ಬೆಂಗಳೂರು: ಟೆಸ್ಟ್ ಡ್ರೈವ್ ಹೆಸರಲ್ಲಿ ಬೈಕ್ ಕದಿಯುತ್ತಿದ್ದವ ಅರೆಸ್ಟ್​

ಬೆಂಗಳೂರಿನ ಬಂಡೆಪಾಳ್ಯ ಪೊಲೀಸರು ಬೈಕ್​ ಕದಿಯುತ್ತಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ಪ್ರದೀಪ್ ಅಲಿಯಾಸ್ ಓಎಲ್ಎಕ್ಸ್ ಪ್ರದೀಪ್ ಬಂಧಿತ. ಟೆಸ್ಟ್ ಡ್ರೈವ್ ಹೆಸರಿನಲ್ಲಿ ಬೈಕ್ ಕದ್ದು, ದಾಖಲೆಗಳನ್ನು ನಕಲಿ ಮಾಡಿ ಮಾರಾಟ ಮಾಡುತ್ತಿದ್ದನು. ಪೊಲೀಸರು ಐದು ಕದ್ದ ಬೈಕ್​ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಹೆಚ್ಚಿನ ತನಿಖೆ ನಡೆಯುತ್ತಿದೆ.

ಬೆಂಗಳೂರು: ಟೆಸ್ಟ್ ಡ್ರೈವ್ ಹೆಸರಲ್ಲಿ ಬೈಕ್ ಕದಿಯುತ್ತಿದ್ದವ ಅರೆಸ್ಟ್​
ಆರೋಪಿ ಪ್ರದೀಪ್​
Updated By: ವಿವೇಕ ಬಿರಾದಾರ

Updated on: May 19, 2025 | 11:06 AM

ಬೆಂಗಳೂರು, ಮೇ 19: ಖರೀದಿ ನೆಪದಲ್ಲಿ ಆನ್​ಲೈನ್​ನಲ್ಲಿ ಬೈಕ್​ ಬುಕ್ (Bike) ಮಾಡಿ ನಂತರ ಟೆಸ್ಟ್ ಡ್ರೈವ್ ಹೆಸರಲ್ಲಿ ಕದ್ದು ಪರಾರಿಯಾಗಿದ್ದ ಆರೋಪಿಯನ್ನು ಬಂಡೆಪಾಳ್ಯ ಪೊಲೀಸರು (Police) ಬಂಧಿಸಿದ್ದಾರೆ. ಪ್ರದೀಪ್ ಅಲಿಯಾಸ್ ಓಎಲ್ಎಕ್ಸ್ ಪ್ರದೀಪ್ ಬಂಧಿತ ಆರೋಪಿ. ಪ್ರದೀಪ್​ನನ್ನು ಬಂಧಿಸಿ ವಿಚಾರಣಗೆ ಒಳಪಡಿಸಿದಾಗಿ ಹಲವು ಸಂಗತಿ ಬಾಯಿ ಬಿಟ್ಟಿದ್ದಾನೆ. ಓಎಲ್ಎಕ್ಸ್ ನಲ್ಲಿ ಬೈಕ್ ಮಾರಾಟಗಾರರನ್ನು ಹುಡುಕುತ್ತಿದ್ದನು. ಟೆಸ್ಟ್ ಡ್ರೈವ್​ಗೆ ಬೈಕ್ ಪಡೆಯುವ ವೇಳೆ ದಾಖಲೆಗಳನ್ನು ಪರಿಶೀಲಿಸುತ್ತೇನೆಂದು ಅಸಲಿ ದಾಖಲೆಗಳನ್ನು ಪಡೆಯುತ್ತಿದ್ದನು. ದುಡ್ಡು ಕೊಡುವ ರೀತಿಯಲ್ಲಿ ಬಿಲ್ಡಪ್ ಕೊಟ್ಟು, ಅಸಲಿ ದಾಖಲೆಗನ್ನು ತೆಗೆದುಕೊಂಡು ಬೈಕ್ ಸಮೇತ ಪರಾರಿಯಾಗುತ್ತಿದ್ದನು.

ಆರೋಪಿ ಪ್ರದೀಪ ಕಡೂರು ಮೂಲದವನಾಗಿದ್ದು, ನೆಲಮಂಗಲದಲ್ಲಿ ನೆಲೆಸಿದ್ದಾನೆ. ಆರೋಪಿಯಿಂದ ಐದು ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕದ್ದ ಬೈಕ್​ಗಳೆಲ್ಲವೂ ಓಎಲ್ಎಕ್ಸ್ ಮೂಲಕವೇ ಬುಕ್ ಮಾಡಿ ಕದ್ದಿದ್ದ ಎನ್ನಲಾಗಿದೆ.

ಇದನ್ನೂ ಓದಿ: ಸಿಗರೇಟ್​ ತಂದು ಕೊಡದಿದ್ದಕ್ಕೆ ಕಾರಿನಿಂದ ಗುದ್ದಿ ಯುವಕನ ಕೊಲೆ

ಇದನ್ನೂ ಓದಿ
ಬೆಂಗಳೂರು ತುಮಕೂರು ಮೆಟ್ರೋ ಸ್ಟುಪಿಡ್ ಐಡಿಯಾ ಎಂದ ತೇಜಸ್ವಿ ಸೂರ್ಯ!
160 ಮೆಟ್ರೋ ಪಿಲ್ಲರ್​ಗಳಿಗೆ ಕಲರ್ ಲೈಟಿಂಗ್ಸ್: ಪ್ರಯಾಣಿಕರು ಆಕ್ರೋಶ
ಸಕಲೇಶಪುರ–ಸುಬ್ರಹ್ಮಣ್ಯ ಮಾರ್ಗ ಕಾಮಗಾರಿ: 6 ತಿಂಗಳು ರೈಲುಗಳ ಸಂಚಾರ ರದ್ದು
ಹೆಬ್ಬಾಳ ಫ್ಲೈಓವರ್​​ ಇಂದಿನಿಂದ ಮೇ 21ರವರೆಗೆ ಪ್ರತಿದಿನ 3 ಗಂಟೆ ಬಂದ್

ನಂತರ ಮೊದಲೇ ಪಡೆದಿದ್ದ ದಾಖಲಾತಿಗಳನ್ನು ಬಳಸಿಕೊಂಡು ನಕಲಿಯಾಗಿ ಸಹಿ ಮಾಡಿ ಆರ್​ಟಿಒ ಮೂಲಕ ದಾಖಲೆಗನ್ನು ವರ್ಗಾವಣೆ ಮಾಡಿಸಿ ಒಳ್ಳೆಯ ದರಕ್ಕೆ ಬೇರೆಯವರಿಗೆ ಬೈಕ್​ ಮಾರಾಟ ಮಾಡುತ್ತಿದ್ದನು. ತನಗೆ ಬಂದ ಹಣದಿಂದ ಶೋಕಿ ಜೀವನ ಮಾಡುತ್ತಿದ್ದ ಆಂತ ಗೊತ್ತಾಗಿದೆ. ಸದ್ಯ ಈ ಬಗ್ಗೆ ಬಂಡೆಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಮನೆ ಮುಂದೆ ಕಟ್ಟಿದ್ದ ಹಸುಗಳನ್ನ ಕದ್ದು ಪರಾರಿ

ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಕಿತ್ತನಗಳ್ಳಿ ಗ್ರಾಮದಲ್ಲಿ ಮನೆ ಮುಂದೆ ಕಟ್ಟಿದ್ದ ಹಸುಗಳು ಕಳ್ಳತನವಾಗಿವೆ. ಗ್ರಾಮದ ಕೃಷ್ಣಪ್ಪ ಎಂಬುವರಿಗೆ ಸೇರಿದ 12 ಹಸುಗಳಲ್ಲಿ ಮೂರು ಹಸುಗಳನ್ನು ಕದಿಯಲಾಗಿದೆ. ಈ ಮೂರು ಹಸುಗಳಲ್ಲಿ, ಒಂದು ಹಸು ಇನ್ನೇರಡು ತಿಂಗಳಲ್ಲಿ ಕರು ಹಾಕುತ್ತಿತ್ತು. ಇನ್ನೆರಡು ಹಸುಗಳಿಂದ ಮನೆ ನಡೆಸುವಷ್ಟು ಆದಾಯ ಬರುತ್ತಿತ್ತು. ಇತಂಹ ಹಸುಗಳನ್ನು ಖತರ್ನಾಕ್ ಕಳ್ಳರು ಕದ್ದಿದ್ದಾರೆ. ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:50 am, Mon, 19 May 25