AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಶಾಂತಿ ನಗರದಲ್ಲಿ ವ್ಯಕ್ತಿಯ ಅಡ್ಡಗಟ್ಟಿ ದರೋಡೆ, ಆಘಾತಕಾರಿ ವಿಡಿಯೋ ವೈರಲ್

ಸ್ಕೂಟಿಯಲ್ಲಿ ತೆರಳುತ್ತಿದ್ದ ವ್ಯಕ್ತಿಯೊಬ್ಬರನ್ನು ದ್ವಿಚಕ್ರ ವಾಹನದಲ್ಲಿ ಬಂದ ಮೂವರು ಆಗಂತುಕರು ಅಡ್ಡಗಟ್ಟಿ ದರೋಡೆ ಮಾಡಿದ ಘಟನೆ ಬೆಂಗಳೂರಿನ ಶಾಂತಿನಗರದಲ್ಲಿ ನಡೆದಿದೆ. ಘಟನೆಯ ಸಿಸಿಟಿವಿ ದೃಶ್ಯಾವಳಿಯನ್ನು ಸಂಸದ ಪಿಸಿ ಮೋಹನ್ ಎಕ್ಸ್​ನಲ್ಲಿ ಹಂಚಿಕೊಂಡಿದ್ದು ಈಗ ವೈರಲ್ ಆಗುತ್ತಿದೆ. ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ ವ್ಯಕ್ತವಾಗಿದೆ.

ಬೆಂಗಳೂರು: ಶಾಂತಿ ನಗರದಲ್ಲಿ ವ್ಯಕ್ತಿಯ ಅಡ್ಡಗಟ್ಟಿ ದರೋಡೆ, ಆಘಾತಕಾರಿ ವಿಡಿಯೋ ವೈರಲ್
ಶಾಂತಿ ನಗರದಲ್ಲಿ ವ್ಯಕ್ತಿಯ ಅಡ್ಡಗಟ್ಟಿ ದರೋಡೆ, ಆಘಾತಕಾರಿ ವಿಡಿಯೋ ವೈರಲ್
Ganapathi Sharma
|

Updated on: Nov 17, 2025 | 11:46 AM

Share

ಬೆಂಗಳೂರು, ನವೆಂಬರ್ 17: ಬೆಂಗಳೂರಿನ (Bengaluru) ಶಾಂತಿನಗರದಲ್ಲಿ ದ್ವಿಚಕ್ರ ವಾಹನದಲ್ಲಿ ಬಂದ ಮೂವರು ವ್ಯಕ್ತಿಗಳು ಸ್ಕೂಟಿಯಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರನ್ನು ಅಡ್ಡಗಟ್ಟಿ ಹಲ್ಲೆ ಮಾಡಿ, ದರೋಡೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಸಂಸದ ಪಿಸಿ ಮೋಹನ್ ಕೂಡ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದು, ಬೆಂಗಳೂರು ನಗರ ಪೊಲೀಸರ ತಕ್ಷಣವೇ ಕೈಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ವಿಡಿಯೋದಲ್ಲಿ ಏನಿದೆ?

ಸಂಸದ ಮೋಹನ್ ಅವರು ಹಂಚಿಕೊಂಡಿರುವ ವಿಡಿಯೋದಲ್ಲಿ, ಸ್ಕೂಟಿಯಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರನ್ನು ಮತ್ತೊಂದು ಸ್ಕೂಟಿಯಲ್ಲಿ ಬಂದ ಮೂವರು ಅಡ್ಡಗಟ್ಟಿದ್ದಾರೆ. ನಂತರ ಅವರ ಮೇಲೆ ಹಲ್ಲೆ ಮಾಡಿ ದರೋಡೆಗೆ ಯತ್ನಿಸಿರುವುದು ಕಂಡು ಬಂದಿದೆ. ವ್ಯಕ್ತಿಯ ಜೇಬನ್ನು ಪರಿಶೀಲಿಸುತ್ತಿರುವುದು ಕೂಡ ಕಾಣಿಸಿದೆ. ಸಂತ್ರಸ್ತ ತನ್ನನ್ನು ತಾನು ರಕ್ಷಿಸಿಕೊಳ್ಳಲು ಯತ್ನಿಸಿದ್ದಾರೆ. ಅಷ್ಟರಲ್ಲಿ ಮೂರು ಆಗಂತುಕರ ಪೈಕಿ ಒಬ್ಬ ಕೋಲಿನಿಂದ ಹೊಡೆದಿದ್ದಾನೆ. ದರೋಡೆ ಮಾಡಿದ ನಂತರ ಹಾಗಂತಕರ ಗ್ಯಾಂಗ್ ಅಲ್ಲಿಂದ ಪರಾರಿಯಾಗಿರುವುದು ವಿಡಿಯೋದಲ್ಲಿದೆ.

ವೈರಲ್ ವಿಡಿಯೋ ಇಲ್ಲಿ ನೋಡಿ

ವಿಡಿಯೋಗೆ ಅನೇಕ ಮಂದಿ ಪ್ರತಿಕ್ರಿಯಿಸಿದ್ದಾರೆ. ಒಬ್ಬರು, ಕರ್ನಾಟಕದಲ್ಲಿ ಸುರಕ್ಷತೆ ಇಲ್ಲ ಎಂದು ಬರೆದಿದ್ದಾರೆ. ಇನ್ನೊಬ್ಬರು ‘ಗೂಂಡಾಗಿರಿ’ ಎಂದು ಪ್ರತಿಕ್ರಿಯಿಸಿದ್ದಾರೆ. ಪೊಲೀಸ್ ಅಧಿಕಾರಿಗಳು ಈ ವಿಷಯಕ್ಕೆ ಸ್ಪಂದಿಸಿದ್ದಾರೆಯೇ ಅಥವಾ ಆರೋಪಿಗಳನ್ನು ಬಂಧಿಸಿದ್ದಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಇದನ್ನೂ ಓದಿ: ಬೆಂಗಳೂರು: ಒಬ್ಬನನ್ನೇ ಮದುವೆಯಾಗಿದ್ದ ಶಿರಸಿಯ ಅಕ್ಕ-ತಂಗಿ! ಭೀಕರವಾಗಿ ಕೊಲೆಯಾದ ಎರಡನೇ ಹೆಂಡತಿ

ಈ ಹಿಂದೆ ತಮ್ಮ ಕ್ಷೇತ್ರದಲ್ಲಿ ಮೂಲಸೌಕರ್ಯ ಮತ್ತು ನಾಗರಿಕ ಸಮಸ್ಯೆಗಳ ಕುರಿತು ಬೆಳಕು ಚೆಲ್ಲುವ ಮೂಲಕ ಸಂಸದ ಪಿ.ಸಿ. ಮೋಹನ್ ಗಮನ ಸೆಳೆದಿದ್ದರು. ಇದೀಗ ದರೋಡೆ ಪ್ರಕರಣದಲ್ಲಿ ನಗರ ಪೊಲೀಸರು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು
ಮಹಾರಾಷ್ಟ್ರ ಪೊಲೀಸರ ಹೇಳಿಕೆ ಸತ್ಯಕ್ಕೆ ದೂರವಾಗಿದೆ; ಜಿ ಪರಮೇಶ್ವರ್
ಮಹಾರಾಷ್ಟ್ರ ಪೊಲೀಸರ ಹೇಳಿಕೆ ಸತ್ಯಕ್ಕೆ ದೂರವಾಗಿದೆ; ಜಿ ಪರಮೇಶ್ವರ್
ಮತ್ತೊಂದು ಬಿಗ್ ಎಲಿಮಿನೇಷನ್: ಸ್ಪಂದನಾ-ಮಾಳು ನಡುವೆ ಯಾರು ಹೊರಗೆ?
ಮತ್ತೊಂದು ಬಿಗ್ ಎಲಿಮಿನೇಷನ್: ಸ್ಪಂದನಾ-ಮಾಳು ನಡುವೆ ಯಾರು ಹೊರಗೆ?
ಹಾಲು ಕುಡಿಯಬೇಕಿದ್ದ 5 ವರ್ಷದ ಮೊಮ್ಮಗನಿಗೆ ಮದ್ಯ ಕುಡಿಸಿದ ಅಜ್ಜ!
ಹಾಲು ಕುಡಿಯಬೇಕಿದ್ದ 5 ವರ್ಷದ ಮೊಮ್ಮಗನಿಗೆ ಮದ್ಯ ಕುಡಿಸಿದ ಅಜ್ಜ!
ಟಿ20 ಕ್ರಿಕೆಟ್​ನಲ್ಲಿ ಅತೀ ವೇಗದ ಅರ್ಧಶತಕ ಸಿಡಿಸಿದ ಲಾರಾ ಹ್ಯಾರಿಸ್
ಟಿ20 ಕ್ರಿಕೆಟ್​ನಲ್ಲಿ ಅತೀ ವೇಗದ ಅರ್ಧಶತಕ ಸಿಡಿಸಿದ ಲಾರಾ ಹ್ಯಾರಿಸ್
ಅಲ್ಲಾ ತೆಗೆದುಕೊಳ್ಳುವ ನಿರ್ಧಾರವೇ ಅಂತಿಮ: ಮುಫ್ತಿ
ಅಲ್ಲಾ ತೆಗೆದುಕೊಳ್ಳುವ ನಿರ್ಧಾರವೇ ಅಂತಿಮ: ಮುಫ್ತಿ
ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಗೆ ಮುಸ್ಲಿಂ ಮನೆಯಲ್ಲಿ ಪ್ರಸಾದ ವ್ಯವಸ್ಥೆ
ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಗೆ ಮುಸ್ಲಿಂ ಮನೆಯಲ್ಲಿ ಪ್ರಸಾದ ವ್ಯವಸ್ಥೆ
ಬೆಳಗಾವಿ ಉತ್ಸವದಲ್ಲಿ ಡಾಲಿ ಮಾಸ್ ಡೈಲಾಗ್; ಅಭಿಮಾನಿಗಳ ಖುಷಿ ನೋಡಿ..
ಬೆಳಗಾವಿ ಉತ್ಸವದಲ್ಲಿ ಡಾಲಿ ಮಾಸ್ ಡೈಲಾಗ್; ಅಭಿಮಾನಿಗಳ ಖುಷಿ ನೋಡಿ..
2026ರಲ್ಲಿ ಮೀನ ರಾಶಿಗೆ ಸಾಡೇಸಾತಿ ಇದ್ದರೂ, ಆರ್ಥಿಕ ಚೇತರಿಕೆ, ಆಸ್ತಿ ಯೋಗ
2026ರಲ್ಲಿ ಮೀನ ರಾಶಿಗೆ ಸಾಡೇಸಾತಿ ಇದ್ದರೂ, ಆರ್ಥಿಕ ಚೇತರಿಕೆ, ಆಸ್ತಿ ಯೋಗ