AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶ್ರೀರಾಮುಲು ಕಾಂಗ್ರೆಸ್ ಸೇರ್ತಾರಾ? ಹಳೇ ದೋಸ್ತಿಯ ರಾಜಕೀಯ ಗುಟ್ಟು ಬಿಚ್ಚಿಟ್ಟ ರೆಡ್ಡಿ

ಶ್ರೀರಾಮುಲು ಕಾಂಗ್ರೆಸ್ ಸೇರ್ತಾರಾ? ಹಳೇ ದೋಸ್ತಿಯ ರಾಜಕೀಯ ಗುಟ್ಟು ಬಿಚ್ಚಿಟ್ಟ ರೆಡ್ಡಿ

ರಮೇಶ್ ಬಿ. ಜವಳಗೇರಾ
|

Updated on: Jan 23, 2025 | 5:36 PM

ಬಸನಗೌಡ ಪಾಟೀಲ್ ಯತ್ನಾಳ್ ವರ್ಸಸ್ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ. ಶ್ರೀರಾಮುಲು ವರ್ಸಸ್ ಜನಾರ್ದನ ರೆಡ್ಡಿ. ಬಿಜೆಪಿಯಲ್ಲಿನ ಅಂತರ್ಯುದ್ಧ ದಿನ ಕಳೆದಂತೆ ವಿಸ್ತಾರವಾಗುತ್ತಲೇ ಹೋಗುತ್ತಿದೆ. ಇಷ್ಟು ದಿನ ಯತ್ನಾಳ್ ಮತ್ತು ವಿಜಯೇಂದ್ರ ನಡುವಿನ ಗುದ್ದಾಟಕ್ಕೆ ಹೈರಾಣಗಿದ್ದ ಬಿಜೆಪಿಗೆ ಮತ್ತೊಂದು ತಲೆನೋವು ಶುರುವಾಗಿದೆ. ಗಣಿನಾಡು ಬಳ್ಳಾರಿಯಲ್ಲಿ ಹಳೇ ದೋಸ್ತಿಗಳಾದ ಶ್ರೀರಾಮುಲು ಹಾಗೂ ಗಾಲಿ ಜನಾರ್ದನ ರೆಡ್ಡಿ ಬಹಿರಂಗವಾಗಿಯೇ ಕಾದಾಟಕ್ಕಿಳಿದಿದ್ದಾರೆ. . ಇನ್ನು ರಾಮುಲು ಕಾಂಗ್ರೆಸ್​ ಸೇರೋ ಬಗ್ಗೆ ರೆಡ್ಡಿ ಶಾಕಿಂಗ್ ಹೇಳಿಕೆ ನೀಡಿದ್ದಾರೆ.

ಬೆಂಗಳೂರು, (ಜನವರಿ 23): ಕರ್ನಾಟಕ ಬಿಜೆಪಿ ಹಾಗೂ ಕಾಂಗ್ರೆಸ್​ನಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು ಸಂಚಲನ ಮೂಡಿಸಿದೆ. ಅದರಲ್ಲೂ ಬಿಜೆಪಿಯ ಶ್ರೀರಾಮುಲು ನಡೆ ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಸಂಡೂರು ಬೈ ಎಲೆಕ್ಷನ್​ನಲ್ಲಿ ಕೆಲಸ ಮಾಡಿಲ್ಲ ಎನ್ನುವ ಆರೋಪ ತಮ್ಮ ಮೇಲೆ ಕೇಳಿಬಂದ ಹಿನ್ನೆಲೆಯಲ್ಲಿ ಕೆಂಡಾಮಂಡಲರಾಗಿರುವ ಶ್ರೀರಾಮುಲು, ಪಕ್ಷ ತೊರೆಯಲು ಸಿದ್ಧ ಎಂದು ಬಿಜೆಪಿಯ ಪ್ರಮುಖ ನಾಯಕರಿಗೆ ಖಡಕ್ ಆಗಿ ಹೇಳಿದ್ದಾರೆ. ಇದು ಸಹಜವಾಗಿಯೇ ಬಿಜೆಪಿಯಲ್ಲಿ ಹಲ್​ಚಲ್​ಗೆ ಕಾರಣವಾಗಿದೆ. ಇನ್ನು ಶ್ರೀರಾಮುಲು ಹೀಗೆ ಹೇಳಿಕೆ ಹಿಂದೆ ಡಿಕೆ ಶಿವಕುಮಾರ್ ರಾಜಕೀಯ ತಂತ್ರವೂ ಇದೆ ಎಂದು ಜನಾರ್ದನಾ ರೆಡ್ಡಿ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಇನ್ನು ರಾಮುಲು ಕಾಂಗ್ರೆಸ್​ ಸೇರೋ ಬಗ್ಗೆ ರೆಡ್ಡಿ ಶಾಕಿಂಗ್ ಹೇಳಿಕೆ ಇಲ್ಲಿದೆ ನೋಡಿ.