Bengaluru News: ಐದನೇ ಮಹಡಿಯಿಂದ ಬಿದ್ದು ಬಿಸಿಎ ವಿದ್ಯಾರ್ಥಿ ಸಾವು

| Updated By: ಆಯೇಷಾ ಬಾನು

Updated on: Feb 15, 2023 | 7:51 AM

ಪೊಲೀಸ್ ತನಿಖೆಯ ಪ್ರಕಾರ ಸುಚೀರ್ ಖಿನ್ನತೆಗೆ ಒಳಗಾಗಿದ್ದ ಮತ್ತು ಮಾನಸಿಕ ಚಿಕಿತ್ಸೆ ಪಡೆಯುತ್ತಿದ್ದ ಎಂದು ತಿಳಿದು ಬಂದಿದೆ.

Bengaluru News: ಐದನೇ ಮಹಡಿಯಿಂದ ಬಿದ್ದು ಬಿಸಿಎ ವಿದ್ಯಾರ್ಥಿ ಸಾವು
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಐದು ಅಂತಸ್ತಿನ ಕಟ್ಟಡದ ಮೇಲಿನಿಂದ ಬಿದ್ದು ಬಿಸಿಎ ಓದುತ್ತಿದ್ದ ವಿದ್ಯಾರ್ಥಿ ಸಾವನ್ನಪ್ಪಿಸುವ ಘಟನೆ ಮಂಗಳವಾರ ನಡೆದಿದೆ. ಆಂಧ್ರಪ್ರದೇಶದ ನೆಲ್ಲೂರು ಮೂಲದ ಸುಚೀರ್ (21) ಬೆಳಗ್ಗೆ 9.30ರ ಸುಮಾರಿಗೆ ಐದನೇ ಮಹಡಿಯ ಟೆರೇಸ್‌ಗೆ ನಡೆದುಕೊಂಡು ಹೋಗಿ ಅಲ್ಲಿಂದ ಬಿದ್ದಿದ್ದಾನೆ. ಸುಚೀರ್ ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿದ್ದಾನೆಯೇ ಅಥವಾ ಜಿಗಿದಿದ್ದಾನೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ. ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ. ಸುಚೀರ್ ಮತ್ತಿಕೆರೆಯ ಪ್ರಸಿದ್ಧ ಖಾಸಗಿ ಕಾಲೇಜಿನ ವಿದ್ಯಾರ್ಥಿಯಾಗಿದ್ದು, ವಿದ್ಯಾರಣ್ಯಪುರದ ಎನ್‌ಟಿಐ ಲೇಔಟ್‌ನಲ್ಲಿ ತನ್ನ ತಾಯಿ ಮತ್ತು ಅಜ್ಜನೊಂದಿಗೆ ವಾಸಿಸುತ್ತಿದ್ದ. ಸುಚೀರ್ ತಂದೆ ಅಮೇರಿಕಾದಲ್ಲಿದ್ದಾರೆ. ಸುಚೀರ್ ಮತ್ತು ಅವರ ತಾಯಿ ಯುಎಸ್ಎಯಲ್ಲಿ ಕೆಲವು ವರ್ಷಗಳ ಕಾಲ ವಾಸಿಸುತ್ತಿದ್ದರು ಆದರೆ ಈಗ ಬೆಂಗಳೂರಿಗೆ ಹಿಂತಿರುಗಿದರು. ಪೊಲೀಸ್ ತನಿಖೆಯ ಪ್ರಕಾರ ಸುಚೀರ್ ಖಿನ್ನತೆಗೆ ಒಳಗಾಗಿದ್ದ ಮತ್ತು ಮಾನಸಿಕ ಚಿಕಿತ್ಸೆ ಪಡೆಯುತ್ತಿದ್ದ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: Gadag: ಕಲಿಕಾ ಹಬ್ಬದಂದು ಮಕ್ಕಳ ರಂಗೋಲಿಯಲ್ಲಿ ಮೂಡಿದ ಮತದಾನ ಜಾಗೃತಿ

ಕುಡಿಯಲು ಹಣ ಕೊಡದ ತಾತನನ್ನೇ ಹತ್ಯೆಗೈದ ಮೊಮ್ಮಗ

ಬೆಂಗಳೂರು: ಆತನಿಗೆ ದುಡಿದು ತಿನ್ನುವ ಶಕ್ತಿ ಇದೆ, ಆದರೆ ತೀವ್ರ ಕುಡಿತದ ಚಟಕ್ಕೆ ಬಿದ್ದಿದ್ದಿದ್ದರಿಂದ ಮದ್ಯ (Alcohol) ಖರೀದಿಗೆ ಹಣ ನೀಡಲು ತಾತನ ಬಳಿ ಪೀಡಿಸುತ್ತಿದ್ದನು. ದಿನ ನಿತ್ಯ ತಾತನೊಂದಿಗೆ ಜಗಳ ಮಾಡುತ್ತಿದ್ದ ಮೊಮ್ಮಗ ದೊಣ್ಣೆಯಿಂದ ಹಲ್ಲೆ ನಡೆಸಿ ಕತ್ತು ಹಿಚುಕಿ ಕೊಲೆ (Murder) ಮಾಡಿಯೇ ಬಿಟ್ಟಿದ್ದಾನೆ. ಅಷ್ಟಕ್ಕೂ ಈ ಘಟನೆ ನಡೆದಿದ್ದು, ಬೆಂಗಳೂರಿನ ಕಮ್ಮನಹಳ್ಳಿ ಸ್ಲಮ್​ನಲ್ಲಿ ನಡೆದಿದೆ. ಜೋಸೆಫ್ (54) ಕೊಲೆಯಾದ ವ್ಯಕ್ತಿ. ಪ್ರಕರಣ ಸಂಬಂಧ ಆರೋಪಿ ಆ್ಯಂಟೊನಿಯನ್ನು ಬಾಣಸವಾಡಿ ಠಾಣಾ ಪೊಲೀಸರು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.

ಜೋಸೆಫ್ ಸಂಬಂಧದಲ್ಲಿ ಆ್ಯಂಟೊನಿಗೆ ತಾತ ಆಗಬೇಕು. ಅಂದರೆ ಜೋಸೆಫ್ ಅಕ್ಕನ ಮೊಮ್ಮಗ ಆ್ಯಂಟೋನಿ. ಚಿಕ್ಕವನಿದ್ದಾಗಿಂದಲೂ ಆ್ಯಂಟೊನಿಯನ್ನು ಜೋಸೆಫ್ ಸಾಕುತ್ತಿದ್ದರು. ಆದರೆ ಆ್ಯಂಟೊನಿ ಮಾತ್ರ ಕುಡಿತದ ದಾಸನಾಗಿದ್ದನು. ಅದರಂತೆ ನಿತ್ಯ ಮೂರು ಹೊತ್ತು ಅನ್ನ ಹಾಕುತ್ತಿದ್ದ ತಾತ ಜೋಸೆಫ್​ ಜೊತೆ ಮೊಮ್ಮಗ ಆ್ಯಂಟೊನಿ ಮದ್ಯದ ವಿಚಾರವಾಗಿ ಜಗಳ ನಡೆಸುತ್ತಿದ್ದನು.

Published On - 7:31 am, Wed, 15 February 23