ಮಾಸ್ಕ್ ಹಾಕದ ಯುವಕರಿಗೆ ದಂಡ ವಿಧಿಸಿದ್ದಕ್ಕೆ ಗಲಾಟೆ; ಘಟನೆ ವೇಳೆ ಹರಿದ ಪೊಲೀಸ್ ಹೆಡ್ಕಾನ್ಸ್ಟೇಬಲ್ ಸಮವಸ್ತ್ರ
ಓರ್ವ ಆರೋಪಿ ಸಚಿನ್ನನ್ನ ಠಾಣೆಗೆ ಕರೆತರಲಾಗಿದೆ. ಅಜಿತ್, ಅಜಯ್ಗಾಗಿ ಪೊಲೀಸರಿಂದ ಶೋಧಕಾರ್ಯ ಮುಂದುವರಿದಿದೆ. ಬಾಗಲಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಬೆಂಗಳೂರು: ಮಾಸ್ಕ್ ಹಾಕದ ಯುವಕರಿಗೆ ದಂಡ ಹಾಕುವಾಗ ಗಲಾಟೆ ನಡೆದ ಘಟನೆ ಬೆಂಗಳೂರಿನ ಮಲ್ಲಸಂದ್ರದಲ್ಲಿ ಉಂಟಾಗಿದೆ. ಪೊಲೀಸರ ಜೊತೆ ಯುವಕರು ಮಾಸ್ಕ್ ಧರಿಸದ ವಿಚಾರವಾಗಿ ಗಲಾಟೆ ಮಾಡಿಕೊಂಡಿದ್ದಾರೆ. ಎಎಸ್ಐ ರಾಜಶೇಖರ್, ಹೆಡ್ ಕಾನ್ಸ್‌ಟೇಬಲ್ ಮುನಿರಾಜು ಜೊತೆ ಯುವಕರು ಜಗಳವಾಡಿದ್ದಾರೆ. ಗಲಾಟೆ ವೇಳೆ ಹೆಡ್ಕಾನ್ಸ್ಟೇಬಲ್ ಹೆಚ್ಸಿ ಮುನಿರಾಜು ಸಮವಸ್ತ್ರ ಹರಿದು ಹೋಗಿದೆ. ಹೆಡ್ ಕಾನ್ಸ್‌ಟೇಬಲ್ ಬಳಿ ಇದ್ದ ಮಷಿನ್ಗೂ ಹಾನಿ ಉಂಟಾಗಿದೆ ಎಂದು ತಿಳಿದುಬಂದಿದೆ.
ಮಾಸ್ಕ್ ಧರಿಸದೆ ರಸ್ತೆ ಬದಿಯಲ್ಲಿ ನಿಂತಿದ್ದ ಯುವಕರನ್ನು ಪೊಲೀಸರು ಪ್ರಶ್ನೆ ಮಾಡಿದ್ದರು. ಮಾಸ್ಕ್ ಧರಿಸದ್ದನ್ನು ಪ್ರಶ್ನಿಸಿದ್ದಕ್ಕೆ ಯುವಕರು ಉದ್ಧಟತನ ತೋರಿದ್ದಾರೆ. ದಂಡ ಪಾವತಿಸಿದೆ ಯುವಕರು ಉದ್ಧಟತನ ಪ್ರದರ್ಶನ ಮಾಡಿದ್ದಾರೆ. ಈ ವೇಳೆ, ಪೊಲೀಸ್ ಕಾನ್ಸ್‌ಟೇಬಲ್ ಸಮವಸ್ತ್ರ ಕೂಡ ಹರಿದುಹೋಗಿದೆ. ಓರ್ವ ಆರೋಪಿ ಸಚಿನ್ನನ್ನ ಠಾಣೆಗೆ ಕರೆತರಲಾಗಿದೆ. ಅಜಿತ್, ಅಜಯ್ಗಾಗಿ ಪೊಲೀಸರಿಂದ ಶೋಧಕಾರ್ಯ ಮುಂದುವರಿದಿದೆ. ಬಾಗಲಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ದೇವನಹಳ್ಳಿ: ಜಮೀನು ವಿಚಾರ 2 ಕುಟುಂಬಗಳ ಮಧ್ಯೆ ಮಾರಾಮಾರಿ ಜಮೀನು ವಿಚಾರದಲ್ಲಿ 2 ಕುಟುಂಬಗಳ ಮಧ್ಯೆ ಮಾರಾಮಾರಿ ನಡೆದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಬೈಚಾಪುರ ಗ್ರಾಮದಲ್ಲಿ ನಡೆದಿದೆ. ಶಶಿಧರ್, ಮುನಿಯಪ್ಪ ಕುಟುಂಬದ ಮಧ್ಯೆ ಹೊಡೆದಾಟ ಉಂಟಾಗಿದೆ. ಮೆಕ್ಕೆಜೋಳದ ತೋಟದಲ್ಲಿ ಸಿನಿಮಾ ಸ್ಟೈಲ್ನಲ್ಲಿ ಗಲಾಟೆ ನಡೆದಿದೆ. ದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಇದನ್ನೂ ಓದಿ: ಬೆಂಗಳೂರು: ರಸ್ತೆ ಗುಂಡಿಯಲ್ಲಿ ಬಿಬಿಎಂಪಿ ಪ್ರತಿಕೃತಿ ಮುಚ್ಚಿ ಅಂತ್ಯಕ್ರಿಯೆ ಮಾಡಿದ ಪ್ರತಿಭಟನಾಕಾರರು; ಪಾಲಿಕೆ ವಿರುದ್ಧ ಆಕ್ರೋಶ
ಇದನ್ನೂ ಓದಿ: ಬೆಂಗಳೂರು: ಭೂಕಂಪದ ಯಾವುದೇ ಲಕ್ಷಣ ದಾಖಲಾಗಿಲ್ಲ; ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದ ಸ್ಪಷ್ಟನೆ
Published On - 2:49 pm, Fri, 26 November 21