1.5 ವರ್ಷದ ಪೋರಿ ಯಾವುದನ್ನೆ ತೋರಿಸಿದರೂ ಫಟ್ ಅಂತ ಹೇಳ್ತಾಳೆ! ಇವಳ ಟ್ಯಾಲೆಂಟ್​ಗೆ ಮನಸೋಲದವರೇ ಇಲ್ಲ

ಬಂದೂವರೆ ವರ್ಷದ ಸಾನ್ವಿ ಎಂಬ ಪುಟ್ಟ ಪೋರಿ 20 ಬಗೆಯ ಆ್ಯಕ್ಟಿವಿಟಿಸ್ ಗಳನ್ನ‌ ಕಲಿತಿದ್ದು, ಬುಕ್ ಆಫ್ ದ ರೇಕಾರ್ಡ್ ನಲ್ಲಿ ಆಕೆಯ ಹೆಸರು ಬರುವಂತೆ ಮಾಡಲು ಪೋಷಕರು ಮಗಳಿಗೆ ಟ್ರೈನ್ ಮಾಡುತ್ತಿದ್ದಾರೆ. ತನ್ನ ತೊದಲು ನುಡಿಗಳಿಂದಲೇ ಈ ಪುಟ್ಟ ಬಾಲಕಿ ತಾಯಿ ತೋರಿಸುವ ಎಲ್ಲವನ್ನೂ ಗುರುತಿಸಿ ಹೇಳುತ್ತಾಲೆ.

1.5 ವರ್ಷದ ಪೋರಿ ಯಾವುದನ್ನೆ ತೋರಿಸಿದರೂ ಫಟ್ ಅಂತ ಹೇಳ್ತಾಳೆ! ಇವಳ  ಟ್ಯಾಲೆಂಟ್​ಗೆ ಮನಸೋಲದವರೇ ಇಲ್ಲ
ಸಾನ್ವಿ
Follow us
Poornima Agali Nagaraj
| Updated By: ಆಯೇಷಾ ಬಾನು

Updated on: Jan 25, 2024 | 4:17 PM

ಬೆಂಗಳೂರು, ಜ.25: ಒಂದು ವರ್ಷದ ಮಗು ತನ್ನ ತಂದೆಯನ್ನ ಗುರುತಿಸೋದೇ ಕಷ್ಟ.‌ ಅಂತದ್ರಲ್ಲಿ ಒಂದೂವರೆ ವರ್ಷದ ಮಗು ಎಲ್ಲರ ಹೆಸರನ್ನ ಹೇಳುತ್ತೆ ಅಂದ್ರೆ ನೀವು ನಂಬಲೇ ಬೇಕು. ಹುರಿದಂತೆ ಮತಾನಾಡುತ್ತಿರುವ ಪುಟ್ಟ ಪೋರಿ, ತನ್ನ ತಾಯಿ ತೋರಿಸಿದ ಫೋಟೋಗಳನ್ನ ಕ್ಷಣಮಾತ್ರದಲ್ಲಿ ಗುರುತಿಸುತ್ತಾಳೆ. ಬಂದೂವರೆ ವರ್ಷದ ಸಾನ್ವಿ ಎಂಬ ಪುಟ್ಟ ಪೋರಿ 20 ಬಗೆಯ ಆ್ಯಕ್ಟಿವಿಟಿಸ್ ಗಳನ್ನ‌ ಕಲಿತಿದ್ದು, ಬುಕ್ ಆಫ್ ದ ರೇಕಾರ್ಡ್ ನಲ್ಲಿ ತನ್ನ ಹೆಸರು ಬರುವಂತೆ ಮಾಡಲು ಪ್ರತಿದಿನ ಪ್ರಯತ್ನಿಸುತ್ತಿದ್ದಾಳೆ.

ಸಾಮಾನ್ಯವಾಗಿ ಎರಡು ವರ್ಷದವರೆಗೆ ಮಕ್ಕಳು ತಮ್ಮ ತಂದೆ-ತಾಯಿಯನ್ನ ಗುರುತಿಸುವುದೇ ಕಷ್ಟ. ಅಂತದ್ರಲ್ಲಿ ಈ ಮಗು ಇಂಗ್ಲಿಷ್ ಭಾಷೆಯಲ್ಲಿ ತಿಂಗಳುಗಳು, ವಾರಗಳ ಹೆಸರು, ಒಂದರಿಂದ ಹತ್ತು ಅಂಕಿ, ಬಣ್ಣಗಳನ್ನು ಗುರುತಿಸುತ್ತಾಳೆ, ಸಾಕು ಪ್ರಾಣಿ, ಹಣ್ಣುಗಳನ್ನು ಗುರುತಿಸಿ ಹೆಸರುಗಳನ್ನು ಹೇಳುತ್ತಾಳೆ. ವಾಹನಗಳನ್ನು ಗುರುತಿಸುತ್ತಾಳೆ. ಗಣ್ಯ ವ್ಯಕ್ತಿ, ಗ್ರಹಗಳು, ವಿರುದ್ಧ ಪದಗಳು, ವಿಶ್ವದ 7 ಅದ್ಭುತಗಳನ್ನು ಗುರುತಿಸಿ ಹೇಳುತ್ತಾಳೆ. ಸಾನ್ವಿಯ ಈ ಟ್ಯಾಲೆಂಟ್​ಗೆ ಪೋಷಕರು ಸಂತೋಷ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ:ಥಟ್ ಅಂತ ನಿಮ್ಮ ಅಡುಗೆಮನೆಯನ್ನು ಕ್ಲೀನ್ ಮಾಡೋದು ಹೇಗೆ?

ಇನ್ನು, ಸಾನ್ವಿ ಮೂರು ತಿಂಗಳು ಇದ್ದಗಿನಿಂದಲೇ ಅವಳಿಗೆ ನಾವು ಪ್ಲೇ ಕಾರ್ಡ್ಸ್ ಗಳನ್ನ‌ ತೋರಿಸುತ್ತಿದ್ವಿ. ನೋಡಿ ರಿಯಾಕ್ಟ್ ಮಾಡ್ತಿದ್ಲೂ. ಇದೀಗಾ ಎಲ್ಲಾ ಹೆಸರುಗಳನ್ನ ತೊದಲು ನುಡಿಯಲ್ಲಿಯೇ ಹೇಳ್ತಾಳೆ.‌ ಒಟ್ಟು 20ಕ್ಕೂ ಹೆಚ್ಚು ಬಗೆ ಬಗೆಯ ವಸ್ತುಗಳನ್ನ ಗುರಿತಿಸುತ್ತಾಳೆ ಅಂತ ಸಾನ್ವಿ ತಾಯಿ ಅನುಷ ತಿಳಿಸಿದರು.

ಒಟ್ನಲ್ಲಿ, ಒಂದೂವರೆ ವರ್ಷದ ಮಕ್ಕಳು ಮಾತಾನಾಡುವುದೇ ಕಷ್ಟ. ಅಂತದ್ರಲ್ಲಿ ಒಂದೂವರೆ ವರ್ಷದ ಸಾನ್ವಿ ಚಿನಕುರುಳಿಯಂತೆ ಮಾತಾನಾಡುವುದಲ್ಲದೇ ನೋಡುಗರನ್ನ ತನ್ನತ್ತ ಸೆಳೆಯುತ್ತಿರುವುದು‌ ಮಾತ್ರ ಸುಳ್ಳಲ್ಲ.‌

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್