ಬೆಂಗಳೂರು ಟ್ರಾಫಿಕ್ ಸಮಸ್ಯೆ ಬಗೆಹರಿಸಲು ಪೊಲೀಸರ ಜತೆ ಕೈಜೋಡಿಸಲಿದ್ದಾರೆ ಕಾಲೇಜು ವಿದ್ಯಾರ್ಥಿಗಳು!
ಈ ಉಪಕ್ರಮವು ಸಂಚಾರ ದಟ್ಟಣೆ ಮೇಲ್ವಿಚಾರಣೆ, ನಿಯಂತ್ರಣ, ಸಂಚಾರ ಕಾನೂನು ಉಲ್ಲಂಘಿಸುವವರನ್ನು ಗುರುತಿಸುವುದು ಮತ್ತು ಸಂಚಾರ ದಟ್ಟಣೆಯ ಮೂಲ ಕಾರಣಗಳನ್ನು ಅರ್ಥಮಾಡಿಕೊಳ್ಳಲು ಸಂಬಂಧಿಸಿದ ನಿರ್ಣಾಯಕ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಲಿದೆ.
ಬೆಂಗಳೂರು, ಡಿಸೆಂಬರ್ 18: ಸಂಚಾರ ದಟ್ಟಣೆಯ ರಿಯಲ್ ಟೈಮ್ ನಿರ್ವಹಣೆಗಾಗಿ (Traffic Problem) ನಿಟ್ಟೆ ಮೀನಾಕ್ಷಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯು ಟ್ರಾಫಿಕ್ ಪೋಲೀಸ್ ಜೊತೆ ಒಪ್ಪಂದಕ್ಕೆ ಸಹಿ ಹಾಕಿದೆ. ಬೆಂಗಳೂರಿನ ಟ್ರಾಫಿಕ್ ಕೇವಲ ಸಾರಿಗೆ ಸಮಸ್ಯೆಯಲ್ಲ, ಇದು ಆರ್ಥಿಕ ಮತ್ತು ಪರಿಸರ ಸಮಸ್ಯೆಯಾಗಿದೆ. ತಂತ್ರಜ್ಞಾನ, ಪಾಲುದಾರಿಕೆಗಳು ಮತ್ತು ನವೀನ ವಿಧಾನಗಳಲ್ಲಿ ಹೂಡಿಕೆ ಮಾಡುವ ಮೂಲಕ, ನಾವು ದಟ್ಟಣೆಯನ್ನು ಸರಾಗಗೊಳಿಸುವುದು ಮಾತ್ರವಲ್ಲದೆ ಉತ್ಪಾದಕತೆಯನ್ನು ಹೆಚ್ಚಿಸಬಹುದು, ಮಾಲಿನ್ಯವನ್ನು ಕಡಿಮೆ ಮಾಡಬಹುದು ಮತ್ತು ಜೀವನದ ಗುಣಮಟ್ಟವನ್ನು ಸುಧಾರಿಸಬಹುದು ಎಂದು ಒಪ್ಪಂದದ ಬಳಿಕ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂಎನ್ ಅನುಚೇತ್ ಹೇಳಿದ್ದಾರೆ.
ಈ ಉಪಕ್ರಮವು ಸಂಚಾರ ದಟ್ಟಣೆ ಮೇಲ್ವಿಚಾರಣೆ, ನಿಯಂತ್ರಣ, ಸಂಚಾರ ಕಾನೂನು ಉಲ್ಲಂಘಿಸುವವರನ್ನು ಗುರುತಿಸುವುದು ಮತ್ತು ಸಂಚಾರ ದಟ್ಟಣೆಯ ಮೂಲ ಕಾರಣಗಳನ್ನು ಅರ್ಥಮಾಡಿಕೊಳ್ಳಲು ಸಂಬಂಧಿಸಿದ ನಿರ್ಣಾಯಕ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಲಿದೆ.
ಇದಲ್ಲದೆ, ಸಹಭಾಗಿತ್ವವು ನಿಟ್ಟೆ ಮೀನಾಕ್ಷಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯ ವಿದ್ಯಾರ್ಥಿಗಳಿಗೆ ಇಂಟರ್ನ್‌ಶಿಪ್‌ಗೆ ಅವಕಾಶ ನೀಡಲಿದೆ. ಬೋಧನಾ ವಿಭಾಗದ ಸದಸ್ಯರು, ಸಂಶೋಧಕರು ಮತ್ತು ವೃತ್ತಿಪರರ ಮಾಹಿತಿ ವಿನಿಮಯವನ್ನು ಸುಲಭಗೊಳಿಸಲಿದೆ.
ಇದನ್ನೂ ಓದಿ: ಬೆಂಗಳೂರು ಟ್ರಾಫಿಕ್ ಸಮಸ್ಯೆ ಬಗೆಹರಿಸಲು ಸಂಚಾರಿ ಪೊಲೀಸರೊಂದಿಗೆ ಕೈ ಜೋಡಿಸಿದ ಐಐಎಸ್ಸಿ
ನಗರದಲ್ಲಿ ಟ್ರಾಫಿಕ್ ಸಮಸ್ಯೆ ಬಗೆಹರಿಸಲು ಭಾರತೀಯ ವಿಜ್ಞಾನ ಸಂಸ್ಥೆ (IISC) ಸಂಚಾರಿ ಪೊಲೀಸರೊಂದಿಗೆ ಕೈಜೋಡಿಸಿದ ಬಗ್ಗೆ ಇತ್ತೀಚೆಗಷ್ಟೇ ವರದಿಯಾಗಿತ್ತು. ಸಂಚಾರಿ ಪೊಲೀಸರು ಸಂಗ್ರಹಿಸಿರುವ ದತ್ತಾಂಶ ಬಳಸಿ ಐಐಎಸ್ಸಿ ಸಂಶೋಧನೆ ನಡೆಸಿ ಸಂಚಾರಿ ಪೊಲೀಸರಿಗೆ ಸಲಹೆ ನೀಡಲಿದೆ. ಮಹತ್ವದ ಯೋಜನೆಯ ಒಪ್ಪಂದಕ್ಕೆ ಸಂಚಾರಿ ಪೊಲೀಸರು ಸಹಿಮಾಡಿದ್ದು, ಇದಕ್ಕಾಗಿ ಸಂಚಾರಿ ವಿಭಾಗದ ಪೊಲೀಸರಿಗೆ ಭಾರತೀಯ ವಿಜ್ಞಾನ ಸಂಸ್ಥೆ ತರಬೇತಿ ನೀಡಲಿದೆ ಎಂದು ಹೇಳಲಾಗಿತ್ತು. ಇದೀಗ ಅದರ ಬೆನ್ನಲ್ಲೇ ನಿಟ್ಟೆ ಮೀನಾಕ್ಷಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆ ಕೂಡ ಒಪ್ಪಂದ ಮಾಡಿಕೊಂಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ