SM ಕೃಷ್ಣ ನಿಧನ: ನಾಳೆ ಮೆಟ್ರೋ ಕಚೇರಿಗೆ ರಜೆ, ರೈಲು ಸಂಚಾರ ಇರುತ್ತಾ? ಇಲ್ವಾ?
ಕರ್ನಾಟಕದ ಮಾಜಿ ಸಿಎಂ, ರಾಜಕೀಯ ಮುತ್ಸದಿ ಎಸ್‌ಎಂ ಕೃಷ್ಣ ಅವರಿಗೆ ಗೌರವಾರ್ಥವಾಗಿ ನಾಳೆ ಅಂದರೆ ಡಿಸೆಂಬರ್ 11ರಂದು ಸರ್ಕಾರಿ ಕಚೇರಿ, ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಇದೇ ವೇಳೆ ಬೆಂಗಳೂರಿ ನಮ್ಮ ಮೆಟ್ರೋ ಕಚೇರಿಗೂ ಸಹ ರಜೆ ಘೋಷಿಸಲಾಗಿದ್ದು, ರೈಲು ಸಂಚಾರ ಇರುತ್ತೋ ಇಲ್ವಾ? ಎನ್ನುವ ಬಗ್ಗೆ ಜನರಲ್ಲಿ ಗೊಂದಲ ಸೃಷ್ಟಿಯಾಗಿದೆ. ಹೀಗಾಗಿ ಬಿಎಂಆರ್ಸಿಎಲ್ ಸ್ಪಷ್ಟೀಕರಣ ನೀಡಿದ್ದು, ಅದು ಈ ಕೆಳಗಿನಂತಿದೆ.
ಬೆಂಗಳೂರು, (ಡಿಸೆಂಬರ್ 10): ಮಾಜಿ ಸಿಎಂ ಎಸ್.ಎಂ. ಕೃಷ್ಣ ನಿಧನಕ್ಕೆ ಸಂತಾಪ ವ್ಯಕ್ತಪಡಿಸಲು ಕರ್ನಾಟಕ ಸರ್ಕಾರ ಇಂದಿನಿಂದ ಮೂರು ದಿನ ಶೋಚಾರಣೆ ಘೋಷಿಸಿದೆ. ಅಲ್ಲದೇ ನಾಳೆ(ಡಿಸೆಂಬರ್ 11) ಒಂದು ದಿನ ಸರ್ಕಾರಿ ರಜೆ ಘೋಷಿಸಲಾಗಿದೆ. ಸರ್ಕಾರಿ ಕಚೇರಿ, ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದೆ. ಹೀಗಾಗಿ ಬುಧವಾರ ನಮ್ಮ ಮೆಟ್ರೋ ಕಚೇರಿಗೂ ಸಹ ರಜೆ ನೀಡಲಾಗಿದೆ. ಇದರಿಂದ ನಾಳೆ ನಮ್ಮ ಮೆಟ್ರೋ ಸಂಚಾರ ಬಗ್ಗೆ ಹಲವು ಗೊಂದಲಗಳು ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಬಿಎಂಆರ್ಸಿಎಲ್ ಟ್ವೀಟ್ ಮಾಡಿದ್ದು, ಕೇವಲ ಕಚೇರಿಗೆ ಮಾತ್ರ ರಜೆ ಇದ್ದು, ಎಂದಿನಂತೆ ರೈಲು ಸಂಚಾರ ಇರಲಿದೆ ಎಂದು ಸ್ಪಷ್ಟಪಡಿಸಿದೆ.
ನಮ್ಮ ಮೆಟ್ರೋ ಕಾರ್ಯಾಚರಣೆ ದಿನಾಂಕ ೧೧/೧೩/೨೦೨೪ ರಂದು ಎಂದಿನಂತೆ ಸೇವೆಯಲ್ಲಿರುತ್ತವೆ.
Namma Metro service will run as scheduled on 11/12/2024.
— ನಮ್ಮ ಮೆಟ್ರೋ (@OfficialBMRCL) December 10, 2024
ಮಾಜಿ ಮುಖ್ಯಮಂತ್ರಿ ಎಸ್‌ಎಂ ಕೃಷ್ಣ ಅವರ ನಿಧನದ ಹಿನ್ನೆಲೆಯಲ್ಲಿ ನಾಳೆ ಸಾರ್ವಜನಿಕ ರಜೆ ಘೋಷಣೆ ಮಾಡಲಾಗಿದೆ. ಅದರಂತೆ ನಮ್ಮ ಮೆಟ್ರೋ ಕಚೇರಿಗೆ ಸಹ ಬಿಎಂಆರ್ಸಿಎಲ್ ರಜೆ ನೀಡಿದೆ. ಈ ಬಗ್ಗೆ ಬಿಎಂಆರ್ಸಿಎಲ್ ಟ್ವೀಟ್ ಮಾಡಿದೆ. ಆದ್ರೆ, ರೈಲು ಸಂಚಾರ ಸಹ ಇರುವುದಿಲ್ಲ ಎನ್ನುವ ಸುಳ್ಳು ವದಂತಿ ಹರಿದಾಡುತ್ತಿದೆ. ಇನ್ನು ಈ ವಿಚಾರ ಗಮನಕ್ಕೆ ಬಂದ ಕೂಡಲೇ ಬಿಎಂಆರ್ಸಿಎಲ್, ಮತ್ತೊಂದು ಟ್ವೀಟ್ ಮಾಡಿದ್ದು, ನಮ್ಮ ಮೆಟ್ರೋ ಎಂದಿನಂತೆ ಸೇವೆ ಸಲ್ಲಿಸಲಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ವಿನಂತಿ ಎಂದು ಸ್ಪಷ್ಟೀಕರಣ ನೀಡಿದೆ.
ಇದನ್ನೂ ಓದಿ: ಎಸ್.ಎಂ. ಕೃಷ್ಣ ನಿಧನಕ್ಕೆ ಶೋಕ; ಕರ್ನಾಟಕದ ಬ್ಯಾಂಕುಗಳಿಗೂ ಬುಧವಾರ ರಜೆಯಾ? ಇಲ್ಲಿದೆ ಡೀಟೇಲ್ಸ್
ಪ್ರತಿನಿತ್ಯ ಯಾವ ಸಮಯಕ್ಕೆ ಮೆಟ್ರೋ ಸಂಚಾರ ಆರಂಭವಾಗುತ್ತೋ ಅದೇ ಸಮಯಕ್ಕೆ ಲಭ್ಯವಿರಲಿದೆ. ಇದರಿಂದ ಮೆಟ್ರೋ ಪ್ರಯಾಣಿಕರೇ ಯಾವುದೇ ಗೊಂದಲಕ್ಕೀಡಾಗದೇ ಎಂದಿನಂತೆ ಮೆಟ್ರೋದಲ್ಲಿ ಸಂಚರಿಸಬಹುದು.
ಇನ್ನು ಸರ್ಕಾರಿ ಕಚೇರಿಗಳು, ಸರ್ಕಾರಿ ಶಾಲಾ-ಕಾಲೇಜುಗಳು, ಖಾಸಗಿ ಶಾಲೆಗಳೂ ನಾಳೆ ಬಂದ್ ಆಗಿರುತ್ತವೆ. ಸರ್ಕಾರಿ ಕಚೇರಿಗಳಲ್ಲಿನ ಕೆಲಸದ ನಿಮಿತ್ತ ಹೋಗುವವರು ಈ ಬಗ್ಗೆ ಗಮನಿಸಬೇಕು.
Published On - 9:23 pm, Tue, 10 December 24