ಮೆಟ್ರೋ ಕಾಮಗಾರಿ: ಇಂದಿನಿಂದ 4 ತಿಂಗಳವರೆಗೆ ಸೆಂಟ್ರಲ್ ಜಂಕ್ಷನ್ ಫ್ಲೈಓವರ್ ಬಂದ್
ಮೆಟ್ರೋ ಕಾಮಗಾರಿ ಹಿನ್ನೆಲೆ ಇಂದಿನಿಂದ 4 ತಿಂಗಳವರೆಗೆ ಸೆಂಟ್ರಲ್ ಜಂಕ್ಷನ್ ಫ್ಲೈಓವರ್ ಭಾಗಶಃ ಬಂದ್ ಆಗಿದೆ. ಎರಡೂ ಕ್ಯಾರೇಜ್ ಮಾರ್ಗಗಳಲ್ಲಿ 250 ಮೀ. ಭಾಗಶಃ ಬ್ಯಾರಿಕೇಡ್ ಹಾಕಿ ಕ್ಲೋಸ್ ಮಾಡಲಾಗಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತದಿಂದ ಮಾಧ್ಯಮ ಪ್ರಕಟಣೆ ಹೊರಡಿಸಲಾಗಿದೆ.
ಬೆಂಗಳೂರು, ಅ.21: ನಮ್ಮ ಮೆಟ್ರೋ (Namma Metro) ಕಾಮಗಾರಿ ಹಿನ್ನೆಲೆ ಸೆಂಟ್ರಲ್ ಜಂಕ್ಷನ್ ಫ್ಲೈಓವರ್ ಕ್ಲೋಸ್ ಮಾಡಲಾಗುತ್ತಿದೆ. ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್ ಪ್ಲೈಓವರ್ (ಮಡಿವಾಳ ಬದಿ) ಇಂದಿನಿಂದ ನಾಲ್ಕು ತಿಂಗಳವರೆಗೆ ಭಾಗಶಃ ಬಂದ್ ಆಗಿರಲಿದೆ. ಯಮಾರಿ ಸಿಲ್ಕ್ ಬೋರ್ಡ್ ಜಂಕ್ಷನ್ ಫ್ಲೈ ಓವರ್ ಹತ್ತಿದ್ರೆ ಟ್ರಾಫಿಕ್ ನಲ್ಲಿ ಸಿಕ್ಕಿ ಹಾಕಿಕೊಳ್ಳುವುದು ಪಕ್ಕ.
ಸಿಲ್ಕ್ ಬೋರ್ಡ್ ಫ್ಲೈಓವರ್ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ವರೆಗಿನ ಮೆಟ್ರೋ ಕಾಮಗಾರಿಗಳು ಆರಂಭವಾಗಿವೆ. ಈ ಕಾಮಗಾರಿಯನ್ನು ಆದಷ್ಟು ಬೇಗನೇ ಮುಗಿಸಬೇಕಿರುವ ಒತ್ತಡ ಬಿಎಂಆರ್‌ಸಿಎಲ್ ಮೇಲಿದೆ. ಈ ಹಿನ್ನೆಲೆಯಲ್ಲಿ ಸಿಲ್ಕ್ ಬೋರ್ಡ್ ಫ್ಲೈಓವರ್ ಅನ್ನು ಕೆಲ ತಿಂಗಳ ಕಾಲ ಮುಚ್ಚಲೇಬೇಕಿರುವ ಅನಿವಾರ್ಯತೆ ಎದುರಾಗಿದ್ದು ಇಂದಿನಿಂದ ನಾಲ್ಕು ತಿಂಗಳವರೆಗೆ ಬಂದ್ ಮಾಡಿ ಕಾಮಗಾರಿ ಮುಗಿಸಲು ಬಿಎಂಆರ್‌ಸಿಎಲ್ ಯೋಜಿಸಿದೆ.
ಇದನ್ನೂ ಓದಿ: ಬೆಂಗಳೂರಿನ ನಮ್ಮ ಮೆಟ್ರೋ ವಿಸ್ತೃತ ಮಾರ್ಗ ಉದ್ಘಾಟಿಸಿದ ಮೋದಿ, ಸಿದ್ದರಾಮಯ್ಯ ಹೇಳಿದ್ದೇನು?
ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ಬಿಎಂಆರ್‌ಸಿಎಲ್, ಸೇಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್ ಮೇಲ್ಸೇತುವೆ ಅಪ್ ಮತ್ತು ಡೌನ್ ರಾಂಪ್ ಕ್ಯಾರೇಜ್ ವೇ ( ಮಡಿವಾಳ ಬದಿ ) ಲೂಪ್‌ಗಳು ಮತ್ತು ರಾಂಪ್ ಫ್ಲೈಓವರ್ ಸ್ಟ್ರೇಜಿಂಗ್ ಕಾಮಗಾರಿ ಕೈಗೊಳ್ಳಲು ತಾತ್ಕಾಲಿಕವಾಗಿ ದಿನಾಂಕ 21-10- 2023 ರಿಂದ ( ನಾಲ್ಕು ತಿಂಗಳವರೆಗೂ ಎರಡು ಕ್ಯಾರೇಜ್ ಮಾರ್ಗಗಳಲ್ಲಿ 2.50 ಮೀಟರ್ ) ಭಾಗಶಃ ಬ್ಯಾರಿಕೇಡ್ ಹಾಕಲಾಗುವುದು. ಸಾರ್ವಜನಿಕರು ಸಹಕರಿಸಿ ಇದರಿಂದಾಗುವ ಅನಾನುಕೂಲತೆಗೆ ವಿಷಾಧಿಸುತ್ತೇವೆ’ ಎಂದು ತಿಳಿಸಿದೆ.
ನಮ್ಮ ಮೆಟ್ರೋದ ನೀಲಿ ಮಾರ್ಗವು ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲಿದೆ.
ಪ್ಲೈಓವರ್ ಬಂದ್ ಜನರ ಆಕ್ರೋಶ
ಸಿಲ್ಕ್ ಬೋರ್ಡ್ ನಲ್ಲಿ ಮೆಟ್ರೋ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆ ಸಿಲ್ಕ್ ಬೋರ್ಡ್ ಜಂಕ್ಷನ್ ನಾ ಮಡಿವಾಳದ ಒಂದು ಬದಿಯನ್ನ ಬಿಎಂಆರ್‌ಸಿಎಲ್ ಕ್ಲೋಸ್ ಮಾಡುತ್ತಿದ್ದು ಇದಕ್ಕೆ ವಾಹನ ಸವಾರರು ಆಕ್ರೊಶ ಹೊರ ಹಾಕಿದ್ದಾರೆ. ಮೊದಲೇ ಟ್ರಾಫಿಕ್ ನಿಂದ ಪರದಾಡುತ್ತಿದ್ದೇವೆ. ಇದೀಗಾ ಮಡಿವಾಳ ರಸ್ತೆಗೆ ಬ್ಯಾರಿಕೆಟ್ ಹಾಕಿದ್ರೆ ತುಂಬನೇ ಕಷ್ಟ ಆಗುತ್ತೆ. ಐಟಿ ಬಿಟಿ ಕಂಪನಿಗಳ ವರ್ಕರ್ಸ್ ಕೆಲಸ ಮಾಡೊದೇ ಕಷ್ಟವಾಗಿ ಹೋಗುತ್ತೆ ಎಂದು ವಾಹನ ಸವಾರರು ಕಿಡಿಕಾರಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 10:45 am, Sat, 21 October 23