ಬೆಂಗಳೂರಿಗರ ಗಮನಕ್ಕೆ: ಸಿಲಿಕಾನ್ ಸಿಟಿಯಲ್ಲಿ ಈ 3 ದಿನ ಕಾವೇರಿ ನೀರು ಸಿಗಲ್ಲ, ಯಾವಾಗಿಂದ?
ಕಾವೇರಿ ನೀರು ಸರಬರಾಜು ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ 3 ದಿನ ಕಾವೇರಿ ನೀರು ಪೂರೈಕೆ ಸ್ಥಗಿತವಾಗಲಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಮುಂಚಿತವಾಗಿ ಮೂರು ದಿನಗಳ ಕಾಲ ನೀರು ಸಂಗ್ರಹಿಸಿಟ್ಟುಕೊಳ್ಳಲು ಜಲ ಮಂಡಳಿ ಮನವಿ ಮಾಡಿದೆ. ಹಾಗಾದ್ರೆ ಯಾವಾಗಿಂದ ಕಾವೇರಿ ನೀರು ಸಿಗಲ್ಲ ಎನ್ನುವ ವಿವರ ಇಲ್ಲಿದೆ.

ಬೆಂಗಳೂರು, (ಸೆಪ್ಟೆಂಬರ್ 12): ಕಾವೇರಿ ನೀರು ಸರಬರಾಜು ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 15, 16 ಮತ್ತು 17 ರಂದು ಬೆಂಗಳೂರಿನಲ್ಲಿ (Bengaluru) ಕಾವೇರಿ ನೀರು (Cauvery water) ಪೂರೈಕೆ ಸ್ಥಗಿತವಾಗಲಿದೆ. ಒಟ್ಟು 5 ಹಂತಗಳಲ್ಲಿ ಸುಮಾರು 60 ಗಂಟೆಗಳ ಕಾಲ ನೀರು ಸರಬರಾಜು ಸ್ಥಗಿತವಾಗಲಿದೆ. ಹೀಗಾಗಿ ಸಾರ್ವಜನಿಕರು ಮುಂಚಿತವಾಗಿ ನೀರನ್ನು ಸಂಗ್ರಹಿಸಿಟ್ಟುಕೊಳ್ಳಲು ಜಲಮಂಡಳಿ ಮನವಿ ಮಾಡಿದೆ. ಈ ಕುರಿತು ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾದ್ ಮೋಹನ್ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಮಾಹಿತಿ ನೀಡಿದ್ದು, ” ನಿಯಮಿತ ತುರ್ತು ನಿರ್ವಹಣಾ ಕಾಮಗಾರಿಗಳನ್ನು ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕಾವೇರಿ ನೀರು ಸರಬರಾಜು ಯೋಜನೆಯ ವಿವಿಧ ಹಂತಗಳ ಜಲರೇಚಕ ಯಂತ್ರಾಗಾರಗಳನ್ನು ಸೆಪ್ಟೆಂಬರ್ 15, 16 ಮತ್ತು 17 ರಂದು ಸ್ಥಗಿತಗೊಳಿಸಲಾಗುತ್ತಿದೆ. ಈ ಜಲರೇಚಕ ಯಂತ್ರಾಗಾರಗಳ ಸ್ಥಗಿತತೆಯಿಂದ ಕಾವೇರಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಹೀಗಾಗಿ ಸಾರ್ವಜನಿಕರು ಮುಂಚಿತವಾಗಿ ನೀರು ಸಂಗ್ರಹಿಸಿಟ್ಟುಕೊಳ್ಳುಂತೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಒಂದು ತಿಂಗಳ ವಾಟರ್ ಬಿಲ್ ಇಷ್ಟೊಂದಾ? ರೊಚ್ಚಿಗೆದ್ದ ಬಾಡಿಗೆದಾರ, ಪೋಸ್ಟ್ ವೈರಲ್
ಎಲ್ಲೆಲ್ಲಿ ಯಾವಾಗ ನೀರು ಬಂದ್?
- ಕಾವೇರಿ 5ನೇ ಹಂತ – ಸೆಪ್ಟೆಂಬರ್ 15 ರ ಬೆಳಗ್ಗೆ 1 ರಿಂದ ಸೆಪ್ಟೆಂಬರ್ 17 ರ ಮಧ್ಯಾಹ್ನ 1ರವರೆಗೆ ಒಟ್ಟು 60 ಗಂಟೆಗಳು.
- ಕಾವೇರಿ ಹಂತ 1, 2, 3, 4 ರಲ್ಲಿ – ಸೆಪ್ಟೆಂಬರ್ 16 ರ ಬೆಳಗ್ಗೆ 6ರಿಂದ ಸೆಪ್ಟೆಂಬರ್ 17 ರ ಬೆಳಗ್ಗೆ 6ರವರೆಗೆ ಒಟ್ಟು 24 ಗಂಟೆಗಳು.
ಏನು ಕಾಮಗಾರಿ?
ಬೆಂಗಳೂರು ನಗರದ ಜನತೆಗೆ ಯಾವುದೇ ಅಡೆತಡೆಯಿಲ್ಲದೇ ಕುಡಿಯುವ ನೀರನ್ನು ಸರಬರಾಜು ಮಾಡಲು, ಕಾವೇರಿ ನೀರು ಸರಬರಾಜು ಯೋಜನೆಯ ಜಲರೇಚಕ ಯಂತ್ರಗಾರಗಳು ಮತ್ತು ಮುಖ್ಯ ಕೊಳವೆ ಮಾರ್ಗಗಳ ಸುಲಲಿತ ಚಾಲನೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಸುಸ್ಥಿತಿಯಲ್ಲಿಡುವ ಉದ್ದೇಶದಿಂದ ಜಲಮಂಡಳಿಯ ವಿವಿಧೆಡೆ ನಿಯಮಿತ ತುರ್ತು ನಿರ್ವಹಣೆಯ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



