ನಮ್ಮ ಮೆಟ್ರೋ ನಿಲ್ದಾಣಗಳ ಪಾರ್ಕಿಂಗ್​ನಲ್ಲಿ ದುಪ್ಪಟ್ಟು ಹಣ ವಸೂಲಿ, ಎಲ್ಲಿ ಹೆಚ್ಚಾಗಿದೆ ಇಲ್ಲಿದೆ ಮಾಹಿತಿ

| Updated By: ನಯನಾ ರಾಜೀವ್

Updated on: Jan 23, 2025 | 9:35 AM

ನಿತ್ಯ ಲಕ್ಷಾಂತರ ಜನರಿಗೆ ನಮ್ಮ ಮೆಟ್ರೋನೆ ಆಧಾರ, ರಸ್ತೆಯಲ್ಲಿ ವಾಹನದಲ್ಲಿ ಹೋದರೆ 2-3 ಗಂಟೆಗಳಲ್ಲಿ ತಾವು ಅಂದುಕೊಂಡ ಜಾಗವನ್ನು ತಲುಪುವವರು ಮೆಟ್ರೋದಲ್ಲಿ ಅರ್ಧ ಗಂಟೆಯಲ್ಲಿ ತಲುಪುತ್ತಾರೆ ಹೀಗಾಗಿ ಎಲ್ಲರಿಗೂ ಮೆಟ್ರೋ ಅಚ್ಚುಮೆಚ್ಚು ಆದರೆ ನಮ್ಮ ಮೆಟ್ರೋ ನಿಲ್ದಾಣಗಳ ಪಾರ್ಕಿಂಗ್​ ಶುಲ್ಕ ಹೆಚ್ಚಳ ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ ಹಾಗಾದರೆ ಎಷ್ಟಾಗಿದೆ, ಯಾವೆಲ್ಲಾ ನಿಲ್ದಾಣಗಳಲ್ಲಿ ಶುಲ್ಕ ಹೆಚ್ಚಿಸಲಾಗಿದೆ ಎನ್ನುವ ಕುರಿತು ಮಾಹಿತಿ ಇಲ್ಲಿದೆ.

ನಮ್ಮ ಮೆಟ್ರೋ ನಿಲ್ದಾಣಗಳ ಪಾರ್ಕಿಂಗ್​ನಲ್ಲಿ ದುಪ್ಪಟ್ಟು ಹಣ ವಸೂಲಿ, ಎಲ್ಲಿ ಹೆಚ್ಚಾಗಿದೆ ಇಲ್ಲಿದೆ ಮಾಹಿತಿ
ನಮ್ಮ ಮೆಟ್ರೋ ಪಾರ್ಕಿಂಗ್
Image Credit source: Deccan Herald
Follow us on

ಬೆಂಗಳೂರಿಗರ ನೆಚ್ಚಿನ ಟ್ರಾನ್ಸ್ ಪೋರ್ಟ್ ಅಂದರೆ ಅದು ನಮ್ಮ ಮೆಟ್ರೋ. ಪ್ರತಿನಿತ್ಯ ನಮ್ಮ ಮೆಟ್ರೋದಲ್ಲಿ ಲಕ್ಷಾಂತರ ಜನರು ಓಡಾಡುತ್ತಾರೆ ಹಾಗೂ ಮೆಟ್ರೋ ಪಾರ್ಕಿಂಗ್ ಸಹ ಬಳಸುತ್ತಾರೆ.ಆದರೆ ಮೆಟ್ರೋ ಸ್ಟೇಷನ್ ಗಳ ಪಾರ್ಕಿಂಗ್ ನಲ್ಲಿ ವಾಹನಗಳನ್ನು ಪಾರ್ಕ್ ಮಾಡುವ ಮುನ್ನ, ನಿಮ್ಮ ಜೇಬು ಗಟ್ಟಿ ಇದೆಯಾ ಎಂದು ಒಮ್ಮೆ ಪರೀಕ್ಷಿಸಿಕೊಳ್ಳಿ. ಪಾರ್ಕಿಂಗ್ ನೆಪದಲ್ಲಿ ಮೆಟ್ರೋ ಪ್ರಯಾಣಿಕರಿಂದ ದುಪ್ಪಟ್ಟು ಹಣ ವಸೂಲಿ ಮಾಡಲು ಮುಂದಾಗಿದ್ದಾರೆ.

ಚಿಕ್ಕಪೇಟೆ ಮೆಟ್ರೋ ನಿಲ್ದಾಣದಲ್ಲಿ ಒಂದು ಗಂಟೆ ಕಾರ್ ಪಾರ್ಕಿಂಗ್ ಗೆ 100 ರುಪಾಯಿ

ಬೆಂಗಳೂರಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆ ಹೋಗಬೇಕಾದರೆ ಮೆಟ್ರೋ ಉತ್ತಮ ಆಯ್ಕೆ ,ಜನ ಬೇಗ ಹಾಗೂ ಸುಲಭವಾಗಿ ತಾವು ಹೋಗಬೇಕಾದ ಸ್ಥಳವನ್ನು ತಲುಪಬಹುದು. ಬೆಂಗಳೂರಿನ 66 ಮೆಟ್ರೋ ನಿಲ್ದಾಣಗಳ ಪೈಕಿ 33 ನಿಲ್ದಾಣಗಳಲ್ಲಿಪಾರ್ಕಿಂಗ್‌ ವ್ಯವಸ್ಥೆ ಇದ್ದು,11,496 ದ್ವಿಚಕ್ರವಾಹನ ಮತ್ತು 1724 ಕಾರುಗಳಿಗೆ ಪಾರ್ಕಿಂಗ್‌ ಸೇವೆಯನ್ನು ಬಿಎಂಆರ್ ಸಿಎಲ್ ಒದಗಿಸಲಾಗುತ್ತಿದೆ.

ಈ ಪಾರ್ಕಿಂಗ್‌ ಶುಲ್ಕದಿಂದ ಬಿಎಂಆರ್‌ಸಿಎಲ್‌ ಪ್ರತಿ ವರ್ಷ 6 ಕೋಟಿ ರೂ.ಆದಾಯ ಗಳಿಸುತ್ತಿದೆ.ಅದ್ರಂತೆ ಬೆಂಗಳೂರಿನ ಪ್ರಮುಖ ಶಾಪಿಂಗ್ ಅಡ್ಡವಾದ ಚಿಕ್ಕಪೇಟೆ ಮೆಟ್ರೋ ಸ್ಟೇಷನ್ ನಲ್ಲಿ ಮೆಟ್ರೋ ಪ್ರಯಾಣಿಕರಿಗೆ ಪಾರ್ಕಿಂಗ್ ವ್ಯವಸ್ಥೆಯಿದೆ,ಆದ್ರೇ ಈ ಮೆಟ್ರೋ ಸ್ಟೇಷನ್ ಇದೀಗ ವಸೂಲಿ ಅಡ್ಡ ಆಗಿದ್ದು,ಪ್ರಯಾಣಿಕರ ಹಣವನ್ನು ವಸೂಲಿ ಮಾಡುತ್ತಿದೆ.

ಮೆಟ್ರೋ ಸ್ಟೇಷನ್ ನಲ್ಲಿ ಕಾರುಗಳ ಪಾರ್ಕಿಂಗ್‌ಗೆ ಬಿಎಂಆರ್‌ಸಿಎಲ್‌ ನಿಗದಿಪಡಿಸಿರುವ ಶುಲ್ಕಕ್ಕಿಂತ ದುಬಾರಿ ಶುಲ್ಕ ಪಡೆಯಲಾಗುತ್ತಿದೆ. ಬಿಎಂಆರ್ ಸಿಎಲ್ ಮೆಟ್ರೋ ಪಾರ್ಕಿಂಗ್ ನಲ್ಲಿ ಕಾರುಗಳಿಗೆ ಮೊದಲ 4 ಗಂಟೆಗಳಿಗೆ 30 ರೂ ಶುಲ್ಕ ಮತ್ತು ನಂತರದ ಪ್ರತಿ ಗಂಟೆಗೆ ಹೆಚ್ಚುವರಿ 10 ರೂ. ನಿಗದಿ ಮಾಡಿದ್ದು, ಇಡೀ ದಿನದ ನಿಲುಗಡೆಗೆ ಗರಿಷ್ಠ 60 ರೂಪಾಯಿ ದರ ನಿಗದಿ ಮಾಡಿದೆ.ಆದರೆ ಇಲ್ಲಿ ಪಾರ್ಕಿಂಗ್‌ ಪಡೆದ ಗುತ್ತಿಗೆದಾರರು ನಿಗದಿಗಿಂತ ಹೆಚ್ಚುವರಿ ಶುಲ್ಕಕ್ಕಿಂತ ಮೂರು-ನಾಲ್ಕು ಪಟ್ಟು ಹೆಚ್ಚು ವಸೂಲಿ ಮಾಡುತ್ತಿದ್ದಾರೆ.ಈ ಬಗ್ಗೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಮತ್ತಷ್ಟು ಓದಿ: ಬೆಂಗಳೂರು: ನಮ್ಮ ಮೆಟ್ರೋ ಹಳಿಗೆ ಜಿಗಿದು ವ್ಯಕ್ತಿ ಆತ್ಮಹತ್ಯೆಗೆ ಯತ್ನ

ಕಾರ್ ದರ -ಒಂದು ಗಂಟೆಗೆ -100 ರೂಪಾಯಿ
ಒಂದು ಗಂಟೆಯ ನಂತರದ ಪ್ರತಿಗಂಟೆಗೆ -30 ರೂಪಾಯಿ
ಒಂದು ದಿನಕ್ಕೆ ಗರಿಷ್ಠ-300 ರೂಪಾಯಿ

ಅಂದ್ರೇ ಒಂದು ದಿನಕ್ಕೆ ಕಾರ್ ಗೆ ಗರಿಷ್ಟ ಅಂದ್ರೇ 60 ರೂಪಾಯಿ ಪಾರ್ಕಿಂಗ್ ಚಾರ್ಜ್ ತೆಗೆದುಕೊಳ್ಳಬೇಕಿತ್ತು,ಆದ್ರೇ 300 ರೂಪಾಯಿ ತೆಗೆದುಕೊಳ್ಳಲಾಗುತ್ತಿದ್ದು,ಇದು ಹಗಲು ದರೋಡೆ ಎಂದು ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿದ ನಮ್ಮ ಮೆಟ್ರೋ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಯಶ್ವಂತ್ ಚೌವ್ಹಾಣ್ ಮೆಟ್ರೋ ಪಾರ್ಕಿಂಗ್ ನಲ್ಲಿ ಪ್ರಯಾಣಿಕರಿಗಿಂತ ಹೆಚ್ಚಾಗಿ ಶಾಪಿಂಗ್ ಮಾಡುವವರು ಪಾರ್ಕಿಂಗ್ ಮಾಡಿ ಹೋಗ್ತಿದ್ದಾರೆ, ಹಾಗಾಗಿ ಚಿಕ್ಕಪೇಟೆ ಮೆಟ್ರೋ ಸ್ಟೇಷನ್ ನಲ್ಲಿ ಮಾತ್ರ ದರ ಹೆಚ್ಚಳ ಮಾಡಲಾಗಿದೆ ಬೇರೆ ಮೆಟ್ರೋ ಸ್ಟೇಷನ್ ನಲ್ಲಿ ದರ ಏರಿಕೆ ಮಾಡಿದರೆ ಟೆಂಡರ್ ಕ್ಯಾನ್ಸಲ್ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಒಟ್ಟಿನಲ್ಲಿ ಡಿಸೆಂಬರ್ ಕೊನೆ ಅಥವಾ ಜನವರಿಯಿಂದ ಕೆಲ ಮೆಟ್ರೋ ಸ್ಟೇಷನ್ ಗಳಲ್ಲಿ ಕಾರ್ ಪಾರ್ಕಿಂಗ್ ಶುಲ್ಕ ಏರಿಸಲಾಗಿದೆ ಎನ್ನಲಾಗುತ್ತಿದೆ. ಇದರಿಂದಾಗಿ ಪ್ರತಿನಿತ್ಯ ಪ್ರಯಾಣಿಕರು ಸಿಬ್ಬಂದಿಗಳ ಜೊತೆ ಜಗಳ ಮಾಡುವಂತೆ ಆಗಿದೆ. ನಿಗದಿಗಿಂತ ಹೆಚ್ಚುವರಿ ಶುಲ್ಕ ಪಡೆದ ಪಾರ್ಕಿಂಗ್‌ ಗುತ್ತಿಗೆದಾರರ ಮೇಲೆ ಬಿಎಂಆರ್‌ಸಿಎಲ್‌ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಿದೆ.

 

ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ