
ಬೆಂಗಳೂರು, ಸೆಪ್ಟೆಂಬರ್ 12: ನಗರದ ಬಾಡಿಗೆ ಮನೆಯಲ್ಲಿ ವಾಸಿಸುವ ವ್ಯಕ್ತಿಯೊಬ್ಬರಿಗೆ ಒಂದು ತಿಂಗಳಿಗೆ ಬರೋಬ್ಬರಿ 15,800 ರೂ ವಾಟರ್ ಬಿಲ್ (water bill) ಬಂದಿದ್ದು ನೋಡಿ ಶಾಕ್ ಆಗಿರುವಂತಹ ಘಟನೆಯೊಂದು ಬೆಳಕಿಗೆ ಬಂದಿದೆ. ಈ ಬಗ್ಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಳ್ಳುವ ಮೂಲಕ ವಿಷಾದ ವ್ಯಕ್ತಪಡಿಸಿದ್ದು, ಸದ್ಯ ಭಾರೀ ವೈರಲ್ ಆಗುತ್ತಿದೆ.
ರೆಡ್ಡಿಟ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಬೆಂಗಳೂರು ಮೂಲದ ವ್ಯಕ್ತಿ ಪ್ರಕಾರ, ನನ್ನ ಮನೆ ಮಾಲೀಕರು ಪ್ರತಿ ತಿಂಗಳು ಹೆಚ್ಚು ಹೆಚ್ಚು ವಾಟರ್ ಬಿಲ್ ಬರುತ್ತಿರುವುದಕ್ಕೆ ನನ್ನನ್ನು ದೂಷಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಜೊತೆಗೆ ಒಂದು ತಿಂಗಳಲ್ಲಿ 165,000 ಲೀಟರ್ ನೀರಿಗೆ ಸುಮಾರು 15,800 ರೂ. ಬಿಲ್ ಬಂದಿದ್ದು, ಅದನ್ನು ಹಂಚಿಕೊಂಡಿದ್ದಾರೆ.
My landlord slams me with exorbitant BWSSB water charges every month.
byu/ananttodani inbangalore ಇದನ್ನೂ ಓದಿ
ನಮಗೆ ಸಾಮಾನ್ಯವಾಗಿ ಪ್ರತಿ ತಿಂಗಳು ಸುಮಾರು 10 ಸಾವಿರ ರೂ ನೀರಿನ ಬಿಲ್ ಬರುತ್ತದೆ. ನಾವು ವಾಸಿಸುತ್ತಿರುವುದು ಕೇವಲ ಇಬ್ಬರು ಮಾತ್ರ. ಹೆಚ್ಚಿನ ಸಮಯವನ್ನು ಕಚೇರಿಯಲ್ಲಿ ಕಳೆಯುತ್ತೇವೆ ಎಂದು ವ್ಯಕ್ತಿ ಹೇಳಿದ್ದಾರೆ.
ಇದನ್ನೂ ಓದಿ: Video: ಬೆಂಗಳೂರಿನಲ್ಲಿ ತಮ್ಮ ತಿಂಗಳ ಖರ್ಚು ಎಷ್ಟೆಂದು ರಿವೀಲ್ ಮಾಡಿದ ದಂಪತಿ
ಈ ವಿಚಾರವಾಗಿ ನಾನು ಮನೆಯ ಮಾಲೀಕರೊಂದಿಗೆ ಜಗಳಕ್ಕಿಳಿದೆ. ಆದರೆ ಅವರು ಇಲ್ಲಸಲ್ಲದ ನೆಪಗಳನ್ನು ಹೇಳಿ ಪಾರಾಗುತ್ತಾರೆ. ಪ್ರತಿ ಹದಿನೈದು ದಿನಕ್ಕೊಮ್ಮೆ ನಮಗೆ ಒಂದು ಅಥವಾ ಎರಡು ದಿನ ನೀರು ಬರುವುದಿಲ್ಲ. ಈ ಪರಿಸ್ಥಿತಿಯಲ್ಲಿ ನಾನು ಏನು ಮಾಡಬೇಕು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸದ್ಯ ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಹಲ್ಚಲ್ ಸೃಷ್ಟಿಸಿದೆ. ನೀರಿನ ಬಿಲ್ ಇಷ್ಟೊಂದು ಹೆಚ್ಚಾಗಲು ಸಾಧ್ಯವಿಲ್ಲ, ಮೀಟರ್ ಸಂಪರ್ಕವನ್ನು ಪರಿಶೀಲಿಸುವಂತೆ ವ್ಯಕ್ತಿಯನ್ನು ಒತ್ತಾಯಿಸಿಲಾಗಿದೆ. ವಾಣಿಜ್ಯ ಉದ್ದೇಶಗಳಿಗಾಗಿ ನೀರನ್ನು ಬಳಕೆ ಮಾಡಿರಬಹುದು. ಹಾಗಾಗಿ ಮನೆ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮತ್ತೆ ಕೆಲವರು ಸಲಹೆ ನೀಡಿದ್ದಾರೆ.
ಇದನ್ನೂ ಓದಿ: Video: ಬೆಂಗಳೂರಿನ ಫುಟ್‌ಪಾತ್‌ನಲ್ಲಿ ಸಂಚರಿಸಿ ಈ ಮಾರ್ಗದ ವಾಸ್ತವ ಸ್ಥಿತಿ ಬಿಚ್ಚಿಟ್ಟ ಕೆನಡಾದ ವ್ಯಕ್ತಿ
ಇದು ನಿಜಕ್ಕೂ ಅಸಾಧ್ಯ, ಮೀಟರ್‌ಗೆ ನಿರಂತರವಾಗಿ ಗಾಳಿ ಹರಿಯುತ್ತಿರಬಹುದು ಅಥವಾ ಮೀಟರ್ನಲ್ಲಿ ಏನೋ ದೋಷ ಉಂಟಾಗಿರಬಹುದು. ಇಬ್ಬರು ವ್ಯಕ್ತಿಗಳಿಗೆ ಗರಿಷ್ಠ ಬಿಲ್ 300 ರೂ. ದಾಟಬಾರದು. ನಾಲ್ಕು ಸದಸ್ಯರ ಕುಟುಂಬಗಳಿಗೂ ಅಷ್ಟು ಹೆಚ್ಚು ಬಿಲ್ ಬರುವುದಿಲ್ಲ, ಏನೋ ಗೊಂದಲವಾಗಿದೆ. ನಿಮ್ಮ ನೆರೆಹೊರೆಯವರು ಅಥವಾ ಪಕ್ಕದ ಮನೆಯ ಜನರೊಂದಿಗೆ ಮಾತನಾಡಿ ಅವರ ನೀರಿನ ಬಿಲ್ ಎಷ್ಟು ಬರುತ್ತಿದೆ ವಿಚಾರಿಸುವಂತೆ ನೆಟ್ಟಿಗರು ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:39 pm, Fri, 12 September 25