160 ಮೆಟ್ರೋ ಪಿಲ್ಲರ್ಗಳಿಗೆ ಕಲರ್ ಲೈಟಿಂಗ್ಸ್: ದುಂದುವೆಚ್ಚಕ್ಕೆ ಮುಂದಾದ ಬಿಎಂಆರ್ಸಿಎಲ್, ಪ್ರಯಾಣಿಕರು ಆಕ್ರೋಶ
ಬಿಎಂಆರ್ಸಿಎಲ್ 160 ಮೆಟ್ರೋ ಪಿಲ್ಲರ್ಗಳಿಗೆ ಬಣ್ಣ ಬಣ್ಣದ ಲೈಟಿಂಗ್ ಅಳವಡಿಸಲು ಯೋಜಿಸಿದೆ. ಇದಕ್ಕಾಗಿ ಟೆಂಡರ್ ಕರೆಯಲು ಮುಂದಾಗಿದೆ. ಆ ಮೂಲಕ ಮಟ್ರೋ ದುಂದುವೆಚ್ಚಕ್ಕೆ ಮುಂದಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಅಷ್ಟೇ ಅಲ್ಲದೆ ಇದಕ್ಕೆ ಕೋಟ್ಯಂತರ ರೂ. ವೆಚ್ಚವಾಗಲಿದೆ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಬೆಂಗಳೂರು, ಮೇ 17: ನಮ್ಮ ಮೆಟ್ರೋ ನಿರ್ವಹಣಾ ವೆಚ್ಚ ಹೆಚ್ಚಾಗಿದೆ. ಮೆಟ್ರೋ (Namma Metro) ಲಾಸ್ನಲ್ಲಿದೆ ಎಂದು ಇತ್ತೀಚೆಗೆ ಟಿಕೆಟ್ ದರವನ್ನು ದುಪ್ಪಟ್ಟು ಏರಿಕೆ ಮಾಡಲಾಗಿತ್ತು. ಆದರೆ ಇದೀಗ ಆ ಹಣವನ್ನು ಬಿಎಂಆರ್ಸಿಎಲ್ (BMRCL) ಅಧಿಕಾರಿಗಳು ಪಿಲ್ಲರ್ಗಳಿಗೆ ಕಲರ್ ಲೈಟಿಂಗ್ಸ್ ಹಾಕಿಸುವ ಮೂಲಕ ದುಂದುವೆಚ್ಚಕ್ಕೆ ಮುಂದಾಗಿದ್ದಾರೆಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ನಮ್ಮ ಮೆಟ್ರೋದ ಕಥೆ ಹೇಗಿದೆ ಅಂದರೆ ಹೊಟ್ಟೆಗೆ ಹಿಟ್ಟಿಲ್ಲ, ಜುಟ್ಟಿಗೆ ಮಲ್ಲಿಗೆ ಹೂವು ಅನ್ನೋ ರೀತಿ ಆಗಿದೆ. ಮೆಟ್ರೋ ಪಿಲ್ಲರ್ಗಳಿಗೆ ಸುಣ್ಣ ಬಣ್ಣ ಮಾಡಲು ನಮ್ಮ ಮೆಟ್ರೋ ಬಳಿ ಹಣವಿಲ್ವಂತೆ, ಆದರೆ ರಾತ್ರಿ ವೇಳೆ ಪಿಲ್ಲರ್ಗಳು ಚೆನ್ನಾಗಿ ಕಾಣಿಸಲು ಕಲರ್ ಕಲರ್ ಲೈಟಿಂಗ್ಸ್ ಹಾಕಲು ಮಾತ್ರ ಹಣವಿದೆಯಂತೆ.
ಇದನ್ನೂ ಓದಿ: ಸಕಲೇಶಪುರ–ಸುಬ್ರಹ್ಮಣ್ಯ ಮಾರ್ಗ ಕಾಮಗಾರಿ: 6 ತಿಂಗಳು ಬೆಂಗಳೂರು-ಮಂಗಳೂರಿನ ಕೆಲ ರೈಲುಗಳು ರದ್ದು
ಹಸಿರು ಮತ್ತು ನೇರಳೆ ಮಾರ್ಗದ 160 ಮೆಟ್ರೋ ಪಿಲ್ಲರ್ಗಳಿಗೆ ಲೈಟಿಂಗ್ಸ್ ಹಾಕಲು ಬಿಎಂಆರ್ಸಿಎಲ್ ಟೆಂಡರ್ ಕರೆದಿದೆ. ಎಂಜಿ ರೋಡ್, ಬ್ರಿಗೇಡ್ ರೋಡ್, ಅನಿಲ್ ಕುಂಬ್ಳೆ ಸರ್ಕಲ್ ಸೇರಿದಂತೆ ಬೆಂಗಳೂರಿನ ಹತ್ತು ಹೈಟೆಕ್ ಮತ್ತು ಕ್ಲಾಸ್ ಜಂಕ್ಷನ್ಗಳಲ್ಲಿ ಈ ಲೈಟಿಂಗ್ಸ್ ಅಳವಡಿಸಲು ನಮ್ಮ ಮೆಟ್ರೋ ಮುಂದಾಗಿದೆ.
ಪ್ರಯಾಣಿಕರು ಆಕ್ರೋಶ
ಇನ್ನೂ ಮೊದಲ ಹಂತದಲ್ಲಿ ನಗರದ ಹತ್ತು ಜಂಕ್ಷನ್ಗಳಲ್ಲಿನ ಮೆಟ್ರೋ ಪಿಲ್ಲರ್ಗಳಿಗೆ ಲೈಟಿಂಗ್ಸ್ ಅಳವಡಿಸವುದು, ನಂತರ ನಗರದ ಎಲ್ಲಾ ಮೆಟ್ರೋ ಪಿಲ್ಲರ್ಗಳಿಗೂ ಲೈಟಿಂಗ್ಸ್ ಅಳವಡಿಸಲು ಟೆಂಡರ್ ಕರೆಯಲು ಬಿಎಂಆರ್ಸಿಎಲ್ ಪ್ಲಾನ್ ನಡೆಸಿದೆ. ಇನ್ನು ನಗರದ ಕೆಲವೊಂದು ಭಾಗದಲ್ಲಿ ಮಾತ್ರ ಮೆಟ್ರೋ ಪಿಲ್ಲರ್ಗಳಿಗೆ ಸುಣ್ಣಬಣ್ಣ ಮಾಡಲಾಗಿದೆ. ಆದರೆ ಬಹುತೇಕ ಪಿಲ್ಲರ್ಗಳಿಗೆ ಕಲರ್ ಮಾಡಿಲ್ಲ. ಇಂತಹ ಸಂದರ್ಭದಲ್ಲಿ ಕೋಟ್ಯಂತರ ರೂ ವೆಚ್ಚದಲ್ಲಿ ಈ ಲೈಟಿಂಗ್ಸ್ ಅಳವಡಿಸುವುದು ಬೇಕಿತ್ತಾ ಎಂದು ಮೆಟ್ರೋ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನ ಹೆಬ್ಬಾಳ ಫ್ಲೈಓವರ್ ಇಂದಿನಿಂದ ಮೇ 21ರವರೆಗೆ ಪ್ರತಿದಿನ 3 ಗಂಟೆ ಬಂದ್: ಪರ್ಯಾಯ ಮಾರ್ಗಗಳು ಹೀಗಿವೆ
ಒಟ್ಟಿನಲ್ಲಿ ನಮ್ಮ ಮೆಟ್ರೋ, ಇರುವ ಪಿಲ್ಲರ್ಗಳಿಗೆ ಸರಿಯಾಗಿ ಪೇಂಟಿಂಗ್ ಮಾಡುವ ಮೂಲಕ ಅದರ ಅಂದವನ್ನು ಹೆಚ್ಚಿಸುವುದು ಬಿಟ್ಟು, ರಾತ್ರಿ ವೇಳೆಯಲ್ಲಿ ಪಿಲ್ಲರ್ಗಳು ಕಲರ್ ಕಲರ್ ಆಗಿ ಕಾಣಲಿ ಎಂದು ಕೋಟ್ಯಂತರ ರೂ. ಖರ್ಚು ಮಾಡಲು ಮುಂದಾಗಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:34 am, Sat, 17 May 25







