ಬೆಂಗಳೂರಿನ ನಮ್ಮ ಮೆಟ್ರೋ ವಿಸ್ತೃತ ಮಾರ್ಗ ಉದ್ಘಾಟಿಸಿದ ಮೋದಿ, ಸಿದ್ದರಾಮಯ್ಯ ಹೇಳಿದ್ದೇನು?

ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅಧಿಕೃತವಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದ್ದಾರೆ. ಮೆಟ್ರೋ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಕೂಡ ಭಾಗಿಯಾಗಿದ್ದು ಕೆ.ಆರ್.ಪುರ-ಬೈಯ್ಯಪ್ಪನಹಳ್ಳಿ, ಕೆಂಗೇರಿ-ಚಲ್ಲಘಟ್ಟ ಮಾರ್ಗ ಉದ್ಘಾಟನೆ ಮಾಡಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ತಿಳಿಸಿದ್ದಾರೆ.

ಬೆಂಗಳೂರಿನ ನಮ್ಮ ಮೆಟ್ರೋ ವಿಸ್ತೃತ ಮಾರ್ಗ ಉದ್ಘಾಟಿಸಿದ ಮೋದಿ, ಸಿದ್ದರಾಮಯ್ಯ ಹೇಳಿದ್ದೇನು?
(ಮೋದಿ-ಸಿದ್ದರಾಮಯ್ಯ) ಸಾಂದರ್ಭಿಕ ಚಿತ್ರ
Follow us
| Updated By: ಆಯೇಷಾ ಬಾನು

Updated on:Oct 20, 2023 | 1:19 PM

ಬೆಂಗಳೂರು, ಅ.20: ಈಗಾಗಲೇ ಸಂಚಾರ ನಡೆಸುತ್ತಿರುವ ನಮ್ಮ ಮೆಟ್ರೋ (Namma Metro) ವಿಸ್ತೃತ ಮಾರ್ಗವನ್ನು ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (PM Narendra Modi) ಅಧಿಕೃತವಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದ್ದಾರೆ. ಮೆಟ್ರೋ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ಕೂಡ ಭಾಗಿಯಾಗಿದ್ದು ಕೆ.ಆರ್.ಪುರ-ಬೈಯ್ಯಪ್ಪನಹಳ್ಳಿ, ಕೆಂಗೇರಿ-ಚಲ್ಲಘಟ್ಟ ಮಾರ್ಗ ಉದ್ಘಾಟನೆ ಮಾಡಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ತಿಳಿಸಿದ್ದಾರೆ.

ಕೆ.ಆರ್.ಪುರಂ- ಬೈಯಪ್ಪನಹಳ್ಳಿ ಮತ್ತು ಕೆಂಗೇರಿ- ಚಲ್ಲಘಟ್ಟ ಸೇರಿ 2 ವಿಸ್ತೃತ ಮಾರ್ಗಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟಿಸಿದರು. ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯನವರು ಕೂಡ ಭಾಗಿಯಾಗಿದ್ದರು. ವರ್ಚುವಲ್ ಮೂಲಕ ಕನ್ನಡದಲ್ಲೇ ಭಾಷಣ ಆರಂಭಿಸಿದ ಸಿಎಂ ಸಿದ್ದರಾಮಯ್ಯ ಅವರು, ರಾಜ್ಯ ಹಾಗೂ ಬೆಂಗಳೂರು ಜನತೆ ಪರವಾಗಿ ಪ್ರಧಾನಿಗಳಿಗೆ ಧನ್ಯವಾದ ಹೇಳುತ್ತೇನೆ.ಪ್ರಧಾನಿಗಳು ವಿಸಿ ಮೂಲಕ ಬೆಂಗಳೂರು ಮೆಟ್ರೋ ಯೋಜನೆಯ ಕೆ.ಆರ್.ಪುರಂ- ಬೈಯಪ್ಪನಹಳ್ಳಿ ಮತ್ತು ಕೆಂಗೇರಿ- ಚಲ್ಲಘಟ್ಟದವರಗೆ ಮೆಟ್ರೋ ಸೇವೆಯನ್ನ ರಾಷ್ಟ್ರಕ್ಕೆ ಸಮರ್ಪಣೆ ಮಾಡ್ತಿದ್ದಾರೆ. ರಾಜ್ಯದ, ಬೆಂಗಳೂರು ಜನತೆ ಪರವಾಗಿ ಪ್ರಧಾನಿಗಳಿಗೆ ಧನ್ಯವಾದಗಳನ್ನ ಹೇಳುತ್ತೇನೆ ಎಂದರು.

ಇದನ್ನೂ ಓದಿ: ಟ್ವೀಟ್ ವಾರ್: ಹೈಕಮಾಂಡ್​ನ ಕಲೆಕ್ಷನ್​ ಏಜೆಂಟ್​ಗಳು ಆಗಮಿಸಿದ್ದರು ಎಂದ ಬಿಜೆಪಿಗೆ ದೃಷ್ಟಿ ದೋಷ: ಕಾಂಗ್ರೆಸ್ ತಿರುಗೇಟು

ಬೆಂಗಳೂರು ವೇಗವಾಗಿ ಬೆಳೆಯುತ್ತಿರುವ ನಗರ. ಇಲ್ಲಿ ಟ್ರಾಫಿಕ್ ಬಹಳ ದಟ್ಟವಾಗಿದೆ. ಇಂತಹ ನಗರಕ್ಕೆ ಮೆಟ್ರೋ ಸೇವೆ ಅತ್ಯಗತ್ಯ. ಅದಕ್ಕೋಸ್ಕರ ಕೇಂದ್ರ, ರಾಜ್ಯ ಸರ್ಕಾರ ಜಂಟಿಯಾಗಿ ಮೆಟ್ರೋ ಯೋಜನೆ ಜಾರಿಗೊಳಿಸುತ್ತಿದೆ.  ನೂತನ ಮೆಟ್ರೋ ಮಾರ್ಗದಿಂದ ಜನರಿಗೆ ಮತ್ತಷ್ಟು ಅನುಕೂಲವಾಗಲಿದೆ. ಮೊದಲ ಹಂತದಲ್ಲಿ ಸು. 42.3 ಉದ್ದದ ಯೋಜನೆ ಜಾರಿ ಮಾಟ್ತಿದ್ದಾರೆ. ಇದಕ್ಕೆ ರಾಜ್ಯ ಸರ್ಕಾರ 5,630 ಕೋಟಿ ರೂ. ನೀಡಿದೆ. ಕೇಂದ್ರ, ರಾಜ್ಯ ಸರ್ಕಾರ ಜಂಟಿಯಾಗಿ ಮೆಟ್ರೋ ಯೋಜನೆ ಕೈಗೊಂಡಿದೆ. ಎರಡು ಹಂತದಲ್ಲಿ ಸುಮಾರು 74 ಕಿ.ಮೀ. ಮೆಟ್ರೋ ಮಾರ್ಗ ವಿಸ್ತರಣೆಯಾಗಿದೆ ಎಂದರು.

ಏರ್ ಪೋರ್ಟ್​ಗೂ ಮೆಟ್ರೋ

ಸೆಂಟ್ರಲ್ ಸಿಲ್ಕ್ ಬೋರ್ಡ್ ನಿಂದ ಹೆಬ್ಬಾಳ ಜೆಂಕ್ಷನ್ ಮೂಲಕ ಅಂತರಾಷ್ಟ್ರೀಯ ಏರ್ ಪೋರ್ಟ್ ಗೆ 2A ಹಾಗೂ 2B ಯೋಜನೆಯನ್ನು ಅಂದಾಜು 14,788 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. 2026ರ ಒಳಗೆ ಪೂರ್ಣಗೊಳಿಸಲು ಯೋಜಿಸಲಾಗಿದೆ. ಕರ್ನಾಟಕದಿಂದ 4775.36 ಕೋಟಿ ಬಿಡುಗಡೆ ಮಾಡಲಾಗಿದೆ. ಯೋಜನೆ ಪೂರ್ಣಗೊಂಡ ನಂತರ 176 ಕಿಲೋಮೀಟರ್ ಆಗಲಿದೆ. ಪ್ರತಿದಿನ 20 ಲಕ್ಷ ಪ್ರಯಾಣಿಕರು ಸಂಚರಿಸಬಹುದಾಗಿದೆ. ಈ ಯೋಜನೆಗೆ ಶೀಘ್ರವಾಗಿ ಅನುಮೋದನೆ ನೀಡುವಂತೆ ಮಾನ್ಯ ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಅವರನ್ನು ಕೊರುತ್ತೇನೆ. ಸರ್ಜಾಪುರದಿಂದ ಹೆಬ್ಬಾಳದವರೆಗೂ 37 ಕಿಲೋ ಮೀಟರ್ ಉದ್ದದ ಹಂತ 3A ಗೆ ಡಿಪಿಆರ್ ತಯಾರಿಸಲಾಗುತ್ತಿದೆ. 257 ಕಿಲೋಮಟರ್ ಯೋಜನೆ ಹಂತದಲ್ಲಿ ಇದೆ. 67 ಕಿಲೋ ಮೀಟರ್ ಮೆಟ್ರೋ ಮಾರ್ಗಗಳ ಸಮೀಕ್ಷೆ ಶೀಘ್ರದಲ್ಲೇ ಕೈಗೊಳ್ಳುತ್ತೇನೆ ಎಂದು ಸಿಎಂ ಹೇಳಿದರು.

ಮೆಟ್ರೋ ಮೊದಲೇ ಹಂತ ಪೂರ್ಣವಾಗಿದ್ದು 17.6.2017ರಂದು. ಪ್ರಣಬ್ ಮುಖರ್ಜಿ ದೇಶಕ್ಕೆ ಸಮರ್ಪಣೆ ಮಾಡಿದ್ದಾರೆ. ಆಗ ನಾನೂ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆ. ಬೆಂಗಳೂರು ಮೆಟ್ರೋ ಎರಡನೇ ಹಂತ 76.06 ಕಿ.ಲೋ ಉದ್ದ ಇರುವ ಹಂತ. 3650 ಕೋಟಿ ಖರ್ಚು ಮಾಡ್ತಾ ಇದ್ದೀವಿ. ಈ ಕೆಲಸ ಬರದಿಂದ ಸಾಗುತ್ತಿದೆ. ಇಡೀ ದೇಶದ ಜನರಿಗೆ ಹರ್ಷದಿಂದ ತಿಳಿಯಬಯಸುತ್ತೇನೆ. ಕಾಳೇನ ಅಗ್ರಹಾರದಿಂದ ನಾಗವಾರ ಮಾರ್ಗ ಮಾರ್ಚ್ ತಿಂಗಳಿನಲ್ಲಿ ಪೂರ್ಣವಾಗಲಿದೆ. 117 ಕಿ.ಲೋ ಮೀಟರ್​ಗೆ ವಿಸ್ತರಣೆಯಾಗಲಿದೆ. 12 ಲಕ್ಷ ಜನರ ಪ್ರಯಾಣಿಸುವ ನಿರೀಕ್ಷೆ ಇದೆ. ಸೆಂಟ್ರಲ್ ಸಿಲ್ಕ್ ಬೋರ್ಡ್ ನಿಂದ ಏರ್ಪೋಟ್ ವರೆಗೆ 14,288 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ. 4,775 ಕೋಟಿ ರೂ. ಹಣವನ್ನ ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಹೆಚ್ಚುತ್ತಿರುವ ಬೇಡಿಕೆ ಪೂರೈಸಲು ಮೂರನೇ ಹಂತದಲ್ಲಿ 35 ಕಿ.ಲೋ ಮೀಟರ್ ವರೆಗೆ ಮೆಟ್ರೋ ವಿಸ್ತರಣೆ ಮಾಡಲಾಗುತ್ತೆ ಎಂದರು.

ಯೋಗಿ ಆದಿತ್ಯನಾಥ್ ಜೊತೆ ಸಿದ್ದರಾಮಯ್ಯ ಫೋಟೋ

ಗಾಜಿಯಾಬಾದ್ ಕಾರ್ಯಕ್ರಮದ ವೇದಿಕೆಯ ಪೋಸ್ಟರ್ ನಲ್ಲಿ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಜೊತೆ ಕರ್ನಾಟಕ ಸಿಎಂ ಸಿದ್ದರಾಮಯ್ಯ ಫೋಟೋ ಕಾಣಿಸಿಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಜೊತೆ ಇಬ್ಬರು ಸಿಎಂಗಳ ಫೋಟೋ ಕಾಣಿಸಿಕೊಂಡಿದೆ. ಇದನ್ನು ನೋಡಿದ ಡಿಕೆ ಶಿವಕುಮಾರ್, ನಿಮ್ಮದೂ ಫೋಟೋ ಇದೆ ಎಂದು ಸಿದ್ದರಾಮಯ್ಯರಿಗೆ ತಿಳಿಸಿದರು.  ಆಗ ಸಿಎಂ ಸಾಹೇಬ್ರು ಹೇ.. ಇಲ್ಲ ಅನ್ಸುತ್ತೆ ಎಂದು ವಿಡಿಯೋ ಕಾನ್ಫರೆನ್ಸ್ ನಲ್ಲಿ ಕಣ್ಣಿಟ್ಟು ನೋಡಿದರು. ಇದೆ.. ಇದೆ.. ನಾನು ನೋಡ್ದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದು ನಿಮ್ ಫೋಟೋ ಹಾಕಿದ್ದಾರೆ ಸರ್ ಎಂದು ಅಧಿಕಾರಿಗಳು ಕೂಡ ಮಾಹಿತಿ ನೀಡಿದ್ದಾರೆ. ಬಳಿಕ ಹೌದಾ ಎಂದು ಸಿಎಂ ಸಿದ್ದರಾಮಯ್ಯ ಸುಮ್ಮನಾದರು.

ನೇರಳೆ ಮಾರ್ಗದ ವಿಸ್ತರಿತ ಭಾಗ ಕೆಂಗೇರಿಯಿಂದ-ಚಲ್ಲಘಟ್ಟ ಹಾಗೂ ಬೈಯ್ಯಪ್ಪನಹಳ್ಳಿ-ಕೆ.ಆರ್‌.ಪುರ ಮಾರ್ಗ ಅ.9ರ ಬೆಳಗ್ಗೆ 5 ಗಂಟೆಯಿಂದ ಪೂರ್ಣ ಪ್ರಮಾಣದಲ್ಲಿ ಜನಸಂಚಾರಕ್ಕೆ ಮುಕ್ತವಾಗಿತ್ತು. ಸದ್ಯ ಇಂದು ನರೇಂದ್ರ ಮೋದಿಯವರು ವಿಡಿಯೋ ಕಾನ್ಫರೆನ್ಸ್ ಮೂಲಕ ಅಧಿಕೃತವಾಗಿ ಉದ್ಘಾಟಿಸಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 12:54 pm, Fri, 20 October 23