಲ್ದಾಣದ 2ನೇ ಟರ್ಮಿನಲ್ ಕಾರ್ಯಾರಂಭ
ಇಂದಿನಿಂದ ಕೆಂಪೇಗೌಡ ಅಂತರಾಷ್ಟ್ರಿಯ ವಿಮಾನ ನಿಲ್ದಾಣದ 2ನೇ ಹೊಸ ಟರ್ಮಿನಲ್ ಆರಂಭವಾಗಲಿದ್ದು, ಬೆಳಿಗ್ಗೆ 8.30 ಕ್ಕೆ ಹೊಸ ಟರ್ಮಿನಲ್ನಿಂದ ಮೊದಲ ವಿಮಾನ ಕಲಬುರಗಿಗೆ ಪ್ರಯಾಣಿಕರನ್ನ ಹೊತ್ತು ಪ್ರಯಾಣ ಬೆಳೆಸಲಿದೆ.
ಬೆಂಗಳೂರು: ಕಳೆದ ನವಂಬರ್ನಲ್ಲಿ ಪ್ರಧಾನಿ ನರೇಂದ್ರ ಮೋದಿಯಿಂದ ಉದ್ಘಾಟನೆಯಾಗಿದ್ದ ಸಾವಿರಾರು ಕೋಟಿ ವೆಚ್ಚದ ಕೆಂಪೇಗೌಡ ಅಂತರಾಷ್ಟ್ರಿಯ ವಿಮಾನ ನಿಲ್ದಾಣದ 2ನೇ ಹೊಸ ಟರ್ಮಿನಲ್ನ ಕಾಮಗಾರಿ ಇದೀಗ ಬಹುತೇಕ 90 ರಷ್ಟು ಮುಗಿದಿದ್ದು, ಕೆಂಪೇಗೌಡ ಏರ್ಪೋಟ್ ಆಡಳಿತ ಮಂಡಳಿಯು ಇಂದಿನಿಂದ ವಿಶೇಷ ತಂತ್ರಜ್ಞಾನವುಳ್ಳ ಹೈಪೈ ಏರ್ಪೋಟ್ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ನೀಡುತ್ತಿದೆ. ಸಂಕ್ರಾಂತಿ ಹಬ್ಬದ ಪ್ರಯುಕ್ತ ಹೊಸ ಟರ್ಮಿನಲ್ ಕಾರ್ಯಾರಂಭ ಮಾಡಿದ್ದು ಇಂದು ಬೆಳಗ್ಗೆ 8:30 ಕ್ಕೆ ಹೊಸ ಟರ್ಮಿನಲ್ನಿಂದ ಮೊದಲ ವಿಮಾನ ಕಲ್ಬುರ್ಗಿಗೆ ಪ್ರಯಾಣಿಕರನ್ನ ಹೊತ್ತು ಪ್ರಯಾಣ ಬೆಳೆಸಲಿದೆ. ಬೆಳಗ್ಗೆಯಿಂದಲೆ ಸಾರ್ವಜನಿಕರು ದೇಶಿಯ ವಿಮಾನಗಳ ಪ್ರಯಾಣ ಮತ್ತು ಹೊಸ ಟರ್ಮಿನಲ್ ನೋಡಲು ಅವಕಾಶ ನೀಡಿದ್ದು ಇಷ್ಟುದಿನ ಪೊಟೋ ವಿಡಿಯೋದಲ್ಲಿ ಹೈಪೈ ಟರ್ಮಿನಲ್ ನೋಡುತ್ತಿದ್ದ ಸಿಲಿಕಾನ್ ಸಿಟಿ ಜನರು ಇಂದಿನಿಂದ ಟರ್ಮಿನಲ್ನಲ್ಲಿ ಓಡಾಡುವ ಅವಕಾಶ ಸಿಗಲಿದೆ.
* ಮೊದಲ ಹಂತವಾಗಿ ದೇಶಿಯ ವಿಮಾನಗಳಿಗೆ ಅವಕಾಶ.
ಮೊದಲ ಹಂತವಾಗಿ ಹೊಸ ಟರ್ಮಿನಲ್ನಲ್ಲಿ ಸ್ಟಾರ್ ಏರ್ ವಿಮಾನಗಳು ಮಾತ್ರ ಹಾರಾಟ ನಡೆಸಲಿದ್ದು ಉಳಿದ 10 ರಷ್ಟು ಕಾಮಗಾರಿ ಮುಕ್ತಾಯದ ನಂತರ ಇತರೆ ಏರ್ಲೈನ್ಸ್ ವಿಮಾನಗಳ ಹಾರಾಟಕ್ಕೂ ಅವಕಾಶ ನೀಡಲಿದ್ದಾರೆ. ಇಂದಿನಿಂದ ದಿನಕ್ಕೆ ನಾಲ್ಕು ಭಾರಿ ಸ್ಟಾರ್ ಏರ್ಲೈನ್ಸ್ ಸಂಸ್ಥೆ ದೇಶದ ವಿವಿಧೆಡೆಗೆ ಹೊಸ ಟರ್ಮಿನಲ್ನಿಂದ ಸಂಚರಿಸಲಿದ್ದು ಹಂತ ಹಂತವಾಗಿ ಏರ್ಲೈನ್ಸ್ ಮತ್ತು ಪ್ರಯಾಣಿಕರ ಸಂಖ್ಯೆ ಹೆಚ್ಚಳ ಮಾಡಲು ಏರ್ಪೋರ್ಟ್ ಆಡಳಿತ ಮಂಡಳಿ ಪ್ಲಾನ್ ಮಾಡಿದೆ. ಇನ್ನು ಹೊಸ ಟರ್ಮಿನಲ್ನಲ್ಲಿ ನೇತಾಡುವ ವಿವಿಧ ಬಗೆಯ ಆಕರ್ಷಣಿಯ ಸಸಿಗಳ ಹಚ್ಚ ಹಸಿರಿನ ಗಾರ್ಡನ್, ವಿಶೇಷ ತಂತ್ರಜ್ಞಾನದ ಬಿದರಿನ ಕಂಬಗಳು, ಕೃತಕ ವಾಟರ್ ಪಾಲ್ಸ್ ಪ್ರಯಾಣಿಕರ ಕಣ್ಮನ ಸೆಳೆಯಲಿದೆ.
ಇದನ್ನೂ ಓದಿ:Electric Bus: ಜನವರಿ 16 ರಿಂದ ಬೆಂಗಳೂರು-ಮೈಸೂರು ಮಾರ್ಗವಾಗಿ ಎಲೆಕ್ಟ್ರಿಕ್ ಬಸ್ ಸಂಚಾರ
ಒಟ್ಟಾರೆ ಗಾರ್ಡನ್ ಸಿಟಿ ಎನ್ನುವ ಹೆಸರಿಗೆ ಖ್ಯಾತಿ ತರುವಂತೆ ಕೆಂಪೇಗೌಡ ಏರ್ಪೋಟ್ನ ಎರಡನೇ ಟರ್ಮಿನಲ್ ವಿಶೇಷ ವಿನ್ಯಾಸದೊಂದಿಗೆ ಪ್ರಯಾಣಿಕರನ್ನ ಸ್ವಾಗತಿಸಿಲು ಸಜ್ಜಾಗಿದ್ದು ಪ್ರಯಾಣಿಕರು ಹೊಸ ಟರ್ಮಿನಲ್ನಲ್ಲಿ ರೌಂಡ್ ಹೋಡೆದು ಸೆಲ್ವಿ ಕ್ಲಿಕ್ಕಿಸಿಕೊಳ್ಳಲು ಸಜ್ಜಾಗಿ ನಿಂತಿದ್ದಂತೂ ಸುಳ್ಳಲ್ಲ.
ವರದಿ: ನವೀನ್ ಟಿವಿ9 ದೇವನಹಳ್ಳಿ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:03 am, Sun, 15 January 23