ಬೆಂಗಳೂರು, ನ.11: ರಾಜಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಹವಮಾನದಲ್ಲಿ (Bengaluru Weather) ಸಾಕಷ್ಟು ಬದಲಾವಣೆಗಳಾಗುತ್ತಿದ್ದು ಬೆಳಗ್ಗೆ ಬಿಸಿಲಿದ್ರೆ, ಮಧ್ಯಾಹ್ನ ಮಳೆ, ಸಂಜೆ ಚಳಿಯ ವಾತಾವರಣ ಕಂಡುಬರುತ್ತಿದೆ. ಈ ಹವಮಾನಕ್ಕೆ ಮಕ್ಕಳು ಹಾಗೂ ದೊಡ್ಡವರಲ್ಲಿ ವೈರಲ್ ಫೀವರ್ ಗಳು (Viral Fever) ಹೆಚ್ಚಾಗಿವೆ. ಹೀಗಾಗಿ ನಗರದ ಕೆಸಿ ಜನರಲ್, ಇಂದಿರಾ ಗಾಂಧಿ, ವಿಕ್ಟೋರಿಯಾ ಆಸ್ಪತ್ರೆ ಸೇರಿದಂತೆ ಖಾಸಗಿ ಆಸ್ಪತ್ರೆಗಳಲ್ಲಿ ಅಡ್ಮಿಟ್ ಆಗುವವರ ಸಂಖ್ಯೆ ಜಾಸ್ತಿಯಾಗಿದೆ.
ಕಳೆದ ಒಂದು ವಾರದಿಂದ ನಗರದಲ್ಲಿ ಚಳಿಯ ಪ್ರಮಾಣ ಜಾಸ್ತಿಯಾಗುತ್ತಿದೆ. ಬೆಳಗ್ಗೆ ಸಂಜೆ ಚಳಿಯ ವಾತಾವರಣ ಕಂಡುಬರುತ್ತಿದ್ದು, ಇದರ ಪರಿಣಾಮ ಜನರ ಮೇಲೆ ಬೀರುತ್ತಿದೆ. ಮಕ್ಕಳಲ್ಲಿ ಉಸಿರಾಟದ ಸಮಸ್ಯೆ, ಜ್ವರ, ಕೆಮ್ಮು, ಶೀತದಂತಹ ಲಕ್ಷಣಗಳು ಕಂಡುಬರುತ್ತಿವೆ. ಇನ್ನು ದೊಡ್ಡವರಲ್ಲಿ ಅಸ್ತಮ ಇದ್ದವರಲ್ಲಿ ಉಸಿರಾಟದ ಸಮಸ್ಯೆ ಜಾಸ್ತಿಯಾಗಿದೆ. ಒಂದು ವಾರದಿಂದ ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣ 20%ರಷ್ಟು ಜಾಸ್ತಿಯಾಗಿದೆ. ಜನರು ಸುರಕ್ಷಿತವಾಗಿ ಇರುವಂತೆ ಡಾಕ್ಟರ್ಸ್ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: Brain Fever: ಮೆದುಳು ಜ್ವರ ಎಂದರೇನು? ಹೇಗೆ ಬರುತ್ತದೆ? ಲಕ್ಷಣ ಮತ್ತು ಚಿಕಿತ್ಸೆ ಏನು? ಸಂಪೂರ್ಣ ಮಾಹಿತಿ ಇಲ್ಲಿದೆ
ವೈರಲ್ ಫೀವರ್ನಿಂದ ಉಳಿಯಲು ಏನೆಲ್ಲ ಕ್ರಮಗಳನ್ನು ತೆಗೆದುಕೊಳ್ಳಬೇಕು
ಇನ್ನು, ಈ ಝೀಕಾ ವೈರಸ್ ಹಾವಳಿಯು ಜಾಸ್ತಿಯಾಗಿದ್ದು, ಬಿಬಿಎಂಪಿಯ ಏಳು ಜೋನ್ಗಳಿಗೆ ವಿಶೇಷ ಟೀಮ್ ಗಳನ್ನ ಮಾಡಿ ಬಿಬಿಎಂಪಿ ಆರೋಗ್ಯ ಇಲಾಖೆ ಕ್ರಮ ತೆಗೆದುಕೊಳ್ಳುವುದಕ್ಕೆ ಮುಂದಾಗಿದೆ. ನೀರು ನಿಂತಿರುವ ಕಡೆ ಕೆಮಿಕಲ್ ಸ್ಪ್ರೈ ಮಾಡಿ, ಮನೆ ಮನೆಗಳಿಗೆ ಬಿಬಿಎಂಪಿ ಸರ್ವೇ ಮಾಡುತ್ತಿದ್ದು, ಝೀಕಾ ವೈರಸ್ ಜೊತೆಗೆ ವೈರಲ್ ಫೀವರ್ ಕುರಿತಾಗಿ ಬಿಬಿಎಂಪಿ ಕ್ರಮ ತೆಗೆದುಕೊಳ್ಳುತ್ತಿದೆ ಅಂತ ಬಿಬಿಎಂಪಿ ಆರೋಗ್ಯ ಇಲಾಖೆಯ ವಿಶೇಷ ಆಯುಕ್ತರಾದ ತ್ರಿಲೋಕ ಚಂದ್ರ ತಿಳಿಸಿದರು.
ಒಟ್ಟಿನಲ್ಲಿ, ಹವಮಾನದ ವೈಪರಿತ್ಯದಿಂದಾಗಿ ಹವಮಾನದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿದ್ದು, ಜನರು ಎಚ್ಚರಿಕೆಯಿಂದ ಇರಬೇಕಾಗಿದೆ.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ