AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಚಾರಿ ಪೊಲೀಸರು ಎಲೆಕ್ಷನ್​ನಲ್ಲಿ ಬ್ಯುಸಿ: ನಮ್ಮನ್ನು ತಡೆಯೋರು ಯಾರು ಇಲ್ಲ ಎಂದು ರೂಲ್ಸ್ ಬ್ರೇಕ್ ಮಾಡುವವರಿಗೆ ಕಾದಿದೆ ಶಾಕ್

ಪೊಲೀಸರು ವಾಹನವನ್ನು ತಡೆದು ತಪಾಸಣೆ ಮಾಡೋದು ನಿಲ್ಲಿಸಿದ್ದಾರೆ. ಆದ್ರೆ ರೂಲ್ಸ್ ಬ್ರೇಕ್ ಮಾಡೋ ನಿಮಗೆ ಮಾತ್ರ ಸಂಕಷ್ಟ ತಪ್ಪಿದಲ್ಲ.

ಸಂಚಾರಿ ಪೊಲೀಸರು  ಎಲೆಕ್ಷನ್​ನಲ್ಲಿ ಬ್ಯುಸಿ: ನಮ್ಮನ್ನು ತಡೆಯೋರು ಯಾರು ಇಲ್ಲ ಎಂದು ರೂಲ್ಸ್ ಬ್ರೇಕ್ ಮಾಡುವವರಿಗೆ ಕಾದಿದೆ ಶಾಕ್
ಟ್ರಾಫಿಕ್ ಪೊಲೀಸರು
ಆಯೇಷಾ ಬಾನು
|

Updated on:Apr 20, 2023 | 12:47 PM

Share

ಬೆಂಗಳೂರು: ರಸ್ತೆಯಲ್ಲಿ ಎಲ್ಲೆಂದರಲ್ಲಿ ಕಾಣೋ ಸಂಚಾರಿ ಪೊಲೀಸರು ನಾಪತ್ತೆಯಾಗಿದ್ದಾರೆ. ಹೆಲ್ಮೆಟ್ ಹಾಕಿಲ್ಲ, ನಂಬರ್ ಪ್ಲೇಟ್ ಸರಿ ಇಲ್ಲ ಎಂದು ವಾಹನಗಳನ್ನು ತಡೆದು ಫೈನ್ ಹಾಕುತಿದ್ದ ಪೊಲೀಸರು ಎಲೆಕ್ಷನ್ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ. ಸಂಚಾರಿ ಪೊಲೀಸರು ಕಾಣ್ತಿಲ್ಲ ಎಂದು ಹೇಳಿ ರೂಲ್ಸ್ ಬ್ರೇಕ್ ಮಾಡಿ ಸಂಚಾರ ಮಾಡುವ ವಾಹನ ಸವಾರರೇ ಹುಷಾರ್. ಏಕೆಂದರೆ ಪೊಲೀಸರು ವಾಹನವನ್ನು ತಡೆದು ತಪಾಸಣೆ ಮಾಡೋದು ನಿಲ್ಲಿಸಿದ್ದಾರೆ. ಆದ್ರೆ ರೂಲ್ಸ್ ಬ್ರೇಕ್ ಮಾಡೋ ನಿಮಗೆ ಮಾತ್ರ ಸಂಕಷ್ಟ ತಪ್ಪಿದಲ್ಲ.

ರಸ್ತೆಗಳಲ್ಲಿ ವಾಹನ ತಡೆಯೋದನ್ನು ನಿಲ್ಲಿಸಿದ ಎರಡು ತಿಂಗಳಲ್ಲಿ ಕಲೆಕ್ಟ್ ಆದ ಫೈನ್ ಎಷ್ಟು?

ಸಂಚಾರಿ ಪೊಲೀಸರು ನಮ್ಮ ಮೇಲೆ ಕಣ್ಣಿಟ್ಟಿಲ್ಲ, ನಮ್ಮನ್ನು ಯಾರೂ ತಡೆಯುವವರಿಲ್ಲ. ಸಂಚಾರಿ ಪೊಲೀಸರು ಚುನಾವಣೆ ಕೆಲಸದಲ್ಲಿದ್ದಾರೆ ಎಂದು ರೂಲ್ಸ್ ಬ್ರೇಕ್ ಮಾಡುವವರ ಸಂಖ್ಯೆ ಹೆಚ್ಚಳವಾಗಿದೆ. ದಿನಕ್ಕೆ 30 ರಿಂದ 35 ಸಾವಿರ ಕೇಸ್​ಗಳು ಆನ್ ಲೈನ್​ನಲ್ಲಿ ರಿಜಿಸ್ಟರ್ ಆಗುತ್ತಿದೆ. ವಿತ್ ಔಟ್ ಹೆಲ್ಮೇಟ್, ಸಿಗ್ನಲ್ ಜಂಪ್, ನೋ ಪಾರ್ಕಿಂಗ್ ಸೇರಿದಂತೆ ಇತರೇ ಕೇಸ್​ಗಳು ದಾಖಲಾಗುತ್ತಿವೆ. ಕೇವಲ ಎರಡು ತಿಂಗಳ ಅವಧಿಯಲ್ಲಿ ಲಕ್ಷ ಲಕ್ಷ ಕೇಸ್​ಗಳು ದಾಖಲಾಗಿವೆ. ಇಷ್ಟು ಪ್ರಮಾಣದ ಕೇಸ್ ದಾಖಲಾದ ಬಳಿಕವೂ ಯಾರೊಬ್ಬರೂ ದಂಡದ ಮೊತ್ತವನ್ನು ಮಾತ್ರ ಕಟ್ಟಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಮನೆ ಬಾಗಿಲಿಗೆ ನೋಟಿಸ್ ಕಳಿಸಲು ಸಂಚಾರಿ ಪೊಲೀಸರು ತೀರ್ಮಾನ ಮಾಡಿದ್ದಾರೆ. ಈಗಾಗಲೇ ರೂಲ್ಸ್ ಬ್ರೇಕ್ ಮಾಡಿರುವವರ ಮನೆಗಳಿಗೆ ನೊಟೀಸ್ ಕಳಿಸಲಾಗಿದೆ. ಆದ್ರೆ ಸವಾರರು ನೋಟಿಸ್​ಗೆ ಕ್ಯಾರೆ ಅಂತಿಲ್ಲ. ಹೀಗಾಗಿ ಎಲೆಕ್ಷನ್ ಬಳಿಕ ಅತಿ ಹೆಚ್ಚು ರೂಲ್ಸ್ ಬ್ರೇಕ್ ಮಾಡಿದವರ ಮನೆಗೆ ಹೋಗಿ ದಂಡ ಕಟ್ಟಿಸಿಕೊಳ್ಳಲು ನಿರ್ಧರಿಸಲಾಗಿದೆ.

ಇದನ್ನೂ ಓದಿ: ಸಿಗ್ನಲ್ ಜಂಪ್​ ಮಾಡಿ ಹೋಗುತ್ತಿದ್ದ ಕಾರನ್ನು ತಡೆಯಲು ಹೋದ ಟ್ರಾಫಿಕ್​ ಪೊಲೀಸ್​ರನ್ನು ಬಾನೆಟ್​ ಮೇಲೆ 20 ಕಿ.ಮೀ ಎಳೆದೊಯ್ದ ಚಾಲಕ

18ಲಕ್ಷಕ್ಕೂ ಹೆಚ್ಚು ಕೇಸ್​ಗಳನ್ನು ಕ್ಯಾಮರಾ ನೋಡಿ ಹಾಕಿದ್ದೀವಿ

ಇನ್ನು ಈ ಬಗ್ಗೆ ಮಾಹಿತಿ ನೀಡಿದ ಸಂಚಾರಿ ಪೊಲೀಸ್ ವಿಶೇಷ ಆಯುಕ್ತ ಸಲೀಂ, ಟ್ರಾಫಿಕ್ ಸ್ಮೂತ್ ಆಗಿ ಮೂವ್ ಆಗೋ ಕಾರಣ ಕ್ಯಾಮರಾ ಮೂಲಕ ಕೇಸ್ ಹಾಕ್ತಿದ್ದೀವಿ. ಯಾವ ಸವಾರ ರೂಲ್ಸ್ ಬ್ರೇಕ್ ಮಾಡ್ತಾರೆ ಅವ್ರ ವಿರುದ್ಧ ಕೇಸ್ ಆಗುತ್ತೆ. ಪ್ರತಿ ಮೂಮೆಂಟ್ ಕ್ಯಾಮರಾದಲ್ಲಿ ಮಾನಿಟರಿಂಗ್ ಮಾಡಲಾಗ್ತಿದೆ. 90% ಕೇಸ್ ಗಳನ್ನ ನಾವು ಕ್ಯಾಮರಾ ಮೂಲಕ ಹಾಕ್ತಿದ್ದೇವೆ. ಈಗಾಗಲೇ‌ 18ಲಕ್ಷಕ್ಕೂ ಹೆಚ್ಚು ಕೇಸ್ ಗಳು ಕ್ಯಾಮರಾ ಮೂಲಕ ಹಾಕಿದ್ದೀವಿ. ಆಫಿಸರ್​ಗಳು ಟ್ರಾಫಿಕ್ ಆಗದಂತೆ ನೋಡಿಕೊಳ್ತಿದ್ದಾರೆ. ಯಾರು ರೂಲ್ಸ್ ಬ್ರೇಕ್ ಮಾಡಿದ್ರೂ ಅವರ ವಿರುದ್ಧ ಕೇಸ್ ದಾಖಲಾಗುತ್ತೆ ಎಂದು ಮಾಹಿತಿ ನೀಡಿದರು.

ಬೆಂಗಳೂರಿಗೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 12:47 pm, Thu, 20 April 23