AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Lalbagh Mango Mela: ಜೂನ್ 2 ರಿಂದ 11ರ ವರೆಗೆ ಲಾಲ್​ಬಾಗ್​ನಲ್ಲಿ ಮಾವು ಮೇಳ

ಬೆಂಗಳೂರಿನ ಲಾಲ್‌ಬಾಗ್ ಬೊಟಾನಿಕಲ್ ಗಾರ್ಡನ್‌ ಆವರಣದಲ್ಲಿ ಜೂನ್ 11 ರವರೆಗೆ 9 ದಿನಗಳ ಕಾಲ ಮಾವು ಮೇಳ ನಡೆಯಲಿದೆ.

Lalbagh Mango Mela: ಜೂನ್ 2 ರಿಂದ 11ರ ವರೆಗೆ ಲಾಲ್​ಬಾಗ್​ನಲ್ಲಿ ಮಾವು ಮೇಳ
ಸಾಂದರ್ಭಿಕ ಚಿತ್ರ
ಗಣಪತಿ ಶರ್ಮಾ
|

Updated on:May 31, 2023 | 5:10 PM

Share

ಬೆಂಗಳೂರು: ಕರ್ನಾಟಕ ತೋಟಗಾರಿಕೆ ಇಲಾಖೆ (Horticulture department) ವತಿಯಿಂದ ಲಾಲ್‌ಬಾಗ್‌ನಲ್ಲಿ (Lalbagh) ಆಯೋಜಿಸಲಾಗುವ ವಾರ್ಷಿಕ ಮಾವು ಮೇಳವು ಈ ವರ್ಷ ಜೂನ್ 2 ರಂದು ಆರಂಭವಾಗಲಿದೆ. ಬೆಂಗಳೂರಿನ ಲಾಲ್‌ಬಾಗ್ ಬೊಟಾನಿಕಲ್ ಗಾರ್ಡನ್‌ (Lalbagh Botanical Garden) ಆವರಣದಲ್ಲಿ ಮಾವು ಮೇಳ ನಡೆಯಲಿದೆ. ಮಾವಿನ ಮೇಳವು ಜೂನ್ 11 ರವರೆಗೆ 9 ದಿನಗಳ ಕಾಲ ನಡೆಯಲಿದೆ ಮತ್ತು ಎಲ್ಲಾ ಗ್ರಾಹಕರಿಗೆ ಉಚಿತ ಪ್ರವೇಶ ನೀಡಲಾಗಿದೆ. ಮೇಳದಲ್ಲಿ ರಾಜ್ಯದ ವಿವಿಧೆಡೆಯಿಂದ ಬಂದ ಬೆಳೆಗಾರರು ಮಳಿಗೆಗಳನ್ನು ತೆರೆಯಲಿದ್ದು ಮಾವು ಮಾರಾಟ ಮಾಡಲಿದ್ದಾರೆ ಎಂದು ತೋಟಗಾರಿಕೆ ಇಲಾಖೆ ತಿಳಿಸಿದೆ.

ಪ್ರತಿ ವರ್ಷ ಸುಮಾರು 100 ರಿಂದ 120 ರಷ್ಟು ಮಳಿಗೆಗಳು ಮಾವು ಮೇಳದಲ್ಲಿರುತ್ತವೆ. ಆದರೆ, ಈ ವರ್ಷ ಇಳುವರಿ ಕಡಿಮೆಯಾಗಿರುವುದರಿಂದಾಗಿ ಮಳಿಗೆಗಳ ಸಂಖ್ಯೆಯನ್ನು 40 ಕ್ಕೆ ಇಳಿಸಲಾಗುತ್ತದೆ ಎಂದು ವರದಿಯೊಂದು ತಿಳಿಸಿದೆ. ಈ ವರ್ಷ ಆಲಿಕಲ್ಲು ಮಳೆಯಿಂದಾಗಿ ಮಾವಿನ ಇಳುವರಿ ಕಡಿಮೆಯಾಗಿದೆ. ಹೀಗಾಗಿ ಕಡಿಮೆ ಮಳಿಗೆಗಳನ್ನು ತೆರೆಯಲಾಗುತ್ತಿದೆ.

ಮಾವು ಮೇಳ ವಿಳಂಬಕ್ಕೆ ಕಾರಣವೇನು?

ಸಾಮಾನ್ಯವಾಗಿ ಪ್ರತಿ ವರ್ಷ ಲಾಲ್​ಬಾಗ್​ನಲ್ಲಿ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಮಾವು ಮೇಳ ನಡೆಯುತ್ತದೆ. ಆದರೆ ಈ ಬಾರಿ ವಿಧಾನಸಭಾ ಚುನಾವಣೆಯಿಂದಾಗಿ ವಿಳಂಬವಾಗಿದೆ.

ಇದನ್ನೂ ಓದಿ: Mango Price: ಮಾವು ಪ್ರಿಯರಿಗೆ ಕಹಿ ಸುದ್ದಿ, ಈ ಬಾರಿ ಬೆಲೆ ದುಬಾರಿ: ದರ ಏರಿಕೆಯ ಸತ್ಯ ಇಲ್ಲಿದೆ

ಬೆಂಗಳೂರು ಮತ್ತು ಕರ್ನಾಟಕದ ವಿವಿಧ ಭಾಗಗಳಿಂದ ಬರುವ ಮಾವು ಬೆಳೆಗಾರರು ಇಲ್ಲಿ ಮಳಿಗೆಗಳನ್ನು ತೆರೆಯುತ್ತಾರೆ. ವಿವಿಧ ತಳಿಗಳ ಹಣ್ಣುಗಳು ಮಾವು ಪ್ರಿಯರನ್ನು ಸೆಳೆಯುತ್ತವೆ. ಮಲ್ಲಿಕಾ, ಮಾಲ್ಗೋವಾ, ಸೆಂಧೂರ, ಸಕ್ಕರೆಗುತ್ತಿ ಮತ್ತು ವಿವಿಧ ತಳಿಗಳ ಮಾವಿನ ಹಣ್ಣುಗಳನ್ನು ಮಾವು ಮೇಳದಲ್ಲಿ ಮಾರಾಟ ಮಾಡಲಾಗುತ್ತದೆ.

ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 5:09 pm, Wed, 31 May 23

Follow Us
Ganapathi Sharma
Ganapathi Sharma

ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 13 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು.

Read More