ಹೊಸ ವರ್ಷದಂದು ಬಿಎಂಟಿಸಿಗೆ ಭರ್ಜರಿ ಆದಾಯ: ನಿನ್ನೆ ಒಂದೇ ದಿನ ಗಳಿಸಿದ್ದೆಷ್ಟು ಗೊತ್ತಾ?

ಹೊಸ ವರ್ಷಾಚರಣೆಗೆ ಬೆಂಗಳೂರಿನ ಬಿಎಂಟಿಸಿ ಹೆಚ್ಚುವರಿ ಬಸ್ ಸೇವೆಗಳನ್ನು ಒದಗಿಸಿ ಯಶಸ್ವಿಯಾಗಿದೆ. ರಾತ್ರಿ 11 ರಿಂದ ಮಧ್ಯರಾತ್ರಿ 3 ರವರೆಗೆ 200 ವಿಶೇಷ ಬಸ್​​ಗಳು ಸಂಚಾರ ಮಾಡಿವೆ. ನಿನ್ನೆ ಒಂದೇ ದಿನ ಸರಿಸುಮಾರು 1 ಲಕ್ಷ ಅಧಿಕ ಪ್ರಯಾಣಿಕರು ಸಂಚಾರ ಮಾಡಿದ್ದು, ಬಿಎಂಟಿಸಿ ಬೊಕ್ಕಸಕ್ಕೆ ಲಕ್ಷ ಲಕ್ಷ ರೂ ಆದಾಯ ಹರಿದುಬಂದಿದೆ.

ಹೊಸ ವರ್ಷದಂದು ಬಿಎಂಟಿಸಿಗೆ ಭರ್ಜರಿ ಆದಾಯ: ನಿನ್ನೆ ಒಂದೇ ದಿನ ಗಳಿಸಿದ್ದೆಷ್ಟು ಗೊತ್ತಾ?
ಬಿಎಂಟಿಸಿ ಬಸ್​​
Edited By:

Updated on: Jan 01, 2026 | 3:25 PM

ಬೆಂಗಳೂರು, ಜನವರಿ 1: 2025ಕ್ಕೆ ಗುಡ್ ಬೈ ಹೇಳಿ 2026ರನ್ನು ಜನರು ಅದ್ಧೂರಿಯಾಗಿ ವೆಲ್​ಕಂ ಮಾಡಿದ್ದಾರೆ. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಸಂಭ್ರಮಾಚರಣೆ ಜೋರಾಗಿತ್ತು. ಹೊಸ ವರ್ಷದ (new year) ಸಂಭ್ರಮಾಚರಣೆಗೆ ಅನುಕೂಲವಾಗುವಂತೆ ಬಿಎಂಟಿಸಿಯಿಂದ (BMTC) ಹೆಚ್ಚುವರಿ ಬಸ್​ ಸೇವೆ ಒದಗಿಸಲಾಗಿತ್ತು. ಹೀಗಾಗಿ ಬಿಎಂಟಿಸಿ ಭಾರಿ ಆದಾಯ ಗಳಿಸಿದೆ. ನಿನ್ನೆ (ಬುಧವಾರ) ಒಂದೇ ದಿನ ಬಿಎಂಟಿಸಿಗೆ ಬರೋಬ್ಬರಿ 10 ಲಕ್ಷ ರೂ ಆದಾಯ ಹರಿದುಬಂದಿದೆ.

ಬಿಎಂಟಿಸಿ ಚೀಫ್ ಟ್ರಾಫಿಕ್ ಮ್ಯಾನೇಜರ್ ಪ್ರಭಾಕರ್ ರೆಡ್ಡಿ ಹೇಳಿದ್ದಿಷ್ಟು 

ಈ ಬಗ್ಗೆ ಬಿಎಂಟಿಸಿ ಚೀಫ್ ಟ್ರಾಫಿಕ್ ಮ್ಯಾನೇಜರ್ ಪ್ರಭಾಕರ್ ರೆಡ್ಡಿ ಮಾತನಾಡಿದ್ದು, ಹೊಸ ವರ್ಷಕ್ಕೆ ಹೆಚ್ಚುವರಿ ಬಸ್ ಸೇವೆ ಒದಗಿಸಲಾಗಿತ್ತು. ಹೆಚ್ಚುವರಿ 200 ಟ್ರಿಪ್ ಮಾಡಲಾಗಿದೆ. 4400 ಕಿ.ಮೀ ಬಸ್ ಓಡಾಡಿವೆ. ರಾತ್ರಿ 11 ಗಂಟೆಯಿಂದ ಮಧ್ಯರಾತ್ರಿ 3 ಗಂಟೆ ತನಕ ಬಸ್ ಸೇವೆ ಒದಗಿಸಲಾಗಿತ್ತು. ಸರಿಸುಮಾರು ಒಂದು ಲಕ್ಷ ಪ್ರಯಾಣಿಕರು ಪ್ರಯಾಣ ಮಾಡಿದ್ದಾರೆ. ನಿನ್ನೆ ಒಂದೇ ದಿನ ಬಿಎಂಟಿಸಿ 10 ಲಕ್ಷ ರೂ ಆದಾಯ ಗಳಿಸಿದೆ.

ಇದನ್ನೂ ಓದಿ: ಹೊಸ ವರ್ಷದ ದಿನ ನಮ್ಮ ಮೆಟ್ರೋಗೆ ಬಂಪರ್​ ಆದಾಯ: ಆದ ಕಲೆಕ್ಷನ್​ ಎಷ್ಟು?

ಕೋರಮಂಗಲ, ಇಂದಿರಾನಗರ, ಮಾಲ್ ಆಫ್ ಏಶಿಯಾ, ಎಂಜಿ ರಸ್ತೆ ಹೀಗೆ ನಾನಾ ಕಡೆಗಳಲ್ಲಿ ಸೇವೆ ವಿಸ್ತರಣೆ ಮಾಡಲಾಗಿತ್ತು. ಡಿಸೆಂಬರ್​ 20ರಂದು 6 ಕೋಟಿ 75 ಲಕ್ಷ ರೂ ಆದಾಯ ಇತ್ತು. ಐಟಿ ಬಿಟಿ ಜನರಿಗೆ ರಜೆ ಇರುವ ಕಾರಣ, ಡಿಸೆಂಬರ್ 24ರಿಂದ ಬಸ್ ಪ್ರಯಾಣಿಕರ ಸಂಖ್ಯೆ ಇಳಿಕೆ ಆಗಿತ್ತು ಎಂದು ಹೇಳಿದ್ದಾರೆ.

ಇದನ್ನೂ ಓದಿ: ನ್ಯೂ ಇಯರ್​​​ ಸಂಭ್ರಮ ಮಧ್ಯೆ ಕಿರಿಕ್: ಗೆಳೆಯನಿಗೆ ಹೊಡೆದ ಯುವತಿ, ನಡುರೋಡಲ್ಲೇ ಜೋಡಿ ಹೈಡ್ರಾಮಾ, ಲಾಠಿ ಚಾರ್ಜ್

ಡಿಸೆಂಬರ್​ 25, 27, 28ರಂದು ಕಡಿಮೆ ಪ್ರಯಾಣಿಕರು ಓಡಾಟ ಮಾಡಿದ್ದು, 60 ಲಕ್ಷ ರೂ ಆದಾಯ ಕಡಿಮೆ ಆಗಿತ್ತು. 6 ದಿನಗಳಲ್ಲಿ ಪ್ರಯಾಣಿಕರ ಸಂಖ್ಯೆ ಇಳಿಕೆ ಇತ್ತು. ಆದರೆ ಹೊಸ ವರ್ಷ ಹಿನ್ನೆಲೆ ಬುಧವಾರ ಒಂದೇ ದಿನ 1 ಲಕ್ಷ ಪ್ರಯಾಣಿಕರು ಹೆಚ್ಚಾಗಿದ್ದಾರೆ ಎಂದು ಬಿಎಂಟಿಸಿ ಚೀಫ್ ಟ್ರಾಫಿಕ್ ಮ್ಯಾನೇಜರ್ ಪ್ರಭಾಕರ್ ರೆಡ್ಡಿ ಮಾಹಿತಿ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.