Bengaluru: ಮಧ್ಯರಾತ್ರಿ ವಾಹನ ಚಾಲನೆ ಮಾಡುವವರಿಗೆ ಭಯ ಹುಟ್ಟುಸುತ್ತಿದ್ದಾನೆ ಆ ವ್ಯಕ್ತಿ
ಮಧ್ಯರಾತ್ರಿ ವಾಹನ ಚಾಲನೆ ಮಾಡುವವರಿಗೆ ಭಯ ಹುಟ್ಟುಸುತ್ತಿದ್ದಾನಂತೆ ಆ ವ್ಯಕ್ತಿ, ಆ ವಾಹನದಲ್ಲಿದ್ದವರ ಪರಿಸ್ಥಿತಿ ಏನಾಗಬೇಡ ಹೇಳಿ?
ಬೆಂಗಳೂರು: ನಗರದಲ್ಲಿ ಮಧ್ಯರಾತ್ರಿ ವೇಳೆ ವಾಹನ ಸಚಲಾಯಿಸುವಾಗ ಜಾಗರೂಕರಾಗಿರಿ. ಏಕೆಂದರೆ ನಿಗೂಢ ವ್ಯಕ್ತಿ (Mysterious man)ಯೊಬ್ಬ ಮಧ್ಯರಾತ್ರಿಯಲ್ಲಿ ಸಂಚರಿಸುವ ವಾಹನಗಳನ್ನು ಅಡ್ಡಹಾಕಿ ಭಯ ಹುಟ್ಟಿಸುತ್ತಿದ್ದಾನೆ. ಒಂದೊಮ್ಮೆ ನೀವು ಕಾರು ನಿಲ್ಲಿಸಿದರೆ ಆತ ಏನು ಮಾಡುತ್ತಾನೋ ಆತನಿಗೇ ಗೊತ್ತು. ಈ ಬಗ್ಗೆ ವ್ಯಕ್ತಿಯೊಬ್ಬರು ವಿಡಿಯೋವನ್ನು ಟ್ವಿಟರ್ನಲ್ಲಿ ಹಂಚಿಕೊಂಡು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ನಗರದ ಮಹದೇವಪುರ ಠಾಣಾ ಪೊಲೀಸರು, ನಿಗೂಢ ವ್ಯಕ್ತಿಯನ್ನು ಪತ್ತೆಹಚ್ಚಲು ಮುಂದಾಗಿದ್ದಾರೆ.
ಮಹದೇವಪುರ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರು ಕಾರು ಚಲಾಯಿಸಿಕೊಂಡು ಹೋಗುತ್ತಿದ್ದಾಗ ಹೆಡ್ಫೋನ್ ಹಾಕಿ ಕೈಯಲ್ಲೊಂದು ಫೈಲ್ ಹಿಡಿದುಕೊಂಡು ರಸ್ತೆಗೆ ಅಡ್ಡಬಂದು ಕಾರು ನಿಲ್ಲಿಸುವಂತೆ ಎರಡೂ ಕೈಗಳನ್ನು ಚಾಚಿದ್ದಾನೆ. ಕಾರು ನಿಲ್ಲುತ್ತಿದ್ದಂತೆ ಕಾರಿನ ಹತ್ತಿರಕ್ಕೆ ಬಂದಾಗ ಕಾರು ಚಾಲಕನಿಗೆ ಭಯವಾಗಿ ಕಾರು ಚಲಾಯಿಸಲು ಮುಂದಾಗಿದ್ದಾನೆ. ಈ ವೇಳೆ ಕಾರಿಗೆ ಅಡ್ಡಬಂದು ನಿಲ್ಲಿಸುವಂತೆ ಸೂಚಿಸುತ್ತಾನೆ. ಮತ್ತೆ ಕಾರನ್ನು ನಿಲ್ಲಿಸಿದಾಗ ಎಡಬದಿಯ ಬಾಗಿಲ ಬಳಿ ಬರುತ್ತಾನೆ. ಈ ವೇಳೆ ಚಾಲಕ ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಹೋಗಿದ್ದಾರೆ.
ಇದನ್ನೂ ಓದಿ: Bengaluru House Rent: ಬೆಂಗಳೂರಿನ ಬಾಡಿಗೆ ನಿವಾಸಿಗಳಿಗೆ ದರ ಏರಿಕೆಯ ಶಾಕ್; ಮನೆ ಬಾಡಿಗೆ ಶೇ 45ರವರೆಗೆ ಹೆಚ್ಚಳ
THREAD – Beware of this guy, Mahadevapura residents while commuting at night. This incident happened on 18th Dec late night at Mahadevapura and was caught on dashcam (https://t.co/R1fuRgoZ82) and sent to me by one of my subscribers @WFRising @BlrCityPolice (1/8) pic.twitter.com/8vLDoUmi5V
— ThirdEye (@3rdEyeDude) December 20, 2022
ಡಿಸೆಂಬರ್ 18ರಂದು ಮಧ್ಯರಾತ್ರಿ ನಡೆದ ಘಟನೆಯ ವಿಡಿಯೋವನ್ನು ThirdEye ಎಂಬ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಮಧ್ಯರಾತ್ರಿ ಕಾರು ನಿಲ್ಲಿಸುವ ಆ ವ್ಯಕ್ತಿ ಯಾರು? ಯಾಕಾಗಿ ಕಾರು ನಿಲ್ಲಿಸಿದ್ದ ಅನ್ನೋದು ಗೊತ್ತಿಲ್ಲ. ಆದರೆ ಈ ನಿಗೂಢ ವ್ಯಕ್ತಿಯನ್ನು ಪತ್ತೆಹಚ್ಚಲು ಮಹದೇಪುರ ಠಾಣೆ ಪೊಲೀಸರು ಮುಂದಾಗಿದ್ದು, ಆ ವ್ಯಕ್ತಿ ಸಿಕ್ಕ ಬಳಿಕವಷ್ಟೇ ಘಟನೆಗೆ ಸ್ಪಷ್ಟತೆ ಸಿಗಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:54 am, Thu, 22 December 22