ಚುನಾವಣೆಗೆ ಖಾಕಿ ಅಲರ್ಟ್: ಬೆಂಗಳೂರಿನಲ್ಲಿ 500ಕ್ಕೂ ಹೆಚ್ಚು ರೌಡಿಶೀಟರ್ಗಳ ಮನೆ ಮೇಲೆ ದಾಳಿ, ಮಚ್ಚು-ಲಾಂಗು ವಶ
ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ರೌಡಿ ಶೀಟರ್ಗಳ ಮನೆ ಮೇಲೆ ದಾಳಿ ಮಾಡಲಾಗಿದೆ.
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸುಮಾರು 1500ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳಿಂದ 500ಕ್ಕೂ ಹೆಚ್ಚು ರೌಡಿಶೀಟರ್ಗಳ ಮನೆ ಮೇಲೆ ದಾಳಿ ನಡೆದಿದೆ. ರಾಜ್ಯ ವಿಧಾನಸಭೆ ಚುನಾವಣೆ(Karnataka Assembly Elections 2023) ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ರೌಡಿ ಶೀಟರ್ಗಳ ಮನೆ ಮೇಲೆ ದಾಳಿ ಮಾಡಲಾಗಿದೆ. ದಾಳಿ ವೇಳೆ ವಾರಂಟ್ ಪೆಂಡಿಂಗ್ ಇದ್ದ ಕೆಲ ರೌಡಿಗಳ ಮನೆಯಲ್ಲಿ ಮಚ್ಚು, ಲಾಂಗುಗಳು ಪತ್ತೆಯಾಗಿವೆ.
ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಸೂಚನೆ ಮೇರೆಗೆ ಎಲ್ಲಾ ವಿಭಾಗದ ಡಿಸಿಪಿಗಳ ನೇತ್ರತ್ವದಲ್ಲಿ ದಾಳಿ ನಡೆದಿದೆ. ಕೇಂದ್ರ ವಿಭಾಗ, ದಕ್ಷಿಣ ವಿಭಾಗ, ಪಶ್ಚಿಮ ವಿಭಾಗ ಮತ್ತು ಉತ್ತರ ವಿಭಾಗದಲ್ಲಿ ಸುಮಾರು ಐನೂರಕ್ಕೂ ಹೆಚ್ಚು ರೌಡಿಗಳ ನಿವಾಸದ ಮೇಲೆ ದಾಳಿ ನಡೆಸಿ ಮಾರಕಾಸ್ತ್ರ ಇಟ್ಟುಕೊಂಡಿದ್ದ ರೌಡಿಗಳನ್ನು ವಶಕ್ಕೆ ಪಡೆಯಲಾಗಿದೆ. ಉಳಿದ ರೌಡಿಗಳಿಗೆ ಚುನಾವಣಾ ಸಮಯದಲ್ಲಿ ಯಾವ ಪಕ್ಷದ ಪರ ಹೋಗಿ ಗಲಾಟೆ, ರೌಡಿಸಂ ಮಾಡದಂತೆ ಎಚ್ಚರಿಕೆ ನೀಡಲಾಗಿದೆ.
ಇದನ್ನೂ ಓದಿ: IT Raid: ಚುನಾವಣೆ ಹೊತ್ತಲ್ಲೇ ಇಂದು ಕರ್ನಾಟಕದ ವಿವಿಧ ಕಡೆ ಐಟಿ ದಾಳಿ; ಎಲ್ಲೆಲ್ಲಿ?
ಬಿಜೆಪಿ ಅಭ್ಯರ್ಥಿ ಚಿಕ್ಕರೇವಣ್ಣ ಬೆಂಬಲಿಗರಿಂದ ಹಣ ಹಂಚಿಕೆ ಆರೋಪ; ಅಧಿಕಾರಿಗಳಿಂದ ದಾಳಿ,1.50 ಕೋಟಿ ರೂ. ಜಪ್ತಿ
ಬೆಳಗಾವಿ: ವಿಧಾನಸಭೆ ಚುನಾವಣೆ(Karnataka Assembly Election) ಗೆ ಕೆಲವೆ ದಿನಗಳು ಬಾಕಿಯಿದ್ದು, ಮತದಾರರಿಗೆ ಆಮಿಷಗಳನ್ನೊಡ್ಡಿ ಹೇಗಾದರೂ ಮಾಡಿ ಗೆಲ್ಲಬೇಕೆಂಬ ಉದ್ದೇಶದಿಂದ ಉಭಯ ಪಕ್ಷಗಳು ಹರಸಾಹಸ ನಡೆಸುತ್ತಿವೆ. ಇನ್ನೊಂದೆಡೆ ಇಂತಹ ಅಕ್ರಮಗಳನ್ನ ತಡೆಯಲು ರಾಜ್ಯಾದ್ಯಂತ ಚೆಕ್ಪೋಸ್ಟ್ಗಳನ್ನ ನಿರ್ಮಿಸಲಾಗಿದೆ. ಅದರಂತೆ ಇದೀಗ ಜಿಲ್ಲೆಯ ರಾಮದುರ್ಗದಲ್ಲಿ ಅಕ್ರಮವಾಗಿ ಕಾರಿನಲ್ಲಿ ಸಾಗಿಸುತ್ತಿದ್ದ1.50 ಕೋಟಿ ಹಣವನ್ನ ಚುನಾವಣಾಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಹೌದು ನಿನ್ನೆ(ಏ.19) ತಾಲೂಕಿನ ತುರನೂರು ಬಳಿ ಬಿಜೆಪಿ ಅಭ್ಯರ್ಥಿ ಚಿಕ್ಕರೇವಣ್ಣ ಬೆಂಬಲಿಗರಿಂದ ಹಣ ಹಂಚಿಕೆ ಆರೋಪ ಕೇಳಿಬಂದಿದ್ದು, ಹಣ ಹಂಚಿಕೆ ಮಾಡುತ್ತಿದ್ದ ದೃಶ್ಯ ಮೊಬೈಲ್‌ನಲ್ಲಿ ಸೆರೆ ಹಿಡಿಯಲಾಗಿತ್ತು. ಇದನ್ನ ನೋಡಿದ ಬಳಿಕ ಅಲರ್ಟ್ ಆಗಿದ್ದ ರಾಮದುರ್ಗ ಠಾಣೆ ಪೊಲೀಸರು, ಖಚಿತ ಮಾಹಿತಿ ಮೇರೆಗೆ ತಡರಾತ್ರಿ ದಾಳಿ ನಡೆಸಿ, ಕಾರಿನಲ್ಲಿ ಸಾಗಿಸುತ್ತಿದ್ದ ಅಕ್ರಮ ಹಣವನ್ನ ವಶಕ್ಕೆ ಪಡೆದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಹಣವನ್ನ ಹಸ್ತಾಂತರ ಮಾಡಿದ್ದಾರೆ. ರಾಮದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 1:22 pm, Thu, 20 April 23